HomeUncategorizedಲೋಕಸಭೆಯಿಂದ ಮತ್ತಿಬ್ಬರು ಸಂಸದರ ಅಮಾನತು

ಲೋಕಸಭೆಯಿಂದ ಮತ್ತಿಬ್ಬರು ಸಂಸದರ ಅಮಾನತು

- Advertisement -
- Advertisement -

ಲೋಕಸಭೆಯಲ್ಲಿ ಘೋಷಣಾ ಫಲಕಗಳನ್ನು ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಇಂದು ಇಬ್ಬರು ಪ್ರತಿಪಕ್ಷದ ಸಂಸದರನ್ನು ಚಳಿಗಾಲದ ವಿಶೇಷ ಅಧಿವೇಶನದವರೆಗೆ ಅಮಾನತು ಮಾಡಲಾಗಿದೆ. ಇದರಿಂದಾಗಿ ಒಂದೇ ವಾರದಲ್ಲಿ ಉಭಯ ಸದನಗಳಿಂದ 143 ಸಂಸದರನ್ನು ಅಮಾನತು ಮಾಡಿದಂತಾಗಿದೆ. ಚಳಿಗಾಲದ ಅಧಿವೇಶನದ ಅಂತ್ಯಕ್ಕೆ ಇನ್ನೆರಡು ದಿನಗಳು ಬಾಕಿ ಇದ್ದು, ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಮುನ್ನ ನಡೆಯುತ್ತಿರುವ ಕೊನೆಯ ಪೂರ್ಣ ಅಧಿವೇಶನದಲ್ಲಿ ನಡೆದ ಈ ಬೆಳವಣಿಗೆ ಅಚ್ಚರಿಯನ್ನು ಮೂಡಿಸಿದೆ.

ಕೇರಳದ ಸಂಸದ ಥಾಮಸ್ ಚಳಿಕಂಡನ್ ಹಾಗೂ ಸಿಪಿಐಎಂ ಸಂಸದ ಎ.ಎಂ.ಆರೀಫ್ ಅವರನ್ನು ಇಂದು ಲೋಕಸಭೆಯಿಂದ ಅಮಾನತು ಮಾಡಲಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಅಮಾನತು ಪ್ರಸ್ತಾವನೆ ಮಂಡಿಸಿದ್ದು, ಸದನ ಅದನ್ನು ಅಂಗೀಕರಿಸಿದ ಬಳಿಕ ಅಮಾನತು ಮಾಡಲಾಗಿದೆ. ಇದರೊಂದಿಗೆ ಲೋಕಸಭೆಯಿಂದ ಅಮಾನತುಗೊಂಡ ಸಂಸದರ ಸಂಖ್ಯೆ 97ಕ್ಕೆ ಏರಿಕೆಯಾಗಿದೆ.

ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಬೇಕೆಂದು ಆಗ್ರಹಿಸಿದ್ದ ಪ್ರತಿಪಕ್ಷಗಳ ಒಟ್ಟು 141 ಸದಸ್ಯರನ್ನು ಲೋಕಸಭೆ ಮತ್ತು ರಾಜ್ಯ ಸಭೆಗಳಿಂದ ಅಮಾನತು ಮಾಡಲಾಗಿತ್ತು. ಇಂದು ಇನ್ನಿಬ್ಬರು ಸಂಸದರ ಅಮಾನತಿನ ಬಳಿಕ ಈ ಸಂಖ್ಯೆ 143ಕ್ಕೆ ಏರಿಕೆಯಾಗಿದೆ.

ಲೋಕಸಭೆಯಲ್ಲಿನ 142 ಪ್ರತಿಪಕ್ಷಗಳ ಸಂಸದರಲ್ಲಿ 97 ಮಂದಿಯನ್ನು ಈಗಗಲೇ ಅಮಾನತುಗೊಳಿಸಲಾಗಿದೆ.  ಅಂದರೆ ಶೇಕಡಾ 68ಕ್ಕಿಂತ ಹೆಚ್ಚು ಪ್ರತಿಪಕ್ಷಗಳ ಸಂಸದರನ್ನು ಅಮಾನತು ಮಾಡಲಾಗಿದೆ. ರಾಜ್ಯಸಭೆಯಲ್ಲಿ ಅಮಾನತಿನ ಬಳಿಕ 100ಕ್ಕಿಂತ ಕಡಿಮೆ ಪ್ರತಿಪಕ್ಷಗಳ ಸಂಸದರು ಉಳಿದಿರುವುದರಿಂದ ರಾಜ್ಯಸಭೆಯಲ್ಲಿ ಬಿಲ್‌ ಪಾಸ್‌ಗಾಗಿ ಸದನದಲ್ಲಿ ಸರ್ಕಾರವು ಯಾವುದೇ ಸವಾಲನ್ನು ಹೊಂದಿಲ್ಲ.

ಇಬ್ಬರು ಅಪರಿಚಿತ ಯುವಕರು ಲೋಕಸಭೆಗೆ ನುಗ್ಗಿ ಗ್ಯಾಸ್ ಸ್ಪ್ರೇ ಮಾಡಿದ ಬಳಿಕ ಭಾರೀ ಭದ್ರತಾ ಲೋಪದ ಪ್ರಕರಣದಲ್ಲಿ ಗೃಹ ಸಚಿವರು ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಪಟ್ಟು ಹಿಡಿದಿದ್ದವು. ಪ್ರಧಾನಿ ಮತ್ತು ಅಮಿತ್‌ ಶಾ ಈ ಬಗ್ಗೆ ಮಾದ್ಯಮಗಳಿಗೆ ಹೇಳಿಕೆ ಕೊಡುತ್ತಾರೆ. ಆದರೆ ಸದನಕ್ಕೆ ಬಿಜೆಪಿ ಮತ್ತು ಸರಕಾರದ ಪರವಾಗಿ ಗೃಹಸಚಿವರು ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷ ಆಗ್ರಹಿಸಿತ್ತು.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಸದನದೊಳಗಿನ ಯಾವುದೇ ಭದ್ರತೆಗೆ ಸಂಬಂಧಿಸಿದ ಘಟನೆಯು ಲೋಕಸಭೆಯ ಸೆಕ್ರೆಟ್ರಿಯೇಟ್‌ ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ಸರ್ಕಾರವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಭದ್ರತಾ ಲೋಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಮಾತನಾಡಿಲ್ಲ. ಆದರೆ ದೈನಿಕ್ ಜಾಗರಣ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಭದ್ರತಾ ಲೋಪವು ಅತ್ಯಂತ ಗಂಭೀರ ಘಟನೆಯಾಗಿದೆ. ತನಿಖೆಯ ಅಗತ್ಯವಿದೆ ಆದರೆ ಚರ್ಚೆಯ ಅಗತ್ಯವಿಲ್ಲ ಎಂದು ಹೇಳಿದ್ದರು.

ಇದನ್ನು ಓದಿ: ಸಂಸದರ ಸಾಮೂಹಿಕ ಅಮಾನತ್ತಿನಿಂದ ಸಂಸದೀಯ ಪ್ರಜಾಪ್ರಭುತ್ವಕ್ಕೆ ಹಾನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...