Homeಮುಖಪುಟಡ್ರಗ್ಸ್ ಕೇಸ್: ಆರ್ಯನ್ ಖಾನ್‌ಗೆ ಸಿಗದ ಜಾಮೀನು, ಅ.20 ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

ಡ್ರಗ್ಸ್ ಕೇಸ್: ಆರ್ಯನ್ ಖಾನ್‌ಗೆ ಸಿಗದ ಜಾಮೀನು, ಅ.20 ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

- Advertisement -
- Advertisement -

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ 23 ವರ್ಷದ ಮಗ ಆರ್ಯನ್ ಖಾನ್‌ಗೆ ಡ್ರಗ್ಸ್ ಪ್ರಕರಣದಲ್ಲಿ ಗುರುವಾರವೂ ಜಾಮೀನು ದೊರೆತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಸೆಷನ್ಸ್ ಕೋರ್ಟ್ ಆದೇಶವನ್ನು ಬುಧವಾರದವರೆಗೆ ಕಾಯ್ದಿರಿಸಿ, ಆರ್ಯನ್‌ ಖಾನ್‌ರನ್ನು ಜೈಲಿಗೆ ಕಳುಹಿಸಿದೆ.

ಆರ್ಯನ್ ಖಾನ್ ಬಂಧನವಾದ ಅಕ್ಟೋಬರ್‌ 3 ರಿಂದ 12 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದು, ಮುಂಬೈ ಸೆಷನ್ಸ್ ಕೋರ್ಟ್ ಆದೇಶವನ್ನು ಘೋಷಿಸುವವರೆಗೆ ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಆಯ್ಕೆಗಳು ಕೂಡ ಇಲ್ಲ ಎನ್ನಲಾಗಿದೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ ಆರ್ಯನ್ ಖಾನ್ ನಿಯಮಿತ ಡ್ರಗ್ಸ್ ಗ್ರಾಹಕ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಜೊತೆಗೆ “ಕಳೆದ ಕೆಲವು ವರ್ಷಗಳಿಂದ ಆರ್ಯನ್ ಖಾನ್ ಡ್ರಗ್ಸ್ ಸೇವಿಸುತ್ತಿದ್ದರು” ಎಂದು ಕೇಂದ್ರ ಸಂಸ್ಥೆಯನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ನ್ಯಾಯಾಲಯಕ್ಕೆ ದಾಖಲೆಗಳನ್ನು ಉಲ್ಲೇಖಿಸಿ ತಿಳಿಸಿದ್ದರು.

ಇದನ್ನೂ ಓದಿ: ಡ್ರಗ್ಸ್ ಪಾರ್ಟಿ: ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್‌ ಎನ್‌ಸಿಬಿ ವಶಕ್ಕೆ

ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿ ಕುರಿತ ಆದೇಶವನ್ನು ಮುಂಬೈ ವಿಶೇಷ ಕೋರ್ಟ್ ಅಕ್ಟೋಬರ್ 20ಕ್ಕೆ ಕಾಯ್ದಿರಿಸಿದೆ.

ಡ್ರಗ್ಸ್ ವಿರೋಧಿ ಏಜೆನ್ಸಿಯ ಅಧಿಕಾರಿಗಳು ಅಕ್ಟೋಬರ್ 2 ರಂದು ಮಾರುವೇಷದಲ್ಲಿ ಮುಂಬೈನ ಕಡಲತೀರದಲ್ಲಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಮೇಲೆ ದಾಳಿ ಮಾಡಿದ ಕೆಲವೇ ಗಂಟೆಗಳಲ್ಲಿ ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಅರ್ಬಾಜ್ ಮರ್ಚೆಂಟ್ ಸೇರಿದಂತೆ ಇತರ 7 ಮಂದಿಯನ್ನು ಅಕ್ಟೋಬರ್ 3 ರಂದು ಬಂಧಿಸಲಾಗಿದೆ.

ಅಂದಿನಿಂದ ಆರ್ಯನ್ ಖಾನ್ ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿದ್ದರು. ಗುರುವಾರ ಬೆಳಿಗ್ಗೆ ಆರ್ಯನ್ ಖಾನ್ ಮತ್ತು ಇತರ ಐದು ಆರೋಪಿಗಳ ಕೋವಿಡ್ ಪರೀಕ್ಷೆ ವರದಿಗಳು ನೆಗೆಟಿವ್ ಬಂದ ನಂತರ ಕ್ವಾರಂಟೈನ್ ಬ್ಲಾಕ್‌ನಿಂದ ಜೈಲಿಗೆ ವರ್ಗಾಯಿಸಲಾಗಿದೆ.


ಇದನ್ನೂ ಓದಿ: ಆರ್ಯನ್ ಡ್ರಗ್ ಕೇಸ್‌: ಎನ್‌ಸಿಬಿ ಅಧಿಕಾರಿ ಮೇಲೆ ಬೇಹುಗಾರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನಾಡಾ’ದಿಂದ ಕುಸ್ತಿಪಟು ಬಜರಂಗ್ ಪುನಿಯಾ ಅಮಾನತು: ವರದಿ

0
ಡೋಪಿಂಗ್ ಪರೀಕ್ಷೆ (ಮಾದಕವಸ್ತು ಪತ್ತೆ ಪರೀಕ್ಷೆ)ಗೆ ಸರಿಯಾದ ಸಮಯಕ್ಕೆ ಮೂತ್ರದ ಮಾದರಿಯನ್ನು ನೀಡದ ಆರೋಪದ ಮೇಲೆ ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ...