ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪುರಸಭೆಯ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪುರಸಭೆಯ ಅಧಿಕಾರದ ಗದ್ದುಗೆಯನ್ನು ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಹಾಲಿ ಬಿಜೆಪಿ ಶಾಸಕ ಡಿ.ಎಸ್.ಸುರೇಶ್ ಪ್ರತಿನಿಧಿಸುವ ಕ್ಷೇತ್ರದವಾದ ತರೀಕೆರೆಯ ಪುರಸಭೆಯಲ್ಲಿ ಒಟ್ಟು 23 ವಾರ್ಡ್‌ಗಳಲ್ಲಿ 22 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಇಂದು ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರು.
22 ವಾರ್ಡ್‌ಗಳ ಪೈಕಿ 15 ಸ್ಥಾನಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ. ಅಲ್ಲದೆ, ಬಿಜೆಪಿ ಕೇವಲ ಒಂದು ಸ್ಥಾನವನ್ನು ಗೆದ್ದಿದ್ದು, ಭಾರೀ ಮುಖಭಂಗ ಅನುಭವಿಸಿದೆ. ಇದು ಬಿಜೆಪಿ ಶಾಸಕರಿಗೆ ಅವಮಾನಕರ ಎಂದು ರಾಜಕೀಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ: ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಜಯಭೇರಿ, ಎರಡನೇ ಸ್ಥಾನದಲ್ಲಿ ಬಿಜೆಪಿ
ಪುರಸಭೆಯ 23 ವಾರ್ಡ್‌ಗಳ ಪೈಕಿ 22 ವಾರ್ಡುಗಳಿಗೆ ಚುನಾವಣೆ ನಡೆದಿತ್ತು. 1 ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಚುನಾವಣೆ ನಡೆದ 22 ವಾರ್ಡ್‌ಗಳಲ್ಲಿ 15 ವಾರ್ಡ್‌ಗಳನ್ನು ಗೆದ್ದಿರುವ ಕಾಂಗ್ರೆಸ್, ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ಉಳಿದಂತೆ 07 ವಾರ್ಡ್ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭದ್ರಕೋಟೆಯಾಗಿರುವ ತರೀಕೆರೆ ಕ್ಷೇತ್ರದಲ್ಲಿ ಪುರಸಭೆಯಲ್ಲಿ ಮಾತ್ರ ಅಧಿಕಾರ ಹಿಡಿಯಲು ಬಿಜೆಪಿಗೆ ಇದೂವೆರೆಗೂ ಸಾಧ್ಯವಾಗಿಲ್ಲ.
ಶಾಸಕ ಡಿ.ಎಸ್.ಸುರೇಶ್ ನೇತೃತ್ವದಲ್ಲಿ ಈ ಬಾರಿ ಪುರಸಭೆ ಅಧಿಕಾರ ಹಿಡಿಯಲು ಬಿಜೆಪಿ ಸರ್ವಪ್ರಯತ್ನ ನಡೆಸಿತ್ತು. ಆದರೆ, ಒಂದೇ ಒಂದು ಸ್ಥಾನವನ್ನು ಗೆದ್ದು ಬಿಜೆಪಿ ಮುಖಂಡರು ಮುಖಭಂಗ ಅನುಭವಿಸುವಂತಾಗಿ, ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಮಾಂದಲ್‌ಪಟ್ಟಿಯ ಗುಡ್ಡ ವಿಸ್ತಾರದಲ್ಲಿ ಅರಳಿದ ನೀಲಿ ಸಂತಸ! ಕಣ್ಮನ ಸೆಳೆದ ನೀಲಕುರಿಂಜಿಯ ಸೋದರ ಸಂಬಂಧಿ



ಇದು ಆಶಾದಾಯಕ ಬೆಳೆವಣಿಗೆ.