Homeಮುಖಪುಟದೆಹಲಿ V/s ಉತ್ತರ ಪ್ರದೇಶ: ಮಾದರಿ ಶಾಲೆ ಚರ್ಚೆಗೆ ಬಾರದ ಉತ್ತರ ಪ್ರದೇಶ ಸಚಿವ!

ದೆಹಲಿ V/s ಉತ್ತರ ಪ್ರದೇಶ: ಮಾದರಿ ಶಾಲೆ ಚರ್ಚೆಗೆ ಬಾರದ ಉತ್ತರ ಪ್ರದೇಶ ಸಚಿವ!

ಕೇಜ್ರಿವಾಲ್ ಆಡಳಿತ ಮತ್ತು ಯೋಗಿ ಆಡಳಿತ ಮಾದರಿ ಕುರಿತ ಮುಕ್ತ ಚರ್ಚೆಗಾಗಿ ಮನೀಶ್ ಸಿಸೋಡಿಯಾ ಬಂದಿದ್ದರು. ಆದರೆ ಯೋಗಿ ಆದಿತ್ಯನಾಥ್ ಸರ್ಕಾರದ ಯಾವುದೇ ಸಚಿವರು ಚರ್ಚೆಗೆ ಹಾಜರಾಗಲಿಲ್ಲ..

- Advertisement -
- Advertisement -

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಸರ್ಕಾರಿ ಶಾಲೆಗಳ ಅಭಿವೃದ್ದಿ ಕುರಿತು ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದ ಉತ್ತರ ಪ್ರದೇಶದ ಸಚಿವರು ಇಂದು ಚರ್ಚೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಲಕ್ನೋದಲ್ಲಿ ಜರುಗಿದೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ಆಮ್ ಆದ್ಮಿ ಪಕ್ಷದ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ, ಸಚಿವರು ಎಲ್ಲರೂ ವಾಕ್ಸಮರ ಆರಂಭಿಸಿದ್ದರು. ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಸರ್ಕಾರಿ ಶಾಲೆಗಳು ಮತ್ತು ಅರವಿಂದ್ ಕೇಜ್ರಿವಾಲ್ ಆಡಳಿತದಲ್ಲಿ ಸರ್ಕಾರಿ ಶಾಲೆಗಳ ಹೋಲಿಕೆ ಎಂಬ ಚರ್ಚೆ ಆರಂಭವಾಗಿತ್ತು.

ಉತ್ತರ ಪ್ರದೇಶದ ಸಚಿವರ ಸವಾಲು ಸ್ವೀಕರಿಸಿದ್ದೇನೆ ಎಂದು ಡಿಸೆಂಬರ್‌ 16 ರಂದು ತಿಳಿಸಿದ್ದ ಸಿಸೋಡಿಯಾ ಇಂದು ಲಕ್ನೋಗೆ ತೆರಳಿದ್ದರು. ಕೇಜ್ರಿವಾಲ್ ಆಡಳಿತ ಮತ್ತು ಯೋಗಿ ಆಡಳಿತ ಮಾದರಿ ಕುರಿತು ಮುಕ್ತ ಚರ್ಚೆಗಾಗಿ ಮನೀಶ್ ಸಿಸೋಡಿಯಾ ಬಂದಿದ್ದರು. ಆದರೆ ಯೋಗಿ ಆದಿತ್ಯನಾಥ್ ಸರ್ಕಾರದ ಯಾವುದೇ ಸಚಿವರು ಚರ್ಚೆಗೆ ಹಾಜರಾಗಿಲ್ಲ.

 

“ನಾನು ನಿಮ್ಮ ಸವಾಲನ್ನು ಸ್ವೀಕರಿಸಿ ಲಕ್ನೋಗೆ ಕೇಜ್ರಿವಾಲ್ ಮಾದರಿ ಮತ್ತು ಯೋಗಿ ಮಾದರಿಯನ್ನು ಚರ್ಚಿಸಲು ಬಂದೆ. ಆದರೆ ನೀವು ಚರ್ಚೆಯಿಂದ ಹಿಂದೆ ಸರಿದಿದ್ದೀರಿ. ಈಗ ನಾನು ಯುಪಿಯ ಶಿಕ್ಷಣ ಸಚಿವ ಸತೀಶ್ ದ್ವಿವೇದಿ ಅವರ ಆಹ್ವಾನದ ಮೇರೆಗೆ ಲಕ್ನೋ ಶಾಲೆಯನ್ನು ನೋಡಲು ಹೋಗುತ್ತಿದ್ದೇನೆ” ಎಂದು ಸಿಸೋಡಿಯಾ ಟ್ವೀಟ್‌ ಮಾಡಿದ್ದರು.

ಉತ್ತರ ಪ್ರದೇಶ ಸರ್ಕಾರದಿಂದ ಯಾವ ಮಂತ್ರಿಯೂ ಚರ್ಚೆಗೆ ಬಾರದೆ, ಮನೀಶ್ ಸಿಸೋಡಿಯಾ ಅವರನ್ನು ಲಕ್ನೋದಲ್ಲಿನ ಸರ್ಕಾರಿ ಶಾಲೆಗಳನ್ನು ನೋಡಲು ಬಿಡದೆ ಯೋಗಿ ಸರ್ಕಾರ ಪೊಲೀಸರನ್ನು ನಿಯೋಜಿಸಿತ್ತು. ಇದನ್ನು ಮೀರಿ ಸಿಸೋಡಿಯಾ ಲಕ್ನೋ ಶಾಲೆಗಳನ್ನು ನೋಡಲು ಹೊರಟಿದ್ದರು.

ಇದನ್ನೂ ಓದಿ: ದೆಹಲಿ ಡಿಸಿಎಂ ಸಿಸೋಡಿಯಾ ಮನೆ ಮೇಲೆ ಬಿಜೆಪಿ ಗೂಂಡಾಗಳಿಂದ ಹಲ್ಲೆ: ಆಪ್ ಆರೋಪ

ಜೊತೆಗೆ ಶಾಲೆಗಳನ್ನು ನೋಡಲು ಹೋದ ಆರೋಪದ ಮೇಲೆ ಜೈಲಿಗೆ ಹಾಕುವಿರಾ..?, ಸತೀಶ್ ದ್ವಿವೇದಿ ಅವರೇ ನೀವು ತಾನೇ ನನ್ನನ್ನು ಶಾಲೆ ನೊಡಲು ಆಹ್ವಾನ ನೀಡಿದ್ದು ಎಂದು ಸಿಸೋಡಿಯಾ ಟ್ವಿಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

ಈ ಬೆಳವಣಿಗಳ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ #DarrGayaYogi ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ. ವಿಧ ವಿಧವಾದ ಮಿಮ್ಸ್‌ಗಳು ಟ್ವಿಟರ್‌ನಲ್ಲಿ ಓಡಾಡುತ್ತಿವೆ.

ಬಿಜೆಪಿ ನಾಯಕರ ಹಳೆಯ ವಿಡಿಯೋ ತುಣುಕುಗಳನ್ನು ಟ್ಯಾಗ್ ಮಾಡಿ, ಚರ್ಚೆಗೆ ಬಾರದ ಉತ್ತರ ಪ್ರದೇಶ ಸಚಿವರನ್ನು #DarrGayaYogi ಹ್ಯಾಶ್‌ಟ್ಯಾಗ್ ಬಳಸಿ ವ್ಯಂಗ್ಯವಾಡುತ್ತಿದ್ದಾರೆ.

ಇದನ್ನೂ ಓದಿ: ಗೋದಿ ಮೀಡಿಯಾಗಳಿಗೆ ಸೆಡ್ಡು: ಸ್ವಂತ ಚಾನೆಲ್ ಆರಂಭಿಸಿದ ದೆಹಲಿಯ ಹೋರಾಟನಿರತ ರೈತರು!

ಟ್ವಿಟರ್‌ ಬಳಕೆದಾರರೊಬ್ಬರು ಇಬ್ಬರು ಶಿಕ್ಷಣ ಮಂತ್ರಿಗಳ ಚಿತ್ರಗಳನ್ನು ಹಂಚಿಕೊಂಡು, ಇಬ್ಬರ ನಡುವಿನ ವ್ಯತ್ಯಾಸ ಎಲ್ಲವನ್ನೂ ಹೇಳುತ್ತಿದೆ ಎಂದಿದ್ದಾರೆ. ಚಿತ್ರದಲ್ಲಿ ಮನೀಶ್ ಸಿಸೋಡಿಯಾ ಮಕ್ಕಳಿಗೆ ಪಾಠ ಮಾಡುತ್ತಿದ್ದರೆ, ಯುಪಿ ಸಚಿವರು ಹಸುಗಳಿಗೆ ಹುಲ್ಲು ನೀಡುತ್ತಿದ್ದಾರೆ.

ಇದನ್ನೂ ಓದಿ: ರಾಮನಗರ ಅರವಿಂದ್ ಫ್ಯಾಶನ್ ಕಾರ್ಖಾನೆ ಲಾಕೌಟ್: 17ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

ಚರ್ಚೆಗೆ ಬರಲು ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಶಾಲೆಗಳನ್ನು ನಿರ್ಮಿಸಿಲ್ಲ. ಅವರು ನಿರ್ಮಿಸಿರುವುದು ಕೇವಲ ಅಸ್ಥಿ ಪಂಜರಗಳನ್ನು ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಆಡಳಿತದ ಮಾದರಿ ಎಂದು ಆಮ್ ಆದ್ಮಿ ಪಾರ್ಟಿ, #SelfieWithSarkaariSchool ಅಭಿಯಾನ ಆರಂಭಿಸಿತ್ತು. ಅಭಿಯಾನದ ಮೂಲಕ ಉತ್ತರ ಪ್ರದೇಶದ ಶಾಲೆಗಳ ಚಿತ್ರಣವನ್ನು ಬಯಲಿಗೆಳೆಯಲಾಗಿತ್ತು. ಉತ್ತರ ಪ್ರದೇಶದ ಪಾಳುಬಿದ್ದ ಶಾಲೆಗಳು, ದನದ ಕೊಟ್ಟಿಗೆಗಳಾಗಿ ಬದಲಾಗಿರುವ ಶಾಲೆಗಳು, ಸ್ವಚ್ಛತೆ ಮಾಯವಾಗಿರುವ, ಸುಣ್ಣ-ಬಣ್ಣ ಕಾಣದೇ ಅದೇಷ್ಟೋ ವರ್ಷಗಳಾಗಿರುವ ಶಾಲೆಗಳ ಚಿತ್ರಗಳನ್ನು ಈ ಅಭಿಯಾನದಲ್ಲಿ ಇನ್ನು ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ: ದೆಹಲಿ V/s ಉತ್ತರ ಪ್ರದೇಶ: ಸರ್ಕಾರಿ ಶಾಲೆಗಳ ವಾಸ್ತವತೆ ಬಿಚ್ಚಿಡಲು ಆಪ್ ಅಭಿಯಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರೆಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರೆಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರೆಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...