Homeಮುಖಪುಟಒಂದು ಫ್ಯಾಕ್ಟ್ ಚೆಕಿಂಗ್.... ಕೋಲ್ಕತ್ತ ಹಿಂಸಾಚಾರ: ಮಾಡಿದ್ದ್ಯಾರು? ಹಿಂದಿರುವ ಕುತಂತ್ರವೇನು? ವಾಸ್ತವವೇನು?

ಒಂದು ಫ್ಯಾಕ್ಟ್ ಚೆಕಿಂಗ್…. ಕೋಲ್ಕತ್ತ ಹಿಂಸಾಚಾರ: ಮಾಡಿದ್ದ್ಯಾರು? ಹಿಂದಿರುವ ಕುತಂತ್ರವೇನು? ವಾಸ್ತವವೇನು?

ಈಶ್ವರಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದೂ ಅಲ್ಲದೇ, ಹಲವು ರೀತಿಯ ಹಿಂಸಾಚಾರ ಕೊಲ್ಕೊತ್ತಾದಲ್ಲಿ ನಡೆದಿದೆ. ಸ್ವತಃ ಅಮಿತ್ ಷಾ ಪತ್ರಿಕಾಗೋಷ್ಠಿ ನಡೆಸಿ ಟಿಎಂಸಿ ಮೇಲೆ ಆಪಾದನೆ ಮಾಡಿದ್ದಾರೆ. ಆದರೆ, ವಾಸ್ತವವೇನು? ನೋಡಿ

- Advertisement -
ಕಂಪ್ಲೀಟ್ ವಿಡಿಯೋ ಎಲ್ಲ ಮಾಧ್ಯಮಗಳ ಬಳಿಯಿದೆ. ಆದರೆ, ಅದರಲ್ಲಿ ಶೇ. 90 ರಷ್ಟು ಮಾಧ್ಯಮಗಳು ಕೋಲ್ಕತ್ತ ಹಿಂಸಾಚಾರದಲ್ಲಿ ಭಾಗವಹಿಸಿದವರಾರು, ವಿದ್ಯಾಸಾಗರ್ ಕಾಲೇಜಿನೊಳ್ಳಕ್ಕೆ ನುಗ್ಗಿದವರಾರು, ವಿದ್ಯಾಸಾಗರರ ಪುತ್ಥಳಿ ಒಡೆದವರಾರು ಎಂಬ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ‘ಈ ಕೃತ್ಯ ಮಾಡಿದ್ದು ನಿಮ್ಮ ಪಕ್ಷವೇ’ ಎಂದು ಬಿಜೆಪಿ ಮತ್ತು ಟಿಎಂಸಿ ಪಕ್ಷಗಳೆರಡೂ ಪರಸ್ಪರ ಆರೋಪ ಮಾಡುತ್ತಿವೆ ಎಂದು ಕೈ ತೊಳೆದುಕೊಂಡಿವೆ. ಇಲ್ಲಿ ಟಿಎಂಸಿ ನೀಡಿರುವ ವಿಡಿಯೋ ನಂಬಲರ್ಹವಾಗಿದ್ದರೆ, ಬಿಜೆಪಿ ಮಾಡುತ್ತಿರುವ ಆರೋಪಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲ, ಅಷ್ಟೇ ಅಲ್ಲ, ಅದು ಸುಳ್ಳಿನ ಮೇಲೆ ಸುಳ್ಳನ್ನು ಹೇಳುತ್ತ ನಡೆದಿದೆ. ಹಾಗಾಗಿ ಬಿಜೆಪಿಯ ಆರೋಪ ಅಥವಾ ಕ್ಲೈಮ್‍ಗಳ ಸತ್ಯಾಸತ್ಯತೆಯನ್ನು ಇಲ್ಲಿ ಪರಿಶೀಲಿಸಲಾಗಿದೆ….
ಮೇ 15ರ ಮುಂಜಾನೆ ಬಿಜೆಪಿ ಐಟಿ ಸೆಲ್‍ನ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿ, ‘ವಿದ್ಯಾಸಾಗರ ಕಾಲೇಜಿನಲ್ಲಿ ನಡೆದ ದೊಂಬಿಯ ಮೊದಲ ಪ್ರತ್ಯಕ್ಷದರ್ಶಿ’ಯ ಫೇಸ್‍ಬುಕ್ ಪೋಸ್ಟ್ ಉಲ್ಲೇಖಿಸಿ, ಕಾಲೇಜಿನೊಳಗೆ ಇದ್ದ ಟಿಎಂಸಿ ವಿದ್ಯಾರ್ಥಿ ಘಟಕದ ಸದಸ್ಯರು ಈ ದೊಂಬಿ ಆರಂಭಿಸಿದರು’ ಎಂದು ಬರೆಯುತ್ತಾರೆ. ಇದರಲ್ಲಿ ಈ ಘಟನೆಯ ಮೊದಲ ‘ಪ್ರತ್ಯಕ್ಷದರ್ಶಿ’ ಆ ಕಾಲೇಜಿನ ವಿದ್ಯಾರ್ಥಿ ಬೀರಜ್ ನಾರಾಯಣ ರಾಯ್ ಮಾಡಿದ ಬೆಂಗಾಲಿ ಭಾಷೆಯ ಪೋಸ್ಟ್ ಉಲ್ಲೇಖಿಸಿ ಐಟಿ ಸೆಲ್‍ನ ಮಾಳವೀಯ ಅಪಾದನೆ ಮಾಡಿದರು.
- Advertisement -

ವಿಚಿತ್ರ:  ಸಂಪೂರ್ಣ ವಿಡಿಯೋ ಹೊರ ಬೀಳುತ್ತಿದ್ದಂತೆ, ‘ಮೊದಲ ಪ್ರತ್ಯಕ್ಷದರ್ಶಿ’ ಬೀರಜ್ ನಾರಾಯಣ್ ರಾಯ್‍ನ ‘ಫೇಸ್‍ಬುಕ್’ ಅಕೌಂಟೇ ನಾಪತ್ತೆ! ಇನ್ನೂ ವಿಚಿತ್ರವೆಂದರೆ, ಆತನ ಪೋಸ್ಟನ್ನೇ ಹಾಕಿ ‘ತಾನೇ ಪ್ರತ್ಯಕ್ಷದರ್ಶಿ’ ಎಂಬಂತೆ ವಿವಿಧ ಖಾತೆಗಳಿಂದ ಪೋಸ್ಟ್‍ಗಳು ಹೊರಹೊಮ್ಮಿದವು!
ಈ ‘ಮೊದಲ ಪ್ರತ್ಯಕ್ಷದರ್ಶಿ’(ಗಳ!) ಪೋಸ್ಟ್ ಆಧಾರದಲ್ಲಿ ಬಿಜೆಪಿ ಮಾಡಿರುವ ಅಪಾದನೆ ಅಥವಾ ಕ್ಲೈಮ್‍ಗಳನ್ನು ನೋಡೋಣ:

1. ಮೊದಲ ಇಟ್ಟಿಗೆ ಕಾಲೇಜ್ ಕ್ಯಾಂಪಸ್ ಒಳಗಿಂದ ತೂರಿ ಬಂತು…

ಈ ಆರೋಪ ಸಮರ್ಥಿಸಲು ಒಂದೇ ಒಂದು ವಿಡಿಯೋವೂ ಲಭ್ಯ ಇಲ್ಲ. ‘ಮೊದಲ ಪ್ರತ್ಯಕ್ಷದರ್ಶಿ’ಯ ಅಕೌಂಟೇ ಕ್ಲೋಸ್!
ಸ್ಥಳೀಯ ‘ಆನಂದ್ ಬಜಾರ್’ ಪತ್ರಿಕೆಯ ಸ್ಪಾಟ್ ವರದಿ ಪ್ರಕಾರ, ಕಾಲೇಜಿನ ಹೊರಭಾಗದ ರಸ್ತೆಯಿಂದ (ಅಮಿತ್ ಶಾ ರ್ಯಾಲಿ ಪಾಸಾಗುತ್ತಿದ್ದ ರಸ್ತೆ) ಕಲ್ಲುಗಳನ್ನು ಕಾಲೇಜಿನ ಕ್ಯಾಂಪಸ್ ಒಳಕ್ಕೆ ಎಸೆಯಲಾಯಿತು.  ಅದನ್ನು ಎಸದವರು ‘ನಮೋ ಒನ್ಸ್ ಎಗೇನ್’ ಎಂಬ ಕೇಸರಿ ಟೀ ಶರ್ಟ್ ತೊಟ್ಟ, ರ್ಯಾಲಿಯ ಭಾಗವಾಗಿದ್ದ ಯುವಕರು. ಆದರೆ ಕಾಲೇಜ್ ಒಳಗಡೆಯಿಂದ ಯಾವುದೇ ಇಟ್ಟಿಗೆ ಎಸೆದಿದ್ದಕ್ಕೆ ಆಧಾರವಿಲ್ಲ.
ಈ ವಿಡಿಯೋ ನೋಡಿ:

2. ಟಿಎಂಸಿ ಬೈಕ್‍ಗಳನ್ನು ಸುಟ್ಟಿತು…

ಫೇಸ್‍ಬುಕ್ (ಮಾಯವಾದ ಪ್ರತ್ಯಕ್ಷದರ್ಶಿ ಮತ್ತು ನಂತರ ಅದನ್ನೇ ಕಾಪಿ ಮಾಡಿ ‘ಪ್ರತ್ಯಕ್ಷದರ್ಶಿ’ ಗಳಾದವರ ಪೋಸ್ಟ್) ಪೋಸ್ಟ್ ಮತ್ತು ಬಿಜೆಪಿ ನಾಯಕರ ಆರೋಪ ಎಂದರೆ, ಟಿಎಂಸಿ ಕಾರ್ಯಕರ್ತರು ಬೈಕ್‍ಗಳನ್ನು ಸುಟ್ಟರು.
ವಿಡಿಯೋ ನೋಡಿ: ಇಲ್ಲಿ ರ್ಯಾಲಿಯಲ್ಲಿದ್ದ ಕೇಸರಿ ಟೀ ಶರ್ಟಿನ  ಹುಡುಗರೇ ಬೈಕ್‍ಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ.

3. ಕ್ಯಾಂಪಸ್‍ಗೆ ಬೀಗ ಹಾಕಿದ್ದರಿಂದ ಬಿಜೆಪಿ ಕಾರ್ಯಕರ್ತರು ಒಳಕ್ಕೆ ಪ್ರವೇಶಿಸಲು ಅಸಾಧ್ಯ.

ಇದನ್ನು ಅಮಿತ್ ಶಾ ಸೇರಿದಂತೆ ಮಾಳವಿಯ ಮತ್ತು ಭಕ್ತರು ಹೇಳುತ್ತಿದ್ದಾರೆ. ಈ ಕುರಿತು ಪಾತ್ರಿಕಾಗೋಷ್ಠಿಯಲ್ಲೂ ಶಾ ಹೇಳಿದ್ದಾರೆ. ಗಲಭೆ ನಡೆದ 7.30ರ ಸಮಯದಲ್ಲಿ ಕಾಲೇಜ  ಮುಚ್ಚಿತ್ತು, ಎಲ್ಲ ಗೇಟ್ ಬಂದ್ ಆಗಿದ್ದವು. ಹೀಗಾಗಿ ಬಿಜೆಪಿ ಕಾರ್ಯಕರ್ತರು ಒಳಗೆ ಹೋಗುವುದು ಹೇಗೆ ಸಾಧ್ಯ? ಎಂದು ವಾದಿಸಿದ್ದಾರೆ.
ಆದರೆ ಈ ಕೆಳಗಿನ ವಿಡಿಯೊ ನೋಡಿ: ಗೇಟ್‍ನ ಬೀಗವನ್ನು ಒಡೆಯುತ್ತಿರುವುದು ಬಿಜೆಪಿ ಕಾರ್ಯಕರ್ತರು ಎಂಬುದು ಇಲ್ಲಿ ಸ್ಪಷ್ಟ..

ಬಿಜೆಪಿ ಕಾರ್ಯಕರ್ತರು ಗೇಟ್ ಬೀಗ ಒಡೆಯುತ್ತಿರುವ ವಿಡಿಯೋ
ಕ್ಯಾಂಪಸ್ ಒಳಗೆ ಪ್ರವೇಶಿಸಿದ ವಿಡಿಯೋ

ಒಳಗಿನ ದೃಶ್ಯ ತೋರಿಸುವ ಏರಿಯಲ್ ವೀವ್ ವಿಡಿಯೋ

4. ಕಬ್ಬಿಣದ ಗೇಟ್ ಮತ್ತು ನಂತರ ಕಟ್ಟಿಗೆ ಬಾಗಿಲಿರುವ ರೂಮ್‍ನಲ್ಲಿರುವ ವಿದ್ಯಾಸಾಗರರ ಪುತ್ಥಳಿಯನ್ನು ಬಿಜೆಪಿ ಕಾರ್ಯಕರ್ತರು ಒಡೆಯಲು ಹೇಗೆ ಸಾಧ್ಯ?

ಇದು ಅಮಿತ್ ಶಾ ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಪ್ರಶ್ನೆ. ನಿಜ, ಅಲ್ಲಿ ಕಬ್ಬಿಣದ ಗೇಟ್, ನಂತರ ಕಟ್ಟಿಗೆಯ ದ್ವಾರ ಎಲ್ಲ ಇರುವುದು ನಿಜ. ಅಂತಹ ಕಬ್ಬಿಣದ ಗೇಟ್ ಒಡೆಯಲು ಸಾಧ್ಯವೇ ಎಂಬುದು ಬಿಜೆಪಿಯ ಮೂರ್ಖ ಪ್ರಶ್ನೆ. ಯಾವುದೇ ಶಕ್ತಿಶಾಲಿ ಕಬ್ಬಿಣದ ಗೇಟ್ ಇರಲಿ, ಅದರ ಶಕ್ತಿ ಇರುವುದು ಅದರ ಲಾಕ್ ಎಷ್ಟು ಶಕ್ತಿಯುತವಾಗಿದೆಯೋ ಅಷ್ಟೇ.. ಮೇಲಿನ ವಿಡಿಯೊದಲ್ಲಿಯೇ ನೋಡಿ, ರಾಡ್‍ಗಳಿಂದ ಬಿಜೆಪಿ ಕಾರ್ಯಕರ್ತರು ಆ ಲಾಕ್ ಒಡೆದು ಒಳ ನುಗ್ಗಿರುವುದನ್ನು..

5. ಒಳಗಿರುವ ಈಶ್ವರಚಂದ್ರ ವಿದ್ಯಾಸಾಗರರ ಪುತ್ಥಳಿಯನ್ನು ವಿರೂಪಗೊಳಿಸಿದ್ದು ಟಿಎಂಸಿ ಕಾರ್ಯಕರ್ತರು… 

ಈ ಅಪಾದನೆಗೂ ಯಾವುದೇ ಸಾಕ್ಷ್ಯಗಳಿಲ್ಲ. ಬದಲಿಗೆ ಲಭ್ಯವಿರುವ ಎಲ್ಲ ವಿಡಿಯೊಗಳ ಪ್ರಕಾರ, ಶಾ ರ್ಯಾಲಿಯ ಬಿಜೆಪಿ ಕಾರ್ಯಕರ್ತರೇ ವಿದ್ಯಾಸಾಗರರ ಪುತ್ಥಳಿಯನ್ನು ವಿರೂಪಗೊಳಿಸಿ, ಅದರ ತುಂಡನ್ನು ಹೊರಗೆ ತಂದು ಬಿಸಾಡಿದ್ದಾರೆ ಎಂಬುದನ್ನು ವಿಡಿಯೋಗಳೇ ಹೇಳುತ್ತಿವೆ. ಜೊತೆಗೆ ಟೆಲಿಗ್ರಾಫ್ ಪತ್ರಿಕೆಯ ಪ್ರತ್ಯಕ್ಷ ವರದಿಯೂ ಅದನ್ನೇ ಹೇಳುತ್ತಿದೆ.

ಸಾರಾಂಶ: ಕೋಲ್ಕತ್ತ ಹಿಂಸಾಚಾರಕ್ಕೆ ಟಿಎಂಸಿ ಕಾರಣ ಎಂಬ ಬಿಜೆಪಿ ಅಪಾದನೆಗೆ ಯಾವ ತಳ ಸಾಕ್ಷ್ಯವೂ ಲಭ್ಯವಿಲ್ಲ. ಅದನ್ನು ತೋರಿಸು ಸಾಕ್ಷ್ಯಗಳೂ ಬಿಜೆಪಿ ಬಳಿಯಿಲ್ಲ. ಅದು ‘ಮೊದಲ ಪ್ರತ್ಯಕ್ಷದರ್ಶಿ’ಯ ಪೇಸ್‍ಬುಕ್ ಪೇಜ್ ಉಲ್ಲೇಖಿಸಿ ಬಚಾವಾಗಲು ನೋಡಿತು. ಆದರೆ ತಕ್ಷಣವೇ ಆ ಅಕೌಂಟ್ ಮಾಯ… ಇಲ್ಲಿ ತೋರಿಸಿರುವ ಎಲ್ಲ ವಿಡಿಯೊಗಳಲ್ಲಿ ರ್ಯಾಲಿಯಲ್ಲಿದ್ದ ‘ನಮೋ ಒನ್ಸ್ ಎಗೇನ್’ ಹೆಸರಿನ ಕೇಸರಿ ಟೀಶರ್ಟ್ ಧರಿಸಿದ್ದ ಮತ್ತು ಅವರ ಜೊತೆಗಿದ್ದ ಬಿಜೆಪಿ ಕಾರ್ಯಕರ್ತರೇ ಈ ಹಿಂಸಾಚಾರ, ಗಲಭೆ ಮಾಡಿದ್ದಾರೆ….)
(ಆಧಾರ:Altnews.in)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...