ಪಂಚರಾಜ್ಯಗಳ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಕಣ ರಂಗೇರುತ್ತಿದೆ. ಅದರಲ್ಲೂ ಈ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆ ವಿಶೇಷವಾಗಿ ಗಮನ ಸೆಳೆದಿದೆ. ರಾಷ್ಟ್ರೀಯ ಪಕ್ಷಗಳ ಜೊತೆಗೆ ನಟ ಕಮಲ್ ಹಾಸನ್ ಅವರ ನೂತನ ಪಕ್ಷ ಮಕ್ಕಳ್ ನೀಧಿ ಮಯ್ಯಂ ಸಹ ಅದೃಷ್ಟ ಪರೀಕ್ಷೆಗೆ ಇಳಿದಿದೆ.
ಬುಧವಾರ (ಮಾರ್ಚ್ 3) ವಿ. ಪೊನ್ರಾಜ್ ಎಂಬುವವರು ಮಕ್ಕಳ್ ನೀಧಿ ಮಯ್ಯಂ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ವಿ. ಪೊನ್ರಾಜ್ ದಿವಂಗತ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರಿಗೆ ವೈಜ್ಞಾನಿಕ ಸಲಹೆಗಾರರಾಗಿದ್ದವರು.
ಚೆನ್ನೈನ ಅಲ್ಪಾರ್‌ಪೇಟ್‌ನಲ್ಲಿ ನಡೆದ ಸಭೆಯಲ್ಲಿ ಪೊನ್ರಾಜ್ ಅವರನ್ನು ಪರಿಚಯಿಸಿದ ಪಕ್ಷದ ಅಧ್ಯಕ್ಷ, ನಟ ಕಮಲ್ ಹಾಸನ್ ಅವರು ಡಾ.ಆರ್.ಮಹೇಂದ್ರನ್ ಅವರೊಂದಿಗೆ ಪೊನ್ರಾಜ್ ಕೂಡ ಪಕ್ಷದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: ಮುರುಘಾ ಮಠದ ಅಧಿಕಾರಿಯ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ಬಯಲಿಗೆಳೆದ ಪತ್ರಕರ್ತನ ವಿರುದ್ಧ ಎಫ್‌ಐಆರ್!
Chennai: V Ponraj, who was the scientific adviser to former President and scientist Dr APJ Abdul Kalam, appointed as the Vice President of Makkal Needhi Maiam.#TamilNadu pic.twitter.com/qCk1AT3Apq
— ANI (@ANI) March 3, 2021
“ದೇಶಕ್ಕಾಗಿ ಅಬ್ದುಲ್ ಕಲಾಂ ಅವರ ದೃಷ್ಟಿಕೋನವನ್ನು ನಿಜವಾಗಿಸುವ ಯಾರೊಂದಿಗಾದರೂ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ. ಕಮಲ್ ಹಾಸನ್ ಅವರಿಂದ ಕರೆ ಬಂದಾಗ, ನಾನು ಪಕ್ಷಕ್ಕೆ ಸೇರಲು ನಿರ್ಧರಿಸಿದೆ. ಕಮಲ್ ಹಾಸನ್ ಅವರ ಸಮರ್ಥ ನಾಯಕತ್ವದಲ್ಲಿ ಅಬ್ದುಲ್ ಕಲಾಂ ಅವರ ಕನಸುಗಳನ್ನು ನನಸು ಮಾಡುವ ವಿಶ್ವಾಸವಿದೆ ”ಎಂದು ಪೊನ್ರಾಜ್ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸರ್ಕಾರದ ವೈಫಲ್ಯಗಳ ಪ್ರಚಾರ: 100 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ’ಜನಧ್ವನಿ’ ಜಾಥಾ
ರಾಜಕೀಯ ನೀತಿಗಳನ್ನು ರೂಪಿಸುವಲ್ಲಿ ನಟ ರಜನಿಕಾಂತ್ ಅವರೊಂದಿಗೆ ಒಂದೆರಡು ವರ್ಷಗಳಿಂದ ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಪೊನ್ರಾಜ್ ಹೇಳಿದ್ದಾರೆ. ಆದರೆ ಅವರಿಗೆ ಆರೋಗ್ಯದ ತೊಂದರೆಗಳಿಂದಾಗಿ ಅವರ ಪಕ್ಷ ಘೋಷಣೆಯಾಗಲಿಲ್ಲ ಎಂದಿದ್ದಾರೆ.
ಆಡಳಿತಾರೂಢ ಬಿಜೆಪಿ ಸರ್ಕಾರವು ನೀಡಿದ ಅಡೆತಡೆಗಳಿಂದಾಗಿ ತಾನು ಪ್ರಾರಂಭಿಸಿದ ಅಬ್ದುಲ್ ಕಲಾಂ ವಿಷನ್ ಇಂಡಿಯಾ ಪಕ್ಷವನ್ನು ನೋಂದಾಯಿಸಲು ಸಹ ಸಾಧ್ಯವಾಗಲಿಲ್ಲ ಎಂದು ಪೊನ್ರಾಜ್ ಹೇಳಿದ್ದಾರೆ. ಎಲ್ಲಾ ಯುವಕರು ಮತ್ತು ಮಾಜಿ ರಾಷ್ಟ್ರಪತಿಗಳ ಹೆಸರಿನಲ್ಲಿ ಕಲ್ಯಾಣ ಕ್ಲಬ್‌ಗಳನ್ನು ನಡೆಸುತ್ತಿರುವವರು ತಮಿಳುನಾಡಿನ ಬದಲಾವಣೆಗಾಗಿ ಪಕ್ಷಕ್ಕೆ ಸೇರ್ಪಡೆಯಾಗಿ ಕೆಲಸ ಮಾಡಬೇಕೆಂದು ಪೊನ್ರಾಜ್ ಮನವಿ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಈ ಬಾರಿ ಘಟಾನುಘಟಿಗಳು ಕಣಕ್ಕಿಳಿಯುವ ಸಾಧ್ಯತೆಗಳಿವೆ. ನಟಿ ಖುಷ್ಬೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದು, ಇತ್ತ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ನಟ ಕಮಲ್ ಹಾಸನ್, ರಜನಿಕಾಂತ್ ಮತ್ತು ಶರತ್ ಕುಮಾರ್ ಬೆಂಬಲ ಕೇಳಿದ್ದು, ಚುನಾವಣೆಗೆ ಬಣ್ಣದ ಲೋಕದ ಟಚ್ ನೀಡುತ್ತಿದ್ದಾರೆ.
ಇದನ್ನೂ ಓದಿ: ರಾಜಕೀಯವಾಗಿ ಮಾತ್ರವಲ್ಲ, ಸಾಮಾಜಿಕವಾಗಿಯೂ ಪ್ರಜಾಪ್ರಭುತ್ವ ಇರಬೇಕು – ಸಿದ್ದರಾಮಯ್ಯ


