ಕಳೆದ 24 ಗಂಟೆಗಳಲ್ಲಿ 55,342 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕಳೆದ ಎರಡು ತಿಂಗಳಿನಲ್ಲಿಯೇ ಅತ್ಯಂತ ಕಡಿಮೆ ಪ್ರಕರಣಗಳು ನಿನ್ನೆ ದಾಖಲಾಗಿದೆ.
ಹಲವು ದಿನಗಳಿಂದ ಭಾರತದ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಕುಸಿಯುತ್ತಿದೆ ಎಂದು ಆರೋಗ್ಯ ಸಚಿವಾಲಯ ಇಂದು ಬೆಳಿಗಿನ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ ಭಾರತದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 71.75 ಲಕ್ಷಕ್ಕೆ ತಲುಪಿದೆ.
ಇದನ್ನೂ ಓದಿ: 6 ಕೊರೊನಾ ಪ್ರಕರಣ ಪತ್ತೆ: ಇಡೀ ನಗರವನ್ನೇ ಪರೀಕ್ಷಿಸುತ್ತಿರುವ ಚೀನಾ ಆಡಳಿತ!
ದೇಶದಲ್ಲಿ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ ಈ ಹಿಂದೆ ಸರಾಸರಿ 90,000 ದಾಖಲಾಗುತ್ತಿತ್ತು. ಈಗ ಇದು ಸರಾಸರಿ 72,000 ರಿಂದ 74,000 ಕ್ಕೆ ಇಳಿದಿದೆ.
24 ಗಂಟೆಗಳಲ್ಲಿ, 77,760 ಸೋಂಕಿತರು ಗುಣಮುಖರಾಗಿದ್ದು, ಸಕ್ರಿಯ ಕೊರೊನಾ ವೈರಸ್ ಪ್ರಕರಣಗಳು 8.38 ಲಕ್ಷಕ್ಕೆ ಇಳಿದಿದೆ. ಇದು ಭಾರತದ ಚೇತರಿಕೆ ಪ್ರಮಾಣವನ್ನು ಶೇಕಡಾ 86.8 ಕ್ಕೆ ಹೆಚ್ಚಿಸಿದೆ. ಇದುವರೆಗೂ ಸುಮಾರು 62.2 ಲಕ್ಷ ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
ಇದನ್ನೂ ಓದಿ: ಕೊರೊನಾ ಮಾರ್ಗಸೂಚಿ ಉಲ್ಲಂಘನೆ: ಬಿಜೆಪಿ ಸಂಸದೆ ಕಛೇರಿ ಸೀಲ್!
ಇದುವರೆಗೂ ಸೋಂಕಿನಿಂದ ಸಂಭವಿಸಿದ ಒಟ್ಟು ಸಾವುಗಳ ಸಂಖ್ಯೆ 1,09,856 ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 706 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಆಗಸ್ಟ್ ಆರಂಭದಿಂದ ದಿನಕ್ಕೆ 800 ರಿಂದ 900 ಸಾವುಗಳು ವರದಿಯಾಗುತ್ತಿದ್ದು, ಸಾವಿನ ಪ್ರಮಾಣ ಶೇಕಡಾ 1.5 ರಷ್ಟು ಇದೆ.
ಸರ್ಕಾರವು ಸೋಮವಾರ ಒಂದೇ ದಿನ 10.7 ಲಕ್ಷ ಜನರನ್ನು ಪರೀಕ್ಷಿಸಿದ್ದರಿಂದ ಭಾರತದಲ್ಲಿ ದೈನಂದಿನ ಸೋಂಕಿತರ ದರವು ಶೇಕಡಾ 5.2 ರಷ್ಟಿದೆ. ಈವರೆಗೆ ಒಟ್ಟು 8.8 ಕೋಟಿ ಪರೀಕ್ಷೆಗಳನ್ನು ಮಾಡಲಾಗಿದೆ.
ಇದನ್ನೂ ಓದಿ: ಇನ್ನೂ ಹೆಚ್ಚಿನ ಕೊರೊನಾ ಪರಿಹಾರ ಸಾಧ್ಯವಿಲ್ಲ: ಸುಪ್ರೀಂಗೆ ಕೇಂದ್ರ ಸರ್ಕಾರ
ಗರಿಷ್ಠ ದೈನಂದಿನ ಕೊರೊನಾ ವೈರಸ್ ಪ್ರಕರಣಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಈ ರಾಜ್ಯಗಳು ದೇಶದ ಎಲ್ಲಾ ಪ್ರಕರಣಗಳಲ್ಲಿ ಶೇಕಡಾ 52.5 ರಷ್ಟನ್ನು ಹೊಂದಿದೆ.
ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳಲ್ಲಿ ಗರಿಷ್ಠ ಸಾವುಗಳು ಸಂಭವಿಸಿವೆ. ಈ ರಾಜ್ಯಗಳು ಒಟ್ಟು ಸಾವುಗಳಲ್ಲಿ ಶೇಕಡಾ 57 ರಷ್ಟನ್ನು ಹೊಂದಿದೆ.
ಇದನ್ನೂ ಓದಿ: ಲಕ್ಷದ್ವೀಪ: 8 ತಿಂಗಳಾದರೂ ಒಂದೂ ಕೊರೊನಾ ಸೊಂಕಿತರಿಲ್ಲದ ಪ್ರದೇಶ!
ಭಾರತ, ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳನ್ನು ಹೊಂದಿರುವ ದೇಶಗಳ ಪೈಕಿ ಅಮೇರಿಕಾದ ನಂತರದ ಎರಡನೇ ಸ್ಥಾನದಲ್ಲಿದೆ. ಪ್ರಸ್ತುತ ಅಮೇರಿಕಾದಲ್ಲಿ 78 ಲಕ್ಷ ಪ್ರಕರಣಗಳಿದ್ದು, 2 ಲಕ್ಷ ಸಾವುಗಳು ದಾಖಲಾಗಿವೆ. ಅಮೇರಿಕಾವನ್ನು ಹಿಂದಿಕ್ಕಿ, ಭಾರತ ಮೊದಲ ಸ್ಥಾನಕ್ಕೇರಲು ಕೇವಲ 6 ಲಕ್ಷ ಪ್ರಕರಣಗಳಷ್ಟೆ ಬಾಕಿಯಿವೆ.
ಇದನ್ನೂ ಓದಿ: 10 ಕೋಟಿ ಜನರನ್ನು ತೀವ್ರ ಬಡತನಕ್ಕೆ ದೂಡಲಿದೆ ಕೊರೊನಾ: ವಿಶ್ವಬ್ಯಾಂಕ್