HomeಚಳವಳಿPFI ರಾಷ್ಟ್ರೀಯ ನಾಯಕ ಕೆ.ಎಂ ಶರೀಫ್ ನಿಧನ : ಸಂತಾಪ

PFI ರಾಷ್ಟ್ರೀಯ ನಾಯಕ ಕೆ.ಎಂ ಶರೀಫ್ ನಿಧನ : ಸಂತಾಪ

ಕರಾವಳಿಯಲ್ಲಿ ಅಲ್ಪಸಂಖ್ಯಾತರರು ಕೋಮುವಾದಿಗಳ ವಿರುದ್ಧ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲುವಂತೆ ಹೋರಾಡಿದವರು ಮತ್ತು ಧೈರ್ಯ ತುಂಬಿದವರು ಕೆ.ಎಂ ಶರೀಫ್‌ರವರು. ಬಹಳ ವಿಶಿಷ್ಟ ವ್ಯಕ್ತಿತ್ವದ, ಹೃದಯವಂತಿಕೆ ಇದ್ದವರಾಗಿದ್ದರು.

- Advertisement -
- Advertisement -

PFI ಸಂಘಟನೆಯ ಮಾಜಿ ರಾಷ್ಟ್ರೀಯ ಅಧ್ಯಕ್ಷರು, ಹಾಲಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಕೆ.ಎಂ ಶರೀಫ್‌ರವರು ಇಂದು ನಿಧನರಾಗಿದ್ದಾರೆ. ಹಲವು ದಿನಗಳಿಂದ ಮಧುಮೇಹ, ಶ್ವಾಸಕೋಶ ಮತ್ತು ರಕ್ತದೊತ್ತಡ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೈಕಂಬ ಮುಹಮ್ಮದ್ ಶರೀಫ್ ರವರ ಅಂತಿಮ ದರ್ಶನಕ್ಕೆ ಬಿ‌.ಸಿ.ರೋಡ್ ಮಿತ್ತಬೈಲ್ ಮಸ್ಜಿದ್ ನಲ್ಲಿ ಇಂದು ಸಂಜೆ 5:30ಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಶಾ ನಮಾಝ್ ಬಳಿಕ ಮೃತರ ದಫನ ಕಾರ್ಯ ನೆರವೇರಲಿದೆ ಎಂದು ಪಿಎಫ್‌ಐ ರಾಜ್ಯಾಧ್ಯಕ್ಷರಾದ ಯಾಸಿರ್ ಹಸನ್ ತಿಳಿಸಿದ್ದಾರೆ.

ಸಾಮಾನ್ಯ ಕುಟುಂಬದಲ್ಲಿ ಜನಿಸಿ ಬಿಎಸ್ಸಿ ಪದವಿ ಪಡೆದು ವಿದೇಶದಲ್ಲಿ ವಾಸವಾಗಿದ್ದ ಅವರು ನಂತರ ಭಾರತಕ್ಕೆ ವಾಪಸ್‌ ಆಗಿದ್ದರು. ಮಂಗಳೂರಿನ ಕೋಡಿಯಾಲ್ ಬಳಿ ಸಣ್ಣ ಝೆರಾಕ್ಸ್ ಅಂಗಡಿ ಇಟ್ಟುಕೊಂಡು ಸರಳ ಜೀವನ ನಡೆಸುತ್ತಿದ್ದರು. ದಲಿತ-ಮುಸ್ಲಿಂ ಐಕ್ಯತೆಯ ಪ್ರಖರ ಚಿಂತಕರಾಗಿದ್ದ ಅವರು ಪಿಎಫ್ಐನ ರಾಜ್ಯಾಧ್ಯಕ್ಷರಾಗಿ, ರಾಷ್ಟ್ರೀಯ ಅಧ್ಯಕ್ಷರಾಗಿ ಮತ್ತು ರಾಷ್ಟ್ರೀಯ ನಾಯಕರಾಗಿ ಕೆಲಸ ಮಾಡಿದ್ದರು.

ಕರಾವಳಿಯಲ್ಲಿ ಅಲ್ಪಸಂಖ್ಯಾತರರು ಕೋಮುವಾದಿಗಳ ವಿರುದ್ಧ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲುವಂತೆ ಹೋರಾಡಿದವರು ಮತ್ತು ಧೈರ್ಯ ತುಂಬಿದವರು ಕೆ.ಎಂ ಶರೀಫ್‌ರವರು. ಬಹಳ ವಿಶಿಷ್ಟ ವ್ಯಕ್ತಿತ್ವದ, ಹೃದಯವಂತಿಕೆ ಇದ್ದವರಾಗಿದ್ದರು. 2003ರಿಂದ 2010ರ ರವರೆಗೆ ಅವರೊಡನೆ ಹತ್ತಿರದಿಂದ ಒಡನಾಟದ ಅನುಭವದಿಂದ ಹೇಳುವುದಾರೆ ಅತ್ಯಂತ ಪ್ರಾಮಾಣಿಕ ಮತ್ತು ದಕ್ಷ ಸಂಘಟಕರಾಗಿದ್ದರು. ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ತಮ್ಮ ಹೋರಾಟದ ಚಾಪನ್ನು ಮೂಡಿಸಿದವರು. ಅವರ ಹಠಾತ್ ನಿಧನ ಕರ್ನಾಟಕದ ಹೋರಾಟ ಪರಂಪರೆಗೆ ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿಯಾದ ಕೆ.ಎಲ್ ಅಶೋಕ್ ಸಂತಾಪ ಸೂಚಿಸಿದ್ದಾರೆ.

ಸಂಘಟನೆಯ ಪ್ರಾರಂಭ ಕಾಲದ ಪ್ರವರ್ತಕರಾಗಿದ್ದ ಕೆ.ಎಂ ಶರೀಫ್‌ರವರು, ತನ್ನ ಆಯುಷ್ಯದ ದೀರ್ಘ ಸಮಯವನ್ನು ಪಿಎಫ್‌ಐ ಆಂದೋಲನಕ್ಕಾಗಿ ಮುಡಿಪಾಗಿಟ್ಟಿದ್ದರು. ಸಮುದಾಯದ ಸಬಲೀಕರಣಕ್ಕಾಗಿ ಅವರ ದಣಿವರಿಯದ ಹೋರಾಟವು ಮುಂದಿನ ತಲೆಮಾರಿಗೆ ಎಂದೂ ಮಾದರಿಯಾಗಿರಲಿದೆ ಎಂದು ಪಿಎಫ್‌ಐ ರಾಜ್ಯಾಧ್ಯಕ್ಷರಾದ ಯಾಸಿರ್ ಹಸನ್ ಸಂತಾಪ ಸೂಚಿಸಿದ್ದಾರೆ.


ಇದನ್ನೂ ಓದಿ: ಪ.ಜಾತಿ, ಪ.ಪಂಗಡಗಳ ಬಡ್ತಿ ಸಮಸ್ಯೆ ನಿವಾರಿಸಿ, ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಮಾಡಿ: ಸಿದ್ದರಾಮಯ್ಯ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಗನ್ ಮೋಹನ್ ರೆಡ್ಡಿಯನ್ನು ಡ್ರಗ್ ಲಾರ್ಡ್ ಪ್ಯಾಬ್ಲೋ ಎಸ್ಕೋಬಾರ್‌ಗೆ ಹೋಲಿಸಿದ ಚಂದ್ರಬಾಬು ನಾಯ್ಡು

0
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಹಿಂದಿನ ಮುಖ್ಯಮಂತ್ರಿ ವೈಎಸ್ ಜಗನ್‌ಮೋಹನ್ ರೆಡ್ಡಿ ವಿರುದ್ಧ ಇಂದು ರಾಜ್ಯ ವಿಧಾನಸಭೆಯಲ್ಲಿ ಸೇಡು ತೀರಿಸಿಕೊಂಡಿದ್ದು, ಅವರನ್ನು ಕೊಲಂಬಿಯಾದ ಡ್ರಗ್ ಲಾರ್ಡ್ ಪ್ಯಾಬ್ಲೋ ಎಸ್ಕೋಬಾರ್‌ಗೆ ಹೋಲಿಸಿದ್ದಾರೆ. ಇಂಡಿಯಾ...