Homeಕರ್ನಾಟಕನಕಲಿ ಖಾತೆ ಸೃಷ್ಟಿಸಿ ಕೊಡವರ ಕುಲದೇವಿಯ ಅವಹೇಳನ: ಅರೋಪಿ ದಿವಿನ್ ದೇವಯ್ಯ ಬಂಧನ

ನಕಲಿ ಖಾತೆ ಸೃಷ್ಟಿಸಿ ಕೊಡವರ ಕುಲದೇವಿಯ ಅವಹೇಳನ: ಅರೋಪಿ ದಿವಿನ್ ದೇವಯ್ಯ ಬಂಧನ

- Advertisement -
- Advertisement -

ಸಾಮಾಜಿಕ ಮಾಧ್ಯಮವಾದ ಇನ್ಸ್‌ಟಾಗ್ರಾಂನಲ್ಲಿ ನಕಲಿ ಖಾತೆಯೊಂದನ್ನು ಸೃಷ್ಟಿಸಿ, ಕೊಡವರ ಕುಲದೇವಿ ಕಾವೇರಿ ಮತ್ತು ಕೊಡವ ಹೆಣ್ಣುಮಕ್ಕಳನ್ನು ಅವಮಾನಿಸಿ ಪೋಸ್ಟ್‌ ಹಾಕಿದ್ದ ದುಷ್ಕರ್ಮಿಯನ್ನು ಮಡಿಕೇರಿ ನಗರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಆರೋಪಿಯನ್ನು ವಿರಾಜಪೇಟೆ ತಾಲೂಕಿನ, ಪಾಲಂಗಾಲ ಗ್ರಾಮದ ನಿವಾಸಿ ಪೊನ್ನಣ್ಣ ಅವರ ಮಗ ಕೆ.ಸಿ. ದಿವಿನ್ ದೇವಯ್ಯ(29) ಎಂದು ಗುರುತಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆರೋಪಿಯು ನಕಲಿ ಇನ್ಸ್‌ಟಾಗ್ರಾಂ ಖಾತೆ ತೆರೆದು ಜುಲೈ 3 ರಂದು ಕೊಡವ ಜನಾಂಗದ ಹೆಂಗಸರು ಮತ್ತು ಕೊಡವರ ಕುಲದೇವಿ ಕಾವೇರಮ್ಮೆಯ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಿದ್ದನು. ಈ ಹಿನ್ನಲೆಯಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಹಿಂಸಾಚಾರ ನಿರ್ದಿಷ್ಟ ಸಮುದಾಯಗಳನ್ನು ಮಾತ್ರ ಗುರಿಮಾಡುವುದಿಲ್ಲ, ಸಮಾಜವನ್ನು ಇಡಿಯಾಗಿ ವ್ಯಾಪಿಸುತ್ತದೆ; ಪ್ರತಾಪ್‌ ಭಾನು ಮೆಹತಾ

ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಮಾಹಿತಿ ತಂತ್ರಜ್ಞನವನ್ನು ಬಳಸಿ ಆರೋಪಿ ದಿವಿನ್ ದೇವಯ್ಯನನ್ನು ಬಂಧಿಸಿರುವ ಮಡಿಕೇರಿ ನಗರ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ ಅನ್ನೂ ಪತ್ತೆ ಹಚ್ಚಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗಿ ಪೊಲೀಸರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಪೊಲೀಸರು ಅಪರಾಧಿಯನ್ನು ಪತ್ತೆ ಹಚ್ಚುವ ಉದ್ದೇಶದಿಂದ ಮುಂಬೈನಲ್ಲಿ ಇರುವ ಫೇಸ್‌ಬುಕ್‌ ಕಚೇರಿಯನ್ನು ಸಂಪರ್ಕಿಸಿ, ಬಳಿಕ ಕ್ಯಾಲಿಫೋರ್ನಿಯಾದಲ್ಲಿರುವ ಮುಖ್ಯ ಕಚೇರಿ ಮೂಲಕ ನೈಜ ಆರೋಪಿಯನ್ನು ಬಂಧಿಸಿದ್ದಾಗಿ ವರದಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...