ಪಶ್ಚಿಮ ಬಂಗಾಳದ ವಿಷ್ಣುಪುರದ ಶಾಸಕ ತನ್ಮಯ್ ಘೋಷ್ ಸೋಮವಾರ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಟಿಎಂಸಿ ಬಿಟ್ಟು ಬಿಜೆಪಿ ಸೇರಿದ ಆರು ತಿಂಗಳ ಒಳಗಾಗಿ ಮತ್ತೆ ಮಮತಾ ಬ್ಯಾನರ್ಜಿ ಪಕ್ಷಕ್ಕೆ ಮರಳಿದ್ದಾರೆ. ಈ ವೇಳೆ ಬಿಜೆಪಿ ಸೇಡು ತೀರಿಸಿಕೊಳ್ಳುವ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಟಿಎಂಸಿ ಸೇರ್ಪಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ತನ್ಮಯ್ ಘೋಷ್, ಪಶ್ಚಿಮ ಬಂಗಾಳದ ಜನರಲ್ಲಿ ಗೊಂದಲ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
“ನಾನು ಪಶ್ಚಿಮ ಬಂಗಾಳದ ಕಲ್ಯಾಣಕ್ಕಾಗಿ TMC ಗೆ ಸೇರಲು ಎಲ್ಲರನ್ನು ಕೋರುತ್ತೇನೆ. ಕೇಂದ್ರದ ಏಜೆನ್ಸಿಗಳನ್ನು ಬಳಸಿ ಪಶ್ಚಿಮ ಬಂಗಾಳದ ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿರನ್ನು ಬೆಂಬಲಿಸುವಂತೆ ಕೇಳಿಕೊಳ್ಳುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ: ಫೋನ್ ಹ್ಯಾಕ್ ಮಾಡಿಯೂ ಬಿಜೆಪಿಗೆ ಚುನಾವಣೆ ಗೆಲ್ಲಲು ಸಾಧ್ಯವಾಗಲಿಲ್ಲ: ಟಿಎಂಸಿ
West Bengal | BJP MLA from Bishnupur, Tanmoy Ghosh, joins Trinamool Congress
"BJP is into vindictive politics. They're attempting to snatch rights of WB people by using central agencies. I urge all politicians to support CM Mamata Banerjee for public welfare," he says pic.twitter.com/Bd0BtI5Jlr
— ANI (@ANI) August 30, 2021
ಬಂಗಾಳ ಚುನಾವಣೆಗೆ ಕೆಲವು ದಿನಗಳ ಮುಂಚೆ ಈ ಮಾರ್ಚ್‌ನಲ್ಲಿ ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆಯಾಗಿದರು. ಈ ಹಿಂದೆ ತನ್ಮಯ್ ಘೋಷ್, ಬಂಕುರಾ ಜಿಲ್ಲೆಯ ವಿಷ್ಣುಪುರ ಪಟ್ಟಣದ ಟಿಎಂಸಿ ಯುವ ಅಧ್ಯಕ್ಷರಾಗಿದ್ದರು. ಜೊತೆಗೆ ಸ್ಥಳೀಯ ನಾಗರಿಕ ಸಂಸ್ಥೆಯ ಕೌನ್ಸಿಲರ್ ಆಗಿದ್ದರು.
ತನ್ಮಯ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ರಾಜ್ಯ ಶಿಕ್ಷಣ ಸಚಿವ ಬ್ರಾತ್ಯ ಬಸು, ಅನೇಕ ಬಿಜೆಪಿ ನಾಯಕರು ಟಿಎಂಸಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ.
“ಟಿಎಂಸಿಗೆ ಸೇರುವಂತೆ ನಾವು ಎಲ್ಲರಿಗೂ ಮನವಿ ಮಾಡುತ್ತೇವೆ. ಆದರೆ, ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವುದನ್ನು ಪಕ್ಷದ ನಾಯಕತ್ವ ನಿರ್ಧರಿಸುತ್ತದೆ” ಎಂದು ಸಚಿವ ಬ್ರಾತ್ಯ ಬಸು ಹೇಳಿದ್ದಾರೆ.
ಇತ್ತ, ತನ್ಮಯ್ ಟಿಎಂಸಿ ಸೇರ್ಪಡೆ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್, ” ಟಿಎಂಸಿ ಅವರನ್ನು ಹಿಂದಿನಿಂದಲೂ ಹೆದರಿಸುತ್ತಿತ್ತು. ಅವರು ಬಿಜೆಪಿ ಸೇರಿದ ಬಳಿಕವೂ ಅವರ ಮೇಲೆ ದೂರು ದಾಖಲಿಸಿತ್ತು. ಹೀಗಾಗಿ, ಮತ್ಯಾವ ದಾರಿಯೂ ಇಲ್ಲದೆ ಟಿಎಂಸಿಗೆ ಸೇರಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ಗೆ ಮಾಜಿ ಸಂಸದೆ ಸುಶ್ಮಿತಾ ದೇವ್ ರಾಜೀನಾಮೆ: ಟಿಎಂಸಿ ಸೇರ್ಪಡೆ


