Homeಅಂಕಣಗಳುಬಡ್ತಿ ಮೀಸಲಾತಿಗೆ ವಿರೋಧವಿಲ್ಲ. Consequential Seniority ಯ ತಾರತಮ್ಯಕ್ಕೆ ನಮ್ಮ ವಿರೋಧ: ಸಾಮಾನ್ಯ ವರ್ಗದ ಇಂಜಿನಿಯರ್...

ಬಡ್ತಿ ಮೀಸಲಾತಿಗೆ ವಿರೋಧವಿಲ್ಲ. Consequential Seniority ಯ ತಾರತಮ್ಯಕ್ಕೆ ನಮ್ಮ ವಿರೋಧ: ಸಾಮಾನ್ಯ ವರ್ಗದ ಇಂಜಿನಿಯರ್ ವಾದ

ಬಡ್ತಿ ಮೀಸಲಾತಿ ಕುರಿತ ಪರ ಹಾಗೂ ವಿರೋಧದ ವಿವಾದ

- Advertisement -
- Advertisement -

| ಬಾಲು |
(ಸಾಮಾಜಿಕ ನ್ಯಾಯದ ಪರವಾಗಿರುವ, ಆದರೆ ಬಡ್ತಿ ಮೀಸಲಾತಿಯ ನೀತಿಯಲ್ಲಿ ಲೋಪವಾಗಿದೆ ಎಂದು ಭಾವಿಸುವ ಒಬ್ಬ ಸರ್ಕಾರೀ ಅಧಿಕಾರಿ. ಅವರ ಕೋರಿಕೆಯ ಮೇರೆಗೆ ಪೂರ್ಣ ಹೆಸರನ್ನು ಹಾಕಿಲ್ಲ)

ಸಂವಿಧಾನದ ಕಲಂ 16(4ಎ) ರಂತೆ ಯಾವುದೇ ಸರ್ಕಾರವು ತನ್ನ ಸೇವೆಯಲ್ಲಿನ ಬಡ್ತಿ ಹುದ್ದೆಗಳಲ್ಲಿ ಪ.ಜಾ ಮತ್ತು ಪ.ಪಂಗಡದ ಕೆಲಸಗಾರರ ಕೊರತೆ ಕಂಡುಬಂದರೆ, ಸದರಿಯವರಿಗೆ ಬಡ್ತಿಯಲ್ಲಿ ಮೀಸಲಾತಿ ಒದಗಿಸಬಹುದೆಂದು ಹೇಳುತ್ತದೆ.

ರಾಜ್ಯ ಸರ್ಕಾರದ ಬಡ್ತಿ ಹುದ್ದೆಗಳಲ್ಲಿ ಪ.ಜಾ ಮತ್ತು ಪ.ಪಂಗಡದ ಪ್ರಾತಿನಿಧ್ಯ ಅವರವರ ಸಂಖ್ಯೆ ಪ್ರಮಾಣವಾದ ಶೇ.15+ಶೇ.03= ಶೇ.18ಕ್ಕಿಂತ ಕಡಿಮೆ ಇದ್ದ ಕಾರಣ ಅವರ ಪ್ರಾತಿನಿಧ್ಯವನ್ನು ಹೆಚ್ಚಿಸಲು 1978ರಿಂದ ಬಡ್ತಿಯಲ್ಲಿ ಮೀಸಲಾತಿಯನ್ನು ಕೊಡಲು ಆರಂಭಿಸಿತು. ಇದರಲ್ಲಿ ತಪ್ಪೇನಿಲ್ಲ. ಆದರೆ ಇದನ್ನು ಅನ್ವಯಿಸುವಲ್ಲಿ ಆದ ಲೋಪದ ಕಾರಣದಿಂದ, ಜನಸಂಖ್ಯೆಯ 4-5 ಪಟ್ಟಿನ ತನಕ ಪ್ರಾತಿನಿಧ್ಯ ಹೆಚ್ಚಾಗುವಂತೆ ಆಯಿತು. ಇದೇ ಸಮಸ್ಯೆ. ಉದಾಹರಣೆಗೆ, ಬಿ.ಕೆ.ಪವಿತ್ರ ಪ್ರಕರಣದ ತೀರ್ಪು ಬರುವ ವೇಳೆಗೆ ಕರ್ನಾಟಕ ಸರ್ಕಾರದ ಇಂಧನ/KEB ಇಲಾಖೆಯ ಒಟ್ಟು 35 ಅಇ ಹುದ್ದೆಗಳಲ್ಲಿ 33 ಹುದ್ದೆಗಳಲ್ಲಿ ಎಸ್ಸಿ/ಎಸ್ಟಿ ಗುಂಪಿನವರು, BWSSB ಯ 15 CE ಹುದ್ದೆಗಳಲ್ಲಿ 13 ಹುದ್ದೆಗಳು, ಪಿಡಬ್ಲೂಡಿ ಇಲಾಖೆಯ EE ಹುದ್ದೆಗಳಲ್ಲಿ ಶೇ.50ರಷ್ಟು ಹುದ್ದೆಗಳು ಶೇ.18ರ ವರ್ಗದವರ ಪಾಲಾಗಿದ್ದವು.

ಏಕೆಂದರೆ, ಕ್ಲಾಸ್-1 (ಲೋಯರ್ ಕೆಟಗರಿ)ವರೆಗಿನ ಹುದ್ದೆಗಳಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಕೊಡಲಾಯಿತು. ನಂತರದ ಮೇಲು ಹಂತದ ಹುದ್ದೆಗಳಿಗೆ ಮೀಸಲಾತಿ ಇರುವುದಿಲ್ಲ. ಇದರಿಂದ ಹೆಚ್ಚುವರಿಯಾಗಿ ಪ.ಜಾ ಮತ್ತು ಪ.ಪಂಗಡದವರು ಸುಮಾರು 3800ರಷ್ಟು ಹುದ್ದೆಗಳಿಗೆ ಬಡ್ತಿ ಪಡೆದುಕೊಂಡಿದ್ದರು. 2017ರಲ್ಲಿ ಪವಿತ್ರ ಪ್ರಕರಣದಲ್ಲಿ ಬಂದ ತೀರ್ಪಿನಿಂದಾಗಿ ಅವರುಗಳನ್ನು ಹಿಂಬಡ್ತಿಗೊಳಿಸಲಾಯಿತು. ಏಕೆಂದರೆ ಇವು ಬಡ್ತಿ ಮೀಸಲಾತಿಯ ಮಿತಿಯಲ್ಲಿ ಬರದ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ಗುಂಪಿನವರಿಗೆ ಸಿಗಬೇಕಾದ ಹುದ್ದೆಗಳು. ಇದಕ್ಕೆಲ್ಲಾ ಎಡೆಯಾದದ್ದು ಬಡ್ತಿ ಮೀಸಲಾತಿ ನೀತಿಯಲ್ಲಿ ಅಡಕ ಮಾಡಿರುವ ತತ್ಪರಿಣಾಮ ಹಿರಿತನ (Consequential Seniority). ಇದು ಹೆಚ್ಚಿನ ಪಾಲಿನ ಮೀಡಿಯಾ, ಸಾರ್ವಜನಿಕರಿಗೆ ಇದುವರೆಗೆ ಕಗ್ಗಂಟಿನ ಪದವಾಗಿದೆ.

ಏನಿದು Consequential Seniority?
ಈ ಹೋರಾಟದ ಮುಂಚೂಣಿಯಲ್ಲಿರುವ ಪಿಡಬ್ಲೂಡಿ ಇಲಾಖೆಯವರು ತಿಳಿಸುವಂತೆ ಸದರಿ ಇಲಾಖೆಯಲ್ಲಿ AE, AEE, EE, SE, CE ಹುದ್ದೆಗಳಿವೆ. ಮೇಲಿನ AEಹುದ್ದೆಗಳಿಗೆ ಕೆಲಸಕ್ಕೆ ತೆಗೆದುಕೊಂಡನಂತರ AEE ಹುದ್ದೆಯವರೆಗೆ ಮಾತ್ರ ಬಡ್ತಿ ಮೀಸಲಾತಿ ಇದೆ. ಆದರೂ ಸಹ ಇಂಜಿನಿಯರಿಂಗ್ ಇಲಾಖೆಯಲ್ಲೇ ಬಡ್ತಿ ಮೀಸಲಾತಿ ಸಂಗತಿ ಹೆಚ್ಚು ಸದ್ದು ಮಾಡುತ್ತಿದೆ. 1978ರವರೆಗೆ AEE ಹುದ್ದೆಯಿಂದ AEE ಹುದ್ದೆಗೆ ಬಡ್ತಿ ಹೊಂದಲು 5 ವರ್ಷಗಳ ಸೇವೆ ಸಲ್ಲಿಸಿರಬೇಕಿತ್ತು. ಸುಮಾರು 15 ವರ್ಷಗಳ ಸೇವೆ ನಂತರ ಮೊದಲ ಬಡ್ತಿ AEE ಹುದ್ದೆಗೆ ಎಲ್ಲಾ ಗುಂಪಿನವರಿಗೂ ಸಿಗುತ್ತಿತ್ತು. ಆಗ ಹಿರಿತನ ಪಟ್ಟಿಯಲ್ಲಿ ಕೆಳಗಡೆ ಇರುತ್ತಿದ್ದ ಎಸ್ಸಿ/ಎಸ್ಟಿ ಕೆಲಸಗಾರರು ಕೆಳಗಡೆ ಇರುತ್ತಿದ್ದ ಕಾರಣ ತಡವಾಗಿ ಬಡ್ತಿ ದೊರೆತು 1, 2, 3, 4ನೇ ಹಂತದ ಬಡ್ತಿ ಹುದ್ದೆ ತಲುಪುವ ಹೊತ್ತಿಗೆ ಕೆಳಗಿರುವವರು ನಿವೃತ್ತಿಯಾಗುತ್ತಿದ್ದ ಕಾರಣ ಮೇಲಿನ ಹುದ್ದೆಗಳಲ್ಲಿ ಎಸ್ಸಿ/ಎಸ್ಟಿ ಪ್ರಾತಿನಿಧ್ಯ ಕಡಿಮೆ ಇತ್ತು.

ತದನಂತರ 1978ರಲ್ಲಿ ಎಸ್ಸಿ/ಎಸ್ಟಿ ಗುಂಪಿನವರಿಗೆ ಬಡ್ತಿಯಲ್ಲಿ ಮೀಸಲಾತಿ ದೊರಕಿದ ಕಾರಣ 100 ಹುದ್ದೆಗಳಿಗೆ 18 ಹುದ್ದೆಗಳನ್ನು ಹಿರಿತನ ಪಟ್ಟಿಯಲ್ಲಿ ಕೆಳಗಡೆ ಇರುವವರನ್ನು ಆಯ್ಕೆ ಮಾಡಲಾಯಿತು. 1978ರ ನಂತರದ ಮೊದಲ ಹಂತದ ಬಡ್ತಿಗಳಲ್ಲಿ 5 ವರ್ಷ/ಇಲ್ಲವಾದಲ್ಲಿ 3 ವರ್ಷದ ಪ್ರಾರಂಭಿಕ ಸೇವೆ ಸಲ್ಲಿಸಿದವರು, ಕಡಿಮೆ ವಯಸ್ಸಿನವರು, ಬಡ್ತಿ ಪಡೆದರು. ತದನಂತರದ ವರ್ಷಗಳಲ್ಲಿ ಬಡ್ತಿ ಪಡೆಯದೇ ಕೆಳ ಹಂತಗಳಲ್ಲೇ ಸುದೀರ್ಘ ಸೇವೆ ಸಲ್ಲಿಸಿದ ಇತರರು ಮೊದಲು ವಯೋನಿವೃತ್ತಿ ಹಂತ ತಲುಪುವುದರಿಂದ, ಮೇಲು ಹಂತದ ಹುದ್ದೆಗಳಲ್ಲಿ ಕಡಿಮೆ ವಯಸ್ಸಿನ ಎಸ್ಸಿ/ಎಸ್ಟಿ ಕೆಲಸಗಾರ ಸಂಖ್ಯೆ ಹೆಚ್ಚಾಯಿತು. ಯಾವ ಪ್ರಮಾಣಕ್ಕೆ ಹೆಚ್ಚಾಯಿತು ಎಂಬುದನ್ನು ಮೇಲೆ ಹೇಳಲಾಗಿದೆ. ಇದರ ಬೆನ್ನು ಹತ್ತಿ ನ್ಯಾಯಾಲಯದ ಕಟ್ಟೆಯಲ್ಲಿ ಇತರರು 2017ರಲ್ಲಿ ಪವಿತ್ರ ಪ್ರಕರಣದಲ್ಲಿ ಇದಕ್ಕೆ ತಡೆ ಪಡೆಯಲಾಯಿತು.

ಏಕೆಂದರೆ ತಮಗಿಂತ ಸೇವೆಯಲ್ಲಿ 10-15 ವರ್ಷ ಕಿರಿಯರ ಕೈಕೆಳಗೆ ಹಿರಿತನ ಹೊಂದಿರುವ ಇತರರು ಕೆಲಸ ಮಾಡುವ ಸ್ಥಿತಿ ಇತ್ತು. ಇದರಿಂದ ಸಹಜವಾಗಿ ಹಿರಿತನ ಹೊಂದಿರುವ ಕೆಲಸಗಾರರು ಮುಜುಗರದಲ್ಲಿ ಕೆಲಸ ಮಾಡುವಂತಾಯಿತು. ಕೆಲಸಗಳಲ್ಲಿ ಹುರುಪು ಕಡಿಮೆಯಾಗತೊಡಗಿತು. ಹಾಗೂ ಮೇಲು ಹಂತದ ಹುದ್ದೆಗಳಲ್ಲಿ ಕಡಿಮೆ ವಯಸ್ಸಿನ/ಸೇವಾಹಿರಿತನದವರು ಕುಳಿತಿದ್ದರಿಂದ ಇತರೆ ಗುಂಪಿನ ಕೆಲಸಗಾರರು ತಮ್ಮ ಸೇವೆಯ ಕೊನೆಯಲ್ಲಿ 1 ಬಡ್ತಿ/2 ಬಡ್ತಿ ಅಥವಾ ಕೆಲವರು ಬಡ್ತಿ ಇಲ್ಲದೆಯೂ ನಿವೃತ್ತರಾದರು. ಇದು ಎಲ್ಲಾ ಇಲಾಖೆಗಳಲ್ಲಿನ ಪರಿಸ್ಥಿತಿ.

ಇದಕ್ಕೆಲ್ಲಾ ಕಾರಣ 1978ರಲ್ಲಿನ ಬಡ್ತಿ ಮೀಸಲಾತಿ ನೀತಿಯಲ್ಲಿರುವ ಶೇ.18ರ ಪ್ರಾತಿನಿಧ್ಯವನ್ನು ಕ್ಲಾಸ್-1 (ಲೋಯರ್ ಕೆಟಗರಿ) ಹುದ್ದೆಯವರಿಗೆ ಮಾತ್ರ ಕೊಡುತ್ತಿದ್ದದ್ದು. ತದನಂತರ ಮೀಸಲಾತಿಯಿಂದ ಬಡ್ತಿ ಪಡೆದ ಎಸ್ಸಿ/ಎಸ್ಟಿ ವರ್ಗದವರಿಗೆ ನೀಡಿದ ತೀರ್ಪಿನಲ್ಲಿ ತತ್ಪರಿಣಾಮದ ಹಿರಿತನಕ್ಕೆ ತಡೆ ಕೊಟ್ಟಿದ್ದಾರೆ ಮತ್ತು 2019ರ ತೀರ್ಪಿನಲ್ಲಿ ತತ್ಪರಿಣಾಮ ಹಿರಿತನವನ್ನು ಮುಂದುವರೆಸಲು ಸಮ್ಮತಿ ನೀಡಿರುವುದು ಇಂದಿನ ಕೋಲಾಹಲಕ್ಕೆ ಕಾರಣವಾಗಿದೆ.

ಇದನ್ನು ಕೇವಲ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ನೋಡುವ ಪರಿಪಾಠ ಇದೆ. ಇದರಿಂದ ಆಡಳಿತಾಂಗದ ಕೆಲಸದ ಮೇಲೆ ಮತ್ತು ಅದರಿಂದ ಒಟ್ಟು ಸಮಾಜದ ಮೇಲೆ ಆಗುವ ಅಡ್ಡ ಪರಿಣಾಮದ ಅರಿವಿಲ್ಲದೇ ಈ ರೀತಿ ಮಾಡಲಾಗುತ್ತಿದೆ.

ಎಸ್ಸಿ/ಎಸ್ಟಿ ಗುಂಪಿನವರನ್ನು ಮೇಲೆ ತರಲು ಸರ್ಕಾರಿ ಕೆಲಸಗಳಿಂದ ಮಾತ್ರ ಸಾಧ್ಯ ಎಂಬುದನ್ನು ಸರ್ಕಾರ ಮುಂದೊಡ್ಡುತ್ತಿದೆ. ಸೀಮಿತ ಸರ್ಕಾರಿ ಯಂತ್ರಾಂಗವನ್ನು ತಕ್ಕ ಹುರಿಯಾಳುಗಳಿಂದ ಕಟ್ಟಿ ಅದರಿಂದ ಒಳ್ಳೆಯ ಪ್ರೊಡಕ್ಟ್ ಪಡೆದು ಇಡೀ ಸಮಾಜವನ್ನು ಮುಂದೆ ತರಲು ದುಡಿಮೆ ಮಾಡಬೇಕಾದ ಸರ್ಕಾರಗಳು ಎಡವುತ್ತಿರುವುದೆಲ್ಲಿ?

ಹಿಂದಿನ ತಲೆಮಾರಿನಲ್ಲಾದ ಶೋಷಣೆಯನ್ನು ವ್ಯಕ್ತಿಗತವಾಗಿ ಇತರ ಜಾತಿಗಳ ಸದಸ್ಯರ ಮೇಲೇರಿ ಅವರ ಬಡ್ತಿ ಹಕ್ಕನ್ನು ಕಿತ್ತು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಇನ್ನೊಬ್ಬರಿಗೆ ಕೊಟ್ಟು ‘ಊನಗೊಂಡಿರುವ ಆಳ್ವಿಕೆ ಕೆಲಸ ಪಡೆ’ ನಮ್ಮ ನಾಡಿನ ಏಳಿಗೆಗೆ ತೊಡಕು ಎಂಬುದು ಕಟ್ಟುಪಾಡು ಮಾಡುವ ವ್ಯವಸ್ಥೆಗೆ ಅರಿವಾಗಬೇಕು. ಇಂತಹ ನಿಯಮಗಳಿಂದ ಸಮಾಜದೊಳಗಿನ ಹಲಪಂಗಡಗಳ ನಡುವೆ ಅದರಲ್ಲೂ ಎಸ್ಸಿ/ಎಸ್ಟಿ ಮತ್ತು ಇತರರ ನಡುವಿನ ಬಿರುಕು ಮತ್ತಷ್ಟು ಹೆಚ್ಚಾಗಲಿದೆ.

ಹಾಗಾಗಿ ಈ Consequential Seniority ಯ ಅನಾಹುತವ್ನು ತಡೆಯಲು ಹಲವಾರು ಶತಮಾನಗಳಿಂದ ತುಳಿತಕ್ಕೊಳಗಾದ ಎಸ್ಸಿ/ಎಸ್ಟಿ ಗುಂಪಿನವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಎಲ್ಲಾ ಬಡ್ತಿ ಹುದ್ದೆಗಳಲ್ಲಿಯೂ ಅವಕಾಶ ಕೊಡುವ ನಡೆಯ ಕಡೆ ಸರ್ಕಾರ ಹೆಜ್ಜೆ ಇಡಬೇಕಾಗಿದೆ. ಎಲ್ಲಾ ಪಂಗಡಗಳೂ ಒಗ್ಗಟ್ಟಿನಿಂದ ಇರಬೇಕಿದೆ. ಇದಕ್ಕೆ Vertical bifurcation of all cadre ಎಂದು ಕರೆಯಲಾಗುತ್ತಿದೆ. ಇದು ಈಗಿನ ಕಗ್ಗಂಟನ್ನು ಬಿಡಿಸಲು ಇರುವ ದಾರಿ. ಇನ್ನುಳಿದಂತೆ ಎಸ್ಸಿ/ಎಸ್ಟಿ ಪಂಗಡದವರನ್ನು ಮೇಲೆತ್ತಲು ಇರುವ ಇನ್ನುಳಿದ ದಾರಿಗಳನ್ನು ಕಂಡುಕೊಳ್ಳಬೇಕಿದೆ.

ಬಡ್ತಿ ಮೀಸಲಾತಿ ಪರ ಇರುವ ವಾದಕ್ಕೆ ಇದನ್ನೂ ಓದಿ: ಬಡ್ತಿ ಮೀಸಲು ಕುರಿತು ಸುಪ್ರೀಂ ತೀರ್ಪು ದೇಶಕ್ಕೆ ಮಾದರಿಯಾದುದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...