Homeಅಂಕಣಗಳುಫ್ರೆಂಚ್ ಓಪನ್: ದಂತಕಥೆ ಜೊಕೊವಿಚ್ ಮುಡಿಗೆ 23ನೇ ಗ್ರಾಂಡ್‌ಸ್ಲ್ಯಾಮ್

ಫ್ರೆಂಚ್ ಓಪನ್: ದಂತಕಥೆ ಜೊಕೊವಿಚ್ ಮುಡಿಗೆ 23ನೇ ಗ್ರಾಂಡ್‌ಸ್ಲ್ಯಾಮ್

- Advertisement -
- Advertisement -

ದಾಖಲೆಗಳು ಇರುವುದೇ ಮುರಿಯುವುದಕ್ಕೆ ಎಂಬುದು ಕ್ರೀಡಾಲೋಕದ ಜನಪ್ರಿಯ ಮಾತು ಎಂಬುದೇನೋ ನಿಜ. ಆದರೆ, ಟೆನಿಸ್ ಕ್ರೀಡೆಯ ಮಟ್ಟಿಗೆ 23 ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದು ದಾಖಲೆ ನಿರ್ಮಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಆ ದಾಖಲೆ ನಿರ್ಮಿಸಿದ ವ್ಯಕ್ತಿಯೂ ಅಷ್ಟು ಸಲೀಸಿನ ಆಟಗಾರನೇನಲ್ಲ ಎಂಬುದಂತೂ ನಿಜ. ಆತನ ಹೆಸರು ನೊವಾಕ್ ಜೊಕೊವಿಚ್!

ಫ್ರಾನ್ಸ್ ದೇಶದ ಐತಿಹಾಸಿಕ ರೊಲ್ಯಾಂಡ್ ಗ್ಯಾರೋಸ್ ಕ್ರೀಡಾಂಗಣ ಕಳೆದ ಭಾನುವಾರ ಸಾವಿರಾರು ಸಂಖ್ಯೆಯ ಟೆನಿಸ್ ಪ್ರಿಯರಿಂದ ಕಿಕ್ಕಿರಿದು ತುಂಬಿತ್ತು. ಟೆನಿಸ್ ಲೋಕದಲ್ಲಿ ಅಂದು ಅವಿಸ್ಮರಣೀಯ ದಾಖಲೆಯೊಂದು ಘಟಿಸಲಿತ್ತು. ಆ ದಾಖಲೆಗೆ ಸಾಕ್ಷಿಯಾಗುವ ಮೂಲಕ ನಾವೂ ಇತಿಹಾಸದ ಪುಟ ಸೇರಲಿದ್ದೇವೆ ಎಂಬ ಹೆಬ್ಬಯಕೆ ಆ ಎಲ್ಲ ಪ್ರೇಕ್ಷಕರದ್ದಾಗಿತ್ತು. ಇನ್ನೂ ಆ ಅಪರೂಪದ ಘಟನೆಯನ್ನು ಕಣ್ತುಂಬಿಕೊಳ್ಳಲು ವಿಶ್ವದಾದ್ಯಂತ ಟಿವಿ ಪರದೆಯ ಮುಂದೆ ಕಣ್ಣೆವೆಯಿಕ್ಕದೆ ಕುಳಿತ ಕೋಟ್ಯಂತರ ಕ್ರೀಡಾಪ್ರೇಮಿಗಳ ಲೆಕ್ಕವಿಟ್ಟವರಾರು? ಆದರೆ, ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎನಿಸಿಕೊಂಡಿರುವ ನೊವಾಕ್ ಜೊಕೊವಿಚ್ ಟೆನಿಸ್ ಅಭಿಮಾನಿಗಳ ಈ ಯಾವ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಪರಿಣಾಮ ಅದೊಂದು ಹೊಸ ಇತಿಹಾಸ ಬರೆಯಲ್ಪಟ್ಟಿತ್ತು.

23 ಗ್ರಾಂಡ್‌ಸ್ಲ್ಯಾಮ್‌ಗಳ ಸರದಾರ

ನಾರ್ವೆ ದೇಶದ 25 ವರ್ಷದ ಯುವ ಉತ್ಸಾಹಿ ಹಾಗೂ 3ನೇ ಶ್ರೇಯಾಂಕಿತ ಆಟಗಾರ ಕ್ಯಾಸ್ಪರ್ ರಡ್ ಇಡೀ ಟೂರ್ನಿಯ ಉದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 2022ರ ಫ್ರೆಂಚ್ ಓಪನ್ ಫೈನಲ್ ಪಂದ್ಯದಲ್ಲಿ ಮತ್ತೋರ್ವ ದಂತಕಥೆ ರಫೇಲ್ ನಡಾಲ್ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದ ಕ್ಯಾಸ್ಪರ್ ಈ ವರ್ಷ ತನ್ನ ಮೊದಲ ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿಗೆ ಮುತ್ತಿಕ್ಕುವ ಭರವಸೆ ಮೂಡಿಸಿದ್ದರು. ಹೀಗಾಗಿ ಫೈನಲ್ ಪಂದ್ಯಕ್ಕೂ ಮುನ್ನವೇ ಹಲವಾರು ವ್ಯಾಖ್ಯಾನಗಳು ಸದ್ದು ಮಾಡಿದ್ದವು.

ಕ್ಯಾಸ್ಪರ್ ರಡ್

“ಕ್ಯಾಸ್ಪರ್ ರಡ್ ವಿರುದ್ಧ 36 ವರ್ಷದ ಜೊಕೊವಿಚ್ ಗೆಲುವು ಅಷ್ಟು ಸುಲಭವಲ್ಲ ಎಂದು ಹಲವು ಖ್ಯಾತನಾಮ ಕ್ರೀಡಾ ವರದಿಗಾರರು ಅಭಿಪ್ರಾಯಪಟ್ಟಿದ್ದರು. ಆದರೆ, ಆ ಎಲ್ಲರ ವಿಮರ್ಶೆ-ವ್ಯಾಖ್ಯಾನಕ್ಕೆ ಜೊಕೊವಿಚ್ ಕ್ರೀಡಾಂಗಣದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಉತ್ತರ ನೀಡಿದರು. ಮೂರು ಗಂಟೆ 13 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದ ಸೆಣೆಸಾಟದಲ್ಲಿ ಯಾವ ಹಂತದಲ್ಲೂ ರಡ್ ಜೊಕೊವಿಚ್‌ಗೆ ಸವಾಲೊಡ್ಡಲೇ ಇಲ್ಲ.

ಮೊದಲ ಸೆಟ್‌ಅನ್ನು 7-6 (1)ರ ಟೈ ಬ್ರೇಕರ್‌ನಲ್ಲಿ ಗೆದ್ದ ಜೊಕೊವಿಚ್ ಮುಂದಿನ ಎರಡೂ ಸೆಟ್‌ಗಳನ್ನು 6-3, 7-5 ನೇರ ಸೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ದಾಖಲೆಯ 23ನೇ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗೆ ಮುತ್ತಿಟ್ಟರು. ಇನ್ನೂ ಫೈನಲ್ ಪಂದ್ಯದ ಕೊನೆಯ ಸರ್ವ್‌ಅನ್ನು ಮಾಡಿ ನೊವಾಕ್ ಜೊಕೊವಿಚ್ ಗೆಲ್ಲುತ್ತಿದ್ದಂತೆ ಇಡೀ ಕ್ರೀಡಾಂಗಣ ಹರ್ಷೋದ್ಘಾರದಲ್ಲಿ ಮುಳುಗಿತ್ತು. ಜನರ ಚಪ್ಪಾಳೆ ಶಬ್ಧ ಹಲವು ನಿಮಿಷಗಳ ಕಾಲ ಮುಗಿಲು ಮುಟ್ಟಿತ್ತು. ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಈ ದೃಶ್ಯ ಮುಂದಿನ ಇನ್ನಷ್ಟು ದಶಕಗಳ ಕಾಲ ಟೆನಿಸ್ ಕ್ರೀಡಾಪ್ರೇಮಿಗಳ ನೆನಪಿನಲ್ಲಿ ಉಳಿಯಲಿದೆ.

ಪುರುಷರ ಸಿಂಗಲ್ಸ್‌ನಲ್ಲಿ 23 ಗ್ರಾಂಡ್‌ಸ್ಲ್ಯಾಮ್ ಅಭೂತಪೂರ್ವ ದಾಖಲೆಯೇ ಸರಿ. ಆದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಮತ್ತೋರ್ವ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಹೆಸರಿನಲ್ಲೂ 23 ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿಗಳಿವೆ. ಸೆರೆನಾ ವಿಲಿಯಮ್ಸ್ ಕಳೆದ ವರ್ಷ ವೃತ್ತಿಪರ ಟಿನಿಸ್‌ನಿಂದ ನಿವೃತ್ತಿ ಘೋಷಿಸಿದ್ದು, ಈ ದಾಖಲೆಯನ್ನು ಮುರಿಯಲು ನೊವಾಕ್ ಜೊಕೊವಿಚ್ ಮತ್ತೊಂದು ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿಯನ್ನು ಜಯಿಸಬೇಕಿದೆ. ಜೊಕೊವಿಚ್ ಫಾರ್ಮ್ ನೋಡಿದರೆ ಅದೂ ಕೂಡ ಕಷ್ಟವಿಲ್ಲ ಎನ್ನಿಸುವುದು ಕೂಡ ನಿಜ!

ಇದನ್ನೂ ಓದಿ: 22 ಗ್ರಾಂಡ್‌ಸ್ಲ್ಯಾಮ್ ದಾಖಲೆ ಸರಿಗಟ್ಟಿದ ಜೊಕೊವಿಕ್

ಈ ವರ್ಷದ ಎರಡನೇ ಗ್ರಾಂಡ್‌ಸ್ಲ್ಯಾಮ್‌ ನೊವಾಕ್ ಜೊಕೊವಿಚ್ ಈ ವರ್ಷದಲ್ಲೇ ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿಯನ್ನು ಗೆಲ್ಲುತ್ತಿರುವುದು ಎರಡನೇ ಬಾರಿ. ಈ ವರ್ಷ ಉತ್ತಮ ಲಯದಲ್ಲಿರುವ ಜೊಕೊವಿಚ್ ಕಳೆದ ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೂರ್ನಮೆಂಟ್‌ನಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಜಯಿಸುವ ಮೂಲಕ ಶುಭಾರಂಭ ಮಾಡಿದ್ದಾರೆ. ಈ ಮೂಲಕ 22 ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದ ರಫೇಲ್ ನಡಾಲ್ ದಾಖಲೆಯನ್ನು ಸರಿಗಟ್ಟಿದ್ದರು.

ಆಸ್ಟ್ರೇಲಿಯಾ ಓಪನ್‌ನಲ್ಲಿ ರಫೇಲ್ ನಡಾಲ್ ಆಡಿದ್ದರೂ ಸಹ ಸೊಂಟ ಮತ್ತು ಹೊಟ್ಟೆ ನೋವಿನ ಕಾರಣಕ್ಕೆ ಟೂರ್ನಿಯ ಮಧ್ಯದಲ್ಲೇ ಹೊರನಡೆದಿದ್ದರು. ಹೀಗಾಗಿ ಜೊಕೊವಿಚ್ ಹಾದಿ ಸುಗಮವಾಗಿತ್ತು. ಈ ಟೂರ್ನಿಯ ಬೆನ್ನಿಗೆ ನಡಾಲ್ ದಾಖಲೆಯನ್ನು ಜೊಕೊವಿಚ್ ಮೀರಿ ನಿಲ್ಲಲಿದ್ದಾರೆ ಎಂಬ ಮಾತುಗಳು ಟೆನಿಸ್ ಲೋಕದಲ್ಲಿ ಚಾಲ್ತಿಗೆ ಬಂದಿತ್ತು. ಕೊನೆಗೂ ಆ ಮಾತು ನಿಜವಾಗಿದೆ.

ನಡಾಲ್ ಅನುಪಸ್ಥಿತಿಯ ಲಾಭ

ರಫೇಲ್ ನಡಾಲ್ ಅವರನ್ನು “ಕಿಂಗ್ ಆಫ್ ಫ್ರೆಂಚ್ ಓಪನ್” ಎಂದೇ ಕರೆಯಲಾಗುತ್ತದೆ. ಹೀಗೆ ಕರೆಯಲು ಕಾರಣವೂ ಇದೆ. ಏಕೆಂದರೆ 2005 ರಿಂದ 2014ರ ಅವಧಿಯ 10 ವರ್ಷದ ಟೂರ್ನಿಯಲ್ಲಿ 9 ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ದಾಖಲೆ ನಡಾಲ್ ಹೆಸರಿನಲ್ಲಿದೆ. ನಡಾಲ್ ಗೆದ್ದ 22 ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿಗಳ ಪೈಕಿ 14 ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿಗಳು ಫ್ರೆಂಚ್ ಓಪನ್‌ನಲ್ಲೇ ಬಂದಿವೆ. ಹೀಗಾಗಿ ಕೆಂಪು ಮಣ್ಣಿನ ರೊಲ್ಯಾಂಡ್ ಗ್ಯಾರೋಸ್ ಅಂಗಳದಲ್ಲಿ ರಫೇಲ್ ನಡಾಲ್ ಎದುರು ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಟೆನಿಸ್ ಲೋಕದ ಜನಪ್ರಿಯ ಮಾತಾಗಿದೆ.

ಆದರೆ, ಹೊಟ್ಟೆ ಮತ್ತು ಸೊಂಟದ ನೋವಿನಿಂದ ಬಳಲುತ್ತಿರುವ ನಡಾಲ್ ಅವರಿಗೆ ವೈದ್ಯರು ದೀರ್ಘಕಾಲದ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ನಡಾಲ್ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಕಣಕ್ಕಿಳಿದಿರಲಿಲ್ಲ. ಇದು ಸಾಮಾನ್ಯವಾಗಿ ಜೊಕೊವಿಚ್ ಹಾದಿಯನ್ನು ಸುಗಮಗೊಳಿಸಿದೆ.

15 ವರ್ಷ 23 ಗ್ರಾಂಡ್‌ಸ್ಲ್ಯಾಮ್

2008ರ ಆಸ್ಟ್ರೇಲಿಯಾ ಓಪನ್‌ನಲ್ಲಿ ನೊವಾಕ್ ಜೊಕೊವಿಚ್ ಮೊದಲ ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿಗೆ ಮುತ್ತಿಟ್ಟಾಗ 21 ವರ್ಷದ ಯುವಕ. ಈ ಯುವಕ ಮುಂದೊಂದು ದಿನ ಟೆನಿಸ್ ಲೋಕವೇ ಬೆರಗಾಗುವ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಳ್ಳಲಿದ್ದಾನೆ ಎಂದು ಆ ದಿನಗಳಲ್ಲಿ ಯಾರೆಂದರೆ ಯಾರೂ ಊಹಿಸಿರಲಿಲ್ಲ.

ಏಕೆಂದರೆ ಅಷ್ಟರಲ್ಲಾಗಲೆ ರೋಜರ್ ಫೆಡರರ್ ಎಂಬ ದೈತ್ಯ ಟೆನಿಸ್ ಅಂಗಳದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು. 2004ರಿಂದ 2007ರ ನಡುವಿನ ಕೇವಲ 4 ವರ್ಷದ ಅವಧಿಯಲ್ಲಿ ಬರೋಬ್ಬರಿ 15 ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿ ಜಯಿಸುವ ಮೂಲಕ ಹಲವು ಮೊದಲಿಗೆ ಅಂಕಿತ ಹಾಕಿದ್ದ. ಇದೇ ಅವಧಿಯಲ್ಲಿ ನಾಲ್ಕು ಗ್ರಾಂಡ್‌ಸ್ಲ್ಯಾಮ್ ಗೆದ್ದಿದ್ದ ರಫೇಲ್ ನಡಾಲ್ ಮತ್ತೊಂದು ದೈತ್ಯ ಶಕ್ತಿಯಾಗಿ ಬೆಳೆಯುವ ಭರವಸೆ ಮೂಡಿಸಿದ್ದರು. ಹೀಗಾಗಿ ಅಂದು ಜೊಕೊವಿಚ್‌ರನ್ನು ಯಾರೂ ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ.

ಆದರೆ, ಫೆಡರರ್ ಮತ್ತು ನಡಾಲ್ ನಡುವೆಯೇ ಎದ್ದು ನಿಂತು ಇಂದು ಅವರನ್ನೇ ಮೀರಿಸಿ ಕೇವಲ 15 ವರ್ಷಗಳಲ್ಲಿ 23 ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದ ಜೊಕೊವಿಚ್ ಕಳೆದ ಒಂದು ದಶಕಗಳಿಂದ ಟೆನಿಸ್ ಲೋಕವನ್ನು ಅಕ್ಷರಶಃ ಆಳುತ್ತಿದ್ದಾರೆ ಎನ್ನಬಹುದು. ಅಲ್ಲದೆ, ಈಗಿರುವ ಮತ್ತು ಮುಂದೆ ಬರಲಿರುವ ನವ ಯುವಕರ ಅಬ್ಬರದ ನಡುವೆಯೂ ಅವರ ಸಾರ್ವಭೌಮತ್ವ ಮತ್ತಷ್ಟು ವರ್ಷಗಳ ಕಾಲ ಮುಂದುವರೆಯುವುದು ನಿಚ್ಚಳವಾಗಿದೆ.

ಸ್ವಿಯಾಟೆಕ್ ಮುಡಿಗೆ ನಾಲ್ಕನೇ ಪ್ರಶಸ್ತಿ

ಜೂನ್ 10ರಂದು ನಡೆದ 2023ರ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ ಅವರನ್ನು ಸೋಲಿಸುವ ಮೂಲಕ ವಿಶ್ವದ ನಂಬರ್ 1 ಟೆನ್ನಿಸ್ ತಾರೆ ಇಗಾ ಸ್ವಿಯಾಟೆಕ್ ತನ್ನ ರೋಲ್ಯಾಂಡ್ ಗ್ಯಾರೋಸ್ ಕಿರೀಟವನ್ನು ಉಳಿಸಿಕೊಂಡರು.

ಇಗಾ ಸ್ವಿಯಾಟೆಕ್

ರೋಮಾಂಚಕಾರಿಯಾಗಿದ್ದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಇಗಾ ಸ್ವಿಯಾಟೆಕ್ ಅವರು ಕರೋಲಿನಾ ಮುಚೋವಾ ವಿರುದ್ಧ 6-2, 5-7, 6-4 ಸೆಟ್‌ಗಳಿಂದ ಗೆಲ್ಲುವ ಮೂಲಕ ತಮ್ಮ ಮೂರನೇ ಫ್ರೆಂಚ್ ಓಪನ್ ಪ್ರಶಸ್ತಿಗೆ ಮುತ್ತಿಟ್ಟರು. ಈ ಮೂಲಕ 2007ರಿಂದ ರೋಲ್ಯಾಂಡ್ ಗ್ಯಾರೋಸ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಮೊದಲ ಮಹಿಳಾ ಟೆನ್ನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ, ಅತ್ಯಂತ ಕಿರಿಯ ವಯಸ್ಸಿನಲ್ಲೇ ನಾಲ್ಕು ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಜಯಿಸಿದ ಆಟಗಾರ್ತಿ ಎಂಬ ಶ್ರೇಯಕ್ಕೂ ಅವರು ಪಾತ್ರರಾಗಿದ್ದಾರೆ.

ಇಗಾ ಸ್ವಿಯಾಟೆಕ್ ಆರಂಭದಲ್ಲಿ ತನ್ನ ಕೌಶಲ್ಯದಿಂದ ಆಕ್ರಮಣಕಾರಿ ಆಟ ಪ್ರದರ್ಶಿಸಿದರು ಮತ್ತು ಆರಂಭಿಕ ಸೆಟ್‌ಅನ್ನು ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಪ್ರತಿ ಹೋರಾಟ ನೀಡಿದ ಮುಚೋವಾ ಅದನ್ನು ಗೆದ್ದುಕೊಂಡರ, ಮೂರನೇ ಸೆಟ್‌ನ ಮೊದಲ ಎರಡು ಗೇಮ್ ಪಾಯಿಂಟ್‌ಗಳನ್ನು ಗೆಲ್ಲುವ ಮೂಲಕ ಅಗ್ರ ಶ್ರೇಯಾಂಕಿತೆಗೆ ಆಘಾತ ನೀಡಿದ್ದರು. ಆದರೆ, ಶೀಘ್ರವೇ ಮತ್ತೆ ಲಯಕ್ಕೆ ಮರಳಿದ ಇಗಾ ಸ್ವಿಯಾಟೆಕ್ ಕೊನೆಯ ಎರಡು ಸತತ ಚಾಂಪಿಯನ್‌ಶಿಪ್ ಪಾಯಿಂಟ್‌ಗಳೊಂದಿಗೆ 6-4ರಿಂದ ಗೆಲ್ಲುವ ಮೂಲಕ ಮತ್ತೊಮ್ಮೆ ಫ್ರೆಂಚ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...