Homeಮುಖಪುಟಮುಸ್ಲಿಮರ ಹೆಸರಿನಲ್ಲಿ ಭಯ ಹುಟ್ಟು ಹಾಕಿ ರೈತರಿಂದ 200 ಎಕರೆ ಭೂಮಿ ಖರೀದಿಸಿದ ಹಿಂದುತ್ವ ಸಂಘಟನೆ

ಮುಸ್ಲಿಮರ ಹೆಸರಿನಲ್ಲಿ ಭಯ ಹುಟ್ಟು ಹಾಕಿ ರೈತರಿಂದ 200 ಎಕರೆ ಭೂಮಿ ಖರೀದಿಸಿದ ಹಿಂದುತ್ವ ಸಂಘಟನೆ

ಉರ್ದು ಹೆಸರಿನ ಸಂಸ್ಥೆಯ ಮೂಲಕ, ಮುಸ್ಲಿಂ ವ್ಯಕ್ತಿಯೊಬ್ಬರನ್ನು ಬಳಸಿ ಖರೀದಿಸಿದ ಸಂಸ್ಥೆಗೆ ಬಜರಂಗದಳದ ಮಾಜಿ ಸಂಚಾಲಕ,ಬಿಜೆಪಿ ನಾಯಕನೇ ಮುಖ್ಯಸ್ಥ!

- Advertisement -
- Advertisement -

“ಇಲ್ಲಿ ಮುಸ್ಲಿಮರ ವಸತಿ ಯೋಜನೆ ಬರುತ್ತಿದೆ” ಎಂದು ಮುಸ್ಲಿಮರ ಹೆಸರಿನಲ್ಲಿ ಭಯ ಹುಟ್ಟು ಹಾಕಿ ಸಣ್ಣ ರೈತರು ಸೇರಿದಂತೆ ಇತರರಿಂದ ಸುಮಾರು 200 ಎಕರೆ ಭೂಮಿಯನ್ನು ಬಿಜೆಪಿ ಬೆಂಬಲಿತ ಹಿಂದುತ್ವ ಸಂಘಟನೆ ಖರೀಧಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ರೈತರಿಂದ ಭೂಮಿ ಖರೀದಿಸುವಾಗ “ತಂಝೀಮ್-ಎ-ಝಾರ್ಖೆಜ್” ಎಂಬ ಉರ್ದು ಹೆಸರಿನ ಸಂಸ್ಥೆಯ ಮೂಲಕ, ಮುಸ್ಲಿಂ ವ್ಯಕ್ತಿಯೊಬ್ಬರನ್ನು ಬಳಸಿ ಖರೀದಿಸಲಾಗಿದೆ ಎಂದು ಮೋಸ ಹೋಗಿರುವ ರೈತರು ಆರೋಪಿಸಿದ್ದಾರೆ. ಇದೀಗ ತಾವು ಮಾರಾಟ ಮಾಡಿರುವ ಪ್ರದೇಶದಲ್ಲಿ ವಸತಿ ಕಾಲೋನಿ ರೂಪುಗೊಳ್ಳುತ್ತಿರುವುದರಿಂದ ರೈತರು ವಿಚಾರಣೆ ನಡೆಸುವಂತೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

2000 ರಲ್ಲಿ ರಾಜ್ಯದ ಖಾರ್ಗೋನ್ ಪಟ್ಟಣದ ಹೊರವಲಯದಲ್ಲಿರುವ ಭೂಮಿಯನ್ನು ರೈತರು ಅದರಲ್ಲೂ ಸಣ್ಣ ರೈತರು ಮಾರಾಟ ಮಾಡಿದ್ದರು. ಈ ಪ್ರದೇಶದಲ್ಲಿ ಮುಸ್ಲಿಮರ ವಸತಿ ಯೋಜನೆ ಬರುತ್ತಿದೆ ಎಂದು ಹೇಳಿದ್ದರಿಂದ ‘ನಾವು ಭೂಮಿಯನ್ನು ಮಾರಾಟ ಮಾಡಿ ಮೋಸ ಹೋಗಿದ್ದೇವೆ’ ಎಂದು ರೈತರು ಆರೋಪಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: BJP ಬೆಂಬಲಿತ ಸಂಘಟನೆಯಾದ ಬಜರಂಗದಳದ ದುಷ್ಕರ್ಮಿಗಳ ಬೆದರಿಕೆಯ ನಡುವೆ ದಲಿತ-ಮುಸ್ಲಿಂ ಜೋಡಿ ಮದುವೆ

2007 ರಲ್ಲಿ ಭೂಮಿಯ ಖರೀದಿಯ ಎಲ್ಲಾ ಒಪ್ಪಂದಗಳು ಮುಗಿದ ನಂತರ ಸಂಸ್ಥೆಯ “ತಂಝೀಮ್-ಎ-ಝಾರ್ಖೆಜ್” ಎಂಬ ಹೆಸರನ್ನು “ಪ್ರೊಫೆಸರ್ ಪಿ.ಸಿ. ಮಹಾಜನ್ ಫೌಂಡೇಶನ್” ಎಂದು ಬದಲಾಯಿಸಲಾಗಿದೆ. ಸಂಸ್ಥೆಯ ಪದಾಧಿಕಾರಿಗಳು ಇದರಲ್ಲಿ ಯಾವುದೇ ಮೋಸ ನಡೆದಿಲ್ಲ ಎಂದು ರೈತರ ಆರೋಪವನ್ನು ನಿರಾಕರಿಸಿದ್ದಾರೆ.

ಪ್ರಸ್ತುತ ಆಡಳಿತಾರೂಢ ಬಿಜೆಪಿಯ ನಾಯಕ ರಂಜೀತ್ ಸಿಂಗ್ ದಂಡಿರ್‌ ಅವರು ಈ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ರಂಜೀತ್‌ ಸಿಂಗ್‌ ಅವರು ಈ ಹಿಂದೆ ಬಜರಂಗದಳದ ರಾಜ್ಯ ಸಹ ಸಂಚಾಲಕರಾಗಿದ್ದರು. ಅಲ್ಲದೆ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

“ನಾವು ಭೂಮಿಯನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದೇವೆ” ಎಂದು ಸಂಸ್ಥೆಯ ನಿರ್ದೇಶಕ ರವಿ ಮಹಾಜನ್ ಹೇಳಿದ್ದಾರೆ. ಸಂಸ್ಥೆಯ ಭೂಮಿಯಲ್ಲಿ ವಸತಿ ನಿವೇಶನಗಳ ಜೊತೆಗೆ ಬಿಡಾಡಿ ಹಸುಗಳಿಗೆ ಗೋಶಾಲೆ ಅಥವಾ ಆಶ್ರಯ ತಾಣವನ್ನೂ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಆದರೆ ರೈತರು, ತಮ್ಮನ್ನು ಮೋಸ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ನಮ್ಮನ್ನು ಸಂಪರ್ಕಿಸುವ ಏಜೆಂಟ್‌ಗಳು ಮುಸ್ಲಿಮರು ಎಂದು ನಾವು ಭಾವಿಸಿದ್ದೆವು ಅವರು ಹೇಳುತ್ತಾರೆ.

ಇದನ್ನೂ ಓದಿ: ಸಕಲೇಶಪುರ: ದಲಿತರ ಮೇಲೂ ಪ್ರಕರಣ ದಾಖಲು; ಬಜರಂಗದಳ ವಿರುದ್ಧ ಪ್ರತಿಭಟನೆ 

“2004 ರಲ್ಲಿ ಜಾಕಿರ್ ಎಂಬ ವ್ಯಕ್ತಿ ನಮ್ಮ ಬಳಿಗೆ ಬಂದು, ‘ನಿಮ್ಮ ಸುತ್ತಮುತ್ತಲಿನ ಎಲ್ಲಾ ಭೂಮಿಯನ್ನು ಖರೀದಿಸಿದ್ದೇನೆ. ಇಲ್ಲಿ ಶೀಘ್ರದಲ್ಲೇ ಕಸಾಯಿಖಾನೆ ಇರುತ್ತದೆ. ನಿಮ್ಮ ಭೂಮಿಯನ್ನು ಮುಸ್ಲಿಮರಿಗೆ ಮಾರಾಟ ಮಾಡಿ. ಹೇಗಿದ್ದರೂ ಇಲ್ಲಿ ನಮ್ಮ ಸಮುದಾಯ ಬಂದು ನೆಲೆಸುತ್ತಿದೆ’ ಎಂದು ಹೇಳಿದ್ದರು. ಹೀಗೆ ಹೇಳಿದಾಗ ನಾನು ಕೂಡಾ ನನ್ನ ಭೂಮಿಯನ್ನು ಮಾರಾಟ ಮಾಡಿದ್ದೇನೆ” ಎಂದು ಭೂಮಿ ಕಳೆದುಕೊಂಡಿರುವ ರೈತ ನಂದಕಿಶೋರ್ ಕುಶ್ವಾಹ ಹೇಳಿದ್ದಾರೆ. ಅವರ ಐದು ಎಕರೆ ಭೂಮಿಗೆ 40 ಸಾವಿರ ರೂ. ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಖರೀದಿ ಮಾಡಲಾಗಿರುವ ಭೂಮಿಯಲ್ಲಿ ಹಜ್ ಭವನ ರಚಿಸಲಾಗುವುದು ಮತ್ತು ಸ್ಮಶಾನವನ್ನು ಸಹ ಸ್ಥಾಪಿಸಲಾಗುವುದು ಎಂದು ತಮಗೆ ತಿಳಿಸಲಾಗಿತ್ತು ಎಂದು ಇತರ ರೈತರು ಹೇಳಿದ್ದಾರೆ.

ಮುಸ್ಲಿಮರ ಹೆಸರಿನಲ್ಲಿ ಭಯ ಹುಟ್ಟು ಹಾಕಿ ರೈತರಿಂದ 200 ಎಕರೆ ಭೂಮಿ ಖರೀದಿಸಿದ ಹಿಂದುತ್ವ ಸಂಘಟನೆ | Naanu Gauri

ತಂಝೀಮ್-ಎ-ಝಾರ್ಖೆಜ್ ಎಂಬ ಸಂಸ್ಥೆಯನ್ನು 2002 ರಲ್ಲಿ ಹಿಂದೂಗಳ ಗುಂಪು ರಚಿಸಿತು. ಅವರು ನಂತರ ಜಾಕಿರ್ ಶೇಖ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಅದಕ್ಕೆ ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು.

ವಿವಾದದ ಬಗ್ಗೆ NDTV ಜೊತೆಗೆ ಮಾತನಾಡಿದ ಜಾಕಿರ್‌,“ಸಂಸ್ಥೆಯ ಉದ್ದೇಶವು ಸಾಮಾಜಿಕ ಉದ್ದೇಶಕ್ಕಾಗಿ ಕೆಲಸ ಮಾಡುವುದು ಎಂದು ನಾನು ಭಾವಿಸಿದೆ. ಆದರೆ ನಾನು ಯಾರನ್ನೂ ಅವರ ಭೂಮಿಯನ್ನು ಮಾರಾಟ ಮಾಡುವಂತೆ ಒತ್ತಾಯಿಸಲಿಲ್ಲ ಅಥವಾ ದಾರಿ ತಪ್ಪಿಸಲಿಲ್ಲ. ಪ್ರಕಾಶ್ ಸ್ಮೃತಿ ಸೇವಾ ಸಂಸ್ಥಾನ ಎಂಬ ಅದೇ ಗುಂಪಿನಿಂದ ರಚಿಸಲ್ಪಟ್ಟ ಮತ್ತೊಂದು ಸಂಸ್ಥೆಯು ಕೆಲವು ಭೂಮಿಯನ್ನು ಖರೀದಿಸಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಕಲೇಶಪುರ: ದನ ಸಾಗಿಸುತ್ತಿದ್ದಾನೆಂದು ದಲಿತ ಮುಖಂಡನ ಮೇಲೆ ಬಜರಂಗದಳದ ದುಷ್ಕರ್ಮಿಗಳಿಂದ ಹಲ್ಲೆ

200 ಎಕರೆಯಲ್ಲಿ, 150 ಎಕರೆಯನ್ನು 11 ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಖರೀದಿಸಲಾಗಿದೆ. ಉಳಿದ ಐವತ್ತು ಎಕರೆ ಭೂಮಿಯನ್ನು ಸಣ್ಣ ರೈತರಿಂದ ಖರೀದಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಹೇಳಿದೆ.

“ಬಬ್ಲು ಖಾನ್ ಎಂಬ ವ್ಯಕ್ತಿ ತನ್ನ ತಂದೆಯ ಬಳಿಗೆ ಬಂದಿದ್ದರು. ನಾವು ನಮ್ಮಲ್ಲಿದ್ದ ಒಂಬತ್ತು ಎಕರೆಗಳನ್ನು ಮಾರಾಟ ಮಾಡಿದ್ದೇವೆ” ಎಂದು ದೀಪಕ್ ಕುಶ್ವಾಹ ಎಂಬ ರೈತರೊಬ್ಬರು ಹೇಳಿದ್ದಾರೆ.

“ಹಜ್ ಸಮಿತಿ ರಚನೆಯಾಗುತ್ತದೆ. ಮುಸ್ಲಿಮರು ಇಲ್ಲಿ ಬಂದು ನೆಲೆಸುತ್ತಾರೆ ಎಂದು ನನ್ನ ಸಂಬಂಧಿಕರು ಭಾವಿಸಿದ್ದರು. ಅದಕ್ಕಾಗಿ ಅವರು ಭಯಭೀತರಾಗಿ ಭೂಮಿಯನ್ನು ಮಾರಾಟ ಮಾಡಿದರು. ಕೊನೆಯಲ್ಲಿ ನಾನು ಕೂಡಾ ನನ್ನ ಭೂಮಿಯನ್ನೂ ಮಾರಿದೆ” ಎಂದು ಸಂಜಯ್ ಸಿಂಘ್ವಿ ಎಂಬ ಉದ್ಯಮಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಮುಖ್ಯಸ್ಥ, ಬಿಜೆಪಿ ನಾಯಕ ರಂಜೀತ್ ಸಿಂಗ್‌ ದಂಡಿರ್, “ನಾನು ಇಲ್ಲಿ ಚಿರಪರಿಚಿತನಾಗಿರುವುದರಿಂದ ಎಲ್ಲದಕ್ಕೂ ನನ್ನ ಹೆಸರನ್ನು ಎಳೆಯಲಾಗುತ್ತಿದೆ” ಎಂದು ಹೇಳಿದ್ದಾರೆ. ಅವರು ತಾನು ಎದುರಿಸುತ್ತಿರುವ ಕೆಲವು ಪ್ರಕರಣಗಳ ಬಗ್ಗೆ ಮಾತನಾಡಿ,“ನಾನು ಏಳು ಬಾರಿ ಜೈಲು ವಾಸ ಅನುಭವಿಸಿದ್ದೇನೆ; ನನ್ನ ಮೇಲೆ ಕೊಲೆ ಆರೋಪಗಳಿವೆ – ಏಕೆಂದರೆ ನನ್ನ ಜೀವನದುದ್ದಕ್ಕೂ ನಾನು ಹಿಂದೂ ಸಮಾಜಕ್ಕಾಗಿ ಕೆಲಸ ಮಾಡಿದ್ದೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳದ ದುಷ್ಕರ್ಮಿಗಳ ಬೆದರಿಕೆ: ಮಸೀದಿ ವೀಕ್ಷಣೆ ಪ್ರವಾಸ ರದ್ದು ಮಾಡಿದ ಶಿಶುವಿಹಾರ

ಸಂಸ್ಥೆಯ ಹೆಸರು ಮತ್ತು ಭೂಮಿಯ ಬಳಕೆಯ ಬಗ್ಗೆ ಮಾತನಾಡಿದ ಅವರು,“ನಮಗೆ ಖಾರ್ಗೋನ್ ಪ್ರದೇಶದಲ್ಲಿ ಗೋಶಾಲೆ ಬೇಕು. ಅದನ್ನು ಇಲ್ಲಿ ನಿರ್ಮಿಸಿ ಸಮಾಜಕ್ಕೆ ಮತ್ತು ಗೋವುಗಳಿಗೆ ಏನಾದರೂ ಒಳ್ಳೆಯದನ್ನು ಮಾಡಬಹುದು ಎಂದು ನಾನು ಭಾವಿಸಿದೆ. ಆದರೆ ಅದಕ್ಕೆ ನಾವು ತಂಝೀಮ್-ಎ-ಝಾರ್ಖೆಜ್ ಎಂದು ಹೆಸರಿಟ್ಟರೆ ಏನು ಸಮಸ್ಯೆ ಎಂದು ನನಗೆ ತಿಳಿದಿಲ್ಲ” ಎಂದು ಅವರು ಹೇಳಿದ್ದಾರೆ.

“ಆದರೆ ಇದೀಗ ಸಂಸ್ಥೆಯ ನಿರ್ದೇಶಕರಾಗಿರುವ ರವಿ ಮಹಾಜನ್ ಅವರ ತಂದೆಯ ಹೆಸರನ್ನು ಇಡಲಾಗಿದೆ. ತಂಝೀಮ್-ಎ-ಝಾರ್ಖೆಜ್‌ನ ಅರ್ಥ ಪಾಳುಭೂಮಿಯನ್ನು ಫಲವತ್ತಾಗಿಸುವುದು. ಜನರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಭಾವಿಸಿ, ಇದೀಗ ಅದರ ಹೆಸರನ್ನು ಬದಲಾಯಿಸಿದ್ದೇವೆ” ಎಂದು ರಂಜೀತ್ ಸಿಂಗ್‌ ದಂಡಿರ್ ಹೇಳಿದ್ದಾರೆ.

“ಎಲ್ಲಾ ಆಪಾದನೆಗಳು ಕೇವಲ ದಾರಿತಪ್ಪಿಸುವಂತಿವೆ. ಅವೆಲ್ಲವೂ ಅಪ-ಪ್ರಚಾರದ ಭಾಗವಾಗಿದೆ. ಕಾನೂನು ಪ್ರಕಾರವೇ ಎಲ್ಲಾ ಕೆಲಸಗಳನ್ನು ಮಾಡಲಾಗಿದೆ. ಬಡವರಿಗೆ ಮನೆ ಸಿಕ್ಕಿದೆ. ಈ ಭೂಮಿ ಬರಡಾಗಿತ್ತು. ನೆಲದಡಿಯಲ್ಲಿ 700 ಅಡಿಗಳಷ್ಟು ನೀರು ಇರಲಿಲ್ಲ. ನಾನು ಅಣ್ಣಾ ಹಜಾರೆ ಮತ್ತು ಬಾಬಾ ಆಮ್ಟೆ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಸಮಾಜಕ್ಕೆ ಸಂದೇಶ ನೀಡಲು ನಾವು ಇಲ್ಲಿನ ಭೂಮಿಯನ್ನು ಹಸಿರು ಮಾಡಲು ಬಯಸಿದ್ದೇವೆ” ಎಂದು ರಂಜೀತ್ ಸಿಂಗ್‌ ಹೇಳಿದ್ದಾರೆ.

ಇದನ್ನೂ ಓದಿ: ಭದ್ರಾವತಿ: ಬಜರಂಗದಳದ ದುಷ್ಕರ್ಮಿಗಳಿಂದ ದಾಂಧಲೆ; 6 ಮಂದಿ ವಿರುದ್ಧ ಎಫ್‌ಐಆರ್‌

ವಿವಾದದ ಕುರಿತು ರಾಜ್ಯ ಬಿಜೆಪಿ ಅಂತರ ಕಾಯ್ದುಕೊಂಡಿದೆ. “ನಮ್ಮ ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಸಮಸ್ಯೆ ಮಾರಾಟಗಾರ ಮತ್ತು ಖರೀದಿದಾರರ ನಡುವಿನದ್ದು. ಅವರಿಗೆ ತಮ್ಮದೇ ಆದ ಆರ್ಥಿಕ ಹಿತಾಸಕ್ತಿ ಇದೆ” ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ರಜನೀಶ್ ಅಗರ್ವಾಲ್ ಹೇಳಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಕುಮಾರ್ ಪುರುಷೋತ್ತಮ್, ಸೇರಿದಂತೆ ಪೊಲೀಸರು ಹಾಗೂ ಅಧಿಕಾರಿಗಳು ಪ್ರತಿಕ್ರಿಯಿಸಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...