Homeಕರ್ನಾಟಕಕಾಂಗ್ರೆಸ್‍ಗೆ ಸೇರಿದ ಲಕ್ಷ್ಮೀನಾರಾಯಣ: ಸೋಮಣ್ಣರ ಸೀಕ್ರೆಟ್ ಡೀಲ್

ಕಾಂಗ್ರೆಸ್‍ಗೆ ಸೇರಿದ ಲಕ್ಷ್ಮೀನಾರಾಯಣ: ಸೋಮಣ್ಣರ ಸೀಕ್ರೆಟ್ ಡೀಲ್

- Advertisement -
- Advertisement -

ಇಂದು ಮಹತ್ವದ ಬೆಳವಣಿಗೆಯೊಂದು ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದಿದೆ. ಅದರ ಮಹತ್ವವನ್ನು ಬಿಂಬಿಸಲೋ ಎಂಬಂತೆ, ಅದರಲ್ಲಿ ಬೆಂ.ದ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್, ವಿಜಯನಗರದ ಶಾಸಕ ಎಂ.ಕೃಷ್ಣಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ಖುದ್ದು ಹಾಜರಿದ್ದರು. ಬೆಂಗಳೂರಿನ ಮಾಜಿ ಉಪಮೇಯರ್ ಎಂ.ಲಕ್ಷ್ಮೀನಾರಾಯಣ್ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿದ್ದೇ ಈ ವಿದ್ಯಮಾನ.

ಇದಕ್ಕೆ ಮಹತ್ವ ಬಂದಿರುವುದು ಸ್ವತಃ ಲಕ್ಷ್ಮೀನಾರಾಯಣ್‍ರ ಸಾಮಥ್ರ್ಯದಿಂದ ಅಷ್ಟೇ ಅಲ್ಲ. ಅವರ ಗುರು ವಿ.ಸೋಮಣ್ಣ ತಮ್ಮ ಅಸಮಾಧಾನದ ಕಾರಣಕ್ಕೆ, ಲಕ್ಷ್ಮೀನಾರಾಯಣರನ್ನು ಕಾಂಗ್ರೆಸ್ಸಿಗೆ ಕಳಿಸಿದ್ದಾರೆಂದು ಭಾವಿಸಲು ಹಲವು ಕಾರಣಗಳಿವೆ. ಹಳೇ ಬಿನ್ನಿಪೇಟೆ ಕ್ಷೇತ್ರದ ವಿ.ಸೋಮಣ್ಣರನ್ನು ವಿಜಯನಗರದ ವೀರಪುತ್ರ, ‘ಸೋಲಿಲ್ಲದ ಸರದಾರ’ (ಆ ನಂತರ ಸೋಮಣ್ಣ ಸೋತರು, ಆ ಮಾತು ಬೇರೆ) ಇತ್ಯಾದಿ ವಿಶೇಷಣಗಳಿಂದ ಕರೆಯಲಾಗುತ್ತಿದ್ದುದಕ್ಕೆ ಕಾರಣಗಳಿವೆ. ಜನತಾದಳದಿಂದ ಮತ್ತು ಕಾಂಗ್ರೆಸ್‍ನಿಂದ ಸತತ ಎರಡು ಬಾರಿ ಹಳೇ ಬಿನ್ನಿಪೇಟೆ ಕ್ಷೇತ್ರದಿಂದ ಗೆದ್ದ ಸೋಮಣ್ಣ, ನಂತರ ಯಾವ ಪಕ್ಷದ ಟಿಕೆಟ್ಟೂ ಬೇಡ ಎಂದು ಪಕ್ಷೇತರವಾಗಿಯೂ ನಿಂತು ಗೆದ್ದಿದ್ದರು!

ಅದೇ ಕ್ಷೇತ್ರದ ಲೇಔಟ್ ಕೃಷ್ಣಪ್ಪರಂತಹ ಒಬ್ಬ ಭಾರೀ ಕುಳ ಕಾಂಗ್ರೆಸ್ಸಿನಲ್ಲೇ ಇದ್ದಾಗಲೂ ಬಿನ್ನಿಪೇಟೆ ಕ್ಷೇತ್ರದ ಟಿಕೆಟ್ ಪಡೆಯಲು ಸಾಧ್ಯವೇ ಇಲ್ಲದ ಕಾರಣಕ್ಕೆ ಎಂಎಲ್‍ಸಿಯಷ್ಟೇ ಆದರು. ನಂತರ ಕ್ಷೇತ್ರದ ಪುನರ್‍ವಿಂಗಡಣೆಯಲ್ಲಿ ಗೋವಿಂದರಾಜನಗರದಿಂದ ಸೋಮಣ್ಣ ಮತ್ತು ವಿಜಯನಗರದಿಂದ ಕೃಷ್ಣಪ್ಪ ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದಿದ್ದರು. ಯಡಿಯೂರಪ್ಪ ಸಿಎಂ ಆದಾಗ ಆಪರೇಷನ್ ಕಮಲಕ್ಕೆ ಒಳಗಾದವರಲ್ಲಿ ಸೋಮಣ್ಣ ಸಹಾ ಒಬ್ಬರು. ಆದರೆ, ಅವರ ವಿರುದ್ಧ ಕೃಷ್ಣಪ್ಪನವರ ಮಗ ಪ್ರಿಯಾಕೃಷ್ಣ ನಿಂತು, ಜೆಡಿಎಸ್‍ನ ಬೆಂಬಲದೊಂದಿಗೆ ಸೋಮಣ್ಣ ಸೋತಿದ್ದರು. ಇದು ಅವರನ್ನು ಹೈರಾಣಾಗಿಸಿ, ಬೇರೆ ಕ್ಷೇತ್ರದ ಹುಡುಕಾಟಕ್ಕೂ ಬಿದ್ದಿದ್ದರು. ಆದರೆ, ಈ ಸಾರಿ ಮತ್ತೆ ಪ್ರಿಯಾಕೃಷ್ಣರನ್ನು ಸೋಲಿಸುವ ಮುಂಚೆ ಸ್ವತಃ ಯಡಿಯೂರಪ್ಪನವರು ಸೋಮಣ್ಣರನ್ನು ಹುಡುಕಿಕೊಂಡು ಬಂದು ಸಮಾಧಾನ ಮಾಡಿ ಪಕ್ಷದಲ್ಲಿ ಉಳಿಸಿಕೊಂಡಿದ್ದರು. ಯಡ್ಡಿ ಸೋಮಣ್ಣರ ನಡುವಿನದ್ದು ಲವ್ & ಹೇಟ್ ಸಂಬಂಧವಾದರೆ, ಅನಂತಕುಮಾರ್‍ರ ಜೊತೆಗೂ ಸೋಮಣ್ಣ ಬಹಳ ಒಳ್ಳೆಯ ಸಂಬಂಧ ಹೊಂದಿದ್ದರು.

ಏಕೆಂದರೆ ಸೋಮಣ್ಣರಿಗಿರುವ ಪ್ರಭಾವ ಅಂಥದ್ದು. ಈ ಕ್ಷೇತ್ರದ ಸಾವಿರಾರು ಜನರನ್ನು ಹೆಸರಿನಿಂದ ಬಲ್ಲ ಸೋಮಣ್ಣ, ಯಾರು ಯಾವುದೇ ಸಮಸ್ಯೆ ತಂದರೂ ಬಗೆಹರಿಸುತ್ತಿದ್ದ ವ್ಯಕ್ತಿ. ಬೆಂಗಳೂರಿನ ಮೇಯರ್ ಸ್ಥಾನಕ್ಕೆ ನೇರ ಚುನಾವಣೆ ನಡೆಯಬೇಕು ಎಂಬ ಚರ್ಚೆಯಿದ್ದಾಗ ಅದಕ್ಕೆ ದೊಡ್ಡ ಮಟ್ಟದಲ್ಲಿ ಕೇಳಿಬಂದ ಹೆಸರು ಸೋಮಣ್ಣರದ್ದೇ.

ಸೋಮಣ್ಣ ತನ್ನ ಮಗನನ್ನು ರಾಜಕಾರಣಕ್ಕೆ ತರುವ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರಾದರೂ, ತನ್ನ ಆಪ್ತ ಶಿಷ್ಯರಾದ ಎಚ್.ರವೀಂದ್ರ ಮತ್ತು ಲಕ್ಷ್ಮೀನಾರಾಯಣ ಇಬ್ಬರಿಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲೇ ಟಿಕೆಟ್ ಕೊಡಿಸಿದ್ದರು. ಆ ರೀತಿಯಲ್ಲಿ ‘ನಂಬಿದವರನ್ನು ಪೊರೆವ’ ವಿಚಾರದಲ್ಲಿ ಅವರ ಬಗ್ಗೆ ಅಂತಹ ಕೆಟ್ಟ ಹೆಸರಿಲ್ಲ.

ಇನ್ನು ಲಕ್ಷ್ಮೀನಾರಾಯಣರ ವಿಚಾರಕ್ಕೆ ಬರುವುದಾದರೆ, ಆವಲಹಳ್ಳಿ ಪಟೇಲರ ಕುಟುಂಬದ ಸಂಬಂಧಿಯಾದ ಅವರು ಭಾರೀ ದೊಡ್ಡ ಕುಳವೇನಾಗಿರಲಿಲ್ಲ. ನಗರದೊಳಗೇ ಇದ್ದರೂ, ಇನ್ನೂ ಹಳ್ಳಿಯ ರೀತಿ ರಿವಾಜುಗಳನ್ನು ಉಳಿಸಿಕೊಂಡಿರುವ ಆವಲಹಳ್ಳಿಯಲ್ಲಿ ಅಲ್ಲಿನ ದೊಡ್ಡ ಕುಳಗಳಿಗೆ ಸೆಡ್ಡು ಹೊಡೆದು ರಾಜಕೀಯ ಬಲ ರೂಪಿಸಿಕೊಂಡವರು ಲಕ್ಷ್ಮೀನಾರಾಯಣ್. ಸಹಜವಾಗಿ ಕಾರ್ಪೋರೇಟರ್ ಚುನಾವಣೆಗೆ ನಿಂತು ಗೆಲ್ಲಲು ಬಯಸಿದ ಅವರನ್ನು ಪೋಷಿಸಿದ್ದು ಸೋಮಣ್ಣರೇ. ನಂತರ ಉಪಮೇಯರ್ ಮಾಡಿದ್ದು, ಎಂಎಲ್‍ಎ ಟಿಕೆಟ್ ಕೊಡಿಸಿದ್ದು ಎಲ್ಲವೂ ಸೋಮಣ್ಣರೇ. ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಅಹಮದ್ ವಿರುದ್ಧ ಸೋತರೂ ಲಕ್ಷ್ಮೀನಾರಾಯಣ್ ಪ್ರಭಾವಿಯೇ.

ಈ ಸಾರಿ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಅನಂತಕುಮಾರ್‍ಗೆ ಟಿಕೆಟ್ ತಪ್ಪಿಸಿ, ತೇಜಸ್ವಿ ಸೂರ್ಯಗೆ ಕೊಟ್ಟ ನಂತರ ಬಹಿರಂಗವಾಗಿ ಕಿಡಿಕಾರಿದ್ದು ಸೋಮಣ್ಣ. ತನಗೆ ಕೆಲವು ವಿಚಾರಗಳಲ್ಲಿ ಸ್ಪಷ್ಟೀಕರಣ ಸಿಗುವವರೆಗೂ ಪ್ರಚಾರಕ್ಕೂ ಹೋಗುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಇಂದು ಕಾರ್ಯಕರ್ತರ ಸಭೆ ಕರೆದು ಪ್ರಚಾರ ಶುರು ಮಾಡಿದ್ದಾರಾದರೂ, ಇಂದೇ ಲಕ್ಷ್ಮೀನಾರಾಯಣ ಕಾಂಗ್ರೆಸ್ ಸೇರಿರುವುದು ಕೇವಲ ಅವರ ವ್ಯಕ್ತಿಗತ ತೀರ್ಮಾನ ಆಗಿರಲಾರದು.

ಸೋಮಣ್ಣರ ಪ್ರಭಾವವಿರುವ ಹಳೇ ಬಿನ್ನಿಪೇಟೆ ಕ್ಷೇತ್ರವ್ಯಾಪ್ತಿಯ ಎಲ್ಲೆಡೆ ಅವರ ಪ್ರತಿನಿಧಿಯಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‍ರ ಪರವಾಗಿ ಲಕ್ಷ್ಮೀನಾರಾಯಣ್ ಕೆಲಸ ಮಾಡುತ್ತಾರೆನ್ನುವುದು ಒಳ ಒಪ್ಪಂದ ಇದ್ದಂತಿದೆ. ಚುನಾವಣಾ ಸಂದರ್ಭದಲ್ಲಿ ಯಾವ ಮೌಲ್ಯಗಳೂ ಉಳಿದುಕೊಂಡಿರದ ರಾಜಕಾರಣದಲ್ಲಿ ಸಿದ್ಧಾಂತಕ್ಕೆ ಬೆಲೆಯೇನೂ ಇರುವುದಿಲ್ಲ. ಹಾಗಾಗಿ ಇಂತಹ ಪಕ್ಷಾಂತರಗಳು, ಒಳಒಪ್ಪಂದಗಳು ಮಾಮೂಲು ಎನ್ನುವಂತಹ ದುರಂತದ ಸ್ಥಿತಿ ನಿರ್ಮಾಣವಾಗಿದೆ.

ಒಟ್ಟಿನಲ್ಲಿ ತೇಜಸ್ವಿ ಸೂರ್ಯ ಅಭ್ಯರ್ಥಿಯಾದ ಕ್ಷಣದಿಂದಲೂ ಎಡವಟ್ಟಿನ ಮೇಲೆ ಎಡವಟ್ಟಾಗುತ್ತಿದೆ. ಅದೇ ಸಂದರ್ಭದಲ್ಲಿ ಹಿಂದಿನಿಂದಲೂ ಬಿಜೆಪಿಯ ಅನಂತಕುಮಾರ್‍ರ ಪರವಾಗಿ ಕಾಂಗ್ರೆಸ್‍ನ ರಾಮಲಿಂಗಾರೆಡ್ಡಿಯವರು ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡುತ್ತಿದ್ದು, ಈ ಸಾರಿ ಅವರೂ ತೊಡೆತಟ್ಟಿ ನಿಂತಂತಿದೆ. ಇಂದಿನ ಲಕ್ಷ್ಮೀನಾರಾಯಣ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರೂ ಇದ್ದದ್ದು ಅದಕ್ಕೆ ಸಾಕ್ಷಿಯಂತಿದೆ. ಇವೆಲ್ಲಾ ಕಾರಣಗಳಿಂದ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಸ್ಪರ್ಧೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ತೇಜಸ್ವಿ ಸೋಲಿಸಲು ಸೂಲಿಬೆಲೆ ಸ್ಕೆಚ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...