Homeಮುಖಪುಟಜೂನ್ 30ರಂದು ಪರಿಷತ್ ಉಪ ಚುನಾವಣೆ: ಕಾಂಗ್ರೆಸ್‌ನಿಂದ ಶೆಟ್ಟರ್‌ ಸೇರಿ ಮೂವರ ನಾಮಪತ್ರ

ಜೂನ್ 30ರಂದು ಪರಿಷತ್ ಉಪ ಚುನಾವಣೆ: ಕಾಂಗ್ರೆಸ್‌ನಿಂದ ಶೆಟ್ಟರ್‌ ಸೇರಿ ಮೂವರ ನಾಮಪತ್ರ

- Advertisement -
- Advertisement -

ಕರ್ನಾಟಕದ ವಿಧಾನ ಪರಿಷತ್‌ನಲ್ಲಿ ತೆರವಾಗಿರುವ 3 ಸ್ಥಾನಗಳಿಗೆ ಜೂನ್ 30ರಂದು ಉಪ ಚುನಾವಣೆ ನಿಗಧಿಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜಗದೀಶ್ ಶೆಟ್ಟರ್, ಬೋಸರಾಜು ಮತ್ತು ತಿಪ್ಪಣ್ಣಪ್ಪನವರು ಇಂದು ನಾಮಪತ್ರ ಸಲ್ಲಿಸಿದ್ದಾರೆ.

ವಿಧಾನಸಭೆಯ ಕಾರ್ಯದರ್ಶಿ ಮತ್ತು ಚುನಾವಣಾಧಿಕಾರಿ ಎಂ.ಕೆ ವಿಶಾಲಕ್ಷಿಯವರಿಗೆ ನಾಮಪತ್ರಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆಗಿದ್ದರು.

ಇತ್ತೀಚೆಗೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಬಂದ ಮಾಜಿ ಸಿಂ ಜಗದೀಶ್‌ ಶೆಟ್ಟರ್‌ ರವರ ಹೆಸರನ್ನು ಆರು ವರ್ಷಗಳ ಪೂರ್ಣಾವಧಿಗೆ (14.06.2028ರವರೆಗೆ) ಶಿಫಾರಸ್ಸು ಮಾಡಲಾಗಿದೆ.

ತಿಪ್ಪಣ್ಣಪ್ಪ ಕಮಕನೂರುರವರ ಹೆಸರನ್ನು 30.06.2026ರವರೆಗಿನ ಮೂರು ವರ್ಷದ ಅವಧಿಯ ಸ್ಥಾನಕ್ಕೆ ಕಣಕ್ಕಿಳಿಸಲಾಗಿದೆ. ಸಚಿವರಾಗಿ ನೇಮಕಗೊಂಡಿರುವ ಎನ್.ಎಸ್ ಬೋಸರಾಜುರವರನ್ನು 17.06.2024ರ ಒಂದು ವರ್ಷದ ಅವಧಿಯ ಸ್ಥಾಣಕ್ಕೆ ಕಣಕ್ಕಿಳಿಸಲಾಗಿದೆ.

ಕಾಂಗ್ರೆಸ್ ಪಕ್ಷವು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬೃಹತ್ ಬಹುಮತ ಸಾಧಿಸಿದೆ. ಹಾಗಾಗಿ ಮೂರು ಪರಿಷತ್ ಸ್ಥಾನಗಳನ್ನು ಗೆದ್ದುಕೊಳ್ಳುವ ವಿಶ್ವಾಸದಲ್ಲಿದೆ.

ಇದನ್ನೂ ಓದಿ: ನಾಯಕರೇ ಇಲ್ಲದ ಬಿಜೆಪಿಗೆ ವಿರೋಧ ಪಕ್ಷದ ನಾಯಕ ಸಿಗುವುದಾದರೂ ಎಲ್ಲಿಂದ?: ಕಾಂಗ್ರೆಸ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಾಮನಿರ್ದೇಶನ ರದ್ದು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿಯಿಂದ ಅರ್ಜಿ; ಮನವಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಣೆ

0
ಪಶ್ಚಿಮ ಬಂಗಾಳದ ಬಿರ್ಭೂಮ್ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ದೇಬಾಶಿಶ್ ಧಾರ್ ಅವರು ತಮ್ಮ ನಾಮಪತ್ರಗಳನ್ನು ರದ್ದುಗೊಳಿಸುವುದರ ವಿರುದ್ಧ ಸಲ್ಲಿಸಿದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ...