ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮೇಲಿನ ಜಾರಿ ನಿರ್ದೇಶನಾಲಯದ (ಇಡಿ) ದಾಳಿಯಿಂದ ಲಾಭ ಸಿಗುವುದು ಸಿದ್ದರಾಮಯ್ಯಗೆ ಎಂದು ಕರ್ನಾಟಕ ಬಿಜೆಪಿ ವ್ಯಂಗ್ಯವಾಡಿದೆ.
‘ನೂರಾರು ಕೋಟಿ ಲೂಟಿ ಹೊಡೆದು ಅಕ್ರಮ ಸಂಪತ್ತು ಗಳಿಸಿರುವ ಜಮೀರ್ ಅಹ್ಮದ್ ಈಗ ED ಬಲೆಗೆ ಬಿದ್ದಿರುವುದು ಯಾರಿಗೆ ಲಾಭ ತರಬಹುದೆಂಬುದಕ್ಕೆ ಉತ್ತರ ಲಭಿಸಿದೆ. ಮುಂದಿನ ಚುನಾವಣೆಗಾಗಿ ಸುರಕ್ಷಿತ ಕ್ಷೇತ್ರ ಅರಸುತ್ತಿರುವ ಸಿದ್ದರಾಮಯ್ಯ ಅವರೇ ಇದರ ಸಂಪೂರ್ಣ ಫಲಾನುಭವಿಯಾಗಿದ್ದಾರೆ” ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಜಮೀರ್ ಅಹ್ಮದ್ ಮನೆ ಮೇಲಿನ ಜಾರಿ ನಿರ್ದೇಶನಾಲಯದ ದಾಳಿ ಖಂಡಿಸಿರುವ ಸಿದ್ದರಾಮಯ್ಯ ಅವರ ನಡೆ ನೆಪ ಮಾತ್ರಕ್ಕೆ ಎಂದು ಆರೋಪಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ, ಕಚೇರಿಗಳ ಮೇಲೆ ಇಡಿ ದಾಳಿ
ನೂರಾರು ಕೋಟಿ ಲೂಟಿ ಹೊಡೆದು ಅಕ್ರಮ ಸಂಪತ್ತು ಗಳಿಸಿರುವ #IMAZameer ಈಗ #ED ಬಲೆಗೆ ಬಿದ್ದಿರುವುದು ಯಾರಿಗೆ ಲಾಭ ತರಬಹುದೆಂಬುದಕ್ಕೆ ಉತ್ತರ ಲಭಿಸಿದೆ.
ಮುಂದಿನ ಚುನಾವಣೆಗಾಗಿ ಸುರಕ್ಷಿತ ಕ್ಷೇತ್ರ ಅರಸುತ್ತಿರುವ @siddaramaiah ಅವರೇ ಇದರ ಸಂಪೂರ್ಣ ಫಲಾನುಭವಿಯಾಗಿದ್ದಾರೆ.
ನೆಪ ಮಾತ್ರಕ್ಕೆ ಖಂಡಿಸುತ್ತಿದ್ದಾರೆ!#ಬುರುಡೆರಾಮಯ್ಯ pic.twitter.com/9L4ajnli2d
— BJP Karnataka (@BJP4Karnataka) August 6, 2021
ಶಾಸಕ ಜಮೀರ್ ಅಹ್ಮದ್ ಮನೆ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದಿದ್ದ ಸಿದ್ದರಾಮಯ್ಯ ಅವರನ್ನು ಛೇಡಿಸಿರುವ ಬಿಜೆಪಿ, “ಸಿದ್ದರಾಮಯ್ಯ ಅವರೇ, ಜಮೀರ್ ಅಹ್ಮದ್ ಮನೆ ಮೇಲೆ ನಡೆದ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ನೀವು ಆರೋಪಿಸುತ್ತಿದ್ದೀರಿ. ಆದರೆ, ಇಡಿ ವಿಚಾರಣೆಯಿಂದ ನೆಮ್ಮದಿಯಾಗಿದೆ ಎಂದು ಜಮೀರ್ ಹೇಳಿದ್ದಾರೆ. ಹಾಗಾದರೆ ನಿಮ್ಮ ಹೇಳಿಕೆಯೇ ರಾಜಕೀಯ ಪ್ರೇರಿತವಲ್ಲವೇ, ಸಿದ್ದರಾಮಯ್ಯ..?” ಎಂದು ಪ್ರಶ್ನಿಸಿದೆ.
“ಸಿದ್ದರಾಮಯ್ಯ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಕಾಲಿಟ್ಟ ಕ್ಷಣದಲ್ಲೇ, ಪ್ರತಿಪಕ್ಷ ಸ್ಥಾನದಿಂದ ಖರ್ಗೆಯವರನ್ನು ಖಾಲಿ ಮಾಡಿಸಿದರು. ನಂತರ ಸಿಎಂ ರೇಸ್‌ನಲ್ಲಿದ್ದ ದಲಿತ ನಾಯಕನನ್ನು ಸೋಲಿಸಿದರು. ಚಾಮರಾಜಪೇಟೆ ಕ್ಷೇತ್ರದ ಮೇಲೆ ಕಣ್ಣು ಹಾಯಿಸಿದ ಕೂಡಲೇ ಜಮೀರ್ ಅಕ್ರಮ ಬೆಳಕಿಗೆ ಬಂದು ಸಂಕಟಕ್ಕೆ ಸಿಲುಕಿಕೊಂಡರು” ಎಂದು ಆರೋಪಗಳನ್ನು ಬಿಜೆಪಿ ಮಾಡಿದೆ.
ಸಿದ್ದರಾಮಯ್ಯ ಅವರೇ, #IMAZameer ಮನೆ ಮೇಲೆ ನಡೆದ #EDRaid ರಾಜಕೀಯ ಪ್ರೇರಿತ ಎಂದು ನೀವು ಆರೋಪಿಸುತ್ತಿದ್ದೀರಿ.
ಆದರೆ, ಇಡಿ ವಿಚಾರಣೆಯಿಂದ ನೆಮ್ಮದಿಯಾಗಿದೆ ಎಂದು ಜಮೀರ್ ಹೇಳಿದ್ದಾರೆ.
ಹಾಗಾದರೆ ನಿಮ್ಮ ಹೇಳಿಕೆಯೇ ರಾಜಕೀಯ ಪ್ರೇರಿತವಲ್ಲವೇ, ಸಿದ್ದರಾಮ್ಮಯ?#ಬುರುಡೆರಾಮಯ್ಯ pic.twitter.com/7u2B32Gj1j
— BJP Karnataka (@BJP4Karnataka) August 6, 2021
ಗುರುವಾರ ಜಾರಿ ನಿರ್ದೇಶನಾಲಯ (ಇಡಿ) ಇಲಾಖೆಯ ಅಧಿಕಾರಿಗಳು ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಬಿ.ಜೆಡ್. ಜಮೀರ್ ಅಹ್ಮದ್ ಅವರ ಶಿವಾಜಿನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಮನೆ, ಚಾಮರಾಜಪೇಟೆಯಲ್ಲಿರುವ ಅವರ ಟ್ರಾವೆಲ್ಸ್ ಕಚೇರಿ ಹಾಗೂ ಅವರ ಒಡೆತನದಲ್ಲಿರುವ ಫ್ಲ್ಯಾಟ್ ಸೇರಿದಂತೆ ಹಲವು ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಇದನ್ನೂ ಓದಿ: ಕುಮಾರಸ್ವಾಮಿ 10 ಕೋಟಿ ಹಣ ಪಡೆದ ಆರೋಪ: ಬಹಿರಂಗ ಚರ್ಚೆಗೆ ಆಹ್ವಾನಿಸಿದ ಜಮೀರ್ ಅಹ್ಮದ್


