Homeಮುಖಪುಟಮಾಮಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಟಿ ದೀಪಿಕಾ ಪಡುಕೋಣೆ

ಮಾಮಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಟಿ ದೀಪಿಕಾ ಪಡುಕೋಣೆ

- Advertisement -
- Advertisement -

ಮುಂಬೈ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್ (ಮಾಮಿ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಿರ್ಧರಿಸಿದ್ದಾರೆ. 2019 ರಲ್ಲಿ ಮಾಮಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ನಟಿ, ವೃತ್ತಿಪರ ಬದ್ಧತೆಗಳನ್ನು ಉಲ್ಲೇಖಿಸಿ ಈ ಸ್ಥಾನದಿಂದ ಹೊರ ಬರುತ್ತಿರುವುದಾಗಿ ತಿಳಿಸಿದ್ದಾರೆ.

ಮಾಮಿ ಮಂಡಳಿಯಲ್ಲಿರುವುದು ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದು ಬಹಳ ಉತ್ತಮ ಅನುಭವವಾಗಿದೆ. ಒಬ್ಬ ಕಲಾವಿದೆಯಾಗಿ, ಪ್ರಪಂಚದಾದ್ಯಂತದ ಸಿನೆಮಾ ಮತ್ತು ಪ್ರತಿಭೆಗಳನ್ನು ನನ್ನ ಎರಡನೇ ಮನೆಯಾದ ಮುಂಬೈಗೆ ಕರೆತರುವುದು ಉತ್ತೇಜನಕಾರಿ ವಿಷಯವಾಗಿತ್ತು. ಮಾಮಿಯೊಂದಿಗಿನ ಬಾಂಧವ್ಯವು ಜೀವಿತಾವಧಿಯಲ್ಲಿ ಉಳಿಯುತ್ತದೆ ಎಂದು ಹೇಳಿದ್ದಾರೆ.

ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ನನ್ನ ಪ್ರಸ್ತುತ ಕೆಲಸದ ಒತ್ತಡದಿಂದ, ಮಾಮಿಗೆ ಅಗತ್ಯವಿರುವ ಗಮನ ನೀಡಲು ನನಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ನಾನು ಈ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಬಿರಿಯಾನಿ’ ಚಿತ್ರ ಬಿಡುಗಡೆಗೆ ಥಿಯೇಟರ್ ಮಾಲೀಕರ ಹಿಂದೇಟು: ಮಲಯಾಳಂ ನಿರ್ದೇಶಕನ ಆಕ್ರೋಶ

 ನಮ್ಮ ಒಂಟಿತನವನ್ನು ಕಡಿಮೆ ಮಾಡುವ ಶಕ್ತಿ ಸಿನೆಮಾಕ್ಕೆ ಇದೆ ಎಂದು ನಟಿ ದೀಪಿಕಾ ಹೇಳಿದ್ದಾರೆ. 2019 ರಲ್ಲಿ ಮಾಮಿ ಚಲನಚಿತ್ರೋತ್ಸವದ ಅಧ್ಯಕ್ಷೆಯಾಗಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು.

ದೀಪಿಕಾ ಪ್ರಸ್ತುತ ಹೆಚ್ಚು ಪ್ರಾಜೆಕ್ಟ್‌ಗಳಲ್ಲಿ ಸಕ್ರಿಯರಾಗಿದ್ದಾರೆ.‌ ಶಕುನ್ ಬಾತ್ರಾ ಅವರ ಹೆಸರಿಡದ ಚಿತ್ರದಲ್ಲಿ, ಶಾರುಖ್ ಖಾನ್ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೃತಿಕ್ ರೋಷನ್, ಬಾಹುಬಲಿ ನಟ ಪ್ರಭಾಸ್  ಅವರೊಂದಿಗೆ ಮತ್ತೊಂದು ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ.

ಇದಲ್ಲದೆ ದೀಪಿಕಾ ಪಡುಕೋಣೆ ’ದಿ ಇಂಟರ್ನ್’ ಚಿತ್ರದ ಬಾಲಿವುಡ್ ರಿಮೇಕ್ ಸಹ ಹೊಂದಿದ್ದಾರೆ. ಇದರಲ್ಲಿ ಅಮಿತಾಬ್ ಬಚ್ಚನ್ ಎದುರು ಮತ್ತೊಮ್ಮೆ ನಟಿಸಲಿದ್ದಾರೆ. ಇವರಿಬ್ಬರು ಈ ಹಿಂದೆ ಪಿಕು ಚಿತ್ರದಲ್ಲಿ ಕೆಲಸ ಮಾಡಿದ್ದರು. ಈ ಎಲ್ಲಾ ಕಾರಣಗಳಿಂದ ತಾನು ಮಾಮಿಗೆ ಸಮಯ ನೀಡಲಾಗುತ್ತಿಲ್ಲ ಎಂದು ರಾಜೀನಾಮೆ ನೀಡಿದ್ದಾರೆ.


ಇದನ್ನೂ ಓದಿ: ಬೀದಿಬದಿ ವಾಸಿಸುವ ಬಾಲಕಿಯರಿಗೆ ಸಿಎಎ, ಎನ್‌ಆರ್‌ಸಿ ಪಾಠ ಮಾಡಿದ್ದಕ್ಕೆ ದೇಶದ್ರೋಹ ಪ್ರಕರಣ ದಾಖಲು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಕಾರಾತ್ಮಕ ಪರಿಣಾಮ ಕಡಿಮೆ ಮಾಡಲು ಸಾಮಾಜಿಕ ಮಾಧ್ಯಮ ನಿಯಂತ್ರಣ ಅಗತ್ಯ: ಕೈಲಾಶ್‌ ಸತ್ಯಾರ್ಥಿ

ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಅವರು ಅಪ್ರಾಪ್ತರಿಗೆ ಸಾಮಾಜಿಕ ಮಾಧ್ಯಮದ ನಿಯಂತ್ರಣ ನಿರ್ಧಾರವನ್ನು ಬೆಂಬಲಿಸಿದ್ದಾರೆ. 'ಇದರ ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡಲು, ಸಕಾರಾತ್ಮಕವಾಗಿ ನೈತಿಕ ಮೌಲ್ಯಗಳನ್ನು ಹರಡಲು ಮತ್ತು ಸಮುದಾಯಗಳನ್ನು...

ನ್ಯೂಸ್ ಲಾಂಡ್ರಿ ಸಂಪಾದಕಿ ಬಗ್ಗೆ ತಪ್ಪು ವರದಿ: ದೆಹಲಿ ಹೈಕೋರ್ಟ್ ಅಸಮಾಧಾನ

ನ್ಯೂಸ್ ಲಾಂಡ್ರಿ ವ್ಯವಸ್ಥಾಪಕ ಸಂಪಾದಕಿ ಮನೀಷಾ ಪಾಂಡೆ ಅವರ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ, ಕೋರ್ಟ್‌ನ ಮೌಖಿಕ ಅವಲೋಕನಗಳ ಕುರಿತು ಕೆಲ ಮಾಧ್ಯಮಗಳ ವರದಿ ಮಾಡಿದ ರೀತಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಅಸಮಾಧಾನ...

ಇಬ್ಬರು ಬಂಗಾಳಿ ವಲಸೆ ಕಾರ್ಮಿಕರ ಶವ ಪತ್ತೆ : ಒಬ್ಬರನ್ನು ಹಿಂದುತ್ವ ಗುಂಪು ಥಳಿಸಿ ಕೊಂದಿರುವ ಆರೋಪ

ಪ್ರತ್ಯೇಕ ರಾಜ್ಯಗಳಲ್ಲಿ ಇಬ್ಬರು ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರು ಶವವಾಗಿ ಪತ್ತೆಯಾಗಿದ್ದು, ದೇಶದಲ್ಲಿ ಬಂಗಾಳಿ ಮಾತನಾಡುವ ಕಾರ್ಮಿಕರ ವಿರುದ್ದ ಹೆಚ್ಚುತ್ತಿರುವ ಹಿಂಸಾಚಾರದ ಭಾಗವಾಗಿ ಇಬ್ಬರನ್ನೂ ಕೊಲ್ಲಲಾಗಿದೆ ಎಂದು ಅವರ ಕುಟುಂಬಗಳು ಆರೋಪಿಸಿವೆ. ಆಂಧ್ರ ಪ್ರದೇಶದ...

ಡಿಜಿಟಲ್ ಅರೆಸ್ಟ್‌ನಲ್ಲಿ ಬರೋಬ್ಬರಿ 23 ಕೋಟಿ ರೂ. ಕಳೆದುಕೊಂಡ ವ್ಯಕ್ತಿ : ಹಣ ಮರುಪಾವತಿ, ವಂಚನೆ ತಡೆಗೆ ಮಾರ್ಗಸೂಚಿ ಕೋರಿ ಸುಪ್ರೀಂ ಮೊರೆ

ಸೈಬರ್ ವಂಚನೆಯಾದ ಡಿಜಿಟಲ್ ಅರೆಸ್ಟ್‌ನಲ್ಲಿ ಬರೋಬ್ಬರಿ 23 ಕೋಟಿ ರೂಪಾಯಿ (22.92 ಕೋಟಿ) ಕಳೆದುಕೊಂಡ 82 ವರ್ಷದ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್...

ಒಡಿಶಾ| ಗುಂಪು ಹಲ್ಲೆಯ ನಂತರ ಪಾದ್ರಿ ಕುಟುಂಬ ವಾಸವಿದ್ದ ಬಾಡಿಗೆ ಮನೆ ಖಾಲಿ ಮಾಡುವಂತೆ ಒತ್ತಡ

ಈ ತಿಂಗಳ ಆರಂಭದಲ್ಲಿ ಗುಂಪೊಂದು ಹಲ್ಲೆ ನಡೆಸಿ ಸಾರ್ವಜನಿಕವಾಗಿ ಅವಮಾನಿಸಿತ್ತು ಎನ್ನಲಾದ ಒಡಿಶಾ ಪಾದ್ರಿ ಕುಟುಂಬ ಎಂಟು ವರ್ಷಗಳ ಕಾಲ ವಾಸಿಸುತ್ತಿದ್ದ ಮನೆಯಿಂದ ಖಾಲಿ ಮಾಡುವಂತೆ ಒತ್ತಾಯಿಸಲಾಗಿದೆ. ಇದರಿಂದಾಗಿ ಅವರ ಕುಟುಂಬ ಭಯಭೀತರಾಗಿ...

ಆಧಾರ್ ಕಾರ್ಡ್‌ ಇಲ್ಲದೆ ದಾಖಲಿಸಿಕೊಳ್ಳದ ವೈದ್ಯರು : ಹೆರಿಗೆಗೆ ಆಸ್ಪತ್ರೆ ಸಿಗದೆ ಅಲೆಮಾರಿ ಮಹಿಳೆ ಪರದಾಟ

ಆಧಾರ್ ಕಾರ್ಡ್‌ ಇಲ್ಲದ ಕಾರಣ ವೈದ್ಯರು ದಾಖಲಿಸಿಕೊಳ್ಳಲು ನಿರಾಕರಿಸಿದ್ದು, ಪರಿಣಾಮ ಹೆರಿಗೆಗೆ ಆಸ್ಪತ್ರೆ ಸಿಗದೆ ಅಲೆಮಾರಿ ಸಮುದಾಯದ ಮಹಿಳೆಯೊಬ್ಬರು ಪರದಾಡುತ್ತಿರುವ ಬಗ್ಗೆ ತೆಲಂಗಾಣದ ಕರೀಂನಗರ ಜಿಲ್ಲೆಯಿಂದ ವರದಿಯಾಗಿದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ...

ಲ್ಯಾಂಡ್‌ಲಾರ್ಡ್: ಜಮೀನ್ದಾರಿ ವ್ಯವಸ್ಥೆ, ಜಾತಿ ಪ್ರಶ್ನೆ ಮತ್ತು ಸಂವಿಧಾನ – ಕನ್ನಡ ಚಿತ್ರರಂಗದ ಒಂದು ಮಹತ್ವದ ತಿರುವು

ಕನ್ನಡ ಮುಖ್ಯವಾಹಿನಿ ಸಿನೆಮಾ ಅಪರೂಪಕ್ಕೊಮ್ಮೆ ಮಾತ್ರ ಸಮಾಜದ ಮೂಲಭೂತ ಪ್ರಶ್ನೆಗಳತ್ತ ನೇರವಾಗಿ ಮುಖ ಮಾಡುತ್ತದೆ. ಜಾತಿ, ಭೂಮಿ, ಅಧಿಕಾರ ಎಲ್ಲವನ್ನು ಒಟ್ಟಿಗೆ ಹಿಡಿದು ಪ್ರಶ್ನಿಸುವ ಚಿತ್ರಗಳು ಇನ್ನೂ ವಿರಳ. ನಿರ್ದೇಶಕ–ಕಥಾಲೇಖಕ ಜಡೆಶ್ ಕೆ....

ಕುಡುಪು ಗುಂಪು ಹತ್ಯೆ : ಮತ್ತೊಬ್ಬ ಆರೋಪಿಗೆ ಜಾಮೀನು

ಮಂಗಳೂರು ಹೊರವಲಯದ ಕುಡುಪು ಬಳಿ 2025ರ ಏಪ್ರಿಲ್ 27ರಂದು ನಡೆದ ಕೇರಳ ಮೂಲದ ಮುಹಮ್ಮದ್ ಅಶ್ರಫ್ ಅವರ ಗುಂಪು ಹತ್ಯೆ ಪ್ರಕರಣದ ಆರೋಪಿ ನಟೇಶ್ ಕುಮಾರ್‌ಗೆ ಹೈಕೋರ್ಟ್ ಶುಕ್ರವಾರ (ಜ.23) ಜಾಮೀನು ಮಂಜೂರು...

ಬಂಗಾಳದಲ್ಲಿ ಎಸ್‌ಐಆರ್ ಭಯದಿಂದ 110 ಮಂದಿ ಆತ್ಮಹತ್ಯೆ : ಸಿಎಂ ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಭಯದಿಂದ ಪ್ರತಿದಿನ ಪಶ್ಚಿಮ ಬಂಗಾಳದಲ್ಲಿ ಮೂರ್ನಾಲ್ಕು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ (ಜ.23) ಹೇಳಿದ್ದಾರೆ. ಚುನಾವಣಾ ಆಯೋಗ ಮತ್ತು ಕೇಂದ್ರ...

ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ಬೆದರಿಕೆ: ಕಾಂಗ್ರೆಸ್ ನಿಂದ ರಾಜೀವ್ ಗೌಡ ಅಮಾನತು

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅಭಿನಯದ ಕಲ್ಟ್ ಚಿತ್ರದ ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಕರೆ ಮಾಡಿ ಅಸಭ್ಯವಾಗಿ ನಿಂದಿಸಿ,...