Homeಮುಖಪುಟರಾಜ್‌ಕೋಟ್‌: ಬುಲ್ಡೋಜರ್ ನೇತೃತ್ವದಲ್ಲಿ ಸನಾತನಿ ರಥಯಾತ್ರೆ

ರಾಜ್‌ಕೋಟ್‌: ಬುಲ್ಡೋಜರ್ ನೇತೃತ್ವದಲ್ಲಿ ಸನಾತನಿ ರಥಯಾತ್ರೆ

- Advertisement -
- Advertisement -

ಗುಜರಾತ್‌ನ ರಾಜ್‌ಕೋಟ್‌ನ ನಾನಾ ಮಾವಾ ಪ್ರದೇಶದಲ್ಲಿರುವ ಜಗನ್ನಾಥ ದೇವಸ್ಥಾನದಿಂದ ಮಂಗಳವಾರ ಬುಲ್ಡೋಜರ್ ನೇತೃತ್ವದಲ್ಲಿ ರಥಯಾತ್ರೆ ನಡೆಸಲಾಯಿತು. ಬುಲ್ಡೋಜರ್‌ನ ಮುಂಬಾಗಕ್ಕೆ ‘ಸನಾತನಿ ಬುಲ್ಡೋಜರ್’ ಎಂಬ ಬ್ಯಾನರ್ ಹಾಕಲಾಗಿದೆ.

ಈ ಬಗ್ಗೆ ರಾಜ್‌ಕೋಟ್‌ನ ಜಗನ್ನಾಥ ದೇವಸ್ಥಾನದ ಪ್ರಧಾನ ಅರ್ಚಕ ಮನಮೋಹನದಾಸ್ ಅವರು ಮಾತನಾಡಿದ್ದು, ”ಈ ವಿಶೇಷ ರಥಯಾತ್ರೆಯಲ್ಲಿ ಸನಾತನಿ ಬುಲ್ಡೋಜರ್ ಇದೆ. ಸನಾತನ ಧರ್ಮವನ್ನು ರಕ್ಷಿಸುವುದು ಮತ್ತು ಪ್ರಚಾರ ಮಾಡುವುದು ಬುಲ್ಡೋಜರ್‌ನ ಉದ್ದೇಶವಾಗಿದೆ” ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಬೆಳಗ್ಗೆ 9.30ರ ಸುಮಾರಿಗೆ ದೇವಸ್ಥಾನದಲ್ಲಿ ದೇವರ ಪೂಜೆ ನೆರವೇರಿಸಿದ ಬಳಿಕ ಯಾತ್ರೆಗೆ ಚಾಲನೆ ನೀಡಲಾಯಿತು. ಧಾರ್ಮಿಕ ಮೆರವಣಿಗೆಯಲ್ಲಿ, ಭಗವಾನ್ ಜಗನ್ನಾಥ ಅಥವಾ ಭಗವಾನ್ ಕೃಷ್ಣ, ಅವನ ಸಹೋದರ ಬಲರಾಮ ಮತ್ತು ಸಹೋದರಿ ಸುಭದ್ರೆಯ ವಿಗ್ರಹಗಳನ್ನು ರಥಗಳಲ್ಲಿ ಇರಿಸಲಾಗುತ್ತದೆ ಮತ್ತು ನಗರದ ತುಂಬಾ ಮೆರವಣಿಗೆ ಮಾಡಲಾಯಿತು.

ರಾಜ್‌ಕೋಟ್‌ನ ಪ್ರಮುಖ ರಸ್ತೆಗಳ ಮೂಲಕ ಈ ಯಾತ್ರೆಯು ಹಾದು ಹೋಗುತ್ತದೆ. ಒಟ್ಟು 26 ಕಿಮೀ ಸಾಗುವ ಯಾತ್ರೆಯು ಸಂಜೆಯ ನಂತರ ಜಗನ್ನಾಥ ದೇವಸ್ಥಾನದಲ್ಲಿ ಮುಕ್ತಾಯಗೊಳ್ಳಲಿದೆ.

ಜಗನ್ನಾಥ ದೇವಾಲಯದ ಈ ಬುಲ್ಡೋಜರ್ ರಥಯಾತ್ರೆಯನ್ನು ಆಯೋಜಿಸುವ ಪ್ರಮುಖರಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತ ರಾಜು ಜುಂಜಾ ಮಾತನಾಡಿ, ”ಏಕತೆಯ ಸಂದೇಶವನ್ನು ಕಳುಹಿಸಲು ಬುಲ್ಡೋಜರ್ ಅನ್ನು ಅಶ್ವದಳದಲ್ಲಿ ಸೇರಿಸಲಾಗಿದೆ” ಎಂದು ಹೇಳಿದ್ದಾರೆ.

ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ರಾಜ್‌ಕೋಟ್‌ ನಗರವು ಹೆಸರುವಾಸಿಯಾಗಿದ್ದು, ಮುಂಬರುವ ಕೃಷ್ಣ ಜನ್ಮಾಷ್ಟಮಿಯಂದು ಮೆರವಣಿಗೆಗಳು ನಡೆಯಲಿವೆ ಎಂದು ಮಾಜಿ ಸಿಎಂ ವಿಜಯ್ ರೂಪಾನಿ ಹೇಳಿದರು.

ಇದನ್ನೂ ಓದಿ: ನಮ್ಮನ್ನು ಎದುರು ಹಾಕಿಕೊಂಡರೆ ದಕ್ಕಿಸಿಕೊಳ್ಳುವುದು ನಿಮ್ಮಿಂದ ಸಾಧ್ಯವಿಲ್ಲ: ಸೆಂಥಿಲ್ ಬಾಲಾಜಿ ಬಂಧನದ ಕುರಿತು ಬಿಜೆಪಿಗೆ ತಮಿಳುನಾಡು ಸಿಎಂ ಸ್ಟಾಲಿನ್ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಬಾಂಡ್‌: ಎಸ್ಒಪಿ ಮಾಹಿತಿ ನೀಡಲು ಮತ್ತೆ ನಿರಾಕರಿಸಿದ ಎಸ್‌ಬಿಐ

0
ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಎಸ್‌ಒಪಿ ಮಾಹಿತಿಯನ್ನು ನೀಡಲು ಭಾರತೀಯ ಸ್ಟೇಟ್‌ ಬ್ಯಾಂಕ್‌ ಮತ್ತೆ ನಿರಾಕರಿಸಿದ್ದು, ಕೇಂದ್ರ ಮಾಹಿತಿ ಆಯೋಗಕ್ಕೆ (ಸಿಐಸಿ) ನಿರಾಕರಣೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಆರ್‌ಟಿಐ...