Homeಮುಖಪುಟದಲಿತರಿಲ್ಲದೆ ಹಿಂದುತ್ವ ಅಪೂರ್ಣ: ಬಿಜೆಪಿ ನಾಯಕ ಗುರು ಪ್ರಕಾಶ್ ಪಾಸ್ವಾನ್

ದಲಿತರಿಲ್ಲದೆ ಹಿಂದುತ್ವ ಅಪೂರ್ಣ: ಬಿಜೆಪಿ ನಾಯಕ ಗುರು ಪ್ರಕಾಶ್ ಪಾಸ್ವಾನ್

- Advertisement -
- Advertisement -

ದಲಿತರ ಸಬಲೀಕರಣವೇ ಹಿಂದುತ್ವ ಚಿಂತನೆ ಮತ್ತು ಭಾರತ ಸಂವಿಧಾನದ ತಿರುಳಾಗಿದೆ. ಭಾರತ ಸ್ವಾತಂತ್ರ್ಯ ಗಳಿಸಿದ 75 ವರ್ಷದಲ್ಲಿ ದಲಿತರ ಸಬಲೀಕರಣದ ಕಡೆಗೆ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಬಿಜೆಪಿ ವಕ್ತಾರ ಗುರು ಪ್ರಕಾಶ್ ಪಾಸ್ವಾನ್ ಹೇಳಿದ್ದಾರೆ.

ನ್ಯೂಜೆರ್ಸಿಯಲ್ಲಿ ನಡೆಯುತ್ತಿರುವ ‘ಇಂಡಿಕ್ ಡೈಲಾಗ್’ ಕಾರ್ಯಕ್ರಮದ ಮೊದಲ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, “ದಲಿತರಿಗೆ ಸಂಬಂಧಿಸಿದಂತೆ ತಾರತಮ್ಯದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರೂ, ದಲಿತರ ಸಬಲೀಕರಣವು ಹಿಂದುತ್ವ ಚಿಂತನೆ ಮತ್ತು ಭಾರತೀಯ ಸಂವಿಧಾನದ ತಿರುಳಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪ್ರಸ್ತುತ ಯುಎಸ್ ಪ್ರವಾಸದಲ್ಲಿರುವ ಪಾಸ್ವಾನ್, ಲಾಸ್ ಏಂಜಲೀಸ್ ಮತ್ತು ಸ್ಯಾನ್ ಜೋಸ್‌ನಲ್ಲಿ ನಡೆದ ‘ದಲಿತ, ಬಹುಜನ ಮತ್ತು ಹಿಂದುತ್ವ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಭಾರತ ಸರ್ಕಾರದ ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಯ ನೀತಿಗಳು’ ಎಂಬ ವಿಷಯದ ಕುರಿತು ಭಾಷಣ ಮಾಡಿದ್ದಾರೆ.

ಪಾಟ್ನಾ ವಿಶ್ವವಿದ್ಯಾನಿಲಯದ ಕಾನೂನು ಬೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಪಾಸ್ವಾನ್ ಅವರು ನ್ಯೂಜೆರ್ಸಿಯಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಾ, “ರಾಮಾಯಣ, ಮಹಾಭಾರತ ಮತ್ತು ಭಾರತ ಸಂವಿಧಾನವು ಹಿಂದೂಗಳು ಮತ್ತು ಭಾರತವನ್ನು ವ್ಯಾಖ್ಯಾನಿಸುವ ಮೂರು ದಾಖಲೆಗಳಾಗಿವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಈ ಮೂರನ್ನೂ ದಲಿತರು (ರಾಮಾಯಣವನ್ನು ವಾಲ್ಮೀಕಿ ಮಹರ್ಷಿ, ಮಹಾಭಾರತವನ್ನು ವೇದವ್ಯಾಸರು ಮತ್ತು ಭಾರತದ ಸಂವಿಧಾನವನ್ನು ಡಾ.ಬಿ.ಆರ್‌.ಅಂಬೇಡ್ಕರ್‌‌) ರಚಿಸಿದ್ದಾರೆ. ಹಾಗಾದರೆ ದಲಿತರು ಭಾರತದ ಭಾಗವಾಗಿಲ್ಲ ಎಂಬ ಪ್ರಶ್ನೆ ಎಲ್ಲಿದೆ?” ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು ಮತ್ತು ದಬ್ಬಾಳಿಕೆಯ ಇತಿಹಾಸವನ್ನು ನಿರಾಕರಿಸಲು ಅಥವಾ ಮುಚ್ಚಿಡಲು ಸಾಧ್ಯವಿಲ್ಲ ಎಂದೂ ಪಾಸ್ವಾನ್ ಒತ್ತಿ ಹೇಳಿದ್ದಾರೆ.

ಇದನ್ನೂ ಓದಿರಿ: ಇರಾನ್‌: ಹಿಜಾಬ್ ಧರಿಸಲಿಲ್ಲವೆಂದು ಬಂಧನಕ್ಕೊಳಗಾದ ಯುವತಿ ಅನುಮಾನಾಸ್ಪದವಾಗಿ ನಿಧನ; ಜನಾಕ್ರೋಶ

“ಆದಾಗ್ಯೂ, ದಲಿತ ಸಬಲೀಕರಣವನ್ನು ಪ್ರತಿಪಾದಿಸುವ ಮೂಲಕ ಭಾರತವು 1950ರಿಂದ (ಜನವರಿ 26, 1950, ಭಾರತ ಗಣರಾಜ್ಯವು ಲಿಖಿತ ಸಂವಿಧಾನವನ್ನು ನೀಡಿದಾಗ) ಏನು ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಫಲಿತಾಂಶಗಳನ್ನು ನೋಡುವುದು ಸಹ ಮುಖ್ಯವಾಗಿದೆ” ಎಂದಿದ್ದಾರೆ.

ತಮ್ಮ ಭಾಷಣದಲ್ಲಿ ದಲಿತ ಚೇಂಬರ್ ಆಫ್ ಕಾಮರ್ಸ್, ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಅವರಂತಹ ಅಪ್ರತಿಮ ದಲಿತ ನಾಯಕರ ಪ್ರಭಾವದ ಬಗ್ಗೆ ಮಾತನಾಡಿದ್ದಾರೆ.

ಸ್ವಚ್ಛ ಭಾರತ್ ಮಿಷನ್, ಪಿಎಂ ಮುದ್ರಾ, ರಾಜ್ಯಪಾಲರ ನೇಮಕ, ರಾಷ್ಟ್ರೀಯ ನಾಗರಿಕ ಪ್ರಶಸ್ತಿಗಳಿಗೆ ದಲಿತರನ್ನು ಗುರುತಿಸುವುದು ಮೊದಲಾದ ವಿಚಾರಗಳ ಕುರಿತು ಪಾಸ್ವಾನ್ ಪ್ರಸ್ತಾಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಹಿಂದುತ್ವ ಅದೊಂದು ಅಸಮಾನತೆಯಿಂದ ಕೂಡಿದ ಗೊಡ್ಡು ಸಂಪ್ರದಾಯ ಮತ್ತು ಅನಾಗರೀಕ ಸಂಸ್ಕೃತಿ. ಅನಾಗರೀಕ ಆರ್ಯರು ತಮ್ಮ ಸ್ವಾರ್ಥ ಸಾಧನೆಗಾಗಿ ಸೃಷ್ಟಿಸಿಕೊಂಡಿರುವ ಕಾನೂನು. ಮೂಲತಃ ದಲಿತರು ಹಿಂದೂಗಳು ಅಲ್ಲವೇ ಅಲ್ಲ. ಅವರು ವಿಶಿಷ್ಟ ವೈಚಾರಿಕತೆ ಹೊಂದಿದ್ದ ನಾಗ ಜನಾಂಗದವರು. ಅವರು ಗೌತಮ ಬುದ್ಧನನ್ನು ಅನುಸರಿಸುತ್ತಿದ್ದರು.

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...