Homeಮುಖಪುಟ‘ಮನಿ ಹೀಸ್ಟ್‌-5’ ವೀಕ್ಷಿಸಲು ರಜೆ ಘೋಷಿಸಿದ ಕಂಪೆನಿ!

‘ಮನಿ ಹೀಸ್ಟ್‌-5’ ವೀಕ್ಷಿಸಲು ರಜೆ ಘೋಷಿಸಿದ ಕಂಪೆನಿ!

- Advertisement -
- Advertisement -

ಒಟಿಟಿ ಫ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌‌ನ ಜನಪ್ರಿಯ ವೆಬ್‌ಸರಣಿ ‘ಮನಿ ಹೀಸ್ಟ್‌’ನ 5ನೇ ಆವೃತ್ತಿ ಸೆಪ್ಟೆಂಬರ್‌‌ 3 ರಂದು ಬಿಡುಗಡೆಗೊಳ್ಳಲಿದೆ. ವಿಶ್ವದಾದ್ಯಂತ ಸಿನಿರಸಿಕರನ್ನು ಹುಚ್ಚೆಬ್ಬಿಸಿರುವ ಈ ವೆಬ್‌ ಸರಣಿಯ ಬಿಡುಗಡೆಯ ದಿನ, ಸಂಸ್ಥೆಯೊಂದು ರಜಾದಿನ ಎಂದು ಘೋಷಿಸಿದೆ. ರಜೆ ನೀಡುವುದಕ್ಕೆ ಅದು ನೀಡಿರುವ ಕಾರಣದಿಂದಾಗಿ ಅದರ ಆದೇಶದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಡಿಜಿಟಲ್ ಸೊಲ್ಯೂಷನ್ಸ್ ಪೂರೈಕೆದಾರರಾದ ವೆರ್ವೆಲಾಜಿಕ್‌ನ ಸಿಇಒ ಅಭಿಷೇಕ್ ಜೈನ್ ಅವರು ಈ ರಜೆಯ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಸಂಸ್ಥೆಯು ಅಧಿಸೂಚನೆಯನ್ನು , ‘‘ನೆಟ್‌ಫ್ಲಿಕ್ಸ್ ಮತ್ತು ಚಿಲ್ ಹಾಲಿಡೇ” ಎಂದು ಕರೆದಿದೆ.

ಇದನ್ನೂ ಓದಿ: ಭಾರತದ ವಿವಿಧ ಭಾಷೆಗಳ ಇತ್ತೀಚಿನ ಸಿನಿಮಾಗಳಲ್ಲಿ ದಲಿತ ಕಥನಗಳು: ಭಾಗ-2

ನೆಟ್‌ಫ್ಲಿಕ್ಸ್‌ನಲ್ಲಿ ಮನಿ ಹೀಸ್ಟ್‌ ಬಿಡುಗಡೆಯಾದ ದಿನ, ಸುಳ್ಳು ಹೇಳಿ ರಜೆ ಪಡೆಯುವ ಮೇಲ್‌ಗಳ ದಾಳಿಯಿಂದ ತಪ್ಪಿಸಲು, ಸಾಮೂಹಿಕ ಬಂಕ್‌ಗಳು ಮತ್ತು ಮೊಬೈಲ್ ಸ್ವಿಚ್‌ ಆಫ್‌ ಆಗುವುದನ್ನು ತಪ್ಪಿಸಲು ಕಂಪೆನಿ ಬಯಸಿದೆ ಎಂದು ತಮಾಷೆಯಾಗಿ ಹೇಳಲಾಗಿದೆ.

ಕಂಪೆನಿಯು, ತಮ್ಮ ಉದ್ಯೋಗಿಗಳು ಅಂದು ಪಾಪ್‌ಕಾರ್ನ್ ಬಟ್ಟಲನ್ನು ಹಿಡಿದು, ಅವರ ಪ್ರೀತಿಪಾತ್ರರ ಜೊತೆ ಒಟ್ಟಿಗೆ ಕೂತು ದಿನವನ್ನು ಕಳೆಯಲು ಪ್ರೋತ್ಸಾಹಿಸಿದೆ. “ಯಾಕೆಂದರೆ, ಕೆಲವು ಖುಷಿಯ ಕ್ಷಣಗಳು ತಮ್ಮ ಕೆಲಸವನ್ನು ನಿರ್ವಹಿಸಲು ಶಕ್ತಿ ನೀಡುವ ಅತ್ಯುತ್ತಮ ಮಾತ್ರೆಗಳಾಗಬಹುದು” ಎಂದು ಕಂಪೆನಿ ಹೇಳಿದೆ.

 

View this post on Instagram

 

A post shared by Verve Logic (@vervelogicin)

ಇಷ್ಟೇ ಅಲ್ಲದೆ ಸಾಂಕ್ರಾಮಿಕ ಸಮಯದಲ್ಲಿ ಮನೆಯಲ್ಲಿದ್ದೇ ತಮ್ಮ ಉದ್ಯೋಗಿಗಳು ಮಾಡಿದ ಕಠಿಣ ಪರಿಶ್ರಮದಿಂದಾಗಿ ಕಷ್ಟದ ಸಮಯದಲ್ಲಿ ಕಂಪೆನಿ ಸುಲಭವಾಗಿ ಮುನ್ನಡೆದಿದೆ ಎಂದು ಹೇಳಿರುವ ಕಂಪೆನಿ, ಇದಕ್ಕಾಗಿ ಉದ್ಯೋಗಿಗಳಿಗೆ ಧನ್ಯವಾದ ಅರ್ಪಿಸಿದೆ.

ಪ್ರಸ್ತುತ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಪ್ರಶಂಸೆಯ ಮಾತುಗಳನ್ನು ಹೇಳಿದ್ದಾರೆ. ಹೆಚ್ಚಿನ ಜನರು ತಾವು ಕೂಡಾ ಅಂತಹ ಸಂಸ್ಥೆಗಳ ಭಾಗವಾಗಲು ಬಯಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಟ ಡಾಲಿ ಧನಂಜಯಗೆ ಜನ್ಮದಿನದ ಸಂಭ್ರಮ: ಸಾಲು ಸಾಲು ಚಿತ್ರಗಳು ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...