Homeಡೇಟಾ ಖೋಲಿಕೊರೊನಾಲಜಿ: ಐದು ಹಂತಗಳಲ್ಲಿ ಈಗ ನಾವಿರೋದು ಲೆವಲ್ ಥ್ರೀ

ಕೊರೊನಾಲಜಿ: ಐದು ಹಂತಗಳಲ್ಲಿ ಈಗ ನಾವಿರೋದು ಲೆವಲ್ ಥ್ರೀ

- Advertisement -
- Advertisement -

ʻʻಕವಿ ಅನ್ನುವವನು ಹಕ್ಕಿ ಇದ್ದಂಗಿರಬೇಕು, ಅವ ಕಾಣಬಾರದು ಆದರ ಅವನ ದನಿ ಕೇಳಸಬೇಕು,ʼʼ ಅಂತ ಮೊನ್ನೆ ತೀರಿಹೋದ ಹಿರಿಯ ಕಲಾವಿದ- ಕವಿ ಚಂದ್ರಕಾಂತ ಕುಸನೂರ ಹೇಳತಿದ್ದರು. ಆ ಮಾತಿಗೆ ತಕ್ಕಂತೆ ಇರುವ ಭಾರತದ ಆರೋಗ್ಯ ಮಂತ್ರಿ ಡಾ. ಹರ್ಷವರ್ಧನ ಅವರು ಮೊನ್ನೆ ಒಂದು ಮುತ್ತಿನಂಥ ಮಾತು ಹೇಳ್ಯಾರ.

ʻಕೀಲಿ ಕಿಟಕ್ (ಲಾಕು ಡೌನು) ಅನ್ನುವುದು ನಮ್ಮ ದೇಶಕ್ಕೆ ಸಾಮಾಜಿಕ ಲಸಿಕೆ ಇದ್ದಂತೆ. ದೇಹಾರೋಗ್ಯಕ್ಕೆ ರಸಾಯನಿಕ ಲಸಿಕೆ ಬೇಕಾದರೆ ಸಮಾಜದ ಆರೋಗ್ಯಕ್ಕೆ ಈ ಲಸಿಕೆ ಬೇಕುʼ ಅಂತ.

ಇದು ಹೌದಾ? ಖರೇನ? ಹೌದು ಅಂತಾದರ ಸರಕಾರದ ಉದ್ದೇಶ ಅರ ಏನು? ಈ ಕೀಲಿ ಕಿಟಕ್ ಟೈಂದಾಗ ಅವರು ಏನು ಮಾಡ್ಯಾರ? ಮುಂದ ಏನು ಮಾಡಬೇಕಂತ ಯೋಜನೆ ಇಟಗೊಂಡಾರ? ಅದರ ತಯಾರಿ ಏನು ನಡದದ? ರಸ್ತೆ ಮ್ಯಾಲೆ ತೊಡರು ಪಟ್ಟಿ ಹಾಕೋದು, ಯಾರರ ಬಡವರು ಹೊಂಟರ ಅವರಿಗೆ ಬಡದು ಎಲಬು ಮುರಿಯೋದು, ಸಾಹುಕಾರರ ಹೊಂಟರ ಕಿಸಿ ಕಿಸಿ ನಗೋದು, ಪುಢಾರಿ ಹೊಂಟರ ಸೆಲ್ಯೂಟು ಹೊಡೆಯೋದು ಇವಿಷ್ಟ ಮಾಡಬೇಕು ಅಂತ ಪೊಲಿಸರು ತಿಳಕೊಂಡಾರ.

ನಾವು ಏನಾದರೂ ಮಾಡಿದಂಗ ತೋರಸಬೇಕು ಅಂತ ಹೇಳಿ ನಗರಸಭೆಯವರು ಎಲ್ಲಿ ಬೇಕಲ್ಲಿ ಫಿನಾಯಿಲು- ನೀರು ಹೊಡೀಲಿಕ್ಕೆ ಹತ್ಯಾರ.

ಖಾಸಗಿ ಡಾಕ್ಟರು ಹೆದರಿಕೊಂಡು ಮನ್ಯಾಗ ಕೂತಾರ, ಸರಕಾರಿ ಡಾಕ್ಟರು (ಪಿಪಿಈ) ವೈಯಕ್ತಿಕ ಸಂರಕ್ಷಣೆ ಸಲಕರಣೆ ಇಲ್ಲದನ ದುಡೀಲಿಕ್ಕೆ ಹತ್ಯಾರ. ಐಎಎಸ್ಸು ಅಧಿಕಾರಿ ಇದು ಇನ್ನೂ ಎಲ್ -ಟೂ ಎರಡನೇ ಮಟ್ಟ. ಇನ್ನೂ ಮೂರು ಮಟ್ಟ ಅದಾವು ಇದು ಮುಗಿಲಾಕ. ಅವು ಮುಗಿಯೋದರಾಗ ನಾವರ ಅದನ್ನ ಮಟ್ಟ ಹಾಕಬೇಕು, ಅಥವಾ ಆದರ ನಮ್ಮನ್ನ ಮಟ್ಟ ಹಾಕಬೇಕು, ಅಂತ ಸಿಗರೇಟು ಸೇದಿಕೊಂತ ಸ್ವಗತದ ಹಂಗ ಮಾತಾಡಾಕ ಹತ್ಯಾರು. ಎಂದಿನಂತೆ `ಒಳ್ಳೇದಾದರ ನಾ ಮಾಡೇನಿ, ಕೆಟ್ಟಾದಾದರ ನನಗ ಸಂಬಂಧನ ಇಲ್ಲ’ ಅಂತ ರಾಜಕಾರಣಿಗಳು ಗುಮ್ಮನ ಗುಸಗನಂಗ ಕೂತಾರ.

ಸತ್ಯ ಅನ್ನೋದು ಮಾತ್ರ ಇವೆಲ್ಲದರ ನಡುವ ಐತಿ.

ಈ ಎಲ್ ಟೂ ಅಂದರೇನು? ಎಲ್ ಒನ್ ಅಂದರ ವಿದೇಶದಿಂದ ಬಂದವರು ರೋಗ ಹರಡೋದು. ಎಲ್ ಟೂ ಅಂದರ ಅವರ ಸಂಪರ್ಕಕ್ಕ ಬಂದವರು ಹರಡೋದು. ಎಲ್ ಥ್ರೀ ಅಂದರ ಸೋಂಕು ಎಲ್ಲಿಂದ ಬಂದದ ಅನ್ನೋದು ಗೊತ್ತಾಗಲಾರದ ಹಂಗ ಇರೋದು. ಎಲ್ ಫೋರು ಅಂದರ ಭಾಳ ಜನರಿಗೆ ಬರೋ ಅಂಟು ರೋಗ. ಎಲ್ ಫೈವ್ ಅಂದರ ಒಂದು ದೇಶ/ ಸಮಾಜ/ ರಾಜ್ಯದಾಗ ಸರಿ ಸುಮಾರು ಎಲ್ಲರಲ್ಲೂ ಇರೋ ರೋಗ.

ಈ ಲೆವಲ್ಲುಗಳನ್ನು ಹೆಂಗ ಗುರತು ಮಾಡ್ಯಾರ ಅನ್ನೋದು ತಿಳಕೊಂಡರ ನಮ್ಮ ಸರಕಾರದ ಲೆವಲ್ಲು ತಿಳೀತದ. ಮೊದಲಿಗೆ ವಿದೇಶ ಪ್ರವಾಸಿಗರ ಲೆಕ್ಕ ನೋಡರಿ. ಜನವರಿ ಒಂದರಿಂದ ಮಾರ್ಚು 23 ರ ತನಕಾ ಸುಮಾರು 15 ಲಕ್ಷ ಮಂದಿ ಭಾರತಕ್ಕ ಬ್ಯಾರ ಬ್ಯಾರೆ ದೇಶದಿಂದಾ ಬಂದಾರ ಅಂತ ಕೇಂದ್ರ ವಿಮಾನಯಾನ ಕಾರ್ಯದರ್ಶಿ ಹೇಳ್ಯಾರ. ಇವರಿಗೆ ಎಲ್ಲಾರಿಗೂ ಕೊರೊನಾ ಟೆಸ್ಟು ಮಾಡೀರೇನು? ಭಾರತದಾಗ ಇಲ್ಲೀ ತನಕಾ ಇದ್ದವರು, ಹೋದವರು ಬಂದವರು ಎಲ್ಲಾ ಸೇರಿ ಬರೇ ನಾಲ್ಕು ಲಕ್ಷ ಟೆಸ್ಟು ಮಾಡ್ಯಾರ ಅಂದ ಮ್ಯಾಲೆ ಇದರ ಹಕೀಕತ್ತು ಗೊತ್ತಾಗತದ.

ಅವರೆಲ್ಲಾರೂ ಗೃಹ ಬಂಧನದಾಗ ಇರಬೇಕು ಅಂತ ಒಂದು ಕಾಯಿದೆ ಮಾಡಿದರು. ಆದರ ಅವರ ಪರೀಕ್ಷೆ ಮಾಡಲಿಲ್ಲ. ಇದು ಒಂದೀಟು ನೆನಪ ಇಟಗೋರಿ.

ಇನ್ನ ಎಲ್ ಟೂ. ಈ ರೋಗ ಈಟ ಭಯಂಕರ ಐತಿ ಅಂತ ಯಾವಾನಿಗೂ ಗೊತ್ತಿರಾಕಿಲ್ಲ. ಇದನ್ನ ಹೆಂಗ ಬಗೀ ಹರಸಬೇಕು ಅಂತ ಸರಕಾರಕ್ಕ ಹೊಳೀಲಿಲ್ಲ.

ಆವಾಗ ಅವರ ಕೈಗೆ ಸಿಕ್ಕವರು ತಬಲೀಘಿ ಜಮಾತಿನವರು. ಅವರು ಸುಮಾರು ಮೂರು ಸಾವಿರ ಜನ ದೆಹಲಿ ನಿಜಾಮುದ್ದೀನ ಮಸೀದಿಯೊಳಗ ಸೇರಿದ್ದರು, ಅದರಾಗ ಮಾರ್ಚು 28ರ ರಾತ್ರಿ ಪೋಲಿಸರು ಬಂದು ರೇಡು ಮಾಡಿ ಒಂದೂವರೆ ಸಾವಿರ ಜನರನ್ನ ಹೊರಗ ಹಾಕಿದರು, ಹೌದ? ಅವರನ್ನ ಅವರವರ ಊರಿಗೆ ಕಳಸದೇ ಅಲ್ಲೇ ದೆಹಲಿಯೊಳಗ ಇಟಗೊಂಡಿದ್ದರ ಅವರು ಸಾವಿರಾರು ಕಿಲೋಮೀಟರು ರೇಲ್ವೇದಾಗ ಪ್ರವಾಸ ಮಾಡೋ ನೌಬತ್ತು ಬರತಿರಲಿಲ್ಲ. ಅವರಿಂದ ಬ್ಯಾರೆದವರಿಗೆ ಸೋಂಕು ತಗಲೋ ಪರಿಸ್ಥಿತಿ ಇರತಿರಲಿಲ್ಲ.

ಈಗ ವಿದೇಶದಿಂದ ಬಂದವರು ಎಷ್ಟು ಜನರಿಗೆ ಸೋಂಕು ಹಚ್ಚಿದರು ಅಂತ ಯಾವಾನಿಗೂ ಗೊತ್ತಿಲ್ಲ. ಆದರ ದೆಹಲಿಗೆ ಹೋದವರಿಗೆ ಎಷ್ಟು ಮಂದೀಗೆ ಬಂದೇತಿ, ಅವರಿಂದ ಎಷ್ಟು ಜನರಿಗೆ ಬಂದೇತಿ ಅನ್ನೋದು ಗೊತ್ತೈತಿ. ಯಾಕಂದರ ಸರಕಾರದವರು ಇವರಿಗೆ ನಿಜಾಮುದ್ದೀನ ಪ್ರವಾಸ/ದೆಹಲಿ ಪ್ರವಾಸದಿಂದ ಬಂದಿದೆ ಅಂತ ಹೇಳತಾರ. ವಿದೇಶಿ ಪ್ರವಾಸದಿಂದ/ವಿದೇಶಕ್ಕ ಹೋದವರ ಸಂಪರ್ಕದಿಂದ ಬಂದೇತಿ ಅಂತ ಹೇಳೋದಿಲ್ಲ. ಬೆಂಗಳೂರು, ಬಾಗಲಕೋಟಿ, ಮಂಗಳೂರಿನ್ಯಾಗ ವಿದೇಶ ಸಂಚಾರಿ ಬಿಳೀ ಕಾಲರಿನ ಐಟಿ/ಬೀಟಿ ಮಂದಿಗೆನೂ ರೋಗ ಬಂದೇತಿ, ಅವರಿಂದ ಅವರ ಮನೀಯವರಿಗೆ ಬಂದೇತಿ. ಗುಜರಾತು-ರಾಜಸ್ಥಾನ- ಮೈಸೂರು -ಮಹಾರಾಷ್ಟ್ರದಾಗ ಚೀನಾಕ್ಕ ಹೋಗಿ ಬಂದವರಿಗೆ ಬಂದೇತಿ. ಅದನ್ನ ಯಾರೂ ಹೇಳಾಕ ಹತ್ತಿಲ್ಲ.

ಇದೂ ನೆನಪ ಇಟಗೋರಿ.

ಅಧಿಕಾರಿಗಳು ಹುಡುಕಿ -ಹುಡುಕಿ ಮುಸಲ್ಮಾನರಿಗೆ ಪರೀಕ್ಷೆ ಮಾಡತಾರು. ಐಸೋಲೇಷನ್ನು – ಕಂಟೇನಮೆಂಟು ಝೋನಿನ್ಯಾಗ ಸಹಿತ ಎತಿಗೊಂಡು ಹೋಗಿ ರಾಂಡಮ್ ಟೆಸ್ಟ (ಯಾದೃಶ್ಚಿಕ/ ಅನಿಶ್ಚಿತ ಪರೀಕ್ಷೆ)ಮಾಡಾಕ ಹತ್ಯಾರು. ಕಂಟೇನುಮೆಂಟು ಝೋನಿನ್ಯಾಗ ಯಾರೂ ಹೊರಗ ಹೋಗಂಗಿಲ್ಲ, ಒಳಗ ಬರಂಗಿಲ್ಲ. ಹಂಗಾರ ಅವರಿಗೆ ಪರೀಕ್ಷೆ ಅನಿಶ್ಚಿತ ಪರೀಕ್ಷೆ ಮಾಡೋ ಜರೂರತ್ತು ಏನೈತಿ? ಕೆಲವು ಜಿಲ್ಲೆಯೊಳಗ ಅಂತೂ ಇನ್ನು ಮುಂದೆ ಕಂಟೇನುಮೆಂಟ ಆಗಬಹುದಾದ ಪ್ರದೇಶ ಅಂತ ಸುದ್ದಿ ಬರತಾವು. ಕೀಲಿ ಕಿಟಕ್ಕಿನ ನಂತರ ದೇಶದಾಗ ನೂರಾರು ಊರಾಗ ಸಾವಿರಾರು ಜಾತ್ರಿ ಆಗ್ಯಾವು. ಅದರಾಗ ಲಕ್ಷಾಂತರ ಮಂದಿ ಭಾಗವಹಿಸಿದಾರ. ಆದರ ಅವರೆಲ್ಲಾರಿಗೂ ಟೆಸ್ಟು ಮಾಡ್ಯಾರೇನು? ಇಲ್ಲ.

ಇನ್ನ ಇದು ಮಸಲ್ಮಾನರನ್ನ ನೇರವಾಗಿ ಸಂಬಂಧಿಸಿದ ರೋಗ, ಅವರು ಬೇಕಂತಲೇ ಬ್ಯಾರೆದವರಿಗೆ ಹಚ್ಚಾಕುಂತಾರು, ಅವರು ಟೆಸ್ಟು ಮಾಡಿಸಿಕೊಳ್ಳಾಕ ಒಲ್ಲೆ ಅಂತಾರು, ಡಾಕ್ಟರಿಗೆ ಹೊಡ್ಯಾಕ ಕುಂತಾರು ಅನ್ನೋದು ಖರೇ ಆದರ, ಅದಕ್ಕ ಸರಕಾರ ಮಾಹಿತಿ ನೀಡಿ ಜಾಗೃತಿ ಕೊಡೋ ಕೆಲಸ ಮಾಡಬೇಕಾಗಿತ್ತು. ಅದಕ್ಕ ಬೇಕಾದ ಸಾಹಿತ್ಯ ಉರ್ದು- ಬ್ಯಾರಿ- ನವಾಯಿತಿ, ಮುಂತಾದ ಆ ಜನಾಂಗದ ಜನಾ ಮಾತಾಡೋ ಭಾಷೆದಾಗ ತಯಾರು ಮಾಡಬೇಕಾಗಿತ್ತು. ಹಂಗ ಮಾಡೇತೇನು?

ಅವರ ಸಮಾಜದ ರಾಜಕೀಯ- ಧಾರ್ಮಿಕ- ಸಾಂಸ್ಕೃತಿಕ ನಾಯಕರ ಕೂಡಾ ಕುತಗೊಂಡ ಮಾತಾಡಿ ನಿಮ್ಮ ಜನರಿಗೆ ನೀವು ಮನ ಒಲಸರಿ ಅಂತ ಹೇಳಬೇಕಾಗಿತ್ತು. ಹೇಳ್ಯಾರೇನು?

ಇನ್ನ ಮ್ಯಾಲೆ ಎಲ್ ಥ್ರೀದಾಗ ಜಾಸ್ತಿ ಜನರಿಗೆ ರೋಗ ಬಂದರ ಅದರ ಮೂಲ ಗೊತ್ತಿಲ್ಲ ಅಂತ ಅಂದು ಕೈ ತೊಳಕೊಂಡ ಬಿಡೋದು. ಗೈರು ಮುಸ್ಲೀಮರು ಯಾರರ ವಿದೇಶ ಪ್ರವಾಸ, ದೇವಸ್ಥಾನ, ಜಾತ್ರಿ, ಗುರುದ್ವಾರ, ಚರ್ಚು -ಬೂದಿ ಬಾಬಾಗಳ ಕಡೆ ಹೋದವರು ಇದ್ದರ, ಅವರಿಗೆ ಅಲ್ಲಿಗೆ ಹೋಗಿದ್ದಕ್ಕ ರೋಗ ಬಂದಿದ್ದರ ಅದನ್ನ ಈ ಮೂಲದಿಂದ ಬಂದವರು ಅಂತ ಗುರುತು ಹಿಡಯಲಾರದೇ ʻಅಸ್ಪಷ್ಟ ಮೂಲಗಳುʼ, ʻಅನಾಮಿಕ ಮೂಲಗಳುʼ ಅಂತ ಹೇಳಿ ಬಿಡೋದು. ಆಳುವ ಪಕ್ಷದ ಐಟಿ ಸೆಲ್ಲಿನ್ಯಾಗ ಇವರ ಮನಿ ಬಾಜೂಕ ಮಸೀದಿ ಇತ್ತು, ಇವರ ಮನ್ಯಾಗ ಕೆಲಸಾ ಮಾಡೋರು ಮುಸಲ್ಮಾನರು, ಇವರ ಹೊಲದಾಗ ದುಡಿಯೋರು ಮುಸಲ್ಮಾನರು- ಇವರು ಬೆಳಿಯೋ ಕಾಯಿ ಪಲ್ಯಾ ಖರೀದಿ ಮಾಡೋರು ಮುಸಲ್ಮಾನರು. ಅವರಿಂದ ಇವರಿಗೆಲ್ಲಾ ಬಂದೇತಿ ಅಂತ ಒಂದು ನೂರು ವರ್ಷದ ಹಳೇ ಬ್ಲಾಕ್ ಅಂಡ ವೈಟು ವಿಡಿಯೋ ಬಿಟ್ಟು ನಂಬಿಸಿ ಬಿಡೋದು. ಇದು ಎಲ್ ಥ್ರೀ ಲೆಕ್ಕಾಚಾರ.

ಇದನ್ನ ನೆನಪ ಇಟಗೋರಿ.

ಯಾರ ಎನ ತಿಪ್ಪರಲಾಗಾ ಹೊಡದರೂ ಸಹಿತ ಎಲ್ ಫೋರು ತಪ್ಪಸಲಿಕ್ಕೆ ಆಗಂಗಿಲ್ಲ ಅಂತ ವಿಜ್ಞಾನಿಗಳು ಹೇಳಾಕ ಹತ್ಯಾರು. ಆವಾಗ ಸೋಂಕು ಮತ್ತು ಸಾವಿನ ಸಂಖ್ಯೆ ಎಷ್ಟೋ ಪಟ್ಟು ಹೆಚ್ಚು ಆಗತೇತಿ ಅಂತಾರು. ಆಗ ಸತ್ತವರು ಸಾಯಲಿ, ಇಷ್ಟು ಜನಾ ಮುಂಬಯಿದಾಗ ಪ್ರವಾಹ ಬಂದಾಗ ಸಾಯತಾರು ಅಂತ ಸುಮ್ಮನಾಗಿ ಬಿಡೋದು. ಅಥವಾ ಸುಮಾರು ಎರಡು ಲಕ್ಷ ಜನಾ ಸತ್ತರು ಅಂದರ ನಾವು ಒಳ್ಳೇ ರೀತಿಯಿಂದ ರೋಗ ನಿರ್ವಹಣೆ ಮಾಡೇವಿ ಅಂತ ಅರ್ಥ ಅಂತ ಟ್ರಂಪಣ್ಣನವರ ಹೇಳಿದಂಗ ಮಾಡಿ ಕಿರು ನಗೆ ಸೂಸೋದು.

ಕಡೀಕೆ ಎಲ್ ಫೈವು. ಅದರಾಗ ಶೇಕಡಾ 80- 90 ಜನರ ದೇಹದಾಗ ಈ ವೈರಸ್ಸು ಇರತೇತಿ. ಆದರ ಸಾವಿನ ಸಂಖ್ಯೆ ಕಮ್ಮಿ ಇರತೇತಿ. ಒಂದು ಉದಾಹರಣೆ ಕೊಡಬೇಕು ಅಂದರ ಕ್ಯಾನ್ಸರ ರೋಗದಿಂದ ಭಾರತದಾಗ 1,300 ಜನಾ ದಿನಾ ಸಾಯತಾರು. ಕರೋನಾ ಇದನ್ನಂತೂ ಹಿಂದ ಹಾಕಲಿಕ್ಕೆ ಸಾಧ್ಯ ಇಲ್ಲ. ಹಿಂಗಾಗಿ ಸಮರ್ಥ ನಿರ್ವಹಣಾಕಾರರಾಗಿ, ವಿಶ್ವಗುರುವಾಗಿ, ಹೊಸಾ ಷೇರವಾನಿ ಪೈಜಾಮಾ ಧರಿಸಿ ಪೋಸು ಕೊಡೋದು.

ಇವಿಷ್ಟು ನಮ್ಮ ಸರಕಾರದ ಲೆವಲ್ಲಿನ ವಿಚಾರ. ಇಷ್ಟೊತ್ತಿನ ತನಕಾ ಹೇಳಿದ್ದು ರೋಗದ ಲೆವಲ್ಲಿನ ಬಗ್ಗೆ. ಆಳುವ ಪಕ್ಷದ ಚುನಾವಣಾ ತಂತ್ರದ ಹಂತಗಳು ಅಂತ ತಿಳದ-ಗಿಳದೀರಿ ಮತ್ತ ಎಲ್ಲರ ನೀವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...