Homeಮುಖಪುಟಭನ್ವಾರಿದೇವಿ ಕೊಲೆ ಆರೋಪಿ, ಮಾಜಿ ಸಚಿವ ಮಹಿಪಾಲ್‌ ನಿಧನ

ಭನ್ವಾರಿದೇವಿ ಕೊಲೆ ಆರೋಪಿ, ಮಾಜಿ ಸಚಿವ ಮಹಿಪಾಲ್‌ ನಿಧನ

- Advertisement -
- Advertisement -

ರಾಜಸ್ತಾನ್‌ ಕ್ಯಾಬಿನೇಟ್‌ ಮಾಜಿ ಸಚಿವ, ಭನ್ವಾರಿದೇವಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಹಿಪಾಲ್‌ ಮಡೆರ್ನಾ (69) ಅವರು ಜೋದ್‌ಪುರದಲ್ಲಿ ಸಾವನ್ನಪ್ಪಿದ್ದಾರೆ.

ಮಡೆರ್ನಾ ಅವರು ಹಲವು ದಿನಗಳಿಂದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದರು. ಇತ್ತೀಚೆಗೆ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಪತ್ನಿ ಲೀಲಾ ಮಡೆರ್ನಾ ಮತ್ತು ಪುತ್ರಿ ದಿವ್ಯಾ ಮಡೆರ್ನಾ ಅವರನ್ನು ಮಹಿಪಾಲ್‌ ಅಗಲಿದ್ದು, ದಿವ್ಯಾ ಅವರು ಪ್ರಸ್ತುತ ರಾಜಸ್ಥಾನದ ಜೋಧಪುರದ ಒಸಿಯಾನ್‌ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿದ್ದಾರೆ.

ಮಡೆರ್ನಾ ಅವರು ಈ ಹಿಂದೆ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಸರ್ಕಾರದಲ್ಲಿ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್‌ ಸಚಿವರಾಗಿದ್ದರು. ಕೊಲೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದ ಬಳಿಕ 2011ರ ಅಕ್ಟೋಬರ್‌ನಲ್ಲಿ ಸಚಿವ ಸ್ಥಾನದಿಂದ ಅವರನ್ನು ಕೆಳಗಿಳಿಸಲಾಗಿತ್ತು.

ಕಾಂಗ್ರೆಸ್ ಮಾಜಿ ಶಾಸಕ ಮಲ್ಖಾನ್‌ ಸಿಂಗ್‌ ಬಿಷ್ಣೋಯ್‌‌ ಹಾಗೂ ಮಹಿಪಾಲ್‌ ಮಡೆರ್ನಾ ಪ್ರಮುಖ ಆರೋಪಿಗಳಾಗಿದ್ದರು. ಸೆಕ್ಸ್‌ ಟೇಪ್‌ ಹಗರಣಕ್ಕೆ ಸಂಬಂಧಿಸಿದಂತೆ ಸಹಾಯಕ ನರ್ಸ್ ಆಗಿದ್ದ ಭನ್ವಾರಿದೇವಿ  ಅವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಿಬಿಐ ಮೆಟ್ಟಿಲೇರಿ ಮಡೆರ್ನಾ ಅವರು ಬಂಧನಕ್ಕೊಳಗಾದರು.

ರಾಜಸ್ತಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೇ ಸೇರಿದಂತೆ ಹಲವು ರಾಜಕೀಯ ನಾಯಕರು ಮಡೆರ್ನಾ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

“ಮಾಜಿ ಸಚಿವರಾದ ಮಹಿಪಾಲ್‌ ಮಡೆರ್ನಾ ಅವರ ಸಾವಿಗೆ ತೀವ್ರ ಸಂತಾಪಗಳು. ಮಡೆರ್ನಾ ಅವರ ಕುಟುಂಬಕ್ಕೆ ಸಾವಿನ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ” ಎಂದು ಗೆಹ್ಲೋಟ್‌ ಹೇಳಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಜಗದೀಪ್‌ ಧನ್ಖರ್‌ ಅವರೂ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿರಿ: ಮಧ್ಯಪ್ರದೇಶ: ಗುಂಪಿನ ಮೇಲೆ ಕಾರು ಹತ್ತಿಸಿ ಅಪರಿಚಿತ ಪರಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಪ್ರಧಾನಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿಯಾದ...

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...