ಕುರ್‌‌ಆನ್‌‌‌‌ ಶ್ಲೋಕಗಳನ್ನು ತೆಗೆದುಹಾಕುವಂತೆ ಸಲ್ಲಿಸಿದ್ದ ಅರ್ಜಿಯನ್ನು 'ಕ್ಷುಲ್ಲಕ' ಎಂದ ಸುಪ್ರೀಂ| Naanu gauri
PC: teachmiddleeastmag

ಪವಿತ್ರ ಕುರ್‌ಆನ್‌ನಿಂದ 26 ಶ್ಲೋಕಗಳನ್ನು ತೆಗೆದುಹಾಕುವಂತೆ ಕೋರಿ ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ತಿರಸ್ಕರಿಸಿದೆ. ಅರ್ಜಿಯನ್ನು ಸಂಪೂರ್ಣ ಕ್ಷುಲ್ಲಕ ಎಂದು ಹೇಳಿರುವ ನ್ಯಾಯಾಲಯವು ಅರ್ಜಿದಾರರಿಗೆ 50000 ರೂ. ದಂಡ ಕಟ್ಟುವಂತೆ ಆದೇಶಿಸಿದೆ.

ಖುರಾನ್‌ನ 26 ಶ್ಲೋಕಗಳು ಭಯೋತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿದ್ದ ರಿಜ್ವಿ, ಅದನ್ನು ತೆಗೆದು ಹಾಕುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಆರ್. ಎಫ್. ನಾರಿಮನ್, ಬಿ. ಆರ್. ಗವಾಯಿ ಮತ್ತು ಹೃಷಿಕೇಶ ರಾಯ್ ಅವರ ನ್ಯಾಯಪೀಠವು ಅರ್ಜಿಯನ್ನು ತಿರಸ್ಕರಿಸಿತು.

ಇದನ್ನೂ ಓದಿ: ದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!

ಇಸ್ಲಾಂ ಧರ್ಮವು ಸಮಾನತೆ, ಸಮಾನತೆ, ಕ್ಷಮೆ ಮತ್ತು ಸಹಿಷ್ಣುತೆಯ ಪರಿಕಲ್ಪನೆಗಳನ್ನು ಆಧರಿಸಿದೆ ಎಂದು ರಿಜ್ವಿ ತನ್ನ ಮನವಿಯಲ್ಲಿ ಹೇಳಿದ್ದಾರೆ. ಆದರೆ ಪವಿತ್ರ ಕುರಾನ್‌ನಲ್ಲಿ ಇರುವ ಶ್ಲೋಕಗಳ ವ್ಯಾಖ್ಯಾನಗಳಿಂದಾಗಿ, ಧರ್ಮವು ಮೂಲ ಸಿದ್ಧಾಂತಗಳಿಂದ ದೂರ ಸರಿಯುತ್ತಿದೆ ಎಂದು ಆರೋಪಿಸಿದ್ದರು.

ರಿಜ್ವಿ ಅವರ ಮನವಿಯ ವಿರುದ್ದ ಮುಸ್ಲಿಂ ಸಂಘಟನೆಗಳು ಸೇರಿದಂತೆ, ಮುಸ್ಲಿಂ ಧರ್ಮಗುರುಗಳು ಹಲವಾರು ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲದೆ, ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ನೋಯಿಸಿದ ಆರೋಪದ ಮೇಲೆ ರಿಜ್ವಿ ವಿರುದ್ಧ ಬರೇಲಿಯಲ್ಲಿ ಕಳೆದ ತಿಂಗಳು ಎಫ್ಐಆರ್ ದಾಖಲಿಸಲಾಗಿತ್ತು.

ಅಂಜುಮಾನ್ ಖುದ್ದಮ್-ಎ-ರಸೂಲ್ ಕಾರ್ಯದರ್ಶಿ ಶಾನ್ ಅಹ್ಮದ್ ಮತ್ತು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಎಂಬ ಸಂಘಟನೆಯ ದೂರುಗಳ ಹಿನ್ನೆಲೆಯಲ್ಲಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಈ ಎಫ್ಐಆರ್ ದಾಖಲಿಸಲಾಗಿತ್ತು.

ಇದನ್ನೂ ಓದಿ: ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಬಲಿಷ್ಠ, ವೈವಿಧ್ಯ ಭಾರತವನ್ನು ಪ್ರತಿನಿಧಿಸುತ್ತದೆ: ಪ್ರಧಾನಿ ಮೋದಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

1 COMMENT

  1. ಇದು ಸ‌0ಪೂರ್ಣ‌ ಆಯಾ ಧಾರ್ಮಿಕ‌ ಕ‌ಟ್ಟ‌ಳೆಗ‌ಳಿಗೆ ಸ‌0ಭ‌0ಸಿದ‌ ವಿಚಾರ‌ವಾಗಿದ್ದು ಇದು ವ್ಯೆಕ್ತಿಯ‌ ಮೂಲ‌ಭೂತ‌ ಹ‌ಕ್ಕಿಗೆ ಸ‌0ಭ‌0ಧಿಸಿದ‌ ವಿಚಾರ‌ವ‌ಲ್ಲ‌. ಹಾಗಾಗಿ ಸು. ಕೋ. ಇದ‌ನ್ನು (wp) admit ಮಾಡ‌ಬಾರ‌ದಿತ್ತು.

LEAVE A REPLY

Please enter your comment!
Please enter your name here