Homeಅಂಕಣಗಳುಮೋಡದ ಮರೆಯಲ್ಲಿ ಮೋದಿ

ಮೋಡದ ಮರೆಯಲ್ಲಿ ಮೋದಿ

ಸಾಹಿತ್ಯದ ಲೋಕದ ಜೈನ ವಿದ್ವಾಂಸರಾದ ಹಂಪನಾ ಅವರು ಮಠಮಂದಿರಗಳು ಭಯೋತ್ಪಾದನೆಯ ಕೇಂದ್ರಗಳಾಗದಿರಲಿ ಎಂದಿದ್ದಾರೆ.

- Advertisement -
- Advertisement -

ಬಾಲಾಕೋಟ್ ಕಾರ್ಯಾಚರಣೆಯನ್ನು ಮೋಡದ ಮರೆಯಲ್ಲಿ ಮಾಡಿ ಪಾಕಿಸ್ತಾನಕ್ಕೆ ಚಳ್ಳೆಹಣ್ಣು ತಿನ್ನಿಸಿದೆ ಎಂದು ನಮ್ಮ ಭವ್ಯ ಭಾರತದ ಪ್ರಧಾನಿ ಭೂಗತಲೋಕದ ಕಿಡಿಗೇಡಿಯಂತೆ ಬಾಯಿ ಬಿಟ್ಟಿದ್ದಾರಲ್ಲಾ. ಇದನ್ನು ಕೇಳಿದ ಇಡೀ ಭಾರತವಷ್ಟೆ ಅಲ್ಲ. ಬಾಂಗ್ಲಾ, ಪಾಕಿಸ್ತಾನ ಕೂಡ ನಗಾಡಿದವಂತೆ. ಇದೇ ಮೋದಿ ಪ್ರಧಾನಿಯಾದ ಆರಂಭದಲ್ಲಿ ನಮ್ಮ ಪುರಾತನ ಆಯುರ್ವೇದ ಪಂಡಿತರು ಪ್ಲಾಸ್ಟಿಕ್ ಸರ್ಜರಿಯಲ್ಲಿ ಪರಿಣಿತರಾಗಿದ್ದರು. ಆ ಕಾರಣಕ್ಕೆ ಆನೆಮರಿ ತಲೆಯನ್ನು ಗಣೇಶನಿಗೆ ಜೋಡಿಸಿ ಕೆಲವೇ ದಿನಗಳಲ್ಲಿ ಗಣೇಶ ಮಾತನಾಡುವಂತೆ ಮಾಡಿದರು ಎಂದಾಗ, ಇಡೀ ಭಾರತವೇ ಅಯ್ಯೋ ಮುಂಡೆದೆ ಎಂದು ಲೊಚಗರೆದಿತ್ತು. ಆ ಪುರಾಣ ಹಾಳುಬಿದ್ದೋಗಲಿ ಮೋಡ ಮುಸುಕಿದ್ದರೆ ಯುದ್ಧ ವಿಮಾನಗಳು ಮತ್ತು ರೆಡಾರ್ ಸಂದೇಶಗಳು ಬಂದಾಗುತ್ತವೆ ಎಂದು ಭಾವಿಸಿರುವ ಈತ, ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಜರ್ಮನ್ ಶೆಪರ್ಡ್ ನಾಯಿಯ ಬಗ್ಗೆ ತಿಳಿದುಕೊಂಡಿಲ್ಲ ಅನ್ನಿಸುತ್ತದೆ. ಹಾಗೆ ನೋಡಿದರೆ ಸದರಿ ಮೇಧಾವಿ ಯಾವುದರ ಬಗ್ಗೆಯೂ ನಿಖರವಾಗಿ ತಿಳಿದು ಕೊಂಡಿಲ್ಲ. ಅದಕ್ಕೆ ಪ್ರೆಸ್‍ಮೀಟು ಗಳಿಗೆ ಹೆದರಿ ರುವುದು ಅಕಸ್ಮಾತ್ ಸಂದರ್ಶನ ವಿದ್ದರೆ ತಾನೇ ಪ್ರಶ್ನೆ ಕಳಿಸಿ, ಏಕಪಾತ್ರಾಭಿನಯ ಮಾಡುವುದು ಇನ್ನೊಂದು ಜೋಕ್ ಎಂದರೆ ಈತ ಪಾಕಿಸ್ತಾನಕ್ಕೆ ಹೋಗಿದ್ದು ಕೂಡ ಮೋಡದ ಮರೆಯಲ್ಲಂತಲ್ಲಾ ಥೂತ್ತೇರಿ.

*****

ಇಂತಹ ಮೋದಿ ಇನ್ನೂ ಹದಿನೈದು ವರ್ಷ ಪ್ರಧಾನಿಯಾಗಿರಬೇಕು ಎಂದು ಭೈರಿಗೆ ಹಿಡಿದುಕೊಂಡಿರುವ ಸಂತೆಶಿವರದ ಚೆಡ್ಡಿ ಭೈರಣ್ಣನಿಗೆ, ನ್ಯಾಯಪಥದ ಪಂಚಕನ್ಯೆಯರು ಭೈರನ ಕೆನ್ನೆಗೆ ಸರಿಯಾಗಿ ತಪರಾಕಿ ಹಾಕಿದ್ದಾರಲ್ಲಾ. ಇವರೆಲ್ಲರ ಅನುಭವ ಏನೆಂದರೆ ಇದು ಅಗ್ರಹಾರದ ಹಾಳುಬಿದ್ದ ವಠಾರದಲ್ಲಿ ತನ್ನದೇ ಕಗ್ಗದ ರಾಶಿಯಲ್ಲಿ ಹುದುಗಿರುವ ಮುದಿಗೊಡ್ಡು. ಇದಕ್ಕೆ ಎಷ್ಟು ಬೈದರೂ ಅಷ್ಟೆ ಎಂದು ಸುಮ್ಮನಾದರಂತಲ್ಲಾ. ಚೆಡ್ಡಿ ಭೈರಣ್ಣ ಮಹಿಳೆಯರನ್ನೇನು ದ್ವೇಷ ಮಾಡುವುದಿಲ್ಲ. ಅವರಿಗೆ ಕರ್ತವ್ಯಗಳನ್ನು ನಿರ್ದೇಶಿಸುತ್ತಾನೆ ಅಷ್ಟೆ. ಈತನ ಗೊಡ್ಡು ಸಾಹಿತ್ಯದಲ್ಲಿ ವಿಧವೆಯರು ಮದುವೆಯಾದರೆ ನಿರಂತರ ಗರ್ಭಪಾತವಾಗುತ್ತದೆ. ಧಾಟುವಿನಲ್ಲಿ ಒಕ್ಕಲಿಗರ ಹುಡುಗನನ್ನ ಮದುವೆಯಾದ ಬ್ರಾಹ್ಮಣ ಪುರೋಹಿತನ ಮಗಳು ಸತ್ತುಹೋಗುತ್ತಾಳೆ. ಅಸ್ಪøಶ್ಯತೆ ಅವಮಾನದಿಂದ ಸಿಡಿದೆದ್ದ ಮೋಹನದಾಸ ಕೆರೆಗಳನ್ನು ಸ್ಫೋಟಿಸುತ್ತಾನೆ. ಹೀಗೆ ತನ್ನದೆ ಚೆಡ್ಡಿ ಕುಲುಮೆಯಲ್ಲಿ ಕಾಯಿಸಿ, ಕುಟ್ಟಿ ಕಟ್ಟಿದ ಪುಸ್ತಕಗಳ ರಾಶಿಯಿಂದ ಹೆಕ್ಕಿ ತೆಗೆಯಲು ಒಂದೇ ಒಂದು ಮಾನವೀಯ ಗುಣದ ಸಾಲಿಲ್ಲವಂತಲ್ಲಾ. ಆದರೂ ಈತ ಭಾರತದ ಜನಪ್ರಿಯ ಲೇಖಕ. ಏಕೆಂದರೆ ಅಕ್ಷರದ ಗುತ್ತಿಗೆ ಹಿಡಿದ ಪುರೋಹಿತರ ಕಪಾಟಿನಲ್ಲಿ ಈತನವೇ ಪುಸ್ತಕಗಳು. ಕೆರೆಯುತ್ತಿರುವವನೂ ಅವನೆ, ಓದುತ್ತಿರುವವರೂ ಅವರೆ. ಹುಟ್ಟ ಚೆಡ್ಡಿಗಳು ಚಟ್ಟದವರೆಗೂ ಚೆಡ್ಡಿಗಳಾಗಿರುತ್ತವೆ ಎಂಬುದಕ್ಕೆ, ಭೈರಣ್ಣನೇ ಉದಾಹರಣೆಯಂತಲ್ಲಾ ಥೂತ್ತೇರಿ.

 

*****

ಕರ್ನಾಟಕದ ರಾಜಕಾರಣದ ವಿಷಯಕ್ಕೆ ಬರುವುದಾದರೆ, ಕೋಡುಗಳಿಲ್ಲದ ಕುರುಬರ ಟಗರಿನ ಕಾಳಗ ಶಾನೆ ಜೋರಾಗಿದೆಯಲ್ಲಾ, ಜೆಡಿಎಸ್‍ನಿಂದ ವಿಶ್ವನಾಥ, ಬಿಜೆಪಿಯಿಂದ ಈಶ್ವರಪ್ಪ, ಕಾಂಗ್ರೆಸ್‍ನಿಂದ ಸಿದ್ದರಾಮಯ್ಯ ಈ ಮೂರು ಜನರ ಕುರಿಗಾಹಿ ಜಗಳದಂತ ಮಾತುಗಳನ್ನು ಕೇಳಿದರೆ, ಈ ರಾಜ್ಯದಲ್ಲಿ ಇನ್ನಾರೂ ಇಲ್ಲವೆ ಅನ್ನಿಸುತ್ತಿದೆಯಲ್ಲಾ. ಸಿದ್ದರಾಮಯ್ಯನೇ ಹೇಳಿದಂತೆ ಈಶ್ವರಪ್ಪನ ನಾಲಿಗೆ ಮತ್ತು ಮೆದುಳಿನ ನಡುವೆ ಲೂಸ್ ಕಾಂಟ್ಯಾಕ್ಟಿದೆ. ಇನ್ನ ವಿಶ್ವನಾಥ ಹೊಟ್ಟೆಕಿಚ್ಚಿನವನು. ಅದಕ್ಕೆ ವಿಶ್ವನಾಥ ಸಕಾರಣ ಒದಗಿಸಬಲ್ಲರು. ಆದರೆ ಸಿದ್ದು ಕತೆ ಅದಲ್ಲ. ಬರಲಿರುವ ರಿಸಲ್ಟಿನಿಂದ ಭಾರತ ಮತ್ತು ಕರ್ನಾಟಕದಲ್ಲಿ ಏನಾದರೂ ಆಗಬಹುದು ಆಗಿನ ದಾಳಗಳನ್ನ ಈಗಲೇ ರೆಡಿಮಾಡಿಕೊಳ್ಳುತ್ತಿರುವ ಸಿದ್ದು ವ್ಯಸನ ಏನೆಂದರೆ ಮತ್ತೆ ಮುಖ್ಯಮಂತ್ರಿಯಾಗುವುದು. ಸಿದ್ದರಾಮಯ್ಯ ಎಡೂರಪ್ಪನಂತಾಡುವುದು ಕೆಲವು ಕಾಂಗೈಗಳಲ್ಲೇ ಇರಿಸು ಮುರುಸಾಗಿದೆಯಂತಲ್ಲಾ. ಐದು ವರ್ಷ ಪೂರೈಸಿದ ಹೆಗ್ಗಳಿಕೆಯನ್ನು ಮುಂದಿಟ್ಟುಕೊಂಡು ನಮ್ಮ ಮುಂದಿನ ಮುಖ್ಯಮಂತ್ರಿ ಒಬ್ಬ ದಲಿತ ಎನ್ನಲು ಸಿದ್ದರಾಮಯ್ಯಗೇನಾಗಿದೆ. ಆಗ ಹಿಂದೆ ಖರ್ಗೆಯನ್ನ ಮುಖ್ಯಮಂತ್ರಿ ಮಾಡಿ ಎಂದಿದ್ದ ದೇವೇಗೌಡರು ಅನಾವರಣಗೊಳ್ಳುತ್ತಾರೆ, ಕಾಂಗ್ರೆಸ್‍ನ ದೊಡ್ಡ ಋಣವೊಂದು ಪರಿಹಾರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಎಡೂರಪ್ಪನ ಟೀಮೂ ಕೂಡ ಆಪರೇಷನ್ ಕತ್ತರಿಯನ್ನು ಬಿಸಾಡುತ್ತವಲ್ಲಾ, ಥೂತ್ತೇರಿ!

*****

ಇನ್ನ ಕರ್ನಾಟಕದ ಸಾಹಿತ್ಯ ಮತ್ತು ಆಧ್ಯಾತ್ಮಲೋಕಕ್ಕೆ ಬರುವುದಾದರೆ ಸಿರಿಗೆರೆಸ್ವಾಮಿ, ಹಂಪಾನಾ ಇತ್ಯಾದಿ ಜನ ತಮ್ಮ ತಮ್ಮ ಹೇಳಿಕೆಯಿಂದ ಭಯ ಹುಟ್ಟಿಸಿದ್ದಾರಲ್ಲಾ. ಸಿರಿಗೆರೆ ಶ್ರೀಗಳ ಪ್ರಕಾರ ಮಠಮಂದಿರಗಳು ಜಾತಿ ಸಂಘರ್ಷಗಳಾಗುತ್ತಿವೆ. ಇದಂತೂ ನಿಜ. ಸಾದ ಜನಾಂಗದ ಸಿರಿಗೆರೆ ಮಠ ಕಂಡರೆ ನೊಣಬರಿಗಾಗುತ್ತಿಲ್ಲ, ಬಣಜಿಗರಿಗೂ ಅಷ್ಟೇ. ಇನ್ನ ಅದರಲ್ಲಿನ ಪಂಗಡಗಳಿಗೂ ಅಷ್ಟೆ. ‘ಇವ ನಮ್ಮವ’ ಎಂಬ ಭಾವನೆ ಕೊರತೆ ಈ ಮಠದ ಆವರಣದಲ್ಲಿದೆ. ಜಾತಿಮಠದ ತುದಿಯಲ್ಲಿ ಕುಳಿತ ಜಗದ್ಗುರು ಎಲ್ಲ ಜಾತಿಗೂ ಜಗದ್ಗುರುವಾಗುವುದು ಕಷ್ಟ. ಅಷ್ಟಕ್ಕೂ ಸಿರಿಗೆರೆ ಮಠದ ಸಂವಿಧಾನ ಮೀರಿ ನಿವೃತ್ತಿ ವಯಸ್ಸಾದರೂ ಅದನ್ನು ಹತ್ತಿಕ್ಕಿ ಪೀಠದ ಮೇಲಿರುವ ಸಿರಿಗೆರೆ ಶ್ರೀ ತಮ್ಮ ಮಾತುಗಳಿಗೆ ಹಿನ್ನಡೆ ಅನುಭವಿಸುತ್ತಿದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಸಾವಿರಾರು ಜಗದ್ಗುರುಗಳಿರುವ ಈ ನಾಡಿನಲ್ಲಿ ಇನ್ನ ಜಾತಿ ಸಾಮರಸ್ಯ ಮೂಡಿಲ್ಲ. ಅಸ್ಪøಶ್ಯತೆ ಹಾಗೇ ಇದೆ. ಬದಲಾದ ಜಗತ್ತಿನಲ್ಲಿ ಅಕಸ್ಮಾತ್ ಅಂತರ್ಜಾತಿ ಪ್ರೇಮವೇರ್ಪಟ್ಟರೆ ಮರ್ಯಾದೆ ಹತ್ಯೆಗಳು ಜರುಗುತ್ತಿವೆ. ಈ ಎಲ್ಲಾ ಅನಿಷ್ಟಗಳ ಮುಂದುವರಿಕೆಯಲ್ಲಿ ಜಗದ್ಗುರುಗಳ ಪಾಲಿರುವುದನ್ನು ಮರೆಮಾಚಿ ಮಠಮಂದಿರಗಳಿಂದ ಜಾತಿಸಂಘರ್ಷಗಳು ನಡೆಯುತ್ತವೆ ಎನ್ನುವ ಜಗದ್ಗುರುಗಳು ತಾವು ವಾಸ ಮಾಡುವ ಜಾಗದ ರಾಜಕಾರಣಿಗಳಾದ ಆಂಜನೇಯ, ಚಂದ್ರಪ್ಪನನ್ನ ಕರೆದು ಈಗಲೂ ನೀವು ಮನೆಗಳಿಂದ ಹೊರನಿಲ್ಲುವ ಸ್ಥಿತಿ ಇದೆಯೇ ಎಂದು ಕೇಳಬಹುದಲ್ಲಾ, ಥೂತ್ತೇರಿ!!

*****

ಸಾಹಿತ್ಯದ ಲೋಕದ ಜೈನ ವಿದ್ವಾಂಸರಾದ ಹಂಪನಾ ಅವರು ಮಠಮಂದಿರಗಳು ಭಯೋತ್ಪಾದನೆಯ ಕೇಂದ್ರಗಳಾಗದಿರಲಿ ಎಂದುಬಿಟ್ಟಿದ್ದಾರೆ. `ಕನ್ನಡ ಸಾಹಿತ್ಯ ಪಂಪನಿಂದ ಹಿಡಿದು ಹಂಪಾನಾವರೆಗೆ’ ಎಂದು ತಮ್ಮವರ ಕೈಯಿಂದ ಹೊಗಳಿಸಿಕೊಂಡು ಹಾರ, ತುರಾಯಿ, ಪ್ರಶಸ್ತಿಗಳನ್ನು ಪಡೆದಿರುವ ಈ ಹಂಪಾನಾ ಕಾಲದಲ್ಲೇ, ಸಾಹಿತ್ಯ ವೇದಿಕೆಗೆ ಮಠಮಂದಿರಗಳ ಜಗದ್ಗುರುಗಳು ಬಂದು ಆಸೀನರಾಗಿದ್ದು. ಜಾತ್ಯತೀತ ವೇದಿಕೆಗೆ ಜಗದ್ಗುರುಗಳನ್ನ ತಂದ ಅನಿಷ್ಠವೇ ಈ ಹಂಪಾನಾ. ಇವರ ಕಾಲದಲ್ಲಿ ಹಾಳಾದ ಸಾಹಿತ್ಯ ಪರಿಷತ್ತು ಸುಧಾರಿಸಲೇಇಲ್ಲ. ಕುವೆಂಪು ಟ್ರಸ್ಟಿಗೂ ವಕ್ಕರಿಸಿದ ಈತ ಅದಕ್ಕೂ ಭ್ರಷ್ಟತೆ ಕಳಂಕ ಹಚ್ಚಿದವರು. ಅದಿರಲಿ, ಸದ್ಯಕ್ಕೆ ಇವರಿಗೆ ಅದ್ಯಾವ ಮಠ ಬೆದರಿಕೆ ಹಾಕಿತು ಎಂಬುದೇ ಗೊತ್ತಿಲ್ಲ. ಇಷ್ಟಾದರೂ ಹಂಪಾನಾ ಚೆಡ್ಡಿ ಭೈರಣ್ಣನಂತಲ್ಲ. ಅಪ್ಪಟ ಸ್ತ್ರೀವಾದಿ. ಕಮಲಾಹಂಪನಾ ಅವರು ಭಾಷಣ ಮಾಡುತ್ತಿದ್ದಾಗ ಅವರ ಸಾಧಾರಣ ಮಾತಿಗೂ ಬಿರುಸಿನ ಚಪ್ಪಾಳೆ ಬೀಳುತ್ತಿತ್ತು. ತಿರುಗಿ ನೋಡಿದಾಗ ಪತಿ ಹಂಪಾನ ಕಮಲಾ ಮಾತಿಗೆ ಚಪ್ಪಾಳೆ ಚಚ್ಚುತಿದ್ದರಂತಲ್ಲಾ, ಥೂತ್ತೇರಿ!!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾನ್ಪುರ ಲ್ಯಾಂಬೋರ್ಗಿನಿ ಅಪಘಾತ: ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಪುತ್ರ ಶಿವಂ ಮಿಶ್ರಾ ಬಂಧನ

2026 ಫೆಬ್ರವರಿ 8, ಭಾನುವಾರದಂದು ವಿಐಪಿ ರಸ್ತೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದ ಹೈ ಪ್ರೊಫೈಲ್ ಲ್ಯಾಂಬೋರ್ಗಿನಿ ಅಪಘಾತಕ್ಕೆ ಸಂಬಂಧಿಸಿದಂತೆ ಸ್ಥಳೀಯ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು...

ಫೆಬ್ರವರಿ 12 ರಂದು ಭಾರತ್ ಬಂದ್| ಹಲವು ರಾಜ್ಯಗಳಲ್ಲಿ ಬಂದ್ ಗೆ ಪೂರ್ಣ ಬೆಂಬಲ: ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಫೆಬ್ರವರಿ 12, ಗುರುವಾರ ಸಾರ್ವತ್ರಿಕ ಮುಷ್ಕರಕ್ಕೆ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಕರೆ ನೀಡಿದೆ. ಕರ್ನಾಟಕದಲ್ಲಿಯೂ ಕಾರ್ಮಿಕ ಸಂಘಟನೆಗಳು ಮುಷ್ಕರವನ್ನು ನಡೆಸುತ್ತಿವೆ. ಕೇಂದ್ರ ಸರ್ಕಾರದ 4...

ವಿದ್ಯಾರ್ಥಿ ದಂಗೆ ಬಳಿಕ ಬಾಂಗ್ಲಾದಲ್ಲಿ ಇಂದು ಮೊದಲ ಮತದಾನ

ಬಾಂಗ್ಲಾದೇಶದಲ್ಲಿ ಇಂದು (ಫೆ. 12, 2026) ಸಾರ್ವತ್ರಿಕ ಚುನಾವಣೆಯ ಮತದಾನ ನಡೆಯುತ್ತಿದೆ. ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ನಡೆಯುತ್ತಿರುವ ಮೊದಲ ಪ್ರಮುಖ ಚುನಾವಣೆ ಇದಾಗಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 7:30ಕ್ಕೆ ಆರಂಭವಾದ ಮತದಾನವು...

ಬೇಸಿಗೆ ಎದುರಿಸಲು ಸಿದ್ಧತೆ: ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಮಿನಿ ವಾಟರ್ ಟ್ಯಾಂಕ್‌ ಸ್ಥಾಪನೆಗೆ ಮುಂದಾದ ಬಿಡಬ್ಲ್ಯೂಎಸ್ಎಸ್ಬಿ

ಬೆಂಗಳೂರು: ಬೇಸಿಗೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ನಗರದ ನಿರ್ದಿಷ್ಟ ಪ್ರದೇಶಗಳಲ್ಲಿ ನೀರಿನ ಬೇಡಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಸಂಭಾವ್ಯ ಕೊರತೆಯನ್ನು ನೀಗಿಸಲು ಸಿದ್ಧತೆಗಳನ್ನು ಹೆಚ್ಚಿಸಲಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ...

ಸೋನಮ್ ವಾಂಗ್‌ಚುಕ್ ಆರೋಗ್ಯವಾಗಿದ್ದಾರೆ, ವೈದ್ಯಕೀಯ ಕಾರಣಕ್ಕೆ ಬಿಡುಗಡೆ ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ

ಲಡಾಖ್‌ನ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರನ್ನು ವೈದ್ಯಕೀಯ ಆಧಾರದ ಮೇಲೆ ಬಂಧನದಿಂದ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ (ಫೆ.11) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. "ವೈದ್ಯಕೀಯ ಆಧಾರದಲ್ಲಿ ಸೋನಮ್ ವಾಂಗ್‌ಚುಕ್ ಅವರ...

ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲಿ ಗುಂಡಿನ ದಾಳಿ; ಶಂಕಿತನ ಸೇರಿದಂತೆ 10 ಜನರು ಸಾವು

ಬ್ರಿಟಿಷ್ ಕೊಲಂಬಿಯಾದಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಕೆನಡಾದ ಅಧಿಕಾರಿಗಳು ತಿಳಿಸಿದ್ದಾರೆ. ಅವರಲ್ಲಿ ಶಂಕಿತ ಬಂದೂಕುಧಾರಿ ಮಹಿಳೆಯೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯ ಹತ್ತಿರದ ನಿವಾಸದಲ್ಲಿ...

‘ನನ್ನ ಗಡ್ಡ ಎಳೆದು ಟೋಪಿ ಕಿತ್ತೆಸೆದರು..’; ಶಿರಡಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮುಸ್ಲಿಂ ಪ್ರಯಾಣಿಕನ ಮೇಲೆ ಗುಂಪುದಾಳಿ

ಮನ್ಮಾಡ್ ಕಾಕಿನಾಡ ಶಿರಡಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಸುಮಾರು 20 ಜನರ ಗುಂಪೊಂದು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಫೀಜ್‌ಪೇಟೆ ರೈಲು ನಿಲ್ದಾಣದ ಬಳಿ ಘಟನೆ ನಡೆದಿದ್ದು, ಮೊಹಮ್ಮದ್...

ಪ್ರಧಾನಿ ಮೋದಿ ಕುರಿತ ‘ದಿ ವೈರ್’ನ ವಿಡಂಬನಾತ್ಮಕ ಅನಿಮೇಷನ್‌ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಿರ್ಬಂಧ

ಸುದ್ದಿ ಸಂಸ್ಥೆ 'ದಿ ವೈರ್' ಪೋಸ್ಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ವಿಡಂಬನಾತ್ಮಕ ಅನಿಮೇಷನ್ ಅನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಎಕ್ಸ್ ನಿರ್ಬಂಧಿಸಿವೆ. ಸೋಮವಾರ (ಫೆ.10) ಸಂಜೆ ಸುಮಾರು ಎರಡು...

‘ಭಾರತವನ್ನು ಮಾರಲು ನಿಮಗೆ ನಾಚಿಕೆಯಾಗುವುದಿಲ್ಲವೇ?’; ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಉಲ್ಲೇಖಿಸಿ ಪ್ರಧಾನಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಅಮೆರಿಕದೊಂದಿಗೆ ಇತ್ತೀಚೆಗೆ ಘೋಷಿಸಲಾದ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.  ಲೋಕಸಭೆಯಲ್ಲಿ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ತೀವ್ರ ದಾಳಿ ಮಾಡಿದ...

ಗಾಜಾ| ಮನೆ ಅವಶೇಷದಲ್ಲಿ ತನ್ನ ಕುಟುಂಬದ ಸದಸ್ಯರ ಮೂಳೆ ಹುಡುಕಿದ ವ್ಯಕ್ತಿ

ಗಾಜಾ ನಗರದಲ್ಲಿದ್ದ ತನ್ನ ಮನೆಯ ಅವಶೇಷಗಳ ರಾಶಿಯ ನಡುವೆ ಕುಳಿತಿರುವ ಮಹಮೂದ್ ಹಮ್ಮದ್, ದೊಡ್ಡ ಜರಡಿಯಲ್ಲಿ ಮಣ್ಣನ್ನು ತೆಗೆದು ಅಲ್ಲಾಡಿಸಿ, ಅದನ್ನು ಹೊರಗೆ ಎಸೆಯುವ ಮೊದಲು ಎಚ್ಚರಿಕೆಯಿಂದ ನೋಡುವ ವಿಡಯೊ ನೋಡಿದವರ ಮನಕಲಕುತ್ತದೆ....