Homeಮುಖಪುಟಇದ್ರೀಸ್ ಪಾಶ ಹತ್ಯೆ ಸಮರ್ಥಿಸಿಕೊಂಡ ಕೊಲೆ ಆರೋಪಿಗಳು: ಆಡಿಯೋ ವೈರಲ್

ಇದ್ರೀಸ್ ಪಾಶ ಹತ್ಯೆ ಸಮರ್ಥಿಸಿಕೊಂಡ ಕೊಲೆ ಆರೋಪಿಗಳು: ಆಡಿಯೋ ವೈರಲ್

ಒಂದಲ್ಲ, 10 ವರ್ಷ ಜೈಲಿಗೆ ಹಾಕಿದರೂ ಗೋವು ಕಡಿಯುವವರನ್ನು ಮತ್ತೆ ಕೊಲ್ತೀವಿ ಎಂದು ಇದ್ರೀಸ್ ಪಾಶ ಹತ್ಯೆ ಆರೋಪಿಗಳಲ್ಲಿ ಒಬ್ಬನಾದ ಗೋಪಿಗೌಡ ಹೇಳಿದ್ದಾನೆ.

- Advertisement -
- Advertisement -

ದನ ಕುಯ್ಯೋದು ತಪ್ಪಲ್ವ? ಕರ್ನಾಟಕದಲ್ಲಿ ಯಾವುದೇ ಸರ್ಕಾರ ಬರಲಿ, ಕಣ್ಮುಂದೆ ದನ ಕಡಿಯುವುದು ಕಂಡರೆ ಅವನನ್ನು ಮೊದಲು ಕಡಿತ್ತೀವಿ. ಒಂದಲ್ಲ 10 ವರ್ಷ ಜೈಲಿಗೆ ಹಾಕಿದರೂ ಗೋವು ಕಡಿಯುವವರನ್ನು ಮತ್ತೆ ಕೊಲ್ತೀವಿ ಎಂದು ಇದ್ರೀಸ್ ಪಾಶ ಹತ್ಯೆ ಆರೋಪಿಗಳಲ್ಲಿ ಒಬ್ಬನಾದ ಗೋಪಿಗೌಡ ಎಂಬುವವನು ಮಾತನಾಡಿರುವ ಆಡಿಯೋ ಒಂದು ವೈರಲ್ ಆಗಿದೆ.

ಹಿಂದುತ್ವ ಎನ್ನುವುದು ನಮ್ಮ ರಕ್ತದಲ್ಲಿ ಬಂದಿದೆ. ದನ ತಿನ್ನಬೇಡಿ, ಮುಸ್ಲಿಮರಿಗೆ ಸಪೋರ್ಟ್ ಮಾಡಬೇಡಿ. ನಮ್ಮಂತವರು ಸತ್ತರೆ ಸಾವಿರ ಜನ ಕೆಲಸ ಮಾಡುತ್ತಾರೆ ಎಂದು ಅಹೋರಾತ್ರ ಎಂಬುವವರಿಗೆ ಫೋನ್ ಮಾತನಾಡಿರುವ ಆಡಿಯೋವನ್ನು ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದ್ರೀಸ್ ಪಾಶನನ್ನು ಏಕೆ ಕೊಂದಿರಿ? ನೀವು ಪೊಲೀಸರಿಗೆ ಹಿಡಿದುಕೊಟ್ಟಿದ್ದರೆ ಸಾಕಿರಲಿಲ್ವ? ಕಾನೂನು ಮೀರಿದ್ದು ಏಕೆ ಎಂದು ಅಹೋರಾತ್ರ ಪ್ರಶ್ನಿಸಿದ್ದಕ್ಕೆ, “ದನ ಕಡಿಯೋದು ತಪ್ಪಲ್ವ? ದನ ಕಡಿಯುವವರನ್ನು ನಾವು ಕಡಿಯುತ್ತೇವೆ” ಎಂದು ಹೇಳುವ ಮೂಲಕ ಇದ್ರೀಸ್ ಪಾಶ ಹತ್ಯೆಯನ್ನು ಸಮರ್ಥಿಸಿಕೊಂಡಿರುವುದು ಆಡಿಯೋದಲ್ಲಿ ದಾಖಲಾಗಿದೆ.

ಕಾಂಗ್ರೆಸ್‌ನವರು ಗೆದ್ದುಬಿಟ್ಟಿದ್ದಾರೆ, ಹಾಗಾಗಿ ನಾವು ಸುಮ್ಮನಾಗಿಬಿಟ್ಟಿದ್ದಾರೆ ಎಂದು ಕೆಲವರು ಅಂದುಕೊಂಡಿರಬಹುದು. ಆದರೆ ನಾವು ಗೋವುಗಳ ರಕ್ಷಣೆ ಮಾಡಿಯೇ ಮಾಡುತ್ತೇವೆ ಎಂದು ಇದ್ರೀಸ್ ಪಾಶ ಹತ್ಯೆಯ ಆರೋಪಿಗಳಾದ ಪವನ್ ಮತ್ತು ಅಂಬಿಗಾರ್ ಎಂಬುವವರು ಮಾತನಾಡಿದ್ದಾರೆ.

ಫೋನ್ ಕರೆಯಲ್ಲಿ ಅಹೋರಾತ್ರ ಮಾತನಾಡಿ, “ಸೂಲಿಬೆಲೆ ನಿಮ್ಮನ್ನು ಹೊರಗೆ ಕರೆಸಿಕೊಂಡು, ನಿಮಗೆ ಊಟ ಹಾಕಿದ್ದು ಏಕೆ? ನಾಗರಕಟ್ಟೆಯ ಅಶ್ವಥ ಮರ ಕಡಿದಿದ್ದಕ್ಕೆ ಅನುಭವಿಸಿದರಿ. ಯಾರನ್ನು ಕೊಂದರು ಅಧರ್ಮ. ಜಗತ್ತಿನ ಯಾವ ಧರ್ಮವೂ ಕೊಲ್ಲು ಎಂದು ಹೇಳಿಕೊಡುವುದಿಲ್ಲ. ನೀವು ಇದ್ರೀಸ್ ಪಾಶನಿಗೆ ಏಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದು” ಎಂದು ಪ್ರಶ್ನಿಸಿದ್ದಾರೆ. ಆದರೆ ಆರೋಪಿಗಳು ಕೊಲ್ಲಲು ನೀನೆ ಹೇಳಿದ್ದು, ನೀನೆ ಮಾಡಿದ್ದು ಎಂದಿದ್ದಾರೆ. ಯಾರಾದರೂ ಸಾಬರು ನಿನಗೆ ಹೊಡೆಯಲು ಬಂದರೆ ನಮ್ಮನ್ನು ಕರಿ ಬರುತ್ತೇವೆ, ನಿನ್ನನ್ನು ಉಳಿಸುತ್ತೇವೆ ಎಂದಿದ್ದಾರೆ.

ನೀನು ನನಗೆ ಜಾಮೀನು ಕೊಡಿಸುತ್ತೀಯಾ? ಸಪೋರ್ಟ್ ಮಾಡ್ತೀಯ ಎಂದು ನಂಬಿದ್ದೇವು. ಆದರೆ ನೀನು ಮುಂಬೈಗೆ ಕರೆದು ಕೊನೆಗೆ ಫೋನ್ ಸ್ವಿಚ್ ಆಫ್ ಮಾಡಿಕೊಂಡೆ ಎಂದು ಅಹೋರಾತ್ರ ವಿರುದ್ಧ ಆರೋಪಿಸಿದ್ದಾರೆ.

ಆನಂತರ ಆಹೋರಾತ್ರ ಸಾತನೂರು ಪೊಲೀಸ್ ಠಾಣೆಗೆ ಫೋನ್ ಮಾಡಿ ಪುನೀತ್ ಕೆರೆಹಳ್ಳಿ ಜೊತೆಗಿದ್ದ ಆರೋಪಿಗಳು ಫೋನ್ ಮಾಡಿ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆನಂತರ ಕನಕಪುರ ಇನ್ಸ್‌ಪೆಕ್ಟರ್‌ರವರಿಗೆ ಫೋನ್ ಮಾಡಿ, “ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳು ಫೋನ್ ಮಾಡಿ ಮಾತನಾಡಿದ್ದಾರೆ ಎಂದು ದೂರಿದ್ದಾರೆ. ಇನ್ಸ್‌ಪೆಕ್ಟರ್‌ ದೂರು ದಾಖಲಿಸಿ ಎಂದಾಗ ನಾನು ಬಾಂಬೆಯಲ್ಲಿದ್ದೇನೆ, ನಿಮಗೆ ವಾಟ್ಸಾಪ್‌ ಮೂಲಕ ಆಡಿಯೋ ಕಳಿಸುತ್ತೇವೆ” ಎಂದಿದ್ದಾರೆ. ಈ ವೇಳೆ ಪೊಲೀಸರು ನಾವು ಶೀಘ್ರದಲ್ಲಿಯೇ ಚಾರ್ಜ್‌ಶೀಟ್‌ ಸಲ್ಲಿಸುತ್ತೇವೆ ಎಂದು ಹೇಳಿರುವುದು ದಾಖಲಾಗಿದೆ.

ಇನ್ನೊಂದೆಡೆ ಇದ್ರೀಸ್ ಪಾಶ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾನೆ. ಅದರಲ್ಲಿ “ಇದ್ರೀಸ್ ಪಾಶ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಹೇಗೆ 25 ಲಕ್ಷ ಪರಿಹಾರ ನೀಡಿದ್ದೀರಿ” ಎಂದು ಮನಬಂದಂತೆ ಮಾತನಾಡಿದ್ದಾನೆ.

ಟ್ರಕ್ ಚಾಲಕ ಇದ್ರೀಸ್ ಪಾಶ ಹತ್ಯೆಯಲ್ಲಿ ಪೊಲೀಸರ ಕರ್ತವ್ಯ ಲೋಪ ಕಂಡುಬಂದಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ನಕಲಿ ಗೋರಕ್ಷಕರಿಗೆ ಎಚ್ಚರಿಕೆ ನೀಡಿ, ವಶಕ್ಕೆ ಪಡೆದಿದ್ದಲ್ಲಿ ಹತ್ಯೆಯನ್ನು ತಡೆಗಟ್ಟಬಹುದಿತ್ತು ಎಂದು ಸತ್ಯ ಶೋಧನಾ ವರದಿ ತಿಳಿಸಿದೆ.

ವಕೀಲ ಶಿವಮಾನಿತನ್, ಸಿದ್ಧಾರ್ಥ್ ಕೆ.ಜಿ, ಡಾ. ಸಿಲ್ವಿಯಾ ಕರ್ಪಗಂ, ಖಾಸಿಂ ಶೋಯೆಬ್ ಖುರೇಷಿ ಮತ್ತು ಅಖಿಲ ಭಾರತ ಜಮೈತುಲ್ ಖುರೇಷ್ (ಕರ್ನಾಟಕ) ಸದಸ್ಯರ ಸತ್ಯಶೋಧನಾ ತಂಡವು ಇದ್ರೀಸ್ ಪಾಶ ಹತ್ಯೆ ಪ್ರಕರಣದ ಸತ್ಯಶೋಧನಾ ವರದಿಯನ್ನು ಪ್ರಕಟಿಸಿದ್ದು, ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಶಿಫಾರಸ್ಸುಗಳನ್ನು ಸಲ್ಲಿಸಿದ್ದಾರೆ.

ಹಣ ಸುಲಿಗೆ ಮಾಡುವ ಹಾಗೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ, ದಾಳಿ ನಡೆಸುವ ಉದ್ದೇಶದಿಂದ ಸಮಾಜ-ವಿರೋಧಿ ಗುಂಪುಗಳು ಬಹಿರಂಗವಾಗಿ ಕಾನೂನನ್ನು ಕೈಗೆತ್ತಿಕೊಂಡಿವೆ. ಪೊಲೀಸರ ಯಾವುದೇ ಭಯವಿಲ್ಲದೆ ಪೊಲೀಸ್ ಠಾಣೆಯ ಹತ್ತಿರವೇ ಮೂರು ಜನ ನಾಗರೀಕರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಆದರೆ ಪೊಲೀಸರು ತಕ್ಷಣವೇ ಈ ದಾಳಿಕೋರರನ್ನು ಬಂಧಿಸುವ ಬದಲು ಇನ್ನುಳಿದ ಸಂತ್ರಸ್ಥರನ್ನು ಹುಡುಕಲು ದಾಳಿಕೋರರನ್ನು ಬಿಟ್ಟಿದ್ದಾರೆ. ಪೊಲೀಸ್ ಠಾಣೆಯ ಸಿಬ್ಬಂಧಿಯೊಬ್ಬರು ಸಂತ್ರಸ್ಥರ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ಕಣ್ಣಾರೆ ಕಂಡ ನಂತರ ಹಾಗೂ ಪೊಲೀಸ್ ಠಾಣೆ ಹೊರಗೆ ಸ್ವತಃ ದಾಳಿಕೋರರೇ ಫೇಸ್‌ಬುಕ್ ಲೈವ್ ಮಾಡಿದರೂ ಸಹ ದಾಳಿಕೋರರನ್ನು ಬಂಧಿಸಿರುವುದಿಲ್ಲ. ಇದರಿಂದಾಗಿಯೇ ಇದ್ರೀಸ್ ಪಾಶರವರ ಹತ್ಯೆಯಾಗಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ; ಇದ್ರೀಸ್ ಪಾಶ ಹತ್ಯೆಗೆ ಪೊಲೀಸರ ಕರ್ತವ್ಯ ಲೋಪವೂ ಕಾರಣ: ಸತ್ಯಶೋಧನಾ ವರದಿ ಬಿಡುಗಡೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...