Homeಮುಖಪುಟಚುನಾವಣಾ ಬಾಂಡ್ ಯೋಜನೆ; ತಿನ್ನುವೆ, ತಿನ್ನಲು ಬಿಡುವೆ, ಅದೂ ಕಾನೂನಿನ ಆಧಾರದ ಮೇಲೆಯೇ!

ಚುನಾವಣಾ ಬಾಂಡ್ ಯೋಜನೆ; ತಿನ್ನುವೆ, ತಿನ್ನಲು ಬಿಡುವೆ, ಅದೂ ಕಾನೂನಿನ ಆಧಾರದ ಮೇಲೆಯೇ!

- Advertisement -
- Advertisement -

ಆಡಳಿತ ನಡೆಸುವವರು ಮತ್ತು ವ್ಯಾಪಾರಿ ವರ್ಗದ ನಡುವೆ ಇರುವ ಸಹಕಾರ, ಸಹಯೋಗ, ಸಮನ್ವಯ ಹಾಗೂ ಅದರೊಂದಿಗೆ ನಡೆಯುವ ರಹಸ್ಯ ಒಪ್ಪಂದಗಳ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇಂತಹ ಏರ್ಪಾಡುಗಳು ಅತ್ಯಂತ ಅನೌಪಚಾರಿಕವಾಗಿರುತ್ತವೆ ಹಾಗೂ ಕಾನೂನಿನ ಪರಿಭಾಷೆಯೊಳಗೆ ಬರದಂತಹ ಏರ್ಪಾಡುಗಳಾಗಿರುತ್ತವೆ ಹಾಗೂ ಇಂತಹ ಏರ್ಪಾಡುಗಳಾಗಿವೆ ಅಥವಾ ಅಂತಹ ಸಾಧ್ಯತೆಗಳಿವೆ ಎನ್ನುವ ಸಮಯದಲ್ಲಿ ಇನ್ನೂ ಹೆಚ್ಚಿನ ನಿರ್ಬಂಧಗಳಿರುತ್ತವೆ. ಈ ಮುನ್ನ ಯಾವುದೇ ಉದ್ದಿಮೆ ಅಥವಾ ವ್ಯಾವಹಾರಿಕ ಸಂಸ್ಥೆ ತನ್ನ ಆಡಳಿತ ಹಾಗೂ ನೀತಿಗಳಲ್ಲಿ ಸರ್ಕಾರವನ್ನು ದೊಡ್ಡ ಮಟ್ಟದಲ್ಲಿ ಪ್ರಭಾವಿಸದಂತೆ ತಡೆಯೊಡ್ಡಲು ಹೆಚ್ಚು ಕಟ್ಟುನಿಟ್ಟಾದ ನಿಯಂತ್ರಣ ಮತ್ತು ನಿರ್ಬಂಧನೆಗಳನ್ನು ಹೇರಲಾಗಿತ್ತು. ಉದಾಹರಣೆಗೆ, ರಾಜಕೀಯ ಪಕ್ಷಗಳಿಗೆ ಯಾವುದೇ ಕಂಪನಿಯು ದೇಣಿಗೆ ನೀಡಬೇಕೆಂದಿದ್ದರೆ ಅವುಗಳು ತಮ್ಮ ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಆದ ಸರಾಸರಿ ನಿವ್ವಳ ಲಾಭದಲ್ಲಿ ಗರಿಷ್ಠ 7.5% ಮಾತ್ರ ನೀಡಬಹುದಾಗಿತ್ತು.

ಆದರೆ, ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯ ವಿಷಯದಲ್ಲಿ ಪಾರದರ್ಶಿಕತೆಯನ್ನು ತರುವ ನೆಪದಲ್ಲಿ ನ್ಯಾಷನಲ್ ಡೆಮಾಕ್ರೆಟಿಕ್ ಅಲಾಯನ್ಸ್ (ಎನ್‌ಡಿಎ) ಸರಕಾರವು ಮೋದಿಯ ನೇತೃತ್ವದಲ್ಲಿ ಈ ನಿಯಂತ್ರಣ ಕಾನೂನು ಮತ್ತು ನೀತಿಗಳಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿತು. ಅದರಿಂದ ಆಗಿದ್ದೇನೆಂದರೆ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಒಟ್ಟಾರೆ ಪ್ರಕ್ರಿಯೆಯು ಇನ್ನಷ್ಟು ಅಪಾರದರ್ಶಕವಾಯಿತು. ವಿರೋಧ ಪಕ್ಷಗಳ ಮೇಲೆ ಅನಧಿಕೃತ ನಿಯಂತ್ರಣಕ್ಕೆ ಮತ್ತು ಅವುಗಳನ್ನು ಮ್ಯಾನಿಪುಲೇಟ್ ಮಾಡುವುದಕ್ಕೆ ಎಡೆಮಾಡಿಕೊಟ್ಟಿತು, ಅಷ್ಟೇ ಅಲ್ಲದೇ, ದಾನಿಗಳ ಮೇಲೆಯೂ ನಿಯಂತ್ರಣ ಸಾಧಿಸಿದಂತಾಯಿತು ಹಾಗೂ ಶೆಲ್ ಕಂಪನಿಗಳ ಮೂಲಕ ಮನಿ ಲಾಂಡರಿಂಗ್‌ನ ಕೆಲಸವನ್ನು ಕಾನೂನುಬದ್ಧಗೊಳಿಸಿದಂತಾಯಿತು.

2018ರಲ್ಲಿ ಚುನಾವಣಾ ಬಾಂಡ್‌ಗಳನ್ನು ತರುವುದಕ್ಕೆ ಮುನ್ನ ಮೋದಿ ಸರಕಾರವು 2017ರಲ್ಲಿ ಕಂಪನೀಸ್ ಆಕ್ಟ್‌ಗೆ ತಿದ್ದುಪಡಿ ತಂದಿತು. ಅದರಿಂದ ಆಗಿದ್ದು, ರಾಜಕೀಯದಲ್ಲಿನ ಮತ್ತು ಕಾರ್ಪೊರೆಟ್ ಜಗತ್ತಿನ ನೀತಿಬಾಹಿರ ಶಕ್ತಿಗಳೆಲ್ಲವೂ ಒಂದೆಡೆ ಬಂದು, ಕಾನೂನುಬದ್ಧವಾಗಿರುವ ಒಂದು ರೀತಿಯ ಅಪವಿತ್ರ ಮೈತ್ರಿಯನ್ನು ರಚಿಸಿಕೊಳ್ಳಲು ಅನುವು ಮಾಡಿಕೊಟ್ಟಿತು; ಆಗ ಕಾರ್ಪೊರೆಟ್ ಕಂಪನಿಗಳಿಂದ, ಆ ಕಂಪನಿಗಳ ಅಮಾಯಕ ಷೇರುದಾರರಿಂದ ಮೌಲ್ಯದಿಂದ ಲೂಟಿ ಹೊಡೆಯಲು, ಕಪ್ಪುಹಣವನ್ನು ಬಿಳಿಹಣವಾಗಿ ಮಾರ್ಪಾಡಾಗಿಸಿ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮರಳಿ ತರಲು ರೌಂಡ್ ಟ್ರಿಪಿಂಗ್ ಮಾಡಲು ಮಾರಾಟ ಕಡಿಮೆ ತೋರಿಸುವುದು ಮುಂತಾದ ಕೃತ್ಯಗಳಿಗೆ ಎಡೆಮಾಡಿಕೊಟ್ಟಂತಾಯಿತು; ಇದು ಆಗಿದ್ದಕ್ಕೆ ಒಂದು ಮುಖ್ಯ ಕಾರಣ, ಆಯಾ ಕಂಪನಿಗಳ ಹಿಂದಿನ ಮೂರು ವರ್ಷಗಳಲ್ಲಿ ಸರಾಸರಿ ನಿವ್ವಳ ಲಾಭದಲ್ಲಿ 7.5% ಮಾತ್ರ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬೇಕೆಂಬ ನಿಯಮವನ್ನು ತೆಗೆದುಹಾಕಿದ್ದಕ್ಕೆ. ಇದರಿಂದ ನಿಜವಾಗಿ ಆಗಿದ್ದೇನೆಂದರೆ, ಆದಾಯದ ದಾಖಲೆಗಳಲ್ಲಿ ವಿಂಡೋ ಡ್ರೆಸಿಂಗ್ (ತೆರಿಗೆ ಉಳಿಸಲು ತಮ್ಮ ಬ್ಯಾಲೆನ್ಸ್ ಶೀಟ್‌ಅನ್ನು ತಿರುಚುವುದು) ಮಾಡುವುದರಲ್ಲಿ ನಿರತವಾಗುವುದು ಹೆಚ್ಚಿತು ಹಾಗೂ ರಾಜಕೀಯ ಪಕ್ಷಗಳಿಗೆ ಎಲ್ಲೆ ಇಲ್ಲದೇ ದೇಣಿಗೆ ನೀಡುವ ಹೆಸರಿನಲ್ಲಿ ಬ್ಯಾಲೆನ್ಸ್ ಶೀಟ್‌ಗಳಿಂದ ಹಣವನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಶುರುವಾಯಿತು. ಈ ತಿದ್ದುಪಡಿಯ ಪರಿಣಾಮವಾಗಿ ಶೆಲ್ ಕಂಪನಿಗಳಲ್ಲಿ ಹಣ ತೊಡಗಿಸಲೆಂದೇ ಇನ್ನೊಂದು ಶೆಲ್ ಕಂಪನಿಯನ್ನು ಸೃಷ್ಟಿಸಿ, ಆಡಳಿತಾರೂಢ ರಾಜಕೀಯ ಪಕ್ಷಗಳಿಗೆ ಯಾವುದೇ ನಿಯಂತ್ರಣವಿಲ್ಲದೇ, ಮುಂಚೆ ಇದ್ದ ಒಟ್ಟಾರೆ ಲಾಭದ 7.5%ನ ಮಿತಿಯ ನಿಯಂತ್ರಣವಿಲ್ಲದೇ ಲಂಚ ನೀಡಲು ದಾರಿ ಮಾಡಿಕೊಟ್ಟಂತಾಯಿತು.

ನಂತರ 2018ರಲ್ಲಿ ಇಂತಹ ಕಾನೂನುಬಾಹಿರವಾಗಿ ಹಣವನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸಲು (ಸಕ್ರಮಗೊಳಿಸಲು) ’ಚುನಾವಣಾ ಬಾಂಡ್‌ಗಳ ವ್ಯವಸ್ಥೆ’ಯನ್ನು ಪರಿಚಯಿಸಲಾಯಿತು. 2017ರ ಫೆಬ್ರುವರಿ 1ರಂದು ಒಕ್ಕೂಟ ಬಜೆಟ್ ಭಾಷಣದಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿಯು ಅತ್ಯಂತ ವ್ಯಂಗ್ಯವಾಗಿ ಹೇಳಿದ್ದೇನೆಂದರೆ, ಭಾರತದಲ್ಲಿ ರಾಜಕೀಯ ದೇಣಿಗೆ ನೀಡುವ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಈ ಕ್ರಮ ತರಲಾಗುತ್ತಿದೆ ಎಂದರು. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಿಕತೆ ಮತ್ತು ಹೊಣೆಗಾರಿಕೆಯನ್ನು ತರಲು ಈ ಚುನಾವಣಾ ಬಾಂಡ್ ಯೋಜನೆಯನ್ನು ತರಲಾಗಿದ್ದರೂ, ಈ ಯೋಜನೆಯ ವಿನ್ಯಾಸವು ತನ್ನ ಗುರಿಯ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬುದು ಸ್ಪಷ್ಟ.

ಚುನಾವಣಾ ಬಾಂಡ್‌ನ ಯೋಜನೆಯ ವಿನ್ಯಾಸದಲ್ಲಿ ಇರುವ ಅತ್ಯಂತ ಗಮನಾರ್ಹ ಲಕ್ಷಣವೆಂದರೆ 1000 ರೂಪಾಯಿಗಳಿಂದ 1 ಕೋಟಿ ರೂಪಾಯಿಗಳವರೆಗಿನ ಮೌಲ್ಯದಲ್ಲಿ ಬೀಯರರ್ ಇನ್‌ಸ್ಟ್ರುಮೆಂಟ್‌ನ್ನು ನೀಡುವ ಸ್ವರೂಪ; ಅದು ಪಾರದರ್ಶಿಕತೆ ಮತ್ತು ಹೊಣೆಗಾರಿಕೆಯ ನಿಟ್ಟಿನಲ್ಲಿ ಅತ್ಯಂತ ಗಂಭೀರವಾದ ಸಂಶಯಗಳನ್ನು ಸೃಷ್ಟಿಸುತ್ತದೆ. (ಬೀಯರರ್ ಇನ್‌ಸ್ಟ್ರುಮೆಂಟ್- ಆ ಇನ್‌ಸ್ಟ್ರುಮೆಂಟ್‌ಅನ್ನು ಹೊಂದಿರುವರಿಗೆ ಅದರ ಮೌಲ್ಯವು ಅನಾಮಧೇಯವಾಗಿ ಸಲ್ಲುತ್ತದೆ. ಅದು ಅದರ ಮೇಲೆ ದುಡ್ಡು ಕೊಟ್ಟಿದ್ದವರ ಅಥವಾ ಸ್ವೀಕರಿಸಿದ್ದವರ ಹೆಸರು ಇರುವುದಿಲ್ಲ.) ಅಂದರೆ ಈ ಪ್ರಕ್ರಿಯೆಗೂ ಮತ್ತು ಒಂದು ಪಕ್ಷಕ್ಕೆ ನಗದು ರೂಪದಲ್ಲಿ ಹಣ ಕೊಡುವುದಕ್ಕೂ ವ್ಯತ್ಯಾಸವಿಲ್ಲ. ಏಕೆಂದರೆ ನಗದು ಹಣವೂ ಬೀಯರರ್ ಇನ್‌ಸ್ಟ್ರುಮೆಂಟ್ ಆಗಿದೆ. ಆದರೆ ಹಣವನ್ನು ನಗದು ರೂಪದಲ್ಲಿ ನೀಡಲು ಗರಿಷ್ಠ 2000/- ರೂಪಾಯಿಯ ಮಿತಿ ಇದೆ. ಆದರೆ ಚುನಾವಣಾ ಬಾಂಡ್‌ಗಳ ಗರಿಷ್ಠ ಮಿತಿ 1 ಕೋಟಿ ರೂಪಾಯಿ. ನಗದು ಹಣ ಮತ್ತು ಚುನಾವಣಾ ಬಾಂಡ್‌ನಲ್ಲಿ ಇರುವ ಅನಾಮಧೇಯತೆಯ ಸ್ವರೂಪದಿಂದ ರಾಜಕೀಯ ಪಕ್ಷಗಳಿಗೆ ಅದರಲ್ಲೂ ಆಡಳಿತಾರೂಢ ಪಕ್ಷಗಳಿಗೆ ಲಂಚ ನೀಡುವುದು ಅತ್ಯಂತ ಸುಲಭವಾಗಿದೆ. ಈಗ ಚುನಾವಣಾ ಬಾಂಡ್ ಇಲ್ಲದೇ ಇರುವ ಸನ್ನಿವೇಶ ಕಲ್ಪಿಸಿಕೊಳ್ಳಿ; ಒಬ್ಬ ವ್ಯಕ್ತಿಯೋ ಅಥವಾ ಕಾರ್ಪೊರೆಟ್ ಕಂಪನಿಯೋ ಒಂದು ರಾಜಕೀಯ ಪಕ್ಷಕ್ಕೆ ನೂರು ಕೋಟಿ ರೂಪಾಯಿಯ ಲಂಚ ಕೊಡಬೇಕಾದರೆ, ಆಗ ಅವರು ಲಭ್ಯವಿರುವ 2000ದ ಅಥವಾ 500ರ ಅತ್ಯಂತ ದೊಡ್ಡ ಸಂಖ್ಯೆಯ ನೋಟುಗಳನ್ನು ಏರ್ಪಾಡು ಮಾಡಿ, ಅವುಗಳನ್ನು ಸೂಟ್‌ಕೇಸ್‌ನಲ್ಲಿ ಭದ್ರಗೊಳಿಸಿ ತಲುಪಿಸಬೇಕಾಗಬಹುದು; ಅದು ಸ್ವಾಭಾವಿಕವಾಗಿ ಅಪಾಯಕಾರಿ ನಡೆ. ಆದರೆ, ಮೋದಿ ಸರಕಾರ ತಂದ ಚುನಾವಣಾ ಬಾಂಡ್‌ಗಳು ಬಂದನಂತರ ಒಂದು ಪುಟ್ಟ ಚೀಲದಲ್ಲಿ 1 ಕೋಟಿಯ ಮೌಲ್ಯದ ನೂರು ಚುನಾವಣಾ ಬಾಂಡ್‌ಗಳನ್ನು ತೆಗೆದುಕೊಂಡು ಹೋದರೆ 100 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಸುಲಭವಾಗಿ ತಲುಪಿಸಬಹುದು. ಬಾಂಡ್ ನೀಡಿದವರ ಹೆಸರು ಇರುವುದಿಲ್ಲವಾದ್ದರಿಂದ ಅವನ್ನು ಅನಾಮಧೇಯವಾಗಿ ರಾಜಕೀಯ ಪಕ್ಷಗಳು ನಗದು ಮಾಡಿಕೊಳ್ಳಬಹುದು.

2018ರ ಜನವರಿ 2ರಂದು ಭಾರತ ಸರಕಾರದ ಬಜೆಟ್ ಡಿವಿಷನ್ ಆಫ್ ಮಿನಿಸ್ಟ್ರಿ ಆಫ್ ಫೈನಾನ್ಸ್ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯ ಪ್ರಕಾರ, “ಚುನಾವಣಾ ಬಾಂಡ್‌ಗಳಿಗೆ ಕೇವಲ 15 ದಿನಗಳ ಅವಧಿ ಇದ್ದು, ಆ ಅವಧಿಯಲ್ಲಿ ಅದನ್ನು ರೆಪ್ರಸೆಂಟೇಷನ್ ಆಫ್ ಪೀಪಲ್ಸ್ ಆಕ್ಟ್, 1951ರ (1951ರ 43ನೇ) ಸೆಕ್ಷನ್ 29ಎ ಅಡಿಯಲ್ಲಿ ನೋಂದಾಯಿಸಲಾದ ಹಾಗೂ ಲೋಕಸಭೆ ಅಥವಾ ವಿಧಾನಸಭೆಗೆ ನಡೆದ ಕಳೆದ ಚುನಾವಣೆಯಲ್ಲಿ ಒಟ್ಟು ಮತದಾನದ 1% ಗಿಂತಲೂ ಕಡಿಮೆ ಮತ ಪಡೆಯದೇ ಇದ್ದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಳಸಬಹುದಾಗಿದೆ”. ಇದರರ್ಥ ಬಿಜೆಪಿ, ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಜೆಡಿಎಸ್ ಮುಂತಾದ ದೊಡ್ಡ ಪಕ್ಷಗಳು ಮಾತ್ರ ದೇಣಿಗೆ ಪಡೆಯಲು ಅರ್ಹರಾಗಿರುತ್ತವೆ ಹಾಗೂ ಇದರಿಂದ ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಅವರನ್ನು ಪ್ರತಿನಿಧಿಸುವ ಪರ್ಯಾಯ, ಹೊಸ ಪಕ್ಷಗಳು ಈ ಬಾಂಡ್‌ಗಳ ಲಾಭ ಪಡೆಯದೇ ಅವುಗಳು ಬೆಳೆಯುವ ಸಾಧ್ಯತೆಗಳನ್ನು ತಡೆದಂತಾಗುತ್ತದೆ.

ಇನ್ನೊಂದು ವಿಷಯವೇನೆಂದರೆ, ಇಲ್ಲಿಯವರೆಗೆ ಆದ ಒಟ್ಟಾರೆ ಚುನಾವಣಾ ಬಾಂಡ್‌ಗಳಲ್ಲಿ 75% ಬಾಂಡ್‌ಗಳು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಜೆಪಿ ಪಕ್ಷಕ್ಕೇ ಹೋಗಿವೆ. ಮೋದಿ ಸರಕಾರದ ’ನಾ ಖಾವೂಂಗಾ, ನಾ ಖಾನೆದೂಂಗಾ’ (ತಿನ್ನಲ್ಲ, ತಿನ್ನಕ್ಕೆ ಬಿಡುವುದಿಲ್ಲ) ಎಂಬ ಘೋಷಣೆ, ಚುನಾವಣಾ ಬಾಂಡ್ ಪರಿಚಯಿಸುವ ಮತ್ತು ಕಂಪನಿಗಳ ರಾಜಕೀಯ ದೇಣಿಗೆಗೆ ಇದ್ದ 7.5% ಮಿತಿಯನ್ನು ತೆಗೆದುಹಾಕುವ ಕ್ರಮಗಳಿಗೆ ಹೊಂದಾಣಿಕೆಯಾಗುವುದಿಲ್ಲ. ಈ ಕ್ರಮಗಳು ಸೂಚಿಸುತ್ತಿರುವುದು ಸ್ಪಷ್ಟವಾಗಿದೆ – ಖಾವೂಂಗಾ, ಖಾನೆದೂಂಗಾ, ಕಾನೂನ್‌ಕೆ ಆಧಾರ್‌ಪೆ’ (ತಿನ್ನುವೆ, ತಿನ್ನಲು ಬಿಡುವೆ, ಅದೂ ಕಾನೂನಿನ ಆಧಾರದ ಮೇಲೆ”.

ಆದರ್ಶ ಐಯ್ಯರ್

ಆದರ್ಶ ಐಯ್ಯರ್
ಸಹ ಅಧ್ಯಕ್ಷರು, ಜನಾಧಿಕಾರ ಸಂಘರ್ಷ ಪರಿಷತ್ತು (ಜೆಸ್‌ಪಿ)


ಇದನ್ನೂ ಓದಿ: ಚುನಾವಣಾ ಬಾಂಡ್‌‌ ಪ್ರಕರಣದ ವಿಚಾರಣೆಗೆ ಒಪ್ಪಿಕೊಂಡ ಸುಪ್ರೀಂಕೋರ್ಟ್‌; ಏನಿದು ಚುನಾವಣಾ ಬಾಂಡ್‌?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ; ಬಂಗಾಳದಲ್ಲಿ ಮಾತ್ರ ಎರಡು ಹಂತದ ಮತದಾನ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ...

ಫ್ಲಿಪ್‌ಕಾರ್ಟ್‌ನಿಂದ 1 ರೂ.ಗೆ ಹಾಲು ಮಾರಾಟ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಮುಲ್‌ ಆಗ್ರಹ

ಫ್ಲಿಪ್‌ಕಾರ್ಟ್‌ ಸಂಸ್ಥೆಯು ಆನ್‌ಲೈನ್‌ ಮೂಲಕ 1 ರೂ.ಗೆ ಲೀಟರ್‌ ಹಾಲನ್ನು ಮಾರಾಟ ಮಾಡಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ, ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ...

“ಮಕ್ಕಳ ಹಂತಕನನ್ನು ಹುಡುಕಿ ಹತ್ಯೆ ಮಾಡುತ್ತೇವೆ” : ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂಬ ಇಸ್ರೇಲ್ ಸ್ಪಷ್ಟನೆ ಬೆನ್ನಲ್ಲೆ ಐಆರ್‌ಜಿಸಿ ಹೇಳಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿರುವುದಾಗಿ ವರದಿಯಾಗಿದೆ. ನೆತನ್ಯಾಹು ಅವರ ಹತ್ಯೆಯ ವದಂತಿಗಳನ್ನು ಇಸ್ರೇಲ್ ನಿರಾಕರಿಸಿದ ಬೆನ್ನಲ್ಲೇ, ಐಆರ್‌ಜಿಸಿ ಈ...

ಮಹಾರಾಷ್ಟ್ರ| ಇಫ್ತಾರ್ ಕೂಟಕ್ಕೆ ಸೇರಿದ್ದ ಮುಸ್ಲಿಮರ ಮೇಲೆ ಹಿಂದುತ್ವವಾದಿ ಗುಂಪಿನಿಂದ ದಾಳಿ

ರಂಜಾನ್‌ ಮಾಸದ ಉಪವಾಸ ಮುರಿಯಲು ನೆರೆದಿದ್ದ ಜನರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಫ್ತಾರ್ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಸುಮಾರು 100 ಕ್ಕೂ ಹೆಚ್ಚು...

ಆಸ್ಕರ್‌ ಅಂತಿಮ ಪಟ್ಟಿಗೆ ಆಯ್ಕೆಯಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ ಮತ್ತು ಆಕೆಯ ಸಂಬಂಧಿಕರನ್ನು ಇಸ್ರೇಲಿ ಸೈನಿಕರು ಭೀಕರವಾಗಿ ಹತ್ಯೆ ಮಾಡಿದ ಕಥೆಯನ್ನು ಹೇಳುವ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರವು 2026ರ ಆಸ್ಕರ್...

ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮನೆಯಲ್ಲಿ ಸವರ್ಣಿಯರಿಂದ ಹಲ್ಲೆ; ಬಂದೂಕಿನಿಂದ ಬೆದರಿಕೆ

ಮಾರ್ಚ್ 10 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರದ ತೀವ್ರ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 24 ಗಂಟೆಗಳ ಒಳಗೆ ಎಫ್‌ಐಆರ್...

’70 ಲಕ್ಷ ಬಂಗಾಳಿ ಮುಸ್ಲಿಮರನ್ನು ಹೊರದಬ್ಬಲು ಸಾಧ್ಯವಿಲ್ಲ..ಅವರೇ ದೇಶ ಬಿಡುವಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆ’: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸುಮಾರು 70 ಲಕ್ಷ 'ಬಂಗಾಳಿ ಮುಸ್ಲಿಮರ'ನ್ನು ಭಾರತದಿಂದ ಹೊರಹಾಕುವುದು 'ಮಾನವೀಯವಾಗಿ ಸಾಧ್ಯವಿಲ್ಲ'. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು. ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ...

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...