- Advertisement -
- Advertisement -
ತುಮಕೂರಿನ ಹೊರ ವಲಯದ ಗುಬ್ಬಿ ರಸ್ತೆಯಲ್ಲಿರುವ ಸಿದ್ಧಾರ್ಥ ನಗರದ ಸಮೀಪ ಖಾಸಗಿ ಬಸ್ ಮತ್ತು ಟಾಟಾ ಏಸ್ ನಡುವೆ ಭಾನುವಾರ ಭೀಕರ ಅಪಘಾತ ಸಂಭವಿಸಿದೆ. ದುರಂತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ತುಮಕೂರಿನಿಂದ ಹೂ ಕೊಂಡೊಯ್ಯುತ್ತಿದ್ದ ರೈತರಿದ್ದ ಟಾಟಾ ಏಸ್ ವಾಹನ ಮತ್ತು ಬೆಂಗಳೂರಿಗೆ ಬರುತ್ತಿದ್ದ ಎಸ್‌ಆರ್‌ಎಸ್ ಖಾಸಗಿ ಬಸ್ ನಡುವೆ ಭಾನುವಾರ ಮುಂಜಾನೆ 5.30ರ ವೇಳೆಗೆ ಅಪಘಾತ ಸಂಭವಿಸಿದೆ. ಮೃತರೆಲ್ಲಾ ಗೂಡ್ಸ್ ವಾಹನದಲ್ಲಿದ್ದವರು ಎನ್ನಲಾಗಿದೆ.
ಮೃತ ನಾಲ್ವರಲ್ಲಿ ಓರ್ವ ಮಹಿಳೆ, ಮೂವರು ಪುರುಷರು ಇದ್ದಾರೆ. ಓರ್ವ ವ್ಯಕ್ತಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. , ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯ ಜನರು ನೆರವಿಗೆ ಧಾವಿಸಿದ್ದಾರೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತುಮಕೂರು: ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಆಪ್ತ ಸುರೇಶ್‌ಗೌಡ ರಾಜೀನಾಮೆ


