ಇಂಟರ್​​ನ್ಯಾಷನಲ್ ಎಮ್ಮಿ ಪ್ರಶಸ್ತಿ ಮುಡಿಗೇರಿಸಿಕೊಂಡ ’ಡೆಲ್ಲಿ ಕ್ರೈಂ’ ವೆಬ್ ಸರಣಿ!

ನೆಟ್​​ಫ್ಲಿಕ್ಸ್​ನ ’ಡೆಲ್ಲಿ ಕ್ರೈಂ’ ಭಾರತೀಯ ವೆಬ್ ಸರಣಿ 48 ನೇ ಇಂಟರ್​​ನ್ಯಾಷನಲ್ ಎಮ್ಮಿ ಅವಾರ್ಡ್​-2020ನ ಬೆಸ್ಟ್ ಡ್ರಾಮಾ ಸೀರಿಸ್ ಪ್ರಶಸ್ತಿ ಮುಡಿಗೆರಿಸಿಕೊಂಡಿದೆ. ಟಿವಿ ಶೋಗಳಿಗೆ ನೀಡಲಾಗುವ ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಇದಾಗಿದೆ.

ಡೆಲ್ಲಿ ಕ್ರೈಂ ವೆಬ್​ ಸೀರಿಸ್​, 2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಆಧರಿಸಿದ ಕಥೆಯನ್ನು ಹೊಂದಿದೆ. ಶೆಫಾಲಿ ಶಾ ಪೊಲೀಸ್ ಉಪ ಆಯುಕ್ತರ ಪಾತ್ರವನ್ನು ನಿರ್ವಹಿಸಿದ್ದು, ಅಪರಾಧಿಗಳನ್ನು ಹುಡುಕುವ ರೋಚಕ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಡೆಲ್ಲಿ ಕ್ರೈಂ ನಿರ್ದೇಶಕ ರಿಚೀ ಮೆಹ್ತಾ ಈ ಪ್ರಶಸ್ತಿಯನ್ನು ’ಮಹಿಳೆಯರಿಗೆ’ ಅರ್ಪಿಸಿದ್ದಾರೆ. “ನಾನು ಈ ಪ್ರಶಸ್ತಿಯನ್ನು ಎಲ್ಲಾ ಮಹಿಳೆಯರಿಗೆ ಅರ್ಪಿಸುತ್ತೇನೆ. ಅನೇಕ ಮಹಿಳೆಯರು ಪುರುಷರು ತಮ್ಮ ಮೇಲೆ ಮಾಡುವ ದೌರ್ಜನ್ಯದ ವಿರುದ್ಧ ನಿಲ್ಲುವುದರ ಜೊತೆಗೆ, ಆ ಸಮಸ್ಯೆಯನ್ನು ಪರಿಹರಿಸುವ ಕಾರ್ಯವನ್ನು ಮಾಡುತ್ತಾರೆ. ಅಂತಿಮವಾಗಿ, ಈ ಪ್ರಶಸ್ತಿ ದಣಿವರಿಯದ ಆ ತಾಯಿ ಮತ್ತು ಅವರ ಮಗಳಿಗೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಮಿತಾಬ್ ಬಚ್ಚನ್ ಅಭಿನಯದ ಚಿತ್ರ ಬಿಡುಗಡೆಗೆ ನಿಷೇಧ; ತೆರವು ಅರ್ಜಿ ವಜಾಗೊಳಿಸಿದ ಸುಪ್ರೀಂ!

 

ಅಂತರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಪಡೆದ ಸಂಭ್ರಮವನ್ನು ಅನೇಕ ನಟ, ನಟಿಯರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ವೆಬ್ ಸೀರಿಸ್‌ನಲ್ಲಿ ಪೋಲೀಸ್ ಪಾತ್ರವನ್ನು ನಿರ್ವಹಿಸಿದ ಶೆಫಾಲಿ ಷಾ, ಪ್ರಶಸ್ತಿ ಕಾರ್ಯಕ್ರಮದ ವಿಡಿಯೋ ಹಂಚಿಕೊಂಡಿದ್ದು, ‘ಓ ಮೈ ಗಾಡ್’ ಎಂದು ಕೋಟ್ ಮಾಡಿದ್ದಾರೆ.

 

View this post on Instagram

 

A post shared by Shefali Shah (@shefalishahofficial)

ಶೆಫಾಲಿ ಷಾ ಪೋಸ್ಟ್‌ಗೆ ನಟ ಹೃತಿಕ್ ರೋಷನ್ ವಾವ್, ವಾವ್, ವಾವ್ ಎಂದು ಕಾಮೆಂಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ: ಹಿಂದಿ ಹೇರಿಕೆಗೆ ವಿಭಿನ್ನ ವಿರೋಧ: ಪವನ್ ಕುಮಾರ್ ನಿರ್ದೇಶನದ ’ಏನ್ ಮಾಡೋದು..?’ ಕಿರುಚಿತ್ರ ವೈರಲ್!

ಡೆಲ್ಲಿ ಕ್ರೈಂಗೆ ಎಮ್ಮಿ ಪ್ರಶಸ್ತಿ ಒಲಿದುಬಂದಿರುವುದಕ್ಕೆ ಬಾಲಿವುಡ್​ನ ಅನೇಕ ತಾರೆಯರು ಹರ್ಷ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಭಾರತವು ಅತ್ಯುತ್ತಮ ನಟ ವಿಭಾಗದಲ್ಲಿ ಮೇಡ್ ಇನ್ ಹೆವನ್ ನಟ ಅರ್ಜುನ್ ಮಾಥುರ್ ಮತ್ತು ಅತ್ಯುತ್ತಮ ಕಾಮಿಡಿ ಸೀರೀಸ್​ ವಿಭಾಗದಲ್ಲಿ ಅಮೇಜಾನ್​ ಪ್ರೈಂನ ಫೋರ್​ ಮೋರ್ ಶಾಟ್ಸ್​ ಪ್ಲೀಸ್​ ವೆಬ್ ಸೀರಿಸ್  ನಾಮನಿರ್ದೇಶನ ಮಾಡಲಾಗಿತ್ತು.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ನ್ಯೂಯಾರ್ಕ್ ನಗರದ ಖಾಲಿ ರಂಗಮಂದಿರದಿಂದ ನಟ ರಿಚರ್ಡ್ ಕೈಂಡ್ ಈ ಅಂತರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಕಾರ್ಯಕ್ರಮ ನಡೆಸಿಕೊಟ್ಟರು.


ಇದನ್ನೂ ಓದಿ: ಸಾಮಾಜಿಕ ಜಾಲತಾಣಿಗರು ನೋಡಲೇಬೇಕಾದ ಚಿತ್ರ ‘ದಿ ಸೋಷಲ್ ಡೈಲೆಮಾ’: ನಮಗೇನಾದರೂ ಪಾಠಗಳಿವೆಯೇ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here