Homeಮುಖಪುಟಉತ್ತರಪ್ರದೇಶ: ಮಾದಕ ದ್ರವ್ಯ ಕಳ್ಳಸಾಗಣೆ, ಜುಗಾರಿ,  ಭಿಕ್ಷೆ ಬೇಡುವುದನ್ನು 'ವೃತ್ತಿ' ಎಂದು ಪಟ್ಟಿ ಮಾಡಿದ ಪೊಲೀಸ್‌...

ಉತ್ತರಪ್ರದೇಶ: ಮಾದಕ ದ್ರವ್ಯ ಕಳ್ಳಸಾಗಣೆ, ಜುಗಾರಿ,  ಭಿಕ್ಷೆ ಬೇಡುವುದನ್ನು ‘ವೃತ್ತಿ’ ಎಂದು ಪಟ್ಟಿ ಮಾಡಿದ ಪೊಲೀಸ್‌ ಇಲಾಖೆಯ ಅಧಿಕೃತ ಅಪ್ಲಿಕೇಶನ್!

- Advertisement -
- Advertisement -

ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರಪ್ರದೇಶ ಸರಕಾರ ಮತ್ತೆ ಮುಜುಗರಕ್ಕೆ ಈಡಾಗಿದ್ದು, ಉತ್ತರಪ್ರದೇಶ ಪೊಲೀಸ್ ಮೊಬೈಲ್ ಅಪ್ಲಿಕೇಶನ್ UPCOPನಲ್ಲಿ ಬಾಡಿಗೆದಾರರ ಪರಿಶೀಲನೆಗಾಗಿ ವೃತ್ತಿ ಬಗ್ಗೆ ಪಟ್ಟಿ ಮಾಡಿದೆ. ಅವುಗಳಲ್ಲಿ ‘ಮಾದಕ ದ್ರವ್ಯಗಳ ಕಳ್ಳಸಾಗಣೆ’, ‘ಜುಗಾರಿ’,  ಮತ್ತು ‘ಭಿಕ್ಷೆ ಬೇಡುವುದನ್ನು ವೃತ್ತಿ ಎಂದು ಪಟ್ಟಿ ಮಾಡಲಾಗಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಯುಪಿ ಪೋಲಿಸರ ಈ ವೃತ್ತಿ ಪಟ್ಟಿಯ ಬಗ್ಗೆ ಟೀಕಿಸಿದ್ದಾರೆ. ಅಧಿಕಾರಿಗಳ ಗಮನಕ್ಕೆ ತರುವ ಉದ್ದೇಶದಿಂದ ಈ ಕುರಿತ ಸ್ಕ್ರೀನ್‌ ಶಾಟ್‌ಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಉತ್ತರಪ್ರದೇಶದ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಸ್ಕ್ರೀನ್‌ಶಾಟ್‌ಗಳನ್ನು ಗಮನಿಸಿದ್ದು ಅಧಿಕಾರಿಗಳು ಈ ಕುರಿತು ಗಮನ ಹರಿಸಿದ್ದಾರೆ ಎಂದು ಹೇಳಿದ್ದಾರೆ.

ಉತ್ತರಪ್ರದೇಶದ ಪೊಲೀಸರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ, ಇದನ್ನು ಸೂಚಿಸಿದ್ದಕ್ಕಾಗಿ ಧನ್ಯವಾದಗಳು. ಈ ಅಸಂಗತತೆಯನ್ನು ಸರಿಪಡಿಸಲು ನಾವು ಅಗತ್ಯ ಕ್ರಮವನ್ನು ಕೈಗೊಳ್ಳುತ್ತೇವೆ. ಇದು ಹೇಗೆ ಸಂಭವಿಸಿತು ಎಂಬುವುದರ ಕುರಿತು ಉತ್ತರಪ್ರದೇಶದ ಪೋಲಿಸ್‌ ಅಧಿಕಾರಿಗಳು ಇನ್ನೂ ಸ್ಪಷ್ಟವಾದ ವಿವರಣೆಯನ್ನು ನೀಡಿಲ್ಲ.

ಯುಪಿ ಪೋಲೀಸ್ ಅಪ್ಲಿಕೇಶನ್‌ನಲ್ಲಿ ಮಾಲಿಕರು ಬಾಡಿಗೆ ನೀಡುವಾಗ, ಬಾಡಿಗೆದಾರರ ಹಿನ್ನೆಲೆ ಪರಿಶೀಲನೆಗೆ ʼUPCOPʼ ಆ್ಯಪ್‌ ಬಳಸುತ್ತಾರೆ. ಅದಕ್ಕಾಗಿ ಸಿದ್ಧಪಡಿಸಲಾದ ಡೇಟಾಬೇಸ್‌ನ್ನು ಎನ್‌ಸಿಆರ್‌ಬಿ ಡೇಟಾದಿಂದ ಪಡೆಯಲಾಗಿದೆ.

UPCOP ಅಪ್ಲಿಕೇಶನ್‌ನ್ನು ದೂರುಗಳು, ವರದಿಗಳು ಮತ್ತು ಸಾಮಾನ್ಯ ಎಫ್‌ಐಆರ್‌ಗಳನ್ನು ಸಲ್ಲಿಸಲು ಬಳಸಲಾಗುತ್ತದೆ. ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, UPCOPನ್ನು ತಾಂತ್ರಿಕ ಸೇವಾ ವಿಭಾಗವು ಮೇಲ್ವಿಚಾರಣೆ ಮಾಡುತ್ತದೆ, ಇದು ADG ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿರುತ್ತದೆ. NCRB ಡೇಟಾ ಬದಲಾಗಿಲ್ಲ. ನಾವು ಈ ಬಗ್ಗೆ ಅಗತ್ಯ ಬದಲಾವಣೆಗಳನ್ನು ಸಹ ಬಯಸುತ್ತೇವೆ ಎಂದು ಹೇಳಿದ್ದಾರೆ.

ಉತ್ತರಪ್ರದೇಶ ಸರ್ಕಾರವು ಅಭಿವೃದ್ಧಿಪಡಿಸಿದ UPCOP ಅಪ್ಲಿಕೇಶನನ್ನು ಕೆಲವು ವರ್ಷಗಳ ಹಿಂದೆ ಪೊಲೀಸ್ ಸಹಾಯಕ್ಕಾಗಿ ಆನ್‌ಲೈನ್ ಸೇವೆಗಳನ್ನು ಸುಗಮಗೊಳಿಸಲು ಪ್ರಾರಂಭಿಸಲಾಯಿತು. ಅಪ್ಲಿಕೇಶನ್ ಬಳಕೆದಾರರಿಗೆ ದೂರುಗಳು, ಎಫ್‌ಐಆರ್‌ಗಳು ಮತ್ತು ಸೈಬರ್‌ಕ್ರೈಮ್ ಪ್ರಕರಣಗಳನ್ನು ದಾಖಲಿಸಲು ಅನುಮತಿಸುತ್ತದೆ.

ಇದನ್ನು ಓದಿ: ನನ್ನ ತಾಯಿ ದೇಶಕ್ಕಾಗಿ ಮಂಗಳಸೂತ್ರವನ್ನು ತ್ಯಾಗ ಮಾಡಿದ್ದಾರೆ: ಪ್ರಿಯಾಂಕ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...