Homeಮುಖಪುಟಕೋವಿಡ್ ಲಸಿಕೆ ಪಡೆದವರ ವೈಯಕ್ತಿಕ ವಿವರ ಸೋರಿಕೆ: ಇಬ್ಬರ ಬಂಧನ

ಕೋವಿಡ್ ಲಸಿಕೆ ಪಡೆದವರ ವೈಯಕ್ತಿಕ ವಿವರ ಸೋರಿಕೆ: ಇಬ್ಬರ ಬಂಧನ

- Advertisement -
- Advertisement -

ಕೋವಿನ್ ಆಪ್‌ ಮೂಲಕ ನೊಂದಾಯಿಸಿ ಕೋವಿಡ್ ಲಸಿಕೆ ಪಡೆದವರ ವೈಯಕ್ತಿಕ ಮಾಹಿತಿ ಸೋರಿಕೆ ಹಗರಣದಲ್ಲಿ ಬಿಹಾರ ಮೂಲದ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ಒಬ್ಬ ಬಾಲಾಪರಾಧಿ ಸಹ ಇದ್ದು, ಇಬ್ಬರೂ ದತ್ತಾಂಶ ಸೋರಿಕೆಗೆ ವ್ಯಕ್ತಿ ಟೆಲಿಗ್ರಾಮ್ ಆ್ಯಪ್ ಬಳಸಿದ್ದಾನೆ ಎಂದು ಆರೋಪಿಸಲಾಗಿದೆ.

ಮೋದಿ ಸರ್ಕಾರದಿಂದ ಪ್ರಮುಖ ದತ್ತಾಂಶ ಉಲ್ಲಂಘನೆಯಾಗಿದೆ. ಕೋವಿಡ್ ಲಸಿಕೆ ಪಡೆದ ಪ್ರತಿಯೊಬ್ಬ ಭಾರತೀಯರ ಮೊಬೈಲ್ ಸಂಖ್ಯೆಗಳು, ಆಧಾರ್ ಸಂಖ್ಯೆಗಳು, ಪಾಸ್‌ಪೋರ್ಟ್ ಸಂಖ್ಯೆಗಳು, ವೋಟರ್ ಐಡಿ, ಕುಟುಂಬ ಸದಸ್ಯರ ವಿವರಗಳು ಇತ್ಯಾದಿ ಸೇರಿದಂತೆ ಇತರ ವೈಯಕ್ತಿಕ ವಿವರಗಳು ಸೋರಿಕೆಯಾಗಿವೆ ಮತ್ತು ಉಚಿತವಾಗಿ ಲಭ್ಯವಿವೆ ಎಂದು ಟಿಎಂಸಿ ಮುಖಂಡ ಸಾಕೇತ್ ಗೋಖಲೆ ಆರೋಪಿಸಿದ್ದರು.

ರಾಜ್ಯಸಭಾ ಸಂಸದ ಮತ್ತು ಟಿಎಂಸಿ ನಾಯಕ ಡೆರೆಕ್ ಒ’ಬ್ರೇನ್, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ & ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಪತ್ರಕರ್ತರ ವೈಯಕ್ತಿಕ ಮಾಹಿತಿಗಳು ಟೆಲಿಗ್ರಾಂನಲ್ಲಿ ಸೋರಿಕೆಯಾಗಿರುವುದರ ಸ್ಕ್ರೀನ್‌ಶಾಟ್‌ಗಳನ್ನು ಲಗತ್ತಿಸಿದ್ದರು.

ಮೋದಿ ಸರ್ಕಾರವು “ಬಲವಾದ ಡೇಟಾ ಭದ್ರತೆ” ಅನ್ನು ಅನುಸರಿಸುತ್ತದೆ ಎಂದು ಹೇಳಿಕೊಳ್ಳುವಾಗ ಪಾಸ್‌ಪೋರ್ಟ್ ಸಂಖ್ಯೆ, ಆಧಾರ್ ಸಂಖ್ಯೆ, ಇತ್ಯಾದಿ ಸೇರಿದಂತೆ ವೈಯಕ್ತಿಕ ವಿವರಗಳು ಹೇಗೆ ಸೋರಿಕೆಯಾದವು? ಈ ಸೋರಿಕೆಯ ಬಗ್ಗೆ ಮೋದಿ ಸರ್ಕಾರ ಸೇರಿದಂತೆ ಗೃಹ ಸಚಿವಾಲಯಕ್ಕೆ ಏಕೆ ತಿಳಿದಿಲ್ಲ ಮತ್ತು ಡೇಟಾ ಉಲ್ಲಂಘನೆಯ ಬಗ್ಗೆ ಭಾರತೀಯರಿಗೆ ಏಕೆ ಮಾಹಿತಿ ನೀಡಿಲ್ಲ ಎಂದು ಸಾಕೇತ್ ಗೋಖಲೆ ಪ್ರಶ್ನಿಸಿದ್ದರು.

ಆದರೆ ಡೇಟಾ ಗೌಪ್ಯತೆಗಾಗಿ ಸಾಕಷ್ಟು ಸುರಕ್ಷತೆಗಳೊಂದಿಗೆ CoWIN ಪೋರ್ಟಲ್ ರಚಿಸಿದ್ದು, ಅದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಪ್ರತಿಪಾದಿಸಿದ್ದ ಸರ್ಕಾರವು ಆರೋಪಗಳನ್ನು ಯಾವುದೇ ಆಧಾರವಿಲ್ಲದ “ಚೇಷ್ಟೆ” ಎಂದು ಕರೆದಿತ್ತು.

ಅಸ್ತಿತ್ವದಲ್ಲಿರುವ ಭದ್ರತಾ ಕ್ರಮಗಳನ್ನು ಪರಿಶೀಲಿಸಲು ಆಂತರಿಕ ತನಿಖಾ ಸಮಿತಯನ್ನು ಪ್ರಾರಂಭಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮೋದಿ ಸರ್ಕಾರದಿಂದ ಕೋವಿಡ್ ಲಸಿಕೆ ಪಡೆದವರ ವೈಯಕ್ತಿಕ ವಿವರ ಸೋರಿಕೆ: ಸ್ಕ್ರೀನ್‌ಶಾಟ್‌ ಹಂಚಿಕೊಂಡ ಟಿಎಂಸಿ ಮುಖಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...