Homeಮುಖಪುಟ'ಸಗಣಿ ಚಿಪ್' ಮೊಬೈಲ್ ಫೋನ್‌ಗಳ ವಿಕಿರಣ ತಡೆಹಿಡಿದು ಆರೋಗ್ಯ ರಕ್ಷಿಸುತ್ತದೆ: ಹೀಗೆ ಹೇಳಿದ್ದು ಯಾರು?

‘ಸಗಣಿ ಚಿಪ್’ ಮೊಬೈಲ್ ಫೋನ್‌ಗಳ ವಿಕಿರಣ ತಡೆಹಿಡಿದು ಆರೋಗ್ಯ ರಕ್ಷಿಸುತ್ತದೆ: ಹೀಗೆ ಹೇಳಿದ್ದು ಯಾರು?

ಆ ಚಿಪ್‌ಗೆ 'ಗೌಸತ್ವ ಕವಚ್' ಎಂದು ಹೆಸರಿಡಲಾಗಿದೆ. ಇದು ರಾಜಸ್ಥಾನ ಮೂಲದ ಶ್ರೀಜಿ ಗೌಶಾಲೆಯಲ್ಲಿ ತಯಾರಾಗುತ್ತದೆ ಎಂದಿದ್ದಾರೆ.

- Advertisement -
- Advertisement -

ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷರಾದ ವಲ್ಲಬ್‌ಭಾಯ್ ಕಥಿರೈ ಹೊಸ ಸಂಶೋಧನೆ ಮಾಡಿದ್ದಾರೆ. ಅವರ ಪ್ರಕಾರ ‘ಸಗಣಿಯಿಂದ ತಯಾರಿಸಿದ ಚಿಪ್’ ಮೊಬೈಲ್ ಫೋನ್‌ಗಳ ವಿಕಿರಣಗಳನ್ನು ತಡೆಹಿಡಿದು, ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ”.

ಸಗಣಿಯಿಂದ ತಯಾರಿಸಿದ ವಸ್ತುಗಳ ಪ್ರಚಾರಕ್ಕಾಗಿ ದೇಶಾದ್ಯಂತ ಆರಂಭವಾಗಿರುವ “ಕಾಮಧೇನು ದೀಪಾವಳಿ ಅಭಿಯಾನ” ವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಹಸುವಿನ ಸಗಣಿ ಎಲ್ಲರನ್ನು ರಕ್ಷಿಸುತ್ತದೆ. ಅದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದು ವಿಕಿರಣಗಳನ್ನು ತಡೆಯುತ್ತದೆ. ಮೊಬೈಲ್ ವಿಕಿರಣಗಳನ್ನು ಕಡಿಮೆ ಮಾಡಲು ಸಗಣಿಯಿಂದ ತಯಾರಿಸಿದ ಚಿಪ್ ಅನ್ನು ಬಳಸಬೇಕು. ಇದು ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ’ ಎಂದು ಪ್ರತಿಪಾದಿಸಿದ್ದಾರೆ.

ಆ ಚಿಪ್‌ಗೆ ‘ಗೌಸತ್ವ ಕವಚ್’ ಎಂದು ಹೆಸರಿಡಲಾಗಿದೆ. ಇದು ರಾಜಸ್ಥಾನ ಮೂಲದ ಶ್ರೀಜಿ ಗೌಶಾಲೆಯಲ್ಲಿ ತಯಾರಾಗುತ್ತದೆ. 2019ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಕಾಮಧೇನು ಆಯೋಗವು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಇದು ‘ಹಸುಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಅವುಗಳ ಸಂತತಿಯನ್ನು’ ಗುರಿಯಾಗಿರಿಸಿಕೊಂಡು ಕೆಲಸ ಮಾಡುತ್ತಿದೆ. ಅದು ಹಬ್ಬಗಳ ಸಮಯದಲ್ಲಿ ಸಗಣಿ ವಸ್ತುಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಅಭಿಯಾನ ನಡೆಸುತ್ತಿದೆ.

ಈ ದೀಪಾವಳಿ ಸಮಯದಲ್ಲಿ ಚೀನಾ ನಿರ್ಮಿತ ವಸ್ತುಗಳ ಬಳಕೆಯನ್ನು ನಿಲ್ಲಿಸುವಂತೆ ಜನರಲ್ಲಿ ವಲ್ಲಬ್‌ಭಾಯ್ ಕಥಿರೈ ಮನವಿ ಮಾಡಿದ್ದಾರೆ. ತಮ್ಮ ಈ ಅಭಿಯಾನವು ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಸ್ವದೇಶಿ ಚಳವಳಿಯ ಭಾಗವಾಗಿದೆ ಎಂದಿದ್ದಾರೆ.


ಇದನ್ನೂ ಓದಿ: ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ನಿಂದ ಗೋರಾಜಕೀಯ; ಬಿಜೆಪಿಯಿಂದ ತೀವ್ರ ವಿರೋಧ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...