Homeಮುಖಪುಟತಮ್ಮ ಬಿಲಿಯನೇರ್ ಸ್ನೇಹಿತರ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಪ್ರಧಾನಿ ಮೋದಿ: ರಾಹುಲ್...

ತಮ್ಮ ಬಿಲಿಯನೇರ್ ಸ್ನೇಹಿತರ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಪ್ರಧಾನಿ ಮೋದಿ: ರಾಹುಲ್ ಗಾಂಧಿ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಿಲಿಯನೇರ್ ಸ್ನೇಹಿತರ 16 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪ ಮಾಡಿದ್ದು, “ಈ ಅಪರಾಧಕ್ಕಾಗಿ ದೇಶವು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಹೇಳಿದರು.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, “ಈ ಹಣವನ್ನು ಭಾರತೀಯರ ನೋವನ್ನು ಗುಣಪಡಿಸಲು ಬಳಸಬಹುದಿತ್ತು. ಆದರೆ, ‘ಅದಾನಿ’ಗಳಂತಹವರಿಗೆ ಪ್ರಚೋದನೆಯನ್ನು ಸೃಷ್ಟಿಸಲು ಖರ್ಚು ಮಾಡಲಾಗಿದೆ” ಎಂದು ಹೇಳಿದ್ದಾರೆ.

“ನರೇಂದ್ರ ಮೋದಿ ಅವರು ತಮ್ಮ ಕೋಟ್ಯಾಧಿಪತಿ ಸ್ನೇಹಿತರ 1,60,00,00,00,00,00,000 ಅಂದರೆ, 16 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿದ್ದಾರೆ. ಇಷ್ಟು ಹಣದಿಂದ 16 ಕೋಟಿ ಯುವಕರಿಗೆ ವರ್ಷಕ್ಕೆ 1 ಲಕ್ಷ ರೂಪಾಯಿ ಉದ್ಯೋಗ ಸಿಗುತ್ತಿತ್ತು. 16 ಕೋಟಿ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂಪಾಯಿ ನೀಡುವ ಮೂಲಕ 10 ಕೋಟಿ ರೈತ ಕುಟುಂಬಗಳ ಸಾಲ ಮನ್ನಾ ಮಾಡುವ ಮೂಲಕ ಅವರ ಕುಟುಂಬಗಳ ಬದುಕನ್ನು ಬದಲಾಯಿಸಬಹುದಿತ್ತು” ಎಂದಿದ್ದಾರೆ.

“ಇಡೀ ದೇಶಕ್ಕೆ ಕೇವಲ ₹400ಕ್ಕೆ 20 ವರ್ಷಕ್ಕಾಗುವಷ್ಟು ಗ್ಯಾಸ್ ಸಿಲಿಂಡರ್ ನೀಡಬಹುದಿತ್ತು. ಭಾರತೀಯ ಸೇನೆಯ ಸಂಪೂರ್ಣ ವೆಚ್ಚವನ್ನು 3 ವರ್ಷಗಳ ಕಾಲ ಭರಿಸಬಹುದಿತ್ತು. ದಲಿತ, ಹಿಂದುಳಿದ ಸಮಾಜ, ಬುಡಕಟ್ಟು ಮತ್ತು ಪ್ರತಿ ಯುವಕನಿಗೆ ಪದವಿವರೆಗಿನ ಶಿಕ್ಷಣವನ್ನು ಉಚಿತವಾಗಿ ನೀಡಬಹುದಿತ್ತು” ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

“ಭಾರತೀಯರ ನೋವನ್ನು ಗುಣಪಡಿಸಲು ಬಳಸಬಹುದಾದ ಹಣವನ್ನು ‘ಅದಾನಿ’ಗಳಂತಹವರಿಗೆ ಪ್ರಚಾರ ಮಾಡಲು ಖರ್ಚು ಮಾಡಲಾಗಿದೆ. ಈ ಅಪರಾಧವನ್ನು ದೇಶವು ನರೇಂದ್ರ ಮೋದಿಯವರನ್ನು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಹೇಳಿದರು.

“ಈಗ ಪರಿಸ್ಥಿತಿ ಬದಲಾಗಲಿದೆ; ಪ್ರತಿಯೊಬ್ಬ ಭಾರತೀಯನ ಪ್ರಗತಿಗಾಗಿ ಕಾಂಗ್ರೆಸ್ ಸರ್ಕಾರವನ್ನು ನಡೆಸುತ್ತದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ; FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ ಮೋದಿ ಹೇಳಿಕೆ ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...