Homeಕರ್ನಾಟಕಚಿಕ್ಕಮಗಳೂರು: BJP ಬೆಂಬಲಿತ ಸಂಘಟನೆಯಾದ ಬಜರಂಗದಳದ ದುಷ್ಕರ್ಮಿಗಳ ಬೆದರಿಕೆಯ ನಡುವೆ ದಲಿತ-ಮುಸ್ಲಿಂ ಜೋಡಿ ಮದುವೆ

ಚಿಕ್ಕಮಗಳೂರು: BJP ಬೆಂಬಲಿತ ಸಂಘಟನೆಯಾದ ಬಜರಂಗದಳದ ದುಷ್ಕರ್ಮಿಗಳ ಬೆದರಿಕೆಯ ನಡುವೆ ದಲಿತ-ಮುಸ್ಲಿಂ ಜೋಡಿ ಮದುವೆ

- Advertisement -
- Advertisement -

ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳದ ದುಷ್ಕರ್ಮಿಗಳ ಬೆದರಿಕೆಯ ನಡುವೆಯು ಚಿಕ್ಕಮಗಳೂರಿನಲ್ಲಿ ಪರಿಶಿಷ್ಟ ಜಾತಿ(ಎಸ್‌ಸಿ)ಗೆ ಸೇರಿದ ಯುವತಿ ಮತ್ತು ಮುಸ್ಲಿಂ ಯುವಕನ ನಡುವೆ ದಲಿತ ಸಂಘಟನೆಗಳ ಬೆಂಬಲದೊಂದಿಗೆ ಶುಕ್ರವಾರ ವಿವಾಹ ನಡೆದಿದೆ. ಎರಡು ದಿನಗಳ ಹಿಂದೆ ಸಬ್‌‌-ರಿಜಿಸ್ಟ್ರಾರ್‌ ಕಚೇರಿಗೆ ಬಂದಿದ್ದ ಜೋಡಿಯನ್ನು ಬಜರಂಗದಳದ ದುಷ್ಕರ್ಮಿಗಳು ಬಲವಂತವಾಗಿ ತಡೆದು ಅವರ ಮದುವೆಯನ್ನು ನಿಲ್ಲಿಸಿದ್ದರು.

ಚಿಕ್ಕಮಗಳೂರು ತಾಲೂಕಿನ ಲಕ್ಷ್ಮೀಪುರಂ ನಿವಾಸಿಗಳಾದ ಎಸ್‌ಸಿ ಸಮುದಾಯದ ಚೈತ್ರ ಮತ್ತು ಮುಸ್ಲಿಂ ಸಮುದಾಯದ ಜಾಫರ್‌ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ ಅವರು ಚಿಕ್ಕಮಗಳೂರಿನ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬುಧವಾರದಂದು ಚಿಕ್ಕಮಗಳೂರಿನ ರತ್ನಗಿರಿ ರಸ್ತೆಯಲ್ಲಿರುವ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಚೈತ್ರ ಮತ್ತು ಜಾಫರ್‌ ಭೇಟಿ ನೀಡಿದಾಗ ಬಜರಂದಳದ ನಾಲ್ವರು ದುಷ್ಕರ್ಮಿಗಳು ಮಧ್ಯಪ್ರವೇಶಿಸಿ, ‘ಲವ್‌ ಜಿಹಾದ್‌’ ನಡೆಯುತ್ತಿದೆ ಎಂದು ಆರೋಪಿಸಿ ಮದುವೆಯನ್ನು ತಡೆದಿದ್ದರು.

ಇದನ್ನೂ ಓದಿ: ಉತ್ತರ ಪ್ರದೇಶ-ಅಂತರ್‌ಧರ್ಮಿಯ ವಿವಾಹ; ಗರ್ಭಿಣಿ ಸರ್ಕಾರಿ ಆಶ್ರಯತಾಣದಲ್ಲಿ, ಪತಿ ಜೈಲಿನಲ್ಲಿ!

ತಮಗೆ ತೊಂದರೆ ನೀಡಿದ್ದ ಬಜರಂದಳದ ನಾಲ್ವರು ದುಷ್ಕರ್ಮಿಗಳ ವಿರುದ್ಧ ಜಾಫರ್‌ ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ದುಷ್ಕರ್ಮಿಗಳನ್ನು ಶ್ಯಾಮ್, ಪಾರ್ಥಿಭನ್, ಗುರು ಮತ್ತು ಪ್ರಸಾದ್ ಗೌಡ ಎಂಬ ಗುರುತಿಸಲಾಗಿದ್ದು, ನಾಲ್ವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದ್ದು, ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರದಂದು ದಲಿತ ಸಂಘಟನೆಗಳ ನೇತೃತ್ವದಲ್ಲಿ ಅವರಿಬ್ಬರ ಮದುವೆ ನಡೆದಿದೆ. ಮದುವೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯುವತಿ ಚೈತ್ರ, “ನಾನು ಸ್ವಂತ ಇಚ್ಛೆಯ ಮೇರೆಗೆ ಮುಸ್ಲಿಂ ಸಮುದಾಯದ ಜಾಫರ್ ಅವರನ್ನು ವಿವಾಹವಾಗಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದಿದ್ದೇನೆ. ನಮ್ಮನ್ನು ತಡೆಯಲು ಅವರು ಯಾರು? ಇದು ನಾವಿಬ್ಬರೂ ಪರಸ್ಪರ ತೆಗೆದುಕೊಂಡ ನಿರ್ಧಾರವಾಗಿತ್ತು” ಎಂದು ಹೇಳಿದ್ದಾರೆ. ಬಜರಂದಳ ದುಷ್ಕರ್ಮಿಗಳು ಜೋಡಿಗೆ ಕೊಲೆ ಬೆದರಿಕೆ ಕೂಡಾ ಹಾಕಿದ್ದು, ಅವರಿಂದ ತಮಗಿಬ್ಬರಿಗೆ ರಕ್ಷಣೆ ಬೇಕು ಎಂದು ಹೇಳಿದ್ದಾರೆ.

‘‘ಮೂರು ವರ್ಷಗಳಿಂದ ನಾವು ಪ್ರೀತಿಸುತ್ತಿದ್ದೇವೆ. ಬುಧವಾರದಂದು ಮದುವೆಯ ನೋಂದಣಿಗೆ ಸಹಿ ಹಾಕುವ ಮುನ್ನವೇ ಗುಂಪೊಂದು ಬಂದು ನಮ್ಮನ್ನು ತಡೆದರು. ತಡೆಯಲು ಅವರು ಯಾರು? ಇದು ನಮ್ಮಿಬ್ಬರ ಪರಸ್ಪರ ನಿರ್ಧಾರವಾಗಿತ್ತು. ಅವರು ನಮ್ಮನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ಚೈತ್ರಾ ಆರೋಪಿಸಿದ್ದಾರೆ.

ಇದನ್ನೂ ಓದಿ: ದೇಶ ಒಗ್ಗೂಡಿಸುವವರು ದೇಶಪ್ರೇಮಿಗಳು, ದೇಶ ಒಡೆಯುವವರು ದೇಶದ್ರೋಹಿಗಳು: ಯೋಗೇಂದ್ರ ಯಾದವ್

“ಅವರು ನನ್ನನ್ನು ನಿಂದಿಸಿದ್ದು, ‘ನಿನಗೆ ಮದುವೆಯಾಗಲು ಹಿಂದೂ ಹುಡುಗಿ ಬೇಕೇ? ನಿನಗೆ ಎಸ್ಸಿ ಹುಡುಗಿ ಬೇಕೇ?’ ಎಂದು ಹೇಳಿ ನನ್ನ ಪತಿ ಜಾಫರ್‌ಗೆ ಥಳಿಸಿದ್ದಾರೆ. ನಮಗೆ ಬಜರಂಗದಳದಿಂದ ರಕ್ಷಣೆ ಬೇಕು” ಎಂದು ಯುವತಿ ಹೇಳಿದ್ದಾರೆ.

ಮದುವೆಗೆ ನನ್ನ ಅಭ್ಯಂತರವಿಲ್ಲ ಎಂದು ಚೈತ್ರಾ ಅವರ ತಾಯಿ ಶೋಭಾ ಹೇಳಿದ್ದಾರೆ. “ನನ್ನ ಮಗಳಿಗೆ ಅಭ್ಯಂತರವಿಲ್ಲದಿದ್ದರೆ ನನಗೂ ಅಭ್ಯಂತರವಿಲ್ಲ. ಇಬ್ಬರೂ ಸುರಕ್ಷಿತವಾಗಿ ಮರಳಬೇಕು” ಎಂದು ಹೇಳಿದ್ದಾರೆ.

ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಉಮಾ ಪ್ರಶಾಂತ್, ಯುವಕ-ಯುವತಿ ವಯಸ್ಕರಾಗಿದ್ದು, ಇದು ಅನೈತಿಕ ಪೊಲೀಸ್‌ಗಿರಿಯ ಘಟನೆ ಎಂದು ಹೇಳಿದ್ದಾರೆ. ಜಾಫರ್ ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಂಬೇಡ್ಕರ್-ವಾಲ್ಮೀಕಿ ಭಾವಚಿತ್ರದ ಮುಂದೆ ಮದುವೆಯಾದ ಪ್ರೇಮಿಗಳು.

“ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯನ್ನು ನಾಲ್ಕು ಜನರು ಮದುವೆ ನೋಂದಣಿ ಮಾಡದಂತೆ ತಡೆದು, ಅಲ್ಲಿಂದ ಅವರಿಬ್ಬರನ್ನೂ ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದರು. ಹುಡುಗಿಯನ್ನು ಅಲ್ಲಿಯೇ ಇರುವಂತೆ ಹೇಳಿ, ನಾಲ್ವರು ಜಾಫರ್‌ ಅವರನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ಕರೆದೊಯ್ದರು” ಎಂದು ಪ್ರಶಾಂತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ...