ನೆಟ್ಫ್ಲಿಕ್ಸ್ನ ’ಡೆಲ್ಲಿ ಕ್ರೈಂ’ ಭಾರತೀಯ ವೆಬ್ ಸರಣಿ 48 ನೇ ಇಂಟರ್ನ್ಯಾಷನಲ್ ಎಮ್ಮಿ ಅವಾರ್ಡ್-2020ನ ಬೆಸ್ಟ್ ಡ್ರಾಮಾ ಸೀರಿಸ್ ಪ್ರಶಸ್ತಿ ಮುಡಿಗೆರಿಸಿಕೊಂಡಿದೆ. ಟಿವಿ ಶೋಗಳಿಗೆ ನೀಡಲಾಗುವ ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಇದಾಗಿದೆ.
ಡೆಲ್ಲಿ ಕ್ರೈಂ ವೆಬ್ ಸೀರಿಸ್, 2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಆಧರಿಸಿದ ಕಥೆಯನ್ನು ಹೊಂದಿದೆ. ಶೆಫಾಲಿ ಶಾ ಪೊಲೀಸ್ ಉಪ ಆಯುಕ್ತರ ಪಾತ್ರವನ್ನು ನಿರ್ವಹಿಸಿದ್ದು, ಅಪರಾಧಿಗಳನ್ನು ಹುಡುಕುವ ರೋಚಕ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಡೆಲ್ಲಿ ಕ್ರೈಂ ನಿರ್ದೇಶಕ ರಿಚೀ ಮೆಹ್ತಾ ಈ ಪ್ರಶಸ್ತಿಯನ್ನು ’ಮಹಿಳೆಯರಿಗೆ’ ಅರ್ಪಿಸಿದ್ದಾರೆ. “ನಾನು ಈ ಪ್ರಶಸ್ತಿಯನ್ನು ಎಲ್ಲಾ ಮಹಿಳೆಯರಿಗೆ ಅರ್ಪಿಸುತ್ತೇನೆ. ಅನೇಕ ಮಹಿಳೆಯರು ಪುರುಷರು ತಮ್ಮ ಮೇಲೆ ಮಾಡುವ ದೌರ್ಜನ್ಯದ ವಿರುದ್ಧ ನಿಲ್ಲುವುದರ ಜೊತೆಗೆ, ಆ ಸಮಸ್ಯೆಯನ್ನು ಪರಿಹರಿಸುವ ಕಾರ್ಯವನ್ನು ಮಾಡುತ್ತಾರೆ. ಅಂತಿಮವಾಗಿ, ಈ ಪ್ರಶಸ್ತಿ ದಣಿವರಿಯದ ಆ ತಾಯಿ ಮತ್ತು ಅವರ ಮಗಳಿಗೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಮಿತಾಬ್ ಬಚ್ಚನ್ ಅಭಿನಯದ ಚಿತ್ರ ಬಿಡುಗಡೆಗೆ ನಿಷೇಧ; ತೆರವು ಅರ್ಜಿ ವಜಾಗೊಳಿಸಿದ ಸುಪ್ರೀಂ!
The International Emmy for Drama Series goes to “Delhi Crime” produced by @GoldenKaravan / @skglobalent / @NetflixIndia, #India!#iemmys #iemmyWIN pic.twitter.com/kA5pHCuTC4
— International Emmy Awards (@iemmys) November 23, 2020
ಅಂತರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಪಡೆದ ಸಂಭ್ರಮವನ್ನು ಅನೇಕ ನಟ, ನಟಿಯರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ವೆಬ್ ಸೀರಿಸ್‌ನಲ್ಲಿ ಪೋಲೀಸ್ ಪಾತ್ರವನ್ನು ನಿರ್ವಹಿಸಿದ ಶೆಫಾಲಿ ಷಾ, ಪ್ರಶಸ್ತಿ ಕಾರ್ಯಕ್ರಮದ ವಿಡಿಯೋ ಹಂಚಿಕೊಂಡಿದ್ದು, ‘ಓ ಮೈ ಗಾಡ್’ ಎಂದು ಕೋಟ್ ಮಾಡಿದ್ದಾರೆ.
View this post on Instagram
ಶೆಫಾಲಿ ಷಾ ಪೋಸ್ಟ್‌ಗೆ ನಟ ಹೃತಿಕ್ ರೋಷನ್ ವಾವ್, ವಾವ್, ವಾವ್ ಎಂದು ಕಾಮೆಂಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂದಿ ಹೇರಿಕೆಗೆ ವಿಭಿನ್ನ ವಿರೋಧ: ಪವನ್ ಕುಮಾರ್ ನಿರ್ದೇಶನದ ’ಏನ್ ಮಾಡೋದು..?’ ಕಿರುಚಿತ್ರ ವೈರಲ್!
ಡೆಲ್ಲಿ ಕ್ರೈಂಗೆ ಎಮ್ಮಿ ಪ್ರಶಸ್ತಿ ಒಲಿದುಬಂದಿರುವುದಕ್ಕೆ ಬಾಲಿವುಡ್ನ ಅನೇಕ ತಾರೆಯರು ಹರ್ಷ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
Woooohoooo! Congratulations @SanyukthaC on your #iemmyWIN for #DelhiCrime ????????????
???? https://t.co/pg8G1e2YBm— Swara Bhasker (@ReallySwara) November 23, 2020
ಭಾರತವು ಅತ್ಯುತ್ತಮ ನಟ ವಿಭಾಗದಲ್ಲಿ ಮೇಡ್ ಇನ್ ಹೆವನ್ ನಟ ಅರ್ಜುನ್ ಮಾಥುರ್ ಮತ್ತು ಅತ್ಯುತ್ತಮ ಕಾಮಿಡಿ ಸೀರೀಸ್ ವಿಭಾಗದಲ್ಲಿ ಅಮೇಜಾನ್ ಪ್ರೈಂನ ಫೋರ್ ಮೋರ್ ಶಾಟ್ಸ್ ಪ್ಲೀಸ್ ವೆಬ್ ಸೀರಿಸ್ ನಾಮನಿರ್ದೇಶನ ಮಾಡಲಾಗಿತ್ತು.
Amazing! Amazing! Amazing!
Congratulations to the team of #DelhiCrime for their much deserved win at the #Emmys2020, can't wait to see season 2!@ShefaliShah_ @AdilHussain @RichieMehta @RasikaDugal @rajeshtailang pic.twitter.com/7NnOK46ZnD
— Aditi Rao Hydari (@aditiraohydari) November 24, 2020
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ನ್ಯೂಯಾರ್ಕ್ ನಗರದ ಖಾಲಿ ರಂಗಮಂದಿರದಿಂದ ನಟ ರಿಚರ್ಡ್ ಕೈಂಡ್ ಈ ಅಂತರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಕಾರ್ಯಕ್ರಮ ನಡೆಸಿಕೊಟ್ಟರು.


