ಬ್ರಿಟನ್‌ನಲ್ಲಿ ಹೊಸ ಕೊರೊನಾ ಅಲೆ ಉಂಟಾಗಿದ್ದು, ಹೊಸ ಸ್ಪರೂಪದಲ್ಲಿ ಅತೀ ವೇಗವಾಗಿ ಹಬ್ಬುತ್ತಿರುವ ಕಾರಣ ಅಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ದೇಶದಲ್ಲೂ ಬ್ರಿಟನ್‌ನಿಂದ ಬಂದಿದ್ದ 6 ಜನರಲ್ಲಿ ಕೊರೊನಾ ಸೋಂಕು ಕಂಡು ಬಂದ ಹಿನ್ನಲೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಯುಕೆಯಿಂದ ಬಂದ ಪ್ರಯಾಣಿಕರಿಗಾಗಿಯೇ ಈ ಹೊಸ ಎಸ್‌ಒಪಿ (standard operating procedure) ಸಿದ್ಧಪಡಿಸಿದ್ದು, ರಾಜ್ಯ ಸಕಾರಗಳಿಗೆ ನಿಗಾ ವಹಿಸುವಂತೆ ಸೂಚನೆ ನೀಡಿದೆ.
ಆರೋಗ್ಯ ಸಚಿವಾಲಯವು ತನ್ನ ಎಸ್‌ಒಪಿಗಳಲ್ಲಿ 2020ರ ನವೆಂಬರ್ 25 ರಿಂದ ಡಿಸೆಂಬರ್ 8 ರ ನಡುವೆ ಬ್ರಿಟನ್‌ನಿಂದ ಭಾರತಕ್ಕೆ ಆಗಮಿಸಿದ ಪ್ರಯಾಣಿಕರ ಮೇಲೆ ರಾಜ್ಯ ಸರ್ಕಾರ ನಿಗಾ ಇಟ್ಟು ಟೆಸ್ಟ್ ಮಾಡಿಸಲು ತಿಳಿಸಲಾಗಿದೆ.
ಇದನ್ನೂ ಓದಿ: ಹೊಸ ಕೊರೊನಾ ಆತಂಕ: ಕಳೆದ 14 ದಿನದಲ್ಲಿ ಹೊರ ದೇಶಗಳಿಂದ ರಾಜ್ಯಕ್ಕೆ ಬಂದವರಿಗೆ ಟೆಸ್ಟ್
ಯುಕೆಯಿಂದ ಬಂದಿಳಿದಿರುವ ಪ್ರಯಾಣಿಕರನ್ನ ಆರ್ಟಿಪಿಸಿಆರ್ ಟೆಸ್ಟ್ಗೆ ಒಳಪಡಿಸುವುದು. ಪಾಸಿಟಿವ್ ಬಂದವರನ್ನು ಆರ್ಟಿ-ಪಿಸಿಆರ್ ಟೆಸ್ಟ್ಗೆ ಒಳಪಡಿಸುವುದು ರಾಜ್ಯ ಸರ್ಕಾರಗಳ ಕೆಲಸ ಎಂದಿದೆ. ನೆಗೆಟಿವ್ ಬಂದವರನ್ನು ಸಹ ಹೋಂ ಐಸೋಲೇಷನ್‌ನಲ್ಲಿ ಇರಿಸಬೇಕು.
ಕೊರೊನಾ ಪಾಸಿಟಿವ್ ಬಂದವರನ್ನು ಹೋಂ ಐಸೋಲೇಷನ್ ಅಥವಾ ರಾಜ್ಯ ಸರ್ಕಾರ ಆರೋಗ್ಯ ಇಲಾಖೆ ಸ್ಥಾಪಿಸಿದ ನಿಗದಿತ ಸ್ಥಳದಲ್ಲಿ ಚಿಕಿತ್ಸೆ ನೀಡಬೇಕು.
ಸೋಂಕಿತರು ಹೊಸ ಸ್ವರೂಪದ ಸೋಂಕಿಗೆ ಒಳಗಾಗಿದ್ದರೆ ಅವರನ್ನು ಐಸೋಲೇಷನ್ ಕೇಂದ್ರದಲ್ಲಿ ಉಳಿಸಿಕೊಳ್ಳುವುದು. ಕೊರೊನಾ ನಿಯಮದಂತೆ ಚಿಕಿತ್ಸೆ ನೀಡಿ 14 ದಿನಗಳ ನಂತರ ಮತ್ತೆ ಪರೀಕ್ಷೆಗೆ ಒಳಪಡಿಸಬೇಕು.
ವಿಮಾನಯಾನ ಸಿಬ್ಬಂದಿ ಪ್ರಯಾಣಿಕರಿಗೆ ಎಸ್‌ಒಪಿಗಳ ಬಗ್ಗೆ ವಿವರಿಸಿದ್ದಾರೆಯೇ ಎಂಬುದನ್ನು ವಿಮಾನಯಾನ ಸಂಸ್ಥೆಗಳು ಖಚಿತ ಪಡಿಸಿಕೊಂಡಿರಬೇಕು. ಎಲ್ಲಾ ನಿಯಮಗಳನ್ನು, ಕೊರೊನಾ ಮಾಹಿತಿಯನ್ನು ವಿವರಿಸುವ ಪ್ರಕಟಣೆಯನ್ನು ಸಂಸ್ಥೆಗಳು ಹೊರಡಿಸಬೇಕು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡಿದೆ.
ಡಿ.21 ರ ಸೋಮವಾರ ರಾತ್ರಿ ಲಂಡನ್‌ನಿಂದ ಭಾರತಕ್ಕೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನದಲ್ಲಿ 266 ಜನ ಪ್ರಯಾಣಿಕರಿದ್ದರು. ಅವರಲ್ಲಿ 6 ಪ್ರಯಾಣಿಕರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ.
ಇದನ್ನೂ ಓದಿ: ಹೊಸ ಕೊರೊನಾ ಆತಂಕ: ಲಂಡನ್‌ನಿಂದ ಬಂದಿದ್ದ 6 ಮಂದಿಗೆ ಕೊರೊನಾ ಸೋಂಕು