Homeಮುಖಪುಟಟಿಕೆಟ್ ವಿಚಾರ: ಕಾಂಗ್ರೆಸ್ ನಾಯಕಿ ಮೇಲೆ ಪಕ್ಷದ ಕಾರ್ಯಕರ್ತರಿಂದಲೇ ಹಲ್ಲೆ

ಟಿಕೆಟ್ ವಿಚಾರ: ಕಾಂಗ್ರೆಸ್ ನಾಯಕಿ ಮೇಲೆ ಪಕ್ಷದ ಕಾರ್ಯಕರ್ತರಿಂದಲೇ ಹಲ್ಲೆ

ಒಂದು ಕಡೆ, ನಮ್ಮ ಪಕ್ಷದ ನಾಯಕರು ಹತ್ರಾಸ್‌ ಕೇಸ್ ಸಂತ್ರಸ್ತರಿಗೆ ನ್ಯಾಯ ದೊರಕಲು ಹೋರಾಡುತ್ತಿದ್ದಾರೆ. ಮತ್ತೊಂದೆಡೆ, ಅತ್ಯಾಚಾರಿಗಳಿಗೆ ಪಕ್ಷದ ಟಿಕೆಟ್ ನೀಡಲಾಗುತ್ತಿದೆ. ಇದು ತಪ್ಪು ನಿರ್ಧಾರ. ಇದು ನಮ್ಮ ಪಕ್ಷದ ಘನತೆಗೆ ಧಕ್ಕೆ ಉಂಟು ಮಾಡಲಿದೆ’ ಎಂದು ತಾರಾ ಯಾದವ್ ಹೇಳಿದ್ದಾರೆ.

- Advertisement -
- Advertisement -

ಉತ್ತರಪ್ರದೇಶ ಉಪಚುನಾವಣೆಗಳಿಗಾಗಿ ಡಿಯೋರಿಯಾ ಕ್ಷೇತ್ರದಿಂದ ಮುಕಂದ್ ಭಾಸ್ಕರ್ ಮಣಿ ತ್ರಿಪಾಠಿಗೆ ಟಿಕೆಟ್ ನೀಡುವ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳಾ ನಾಯಕಿ ತಾರಾ ಯಾದವ್ ಮೇಲೆ ಪಕ್ಷದ ಇತರೆ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ.

’ಒಂದು ಕಡೆ, ನಮ್ಮ ಪಕ್ಷದ ನಾಯಕರು ಹತ್ರಾಸ್‌ ಕೇಸ್ ಸಂತ್ರಸ್ತರಿಗೆ ನ್ಯಾಯ ದೊರಕಲು ಹೋರಾಡುತ್ತಿದ್ದಾರೆ. ಮತ್ತೊಂದೆಡೆ, ಅತ್ಯಾಚಾರಿಗಳಿಗೆ ಪಕ್ಷದ ಟಿಕೆಟ್ ನೀಡಲಾಗುತ್ತಿದೆ. ಇದು ತಪ್ಪು ನಿರ್ಧಾರ. ಇದು ನಮ್ಮ ಪಕ್ಷದ ಘನತೆಗೆ ಧಕ್ಕೆ ಉಂಟು ಮಾಡಲಿದೆ’ ಎಂದು ತಾರಾ ಯಾದವ್ ಹೇಳಿದ್ದಾರೆ.

’ಮುಂಬರುವ ಉಪಚುನಾವಣೆಯಲ್ಲಿ ಅತ್ಯಾಚಾರಿ ಮುಕುಂದ್ ಭಾಸ್ಕರ್ ಅವರಿಗೆ ಟಿಕೆಟ್ ನೀಡುವ ಪಕ್ಷದ ನಿರ್ಧಾರವನ್ನು ನಾನು ಪ್ರಶ್ನಿಸಿದಾಗ ಪಕ್ಷದ ಕಾರ್ಯಕರ್ತರು ನನ್ನನ್ನು ಥಳಿಸಿದರು. ಈಗ, ಪ್ರಿಯಾಂಕಾ ಗಾಂಧಿ ಜಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿ ಎಂದು ನಾನು ಕಾಯುತ್ತಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ: ಉಪಚುನಾವಣೆ: ಆರ್‌.ಆರ್‌ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ರವಿ ಪತ್ನಿ ಕುಸುಮಾ-ಸಿದ್ದರಾಮಯ್ಯ

ಡಿಯೋರಿಯಾದಲ್ಲಿ ಉಪಚುನಾವಣೆ ಸಂಬಂಧ ನಡೆದ ಸಭೆಯಲ್ಲಿ ಟಿಕೆಟ್​ ಹಂಚಿಕೆ ವಿಚಾರವಾಗಿ ಕಾಂಗ್ರೆಸ್​ ನಾಯಕಿ ತಾರಾ ಯಾದವ್​ ಹಾಗೂ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಚಿನ್​ ನಾಯಕ್​ ನಡುವೆ ವಾಗ್ವಾದ ನಡೆದಿದೆ. ಮುಕಂದ್ ಭಾಸ್ಕರ್ ಮಣಿ ತ್ರಿಪಾಠಿ ಅವರನ್ನ ಅಭ್ಯರ್ಥಿಯನ್ನಾಗಿ ಮಾಡುವ ಪಕ್ಷದ ನಿರ್ಧಾರಕ್ಕೆ ತಾರಾ ವಿರೋಧ ವ್ಯಕ್ತಪಡಿಸಿದ್ದರು.

ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಮುಕುಂದ್​ ಭಾಸ್ಕರ್​ ಹಾಗೂ ಸಚಿನ್​ ನಾಯಕ್ ಅವರ ಬೆಂಬಲಿಗರು ತಾರಾ ಮೇಲೆ ಹಲ್ಲೆಗೆ ಮುಂದಾಗಿದ್ದರು. ಕಾರ್ಯಕರ್ತರ ನಡುವೆ ನಡೆದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಘಟನೆ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರಕರಣ​ ದಾಖಲಿಸಿಕೊಂಡಿದೆ.

ಉತ್ತರ ಪ್ರದೇಶದ ಏಳು ವಿಧಾನಸಭಾ ಸ್ಥಾನಗಳಲ್ಲಿ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದಂತೆ, ಕಾಂಗ್ರೆಸ್ ಐದು ಅಭ್ಯರ್ಥಿಗಳ ಹೆಸರನ್ನು ಘೋಷಿಸಿತ್ತು. ಮುಕುಂದ್ ಭಾಸ್ಕರ್ ಮಣಿ ತ್ರಿಪಾಠಿ ಅವರು ಡಿಯೋರಿಯಾ ವಿಧಾನಸಭಾ ಸ್ಥಾನದಿಂದ ಸ್ಪರ್ಧಿಸುತ್ತಿದ್ದಾರೆ. ಮತದಾನ ನವೆಂಬರ್ 3 ರಂದು ಮತ್ತು ನವೆಂಬರ್ 10 ರಂದು ಮತ ಎಣಿಕೆ ನಡೆಯಲಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೂಡ ಘಟನೆಯ ವಿಡಿಯೋವನ್ನ ಟ್ವಿಟ್ಟರ್‌ ಖಾತೆಯಲ್ಲಿ ಫೋಸ್ಟ್ ಮಾಡಿದ್ದು, ಸೋನಿಯಾ ಗಾಂಧಿ ಅವರ ಪಕ್ಷದಲ್ಲಿ ಮಹಿಳೆಯರನ್ನ ನಡೆಸಿಕೊಳ್ಳುವ ರೀತಿಯಿದು’ ಎಂದಿದ್ದಾರೆ.


ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಕರಾಳ ಕಾಯ್ದೆಗಳನ್ನು ತೆಗೆದುಹಾಕುತ್ತದೆ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...