Homeಮುಖಪುಟಚುನಾವಣಾ ಬಾಂಡ್‌‌ ಪ್ರಕರಣದ ವಿಚಾರಣೆಗೆ ಒಪ್ಪಿಕೊಂಡ ಸುಪ್ರೀಂಕೋರ್ಟ್‌; ಏನಿದು ಚುನಾವಣಾ ಬಾಂಡ್‌?

ಚುನಾವಣಾ ಬಾಂಡ್‌‌ ಪ್ರಕರಣದ ವಿಚಾರಣೆಗೆ ಒಪ್ಪಿಕೊಂಡ ಸುಪ್ರೀಂಕೋರ್ಟ್‌; ಏನಿದು ಚುನಾವಣಾ ಬಾಂಡ್‌?

- Advertisement -
- Advertisement -

ಚುನಾವಣಾ ಬಾಂಡ್‌ಗಳ ವಿತರಣೆಯ ಕಾನೂನುಗಳನ್ನು ಪ್ರಶ್ನಿಸುವ ಪ್ರಕರಣವನ್ನು ವಿಚಾರಣೆ ಮಾಡುವುದಾಗಿ ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ. ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಕಾನೂನು ಸುದ್ದಿ ವೆಬ್‌ಸೈಟ್ ಬಾರ್ ಆಂಡ್‌ ಬೆಂಚ್ ವರದಿ ಮಾಡಿದೆ.

“ಅಬಕಾರಿ ದರವನ್ನು ತಡೆಯಲು ಕಲ್ಕತ್ತಾ ಮೂಲದ ಕಂಪನಿಯೊಂದು ಎಲೆಕ್ಟೋರಲ್ ಬಾಂಡ್‌ಗಳ ಮೂಲಕ 40 ಕೋಟಿ ರೂಪಾಯಿ ಪಾವತಿಸಿದೆ” ಎಂಬ ವರದಿಯನ್ನು ಪ್ರಶಾಂತ್‌ ಭೂಷಣ್ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದು,ಚುನಾವಣಾ ಬಾಂಡ್‌ ಪ್ರಜಾಪ್ರಭುತ್ವವನ್ನು ವಿರೂಪಗೊಳಿಸುತ್ತಿದೆ ಎಂದು ಅವರು ನ್ಯಾಯಾಲಯದಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯ ನ್ಯಾಯಮೂರ್ತಿ ರಮಣ, “ಅದನ್ನು ನಾನು ಪರಿಶೀಲಿಸುತ್ತೇನೆ. ಕೊರೊನಾ ಇಲ್ಲದಿದ್ದರೆ ಈ ಪ್ರಕರಣವನ್ನು ಕೈಗಿತ್ತಿಕೊಳ್ಳುತ್ತಿದ್ದೆ. ನೋಡೋಣ ಇದನ್ನು ವಿಚಾರಣೆ ಮಾಡುತ್ತೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಭಾವೈಕ್ಯತೆಯ ’ತಕ್ಕಡಿ’ಯಲ್ಲಿ ಭಿನ್ನ-ಭೇದವ ಮಾಡಬೇಡಿರೋ…!

ಇದಕ್ಕೆ ಉತ್ತರಿಸಿದ ಪ್ರಶಾಂತ್‌ ಭೂಷಣ್‌, “ಇದು ಬಹಳ ಗಂಭೀರ ವಿಷಯ” ಎಂದು ಪ್ರಕರಣವನ್ನು ಆಲಿಸುವಂತೆ ಒತ್ತಾಯಿಸಿದಾಗ, ನ್ಯಾಯಮೂರ್ತಿ ರಮಣ ಅವರು “ಹೌದು, ನಾವು ಪ್ರಕರಣವನ್ನು ಆಲಿಸುತ್ತೇವೆ” ಎಂದು ಪುನರುಚ್ಚರಿಸಿದ್ದಾರೆ.

ಏನಿದು ಚುನಾವಣಾ ಬಾಂಡ್‌?

ಚುಣಾವಣಾ ಬಾಂಡ್‌ಗಳನ್ನು 2017 ರ ಒಕ್ಕೂಟ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈ ಚುನಾವಣಾ ಬಾಂಡ್‌ಗಳು ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣವನ್ನು ದೇಣಿಗೆ ನೀಡಲು ಬಳಸುವ ಬಡ್ಡಿ ಮುಕ್ತ ವ್ಯವಸ್ಥೆಯಾಗಿದೆ. ಇವುಗಳನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) ನಿರ್ದಿಷ್ಟ ದಿನಗಳಂದು ವಿತರಣೆ ಮಾಡುತ್ತವೆ. ಒಂದು ಸಾವಿರ, 10 ಸಾವಿರ, ಒಂದು ಲಕ್ಷ, 10 ಲಕ್ಷ ಮತ್ತು ಒಂದು ಕೋಟಿ ರೂಗಳ ಚುನವಣಾ ಬಾಂಡ್‌ಗಳು ಇರುತ್ತವೆ.

2017 ರ ಬಜೆಟ್ ಭಾಷಣದಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇದನ್ನು ಮೊದಲು ಘೋಷಿಸಿದ್ದರು. ಆರಂಭದಲ್ಲಿ, ಚುನಾವಣಾ ಬಾಂಡ್‌ಗಳು ಕಂಪನಿಗಳು ತಮ್ಮ ಗುರುತನ್ನು ಬಹಿರಂಗಪಡಿಸದೆ ದೇಣಿಗೆ ನೀಡುವ ಮಾರ್ಗವಾಗಿ ಹೊರಹೊಮ್ಮಿದ್ದವು.

ಆದರೆ, ಈಗ ಅನಾಮಧೇಯ ವ್ಯಕ್ತಿಗಳು, ಜನರ ಗುಂಪುಗಳು, ಎನ್‌ಜಿಒಗಳು, ಧಾರ್ಮಿಕ ಮತ್ತು ಇತರ ಟ್ರಸ್ಟ್‌ಗಳು ತಮ್ಮ ವಿವರಗಳನ್ನು ಬಹಿರಂಗಪಡಿಸದೆ ಚುನಾವಣಾ ಬಾಂಡ್‌ಗಳ ಮೂಲಕ ಪಕ್ಷಗಳಿಗೆ ದೇಣಿಗೆ ನೀಡಲು ಅನುಮತಿಸಲಾಗಿದೆ.

2018-19ರಲ್ಲಿ ಚುನಾವಣಾ ಬಾಂಡ್ ಗಳ ಮೌಲ್ಯ 2539.58 ಕೋಟಿ ರೂ ಆಗಿದ್ದು, ಈ ಬಾಂಡ್‌‌ಗಳ ಮೂಲಕ ಬಿಜೆಪಿ, ಕಾಂಗ್ರೆಸ್, ಸಿಪಿಎಂ, ಬಿಎಸ್‌ಪಿ, ತೃಣಮೂಲ ಕಾಂಗ್ರೆಸ್, ಸಿಪಿಐ ಪಕ್ಷಗಳು 76%ರಷ್ಟು ಹಣವನ್ನು ಸ್ವೀಕರಿಸಿವೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು 2018-19ರಲ್ಲಿ ಚುನಾವಣಾ ಬಾಂಡ್ ಗಳ ಮೂಲಕ ಹಣವನ್ನು ಪಡೆದಿದ್ದು 2422.02 ಕೋಟಿ ಆಗಿದೆ.

ಈ ಅವಧಿಯಲ್ಲಿ ಆರು ರಾಜಕೀಯ ಪಕ್ಷಗಳ ಅದಾಯದ ಮೂರನೇ ಎರಡಷ್ಟು ಆದಾಯ ಬಿಜೆಪಿಗೆ ಬಂದಿದೆ ಎಂದು ವಿಶ್ಲೇಷಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದನ್ನೂ ಓದಿ: 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...