Homeಮುಖಪುಟಪ್ರಗ್ಯಾಸಿಂಗ್ ಸರಿ, ತೇಜ್‍ಬಹಾದ್ದೂರ್ ತಪ್ಪು: ಹುಟ್ಟು ಹಾಕಿರುವ ಪ್ರಶ್ನೆಗಳು?

ಪ್ರಗ್ಯಾಸಿಂಗ್ ಸರಿ, ತೇಜ್‍ಬಹಾದ್ದೂರ್ ತಪ್ಪು: ಹುಟ್ಟು ಹಾಕಿರುವ ಪ್ರಶ್ನೆಗಳು?

- Advertisement -
ಭಯೋತ್ಪಾದನೆ ಆರೋಪಿ ಪ್ರಗ್ಯಾಸಿಂಗ್ ನಾಮಪತ್ರ ಸಿಂಧು; ಸೇನೆಯಲ್ಲಿನ ಭ್ರಷ್ಟಾಚಾರವನ್ನು ವಿರೋಧಿಸಿದ ಯೋಧ ತೇಜ್ ಬಹಾದ್ದೂರ್ ಯಾದವ್ ನಾಮಪತ್ರ ಅಸಿಂಧು
- Advertisement -

2008 ರ ಮಾಲೆಗಾಂವ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಆರೋಪಿ ಆಗಿರುವ ಪ್ರಜ್ಞಾಸಿಂಗ್ ಠಾಕುರ್ ಯುಎಪಿಎ ಅಡಿಯಲ್ಲಿಯೂ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕೋಮುದ್ವೇಶವನ್ನು ಹರಡುವಲ್ಲಿ ಕುಖ್ಯಾತಿಯನ್ನು ಹೊಂದಿರುವ ಈಕೆ, “ನಾನೂ ಸಹ ಬಾಬ್ರಿ ಮಸೀದಿ ಧ್ವಂಸದಲ್ಲಿ ಪಾಲ್ಗೊಂಡಿದ್ದೆ” ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಾಳೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದೇನೆಂದು ಹೇಳಿಕೊಂಡು ಜಾಮೀನು ಪಡೆದಿದ್ದಾರೆ. ಅಲ್ಲದೆ ಆಕೆಯ ಮೇಲೆ ಪೊಲೀಸರಿಂದ ದೌರ್ಜನ್ಯ ನಡೆದಿದೆ ಎನ್ನುವ ಆರೋಪವನ್ನು ಸುಪ್ರೀಮ್ ಕೋರ್ಟ್ 2011ರಲ್ಲಿ ತಿರಸ್ಕರಿಸಿತ್ತು. ಸದ್ಯ ಜಾಮೀನಿನ ಮೇಲೆ ಹೊರಗಿರುವ ಪ್ರಜ್ಞಾ ಭೂಪಾಲ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿ ಆಗಿರುವ ಆರೋಪ ಹೊಂದಿರುವ ಈಕೆಗೆ ಬಿಜೆಪಿ ಪಕ್ಷ ಟಿಕೆಟ್ ನೀಡಿದ್ದಾರೆ. ಅಲ್ಲದೆ ಚುನಾವಣಾ ಆಯೋಗವೂ ಸ್ಪರ್ಧೆಯನ್ನು ಸಿಂಧು ಮಾಡಿದೆ!

2016ರಲ್ಲಿ ದೇಶದ ಸೈನಿಕರಿಗೆ ಕಳಪೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದೆ ಎಂದು ಆರೋಪಿಸಿ ತನಗೆ ನೀಡಿದ ಆಹಾರದ ಜೊತೆಗೆ ವಿಡಿಯೋ ಚಿತ್ರೀಕರಣ ಮಾಡಿ ದೇಶದಾದ್ಯಂತ ವೈರಲ್ ಆದ ವಿಡಿಯೋವನ್ನು ಮಾಡಿದ್ದು ಭಾರತದ ಬಿಎಸ್‍ಎಫ್ ಸೈನಿಕ ತೇಜ್ ಬಹದ್ದೂರ್ ಯಾದವ್ ಅವರು. ಪ್ರಧಾನಿ ಮೋದಿಯವರ ಪರಮ ಅಭಿಮಾನಿಯಾಗಿದ್ದ ಇವರು, ಈ ಮೂಲಕ ಸೇನೆಯಲ್ಲಿ ಆಹಾರ ಪೂರೈಕೆಯಲ್ಲಿದ್ದ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬಹುದೆಂದು ತಿಳಿದಿದ್ದರು. ಇದಾದ ನಂತರದಲ್ಲಿ ಬಹದ್ದೂರ್ ಅವರನ್ನು ಬಿಎಸ್‍ಎಫ್ ಕೆಲಸದಿಂದ ವಜಾ ಮಾಡಲಾಯಿತು. 2019ರ ಲೋಕಸಭಾ ಚುನಾವಣೆಯ ಹೊತ್ತಿಗೆ ಸ್ವತಃ ಮೋದಿಯ ಅಭಿಮಾನಿ ಆಗಿದ್ದ ಯೋಧ ತೇಜ್ ಬಹದ್ದೂರ್ ಅವರು ಮೋದಿಯ ವಿರುದ್ಧವೇ ವಾರಣಾಸಿಯಲ್ಲಿ ಚುನಾವಣೆ ಕಣಕ್ಕಿಳಿದು ಸ್ಪರ್ಧಿಸಲು ನಿರ್ಧರಿಸಿದರು. ಆದರೆ ಮೇ 1 ರಂದು ಚುನಾವಣಾ ಆಯೋಗವು ತೇಜ್ ಬಹದ್ದೂರ್ ಅವರ ಸ್ಫರ್ಧೆಯನ್ನು ಅಸಿಂಧುಗೊಳಿಸಿ ಸ್ಫರ್ಧೆಯನ್ನು ನಿರಾಕರಿಸಿದೆ. ಬಹದ್ದೂರ್ ಅವರ ಪ್ರಕಾರ ಆಯೋಗವು ಮೊದಮೊದಲಿಗೆ ಯಾವುದೇ ತಕರಾರು ಹೇಳದೆ ಇದೀಗ ಕೊನೆ ಕ್ಷಣದಲ್ಲಿ ಸ್ಫರ್ಧೆ ಅಸಾಧ್ಯವೆಂಬ ನೋಟೀಸ್ ನೀಡಲಾಗಿದೆ. ಬಹದ್ದೂರ್ ಅವರು ಯಾವುದೇ ಭ್ರಷ್ಟಾಚಾರ ಅಥವಾ ವಿಶ್ವಾಸದ್ರೋಹ ಮಾಡಿಲ್ಲವೆಂಬ ಎನ್.ಓ.ಸಿ ಪತ್ರವನ್ನು ನೀಡಲು ವಿಫಲವಾಗಿದ್ದಾರೆ ಎನ್ನುವ ಕಾರಣ ನೀಡಿ ಆಯೋಗವು ಸ್ಫರ್ಧೆಯನ್ನು ಅಸಿಂಧುಗೊಳಸಿದ್ದಾರೆ. ವಾಸ್ತವದಲ್ಲಿ ದೇಶದ್ರೋಹ ಅಥವಾ ಭ್ರಷ್ಟಾಚಾರದಲ್ಲಿ ತೊಡಗಿರುವ ಸೈನಿಕರು ಮಾತ್ರ ವಜಾಗೊಂಡ 5 ವರ್ಷಗಳ ತನಕ ಸ್ಪರ್ಧಿಸಬಾರದು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿನ ಬಹಳ ಮುಖ್ಯವಾದ ಈ ಎರಡು ಪ್ರಕರಣಗಳು ದೇಶದ ಚುನಾವಣಾ ಆಯೋಗ ಹಾಗೂ ಆಡಳಿತಾರೂಢ ಪಕ್ಷದ ಮೇಲೆ ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ. ಕರ್ನಾಟಕದ ಯು.ಪಿ. ಶಿವಾನಂದ್ ಎನ್ನುವ ವ್ಯಕ್ತಿ ರಾಹುಲ್ ಗಾಂಧಿ ಹಾಗೂ ಮೋದಿ ಇಬ್ಬರ ವಿರುದ್ಧವೂ ಸ್ಫರ್ಧಿಸುತ್ತಿದ್ದು ರಾಹುಲ್ ಗಾಂಧಿ ಕ್ಷೇತ್ರವಾದ ಆಮೇಥಿಯಲ್ಲಿ ಶಿವಾನಂದ್ ಅವರ ನಾಮಪತ್ರ ಅಂಗೀಕಾರವಾಗಿದ್ದು ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಅಸಿಂಧುವಾಗಿರುವುದು ಗೊಂದಲಕ್ಕೆ ಎಡೆಮಾಡಿದೆ. ಈಗಿನ ಆಯೋಗದ ಮುಖ್ಯಸ್ಥರಾಗಿರುವ ಸುನೀಲ್ ಅರೋರ ಅವರು ಈ ಹಿಂದೆ ಬಿಜೆಪಿ ಪಕ್ಷದ ಪರವಾದ ತೀರ್ಮಾನಗಳನ್ನು ತೆಗೆದುಕೊಂಡ ಆರೋಪಕ್ಕೆ ಗುರಿಯಾಗಿ ತನಿಖೆಗೂ ಗುರಿಯಾಗಿದ್ದರು. ನೀತಿ ಸಂಹಿತೆ ಜಾರಿಯಾದ ನಂತರದಿಂದ ಹಲವಾರು ಘಟನೆಗಳನ್ನು ಗಮನಿಸಿದರೆ ಬಿಜೆಪಿಯ ಪರವಾದ ಧೋರಣೆಗಳನ್ನು ಚುನಾವಣ ಆಯೋಗವು ತೋರುತ್ತಿದೆ ಎನ್ನುವ ಅಸಮಾಧಾನ ಹಲವು ವಲಯಗಳಲ್ಲಿ ಮನೆಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...