Homeಕರ್ನಾಟಕಚಾನೆಲ್ ಚಿತ್ರಾನ್ನ: ಕಾಶ್ಮೀರದಲ್ಲಿ ಟೆರರಿಸಂ ಅಂತ್ಯಗೊಳಿಸಿದ ಚಾನೆಲ್ಸ್

ಚಾನೆಲ್ ಚಿತ್ರಾನ್ನ: ಕಾಶ್ಮೀರದಲ್ಲಿ ಟೆರರಿಸಂ ಅಂತ್ಯಗೊಳಿಸಿದ ಚಾನೆಲ್ಸ್

- Advertisement -
- Advertisement -

ಈ ಮೂರು ದಿನ ತಲೆಚಿಟ್ಟು ಹಿಡಿಯುವಂತೆ ಕಾಶ್ಮೀರ, 370ನೇ ವಿಧಿ ರದ್ದು ಮತ್ತು ಮೋದಿ-ಶಾಗಳ ಐತಿಹಾಸಿಕ ಸಾಧನೆಯ ಬಗ್ಗೆ ಕನ್ನಡದ ಎಲ್ಲ ಚಾನೆಲ್‍ಗಳೂ ವರದಿ, ವಿಶೇಷ ಕಾರ್ಯಕ್ರಮ ಮತ್ತು ಪ್ಯಾನೆಲ್ ಡಿಸ್ಕಸನ್‍ಗಳನ್ನು ನಡೆಸಲಿವೆ. 370ನೇ ವಿಧಿ ರದ್ದು ಎಂಬುದಂತೂ ಅವುಗಳ ಪಾಲಿಗೆ ಪಂಚಮಿಯ ಉಂಡಿ, ಲಾಡೂಗಳನ್ನು ಸವಿದಷ್ಟೇ ಸುಖ ತಂದಿತ್ತು.

ಈ ವಿಷಯವಾಗಿ ಮೊದಲಿನಿಂದಲೂ ಆಗಾಗ ಕಾಶ್ಮೀರ ವಿಷಯದ ಕುರಿತು ಕಾಟಾಚಾರದ ಚರ್ಚೆ ನಡೆಸುತ್ತಿರುವ ಬಂದಿರುವ ಸುವರ್ಣದ ಅಜಿತ್ ಹನುಮಕ್ಕನವರಂತೂ ಕಾಶ್ಮೀರ ಸಮಸ್ಯೆಯ ಆಳ ಅಗಲ ಬಲ್ಲ ಕನ್ನಡಿಗ ತಾವೊಬ್ಬರೇ ಎಂಬಂತೆ, ಚರ್ಚೆಗೆ ಕರೆಸಿಕೊಂಡವರ ಮಾತುಗಳನ್ನೂ ಆಲಿಸದೇ ಕಾಶ್ಮೀರದ ಪುರಾಣವನ್ನು ಪಠಿಸುತ್ತ ಹೋದರು. ಅಜಿತ್ ಜಾಗದಲ್ಲಿ ಸಂಸದ ತೇಜಸ್ವಿ ಸೂರ್ಯರಿದ್ದರೂ ಈ ಪರಿಯ ಸಮರ್ಥನೆ ಸಾಧ್ಯವಿರುತ್ತಿರಲಿಲ್ಲವೇನೋ?

ಪಬ್ಲಿಕ್‍ನ ಹಿರಿಯ ರಂಗನಾಥರು ಕೂಡ ವಾಸ್ತವದ ಕಡೆ ಕಣ್ಣು ಹಾಯಿಸಲು (ಅವರಿಗೆ ಕಾಶ್ಮೀರ ಸಮಸ್ಯೆಯ ತಳಮಟ್ಟದ ವಿವರ ಗೊತ್ತಿದ್ದರೂ!) ಮನಸ್ಸು ಮಾಡಲಿಲ್ಲ. ನೋಟು ರದ್ದತಿಯನ್ನು ಬೆಂಬಲಿಸಿ ಚಿಪ್ ಸಂಶೋಧನೆ ಮಾಡಿದ ಪರಿಯಲ್ಲೇ ಇದರ ಬೆಂಬಲಕ್ಕೂ ನಿಂತರು. ಟಿವಿ 9ನ ರಂಗನಾಥ ಭಾರದ್ವಾಜರಂತೂ ಧ್ವಜ ಹಿಡಿದು ಕುಣಿದಾಡುವುದೊಂದೇ ಬಾಕಿಯಿತ್ತು. ಬಿಟಿವಿ, ಪವರ್ ಟಿವಿ, ಟಿವಿ5…. ಎಲ್ಲದರಲ್ಲೂ ‘370 ರದ್ದತಿಯ ದೇಶಭಕ್ತಿಯದ್ದೇ ಭರಾಟೆ.

ಇದೆಲ್ಲದರ ನಡುವೆ ವಿಭಿನ್ನವಾಗಿ ಕಾರ್ಯಕ್ರಮ ನಡೆಸಿ ಕೊಟ್ಟಿದ್ದು ರಾಜ್‍ನ್ಯೂಸ್‍ನ ಮಂಜುಳಾ ಮಾಸ್ತಿಕಟ್ಟೆಯವರೊಬ್ಬರೇ. ಅವರು ಕಾಶ್ಮೀರದ ಜನರ ಪ್ರಸ್ತುತ ಸಂಕಷ್ಟವನ್ನು ತೆರೆದಿಟ್ಟರಲ್ಲದೇ, ದೆಹಲಿ ಆಡಳಿತ ಕಾಶ್ಮೀರದ ಮೇಲೆ 70 ವರ್ಷಗಳಿಂದ ಎಸಗುತ್ತ ಬಂದಿರುವ ದೌರ್ಜನ್ಯವನ್ನು, ಈಗ ಅದನ್ನು ಮೀರಿಸುವಂತೆ ಬಿಜೆಪಿ-ಸಂಘ ಪರಿವಾರ ಕಾಶ್ಮೀರದ ಮೇಲೆ ಮಿಲಿಟರಿ ಆಡಳಿತವನ್ನು ಹೇರುತ್ತಿದೆ ಎಂಬುದನ್ನು ತಮ್ಮ ಪ್ರಶ್ನೆಗಳ ನಡು ನಡುವೆಯೇ ವಿವರಿಸುತ್ತ ಬಂದರು.

ದೇಶದ ಆರ್ಥಿಕತೆ ಎಕ್ಕ ಹಿಡಿದು ಹೋಗುತ್ತಿರುವಾಗ ಮತ್ತದೇ ಕಾಶ್ಮೀರ ಮತ್ತು ಪಾಕಿಸ್ತಾನವೇ ಇವರ ಬಂಡವಾಳವಾಯಿತೇ ಎಂಬ ಪ್ರಶ್ನೆಯನ್ನೂ ಈ ಚಾನೆಲ್‍ಗಳು ಕೇಳಿಕೊಳ್ಳಲಿಲ್ಲ. ಅಂದ ಹಾಗೆ ದೇಶದ ಆರ್ಥಿಕ ಸ್ಥಿತಿ ಸರಿಯಾಗಿಯೇ ಇದೆ ಎಂಬುದೇ ಅವುಗಳ ಅಭಿಪ್ರಾಯವೂ ಆಗಿದೆಯಲ್ಲ?

ಅಂದಂತೆ ಇದೇ ಚಾನೆಲ್‍ಗಳು ರಾಜ್ಯದಲ್ಲಿ ಸಚಿವ ಸಂಪುಟ ರಚನೆ ಯಾಕಾಗ್ತಿಲ್ಲ ಎಂಬ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ ಅನ್ನಲು ಆಗಲ್ಲ, ಆ ಬಗ್ಗೆ ಅವು ವರದಿ ಮಾಡುತ್ತಿವೆ. ಎಲ್ಲ ದೆಹಲಿಯಲ್ಲೇ ನಿರ್ಧಾರವಾಗುತ್ತೆ ಎಂಬುದನ್ನು ಪಾಸಿಟಿವ್ ಎಂಬಂತೆ ಅವು ಬಿಂಬಿಸುತ್ತಿರುವುದು ನಾಚಿಕೆಗೇಡು. ಹಾಗೆಯೇ, ಕೇಂದ್ರದ ಇಬ್ಬರು ಐಎಎಸ್‍ಗಳನ್ನು ಇಲ್ಲಿ ನೇಮಿಸಲಾಗುತ್ತಂತೆ, ಅವರು ಸರ್ಕಾರದ ಮೇಲೆ ಹದ್ದಿನ ಕಣ್ಣು ಇಡುತ್ತಾರಂತೆ, ಇದು ಚಾಣಕ್ಯನ ತಂತ್ರವಂತೆ! ಇದು ಕೂಡ ಚಾನೆಲ್‍ಗಳ ಪಾಲಿಗೆ ಪಾಸಿಟಿವ್ ನ್ಯೂಸ್! ಜನರನ್ನು ಅವು ಹಾಗೆ ದಾರಿ ತಪ್ಪಿಸುತ್ತಲೂ ಇವೆ.

ಜನರಿಂದ ಚುನಾಯಿತ ಸರ್ಕಾರವೊಂದರ ಮೇಲೆ ಅಧಿಕಾರಿಗಳ ಮೂಲಕ ನಿಯಂತ್ರಣ ಸಾಧಿಸುವುದು ಈ ದೇಶದ ಒಕ್ಕೂಟ ವ್ಯವಸ್ಥೆಗೇ ಮಾಡಿದ ದ್ರೋಹ ಎಂಬ ಅರಿವು ಇದ್ದೂ ಈ ಚಾನೆಲ್‍ಗಳು ‘ಚಾಣಕ್ಯ’ನ ಪರ ನಿಲ್ಲುತ್ತವೆ ಅಂದರೆ, ಇವುಗಳ ಮಾಲಿಕರು ಅವನ ಮುಂದೆ ಮಂಡಿಯೂರಿ ಕುಳಿತಿದ್ದಾರೆ ಎಂದಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. Ya,,,, absolutely u said it right,,, I always watch Raj news,,,,lts so humble channel,,& I really love the anchor Manjula,,,,& I watch NDTV India & NDTV that s it,, I don’t understand y people are mad about other godi media’s,,

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...