ಈ ಮೂರು ದಿನ ತಲೆಚಿಟ್ಟು ಹಿಡಿಯುವಂತೆ ಕಾಶ್ಮೀರ, 370ನೇ ವಿಧಿ ರದ್ದು ಮತ್ತು ಮೋದಿ-ಶಾಗಳ ಐತಿಹಾಸಿಕ ಸಾಧನೆಯ ಬಗ್ಗೆ ಕನ್ನಡದ ಎಲ್ಲ ಚಾನೆಲ್ಗಳೂ ವರದಿ, ವಿಶೇಷ ಕಾರ್ಯಕ್ರಮ ಮತ್ತು ಪ್ಯಾನೆಲ್ ಡಿಸ್ಕಸನ್ಗಳನ್ನು ನಡೆಸಲಿವೆ. 370ನೇ ವಿಧಿ ರದ್ದು ಎಂಬುದಂತೂ ಅವುಗಳ ಪಾಲಿಗೆ ಪಂಚಮಿಯ ಉಂಡಿ, ಲಾಡೂಗಳನ್ನು ಸವಿದಷ್ಟೇ ಸುಖ ತಂದಿತ್ತು.
ಈ ವಿಷಯವಾಗಿ ಮೊದಲಿನಿಂದಲೂ ಆಗಾಗ ಕಾಶ್ಮೀರ ವಿಷಯದ ಕುರಿತು ಕಾಟಾಚಾರದ ಚರ್ಚೆ ನಡೆಸುತ್ತಿರುವ ಬಂದಿರುವ ಸುವರ್ಣದ ಅಜಿತ್ ಹನುಮಕ್ಕನವರಂತೂ ಕಾಶ್ಮೀರ ಸಮಸ್ಯೆಯ ಆಳ ಅಗಲ ಬಲ್ಲ ಕನ್ನಡಿಗ ತಾವೊಬ್ಬರೇ ಎಂಬಂತೆ, ಚರ್ಚೆಗೆ ಕರೆಸಿಕೊಂಡವರ ಮಾತುಗಳನ್ನೂ ಆಲಿಸದೇ ಕಾಶ್ಮೀರದ ಪುರಾಣವನ್ನು ಪಠಿಸುತ್ತ ಹೋದರು. ಅಜಿತ್ ಜಾಗದಲ್ಲಿ ಸಂಸದ ತೇಜಸ್ವಿ ಸೂರ್ಯರಿದ್ದರೂ ಈ ಪರಿಯ ಸಮರ್ಥನೆ ಸಾಧ್ಯವಿರುತ್ತಿರಲಿಲ್ಲವೇನೋ?
ಪಬ್ಲಿಕ್ನ ಹಿರಿಯ ರಂಗನಾಥರು ಕೂಡ ವಾಸ್ತವದ ಕಡೆ ಕಣ್ಣು ಹಾಯಿಸಲು (ಅವರಿಗೆ ಕಾಶ್ಮೀರ ಸಮಸ್ಯೆಯ ತಳಮಟ್ಟದ ವಿವರ ಗೊತ್ತಿದ್ದರೂ!) ಮನಸ್ಸು ಮಾಡಲಿಲ್ಲ. ನೋಟು ರದ್ದತಿಯನ್ನು ಬೆಂಬಲಿಸಿ ಚಿಪ್ ಸಂಶೋಧನೆ ಮಾಡಿದ ಪರಿಯಲ್ಲೇ ಇದರ ಬೆಂಬಲಕ್ಕೂ ನಿಂತರು. ಟಿವಿ 9ನ ರಂಗನಾಥ ಭಾರದ್ವಾಜರಂತೂ ಧ್ವಜ ಹಿಡಿದು ಕುಣಿದಾಡುವುದೊಂದೇ ಬಾಕಿಯಿತ್ತು. ಬಿಟಿವಿ, ಪವರ್ ಟಿವಿ, ಟಿವಿ5…. ಎಲ್ಲದರಲ್ಲೂ ‘370 ರದ್ದತಿಯ ದೇಶಭಕ್ತಿಯದ್ದೇ ಭರಾಟೆ.
ಇದೆಲ್ಲದರ ನಡುವೆ ವಿಭಿನ್ನವಾಗಿ ಕಾರ್ಯಕ್ರಮ ನಡೆಸಿ ಕೊಟ್ಟಿದ್ದು ರಾಜ್ನ್ಯೂಸ್ನ ಮಂಜುಳಾ ಮಾಸ್ತಿಕಟ್ಟೆಯವರೊಬ್ಬರೇ. ಅವರು ಕಾಶ್ಮೀರದ ಜನರ ಪ್ರಸ್ತುತ ಸಂಕಷ್ಟವನ್ನು ತೆರೆದಿಟ್ಟರಲ್ಲದೇ, ದೆಹಲಿ ಆಡಳಿತ ಕಾಶ್ಮೀರದ ಮೇಲೆ 70 ವರ್ಷಗಳಿಂದ ಎಸಗುತ್ತ ಬಂದಿರುವ ದೌರ್ಜನ್ಯವನ್ನು, ಈಗ ಅದನ್ನು ಮೀರಿಸುವಂತೆ ಬಿಜೆಪಿ-ಸಂಘ ಪರಿವಾರ ಕಾಶ್ಮೀರದ ಮೇಲೆ ಮಿಲಿಟರಿ ಆಡಳಿತವನ್ನು ಹೇರುತ್ತಿದೆ ಎಂಬುದನ್ನು ತಮ್ಮ ಪ್ರಶ್ನೆಗಳ ನಡು ನಡುವೆಯೇ ವಿವರಿಸುತ್ತ ಬಂದರು.
ದೇಶದ ಆರ್ಥಿಕತೆ ಎಕ್ಕ ಹಿಡಿದು ಹೋಗುತ್ತಿರುವಾಗ ಮತ್ತದೇ ಕಾಶ್ಮೀರ ಮತ್ತು ಪಾಕಿಸ್ತಾನವೇ ಇವರ ಬಂಡವಾಳವಾಯಿತೇ ಎಂಬ ಪ್ರಶ್ನೆಯನ್ನೂ ಈ ಚಾನೆಲ್ಗಳು ಕೇಳಿಕೊಳ್ಳಲಿಲ್ಲ. ಅಂದ ಹಾಗೆ ದೇಶದ ಆರ್ಥಿಕ ಸ್ಥಿತಿ ಸರಿಯಾಗಿಯೇ ಇದೆ ಎಂಬುದೇ ಅವುಗಳ ಅಭಿಪ್ರಾಯವೂ ಆಗಿದೆಯಲ್ಲ?
ಅಂದಂತೆ ಇದೇ ಚಾನೆಲ್ಗಳು ರಾಜ್ಯದಲ್ಲಿ ಸಚಿವ ಸಂಪುಟ ರಚನೆ ಯಾಕಾಗ್ತಿಲ್ಲ ಎಂಬ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ ಅನ್ನಲು ಆಗಲ್ಲ, ಆ ಬಗ್ಗೆ ಅವು ವರದಿ ಮಾಡುತ್ತಿವೆ. ಎಲ್ಲ ದೆಹಲಿಯಲ್ಲೇ ನಿರ್ಧಾರವಾಗುತ್ತೆ ಎಂಬುದನ್ನು ಪಾಸಿಟಿವ್ ಎಂಬಂತೆ ಅವು ಬಿಂಬಿಸುತ್ತಿರುವುದು ನಾಚಿಕೆಗೇಡು. ಹಾಗೆಯೇ, ಕೇಂದ್ರದ ಇಬ್ಬರು ಐಎಎಸ್ಗಳನ್ನು ಇಲ್ಲಿ ನೇಮಿಸಲಾಗುತ್ತಂತೆ, ಅವರು ಸರ್ಕಾರದ ಮೇಲೆ ಹದ್ದಿನ ಕಣ್ಣು ಇಡುತ್ತಾರಂತೆ, ಇದು ಚಾಣಕ್ಯನ ತಂತ್ರವಂತೆ! ಇದು ಕೂಡ ಚಾನೆಲ್ಗಳ ಪಾಲಿಗೆ ಪಾಸಿಟಿವ್ ನ್ಯೂಸ್! ಜನರನ್ನು ಅವು ಹಾಗೆ ದಾರಿ ತಪ್ಪಿಸುತ್ತಲೂ ಇವೆ.
ಜನರಿಂದ ಚುನಾಯಿತ ಸರ್ಕಾರವೊಂದರ ಮೇಲೆ ಅಧಿಕಾರಿಗಳ ಮೂಲಕ ನಿಯಂತ್ರಣ ಸಾಧಿಸುವುದು ಈ ದೇಶದ ಒಕ್ಕೂಟ ವ್ಯವಸ್ಥೆಗೇ ಮಾಡಿದ ದ್ರೋಹ ಎಂಬ ಅರಿವು ಇದ್ದೂ ಈ ಚಾನೆಲ್ಗಳು ‘ಚಾಣಕ್ಯ’ನ ಪರ ನಿಲ್ಲುತ್ತವೆ ಅಂದರೆ, ಇವುಗಳ ಮಾಲಿಕರು ಅವನ ಮುಂದೆ ಮಂಡಿಯೂರಿ ಕುಳಿತಿದ್ದಾರೆ ಎಂದಲ್ಲವೇ?



Ya,,,, absolutely u said it right,,, I always watch Raj news,,,,lts so humble channel,,& I really love the anchor Manjula,,,,& I watch NDTV India & NDTV that s it,, I don’t understand y people are mad about other godi media’s,,
Hilarious!