2019 ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಿದ್ದ ಬಿಎಸ್‌ಎಫ್ ಸೈನಿಕ ತೇಜ್ ಬಹದ್ದೂರ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ತೇಜ್ ಬಹದ್ದೂರ್ ಸುಪ್ರೀಂ ಕೋರ್ಟ್ ಮೋರೆ ಹೋಗಿದ್ದರು. ಅಲ್ಲಿಯೂ ಇವರ ಮನವಿಯ ಅರ್ಜಿಯನ್ನು ತಿರಸ್ಕರಿಸಿಲಾಗಿದೆ.
ಈ ಪ್ರಕರಣದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿದ್ದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಸ್.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿದೆ.
ಇದನ್ನೂ ಓದಿ: ಮೋದಿ ಅವನತಿ, ಕೆಸಿಆರ್ ಕಸರತ್ತು, ಅಮೀನ್ ಮಟ್ಟು ಕುರಿತು, ಮೇ ಸಾಹಿತ್ಯ ಮೇಳ, ತೇಜ್ ಬಹದ್ದೂರ್ ಇತ್ಯಾದಿ
ಸಮಾಜವಾದಿ ಪಕ್ಷದ (ಎಸ್‌ಪಿ) ಅಭ್ಯರ್ಥಿ ತೇಜ್ ಬಹದ್ದೂರ್ ಅವರ ನಾಮಪತ್ರಗಳನ್ನು ಕಳೆದ ವರ್ಷ ಮೇ 1 ರಂದು ಚುನಾವಣಾ ಅಧಿಕಾರಿಗಳು ತಿರಸ್ಕರಿಸಿದ್ದರು.
ಇದನ್ನೂ ಓದಿ: ತೇಜ್ ಬಹದ್ದೂರ್ ಯಾರು? ಹಿನ್ನೆಲೆಯೇನು? ಪೂರ್ಣ ವಿವರ ತಿಳಿಯಿರಿ
ಸೇನೆಯಲ್ಲಿ ಆಹಾರ ಸರಿಯಾಗಿ ಒದಗಿಸುತ್ತಿಲ್ಲ ಎಂಬ ಕಾರಣಕ್ಕೆ ವೀಡಿಯೋ ಮಾಡಿದ್ದ ತೇಜ್ ಬಹದ್ದೂರ್ ಅವರನ್ನು 2017 ರಲ್ಲಿ ಸೇನೆಯಿಂದ ವಜಾಗೊಳಿಸಲಾಗಿತ್ತು. ನಂತರ ಅವರು ನರೇಂದ್ರ ಮೋದಿಯವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಆದರೆ ಚುನಾವಣಾ ಅಧಿಕಾರಿಗಳು ಇವರ ನಾಮಪತ್ರವನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲಿಯೂ ನಾಮಪತ್ರ ತಿರಸ್ಕಾರದ ನಿರ್ಧಾರವನ್ನು ಎತ್ತಿಹಿಡಿಯಲಾಗಿತ್ತು.
ಇದನ್ನೂ ಓದಿ: Watch : ನಾಮಪತ್ರ ತಿರಸ್ಕೃತಗೊಂಡ ನಂತರ ಮಾಜಿ ಯೋಧ ತೇಜ್ ಬಹದ್ದೂರ್ ಆಕ್ರೋಶದ ನುಡಿ…
ಅರ್ಜಿದಾರರು ಈ ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿ ಮತ್ತು ನಂತರ ಎಸ್‌ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು ಎಂದು ಬಹದ್ದೂರ್ ಪರ ವಕೀಲರು ಉನ್ನತ ನ್ಯಾಯಾಲಯದ ಮುಂದೆ ವಾದಿಸಿದ್ದರು.
ಇದನ್ನೂ ಓದಿ: ಮೋದಿ ವಿರುದ್ಧ ಸ್ಪರ್ಧಿಸಲು ತೇಜ್ ಬಹದ್ದೂರ್ ಯಾದವ್‍ಗೆ ಟಿಕೆಟ್ ನೀಡಿದ ಸಮಾಜವಾದಿ ಪಕ್ಷ
ಹೈಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿ ವಕೀಲರು, “ಬಹದ್ದೂರ್ ಅವರ ನಾಮಪತ್ರವನ್ನು ಬಾಹ್ಯ ಕಾರಣಗಳಿಗಾಗಿ ತಿರಸ್ಕರಿಸಲಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಗ್ಯಾಸಿಂಗ್ ಸರಿ, ತೇಜ್‍ಬಹಾದ್ದೂರ್ ತಪ್ಪು: ಹುಟ್ಟು ಹಾಕಿರುವ ಪ್ರಶ್ನೆಗಳು?
ನಾಮಪತ್ರವನ್ನು ತಿರಸ್ಕರಿಸಿದ ಚುನಾವಣಾ ಅಧಿಕಾರಿಗಳು, “ತೇಜ್ ಬಹದ್ದೂರ್ ಅವರನ್ನು ಭ್ರಷ್ಟಾಚಾರ/ರಾಜ್ಯ ದ್ರೋಹ ಎಸಗಿದ್ದಕ್ಕಾಗಿ ವಜಾಗೊಳಿಸಿಲ್ಲ ಎಂದು ನೀಡುವ ಪ್ರಮಾಣ ಪತ್ರವನ್ನು ನಾಮಪತ್ರದೊಟ್ಟಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರಲಿಲ್ಲ” ಎಂದು ಹೇಳಿದ್ದರು.
ಇದನ್ನೂ ಓದಿ: ಒವೈಸಿಯನ್ನು ’ಜಿನ್ನಾ ಅವತಾರ’ ಎಂದು ವಿವಾದವೆಬ್ಬಿಸಿದ ಸಂಸದ ತೇಜಸ್ವಿ ಸೂರ್ಯ!