ಖ್ಯಾತ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್‌ ಖಾನ್‌  ಪ್ರಕರಣದ ತನಿಖೆ ನಡೆಸುತ್ತಿರುವ ಮಾದಕದ್ರವ್ಯ ವಿರೋಧಿ ಏಜೆನ್ಸಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಉನ್ನತ ಅಧಿಕಾರಿಯನ್ನು ಬೇರೊಬ್ಬರು ಬೇಹುಗಾರಿಕೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಈ ತಿಂಗಳ ಆರಂಭದಲ್ಲಿ ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದರು. ಇದು ಆರ್ಯನ್ ಖಾನ್ ಬಂಧನಕ್ಕೆ ಕಾರಣವಾಯಿತು.

ವಾಂಖೆಡೆ ಮತ್ತು ಹಿರಿಯ ಅಧಿಕಾರಿ ಮುತ್ತ ಜೈನ್ ಅವರು ಬೇಹುಗಾರಿಕೆ ಬಗ್ಗೆ ದೂರು ನೀಡಲು ಮಹಾರಾಷ್ಟ್ರ ಪೊಲೀಸ್ ಮುಖ್ಯಸ್ಥರನ್ನು ಭೇಟಿ ಮಾಡಿದ್ದಾರೆ. ಕೆಲವರು ಅಧಿಕಾರಿಯ ಚಲನವಲನಗಳನ್ನು ಗಮನಿಸುತ್ತಿದ್ದಾರೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.

ವಾಂಖೆಡೆ ಅವರು ತಮ್ಮ ತಾಯಿ ಸಮಾಧಿ ಸ್ಥಳಕ್ಕೆ ಆಗಾಗ್ಗೆ ಭೇಟಿ ನೀಡುತ್ತಾರೆ. ವಾಂಖೆಡೆ ಅವರು ಸ್ಮಶಾನಕ್ಕೆ ತೆರಳಿದಾಗ ಕೆಲವರು ಹಿಂಬಾಲಿಸಿದ್ದಾರೆ ಎಂಬುದು ಸಿಸಿಟಿವಿ ಫೂಟೇಜ್ ದೃಢಪಡಿಸಿದೆ ಎಂದು ಏಜೆನ್ಸಿ ಹೇಳಿದೆ.

ವಾಖೆಂಡೆ ಅವರು ಈ ಕುರಿತು ವಿವರಿಸಲು ನಿರಾಕಸಿದ್ದು, “ವಿಷಯ ತುಂಬಾ ಗಂಭೀರವಾಗಿದೆ” ಎಂದಿದ್ದಾರೆ. ಆರೋಪಗಳ ಕುರಿತು ಮುತ ಜೈನ್ ಸುದ್ದಿಗಾರರಿಗೆ ಹೀಗೆ ಹೇಳಿದರು: “ನೀವು ಏನು ಕೇಳುತ್ತೀರೋ ಅದು ಈಗಾಗಲೇ ಪೇಪರ್‌ಗಳಲ್ಲಿದೆ. ನಾವು ಈಗಾಗಲೇ ಮಹಾರಾಷ್ಟ್ರ ಪೊಲೀಸರೊಂದಿಗೆ ಮಾತನಾಡಿದ್ದೇವೆ. ನಾನು ಇನ್ನು ಮುಂದೆ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ” ಎಂದಿದ್ದಾರೆ.

ಇದನ್ನೂ ಓದಿರಿ: ಚಿತ್ರರಂಗದಲ್ಲಿ ಸ್ವಜನ ಪಕ್ಷಪಾತಕ್ಕಿಂತ ಜನಾಂಗೀಯತೆ ಹೆಚ್ಚಾಗಿದೆ: ನಟ ನವಾಜುದ್ದೀನ್ ಸಿದ್ದಿಕಿ

ಮೂರನೇ ಬಾರಿಗೆ, ಆರ್ಯನ್ ಖಾನ್‌ಗೆ ಸೋಮವಾರ ಜಾಮೀನು ನಿರಾಕರಿಸಲಾಯಿತು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಂತರಾಷ್ಟ್ರೀಯ ಡ್ರಗ್ ಕಾರ್ಟೆಲ್ ಅನ್ನು ಪತ್ತೆಹಚ್ಚಲು ಇತರ ಆರೋಪಿಗಳೊಂದಿಗೆ ಆತನನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸಂಸ್ಥೆ ಹೇಳಿದೆ.

ಆರ್ಯನ್ ಖಾನ್, ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಮತ್ತು ಇತರ ಆರು ಮಂದಿಯನ್ನು ಕಳೆದ ವಾರ ಬಂಧಿಸಲಾಗಿತ್ತು. ಆರ್ಯನ್ ಖಾನ್ ಯಾವುದೇ ಡ್ರಗ್‌ ಕಂಡುಕೊಂಡಿಲ್ಲ, ಆದರೆ ಆತನ ವಾಟ್ಸಾಪ್ ಚಾಟ್‌ಗಳು ಅಪರಾಧ ಕೃತ್ಯಗಳಿಂದ ಕೂಡಿವೆ ಎಂದು ಏಜೆನ್ಸಿ ಹೇಳಿದೆ. ಆರ್ಯನ್ ಖಾನ್ ಬಂಧನವು ಈಗ ರಾಜಕೀಯ ವಿಷಯವಾಗಿ ಬದಲಾಗಿದೆ.

ಮುಂಬೈನ ಕಡಲ ತೀರದಲ್ಲಿ ಐಷಾರಾಮಿ ಕ್ರೂಸ್‌ ಹಡಗಿನಲ್ಲಿ ನಡೆದಿದ್ದ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಶನಿವಾರ (ಅ.2) ರಾತ್ರಿ ದಾಳಿ ಮಾಡಿದ ಅಧಿಕಾರಿಗಳು ಸುಮಾರು 8 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಅದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್  ಅವರ ಪುತ್ರ ಆರ್ಯನ್ ಖಾನ್  ಕೂಡ ಸೇರಿದ್ದರು.

ಇಬ್ಬರು ಯುವತಿಯರು ಸೇರಿದಂತೆ ಆರ್ಯನ್ ಖಾನ್, ಮುನ್ಮುನ್ ಧಮೇಚಾ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೊಹಕ್ ಜಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾ, ಅರ್ಬಾಜ್ ಮರ್ಚಂಟ್ ಎಂಬುವವರನ್ನು ವಶಕ್ಕೆ ಪಡೆಯಲಾಗಿತ್ತು.

“ಆರ್ಯನ್ ಖಾನ್ ಸೇರಿದಂತೆ ಎಲ್ಲ ಎಂಟು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರ ಹೇಳಿಕೆಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತಿಳಿಸಿತ್ತು.

NCB ತಂಡವು ಪ್ರಯಾಣಿಕರ ವೇಷದಲ್ಲಿ ಹಡಗನ್ನು ಹತ್ತಿತ್ತು ಎಂದು ಮೂಲಗಳು ಹೇಳಿದ್ದವು. Ecstasy, Cocaine (ಕೊಕೇನ್), ಎಂಡಿ (ಮೆಫೆಡ್ರೋನ್) ಮತ್ತು ಚರಸ್‌ನಂತಹ ಡ್ರಗ್ಸ್‌ಗಳನ್ನು ಹಡಗಿನಿಂದ ವಶಪಡಿಸಿಕೊಳ್ಳಲಾಗಿತ್ತು. ಹಡಗು ಮುಂಬೈಯಿಂದ ಹೊರಟ ನಂತರ ಸಮುದ್ರದ ಮಧ್ಯದಲ್ಲಿ ಪಾರ್ಟಿ ಆರಂಭವಾಯಿತು ಎಂದು NCB ಅಧಿಕಾರಿಗಳು ಹೇಳಿದ್ದರು.

“ನಾವು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ, ಬಾಲಿವುಡ್ ಅಥವಾ ಶ್ರೀಮಂತರೊಂದಿಗೆ ಕೆಲವು ಲಿಂಕ್‌ಗಳು ಸಿಕ್ಕರೆ, ಕಾನೂನಿನ ವ್ಯಾಪ್ತಿಯಲ್ಲಿ ನಾವು ಕಾರ್ಯನಿರ್ವಹಿಸಬೇಕು” ಎಂದು ಎನ್‌ಸಿಬಿ ಮುಖ್ಯಸ್ಥ ಎಸ್‌ಎನ್ ಪ್ರಧಾನ್ ಹೇಳಿದ್ದರು.

ಕಳೆದ ವರ್ಷದ ಜೂನ್‌ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಸಹಜ ಸಾವಿನ ನಂತರ ಬಾಲಿವುಡ್‌ನಲ್ಲಿ ಮಾದಕದ್ರವ್ಯ ಸೇವನೆ ಆರೋಪದ ಮೇಲೆ ಎನ್‌ಸಿಬಿ ತನಿಖೆ ಆರಂಭಿಸಿತ್ತು. ಅಂದಿನಿಂದ ಡ್ರಗ್ಸ್ ವಿರೋಧಿ ಪ್ರಕರಣಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿರಿ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಿರಿಯ ನಟ ನೆಡುಮುಡಿ ವೇಣು ಇನ್ನಿಲ್ಲ

1 COMMENT

  1. It is very funny that every time government of India impose condition on ordinary people not to use plastics and tobacco etcetera but then never in struct to any industry to ban the the production thereby we are unable to understand actual policy of the ruling government how long this kind of policy will going to help for the betterment of the society now the selling centres are allowed but the customers are captured and the subjected to punishment

LEAVE A REPLY

Please enter your comment!
Please enter your name here