Homeಅಂಕಣಗಳುರೈತ ಹೋರಾಟದಲ್ಲಿ ಗಾಂಧಿ- ಅಂಬೇಡ್ಕರ್ ವಿಚಾರಗಳು

ರೈತ ಹೋರಾಟದಲ್ಲಿ ಗಾಂಧಿ- ಅಂಬೇಡ್ಕರ್ ವಿಚಾರಗಳು

ಜಾತಿ ಅಥವಾ ಕಸುಬಿನಿಂದ ತಮ್ಮನ್ನು ಗುರುತಿಸಿಕೊಳ್ಳುವಂತೆ ನ್ಯಾಯಾಧೀಶರು ಗಾಂಧೀಜಿಯನ್ನು ಕೇಳಿದರು. ’ನಾನೊಬ್ಬ ರೈತ ಮತ್ತು ನೇಕಾರ’ ಎಂದಿದ್ದರು ಗಾಂಧಿ.

- Advertisement -
- Advertisement -

ಬಿಳಿತೊಗಲಿನ ಬ್ರಿಟಿಷರಿಂದ ಚಂಪಾರಣ್ ರೈತ ಹೋರಾಟದಲ್ಲಿ ನ್ಯಾಯ ಕೇಳಿದ ಗಾಂಧಿ ಈಗ ಇಲ್ಲ. ಇದ್ದಿದ್ದರೆ ಅವರು ಕೂಡ ದೇಶದ್ರೋಹದ ಅಪಾದನೆ ಹೊತ್ತು ಜೈಲಿನಲ್ಲಿ ಕೊಳೆಯುತ್ತಿದ್ದರು.

1922ರ ಮಾರ್ಚ್ ತಿಂಗಳು. ದೇಶದ್ರೋಹದ ಆಪಾದನೆಯ ಮೇರೆಗೆ ಗಾಂಧೀಜಿಯವರನ್ನು ಬಂಧಿಸಿ ಅಹಮದಾಬಾದಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅಂದು ಜಾರಿಯಲ್ಲಿದ್ದ ಕಾನೂನಿನ ಪ್ರಕಾರ, ಜಾತಿ ಅಥವಾ ಕಸುಬಿನಿಂದ ತಮ್ಮನ್ನು ಗುರುತಿಸಿಕೊಳ್ಳುವಂತೆ ನ್ಯಾಯಾಧೀಶರು ಗಾಂಧೀಜಿಯನ್ನು ಕೇಳಿದರು. ’ನಾನೊಬ್ಬ ರೈತ ಮತ್ತು ನೇಕಾರ’ ಎಂದರು ಗಾಂಧಿ. ಚಕಿತಗೊಂಡ ನ್ಯಾಯಾಧೀಶ ಪುನಃ ಅದೇ ಪ್ರಶ್ನೆ ಕೇಳಿದರು. ಗಾಂಧೀ ಅದೇ ಉತ್ತರವನ್ನೂ ನೀಡಿದರು.

ತಮ್ಮ ಧಮನಿಗಳಲ್ಲಿ ಹರಿಯುತ್ತಿರುವುದು ಝಣ ಝಣ ಹಣ ಮತ್ತು ವ್ಯಾಪಾರ ಎನ್ನುತ್ತಾರೆ ಅದೇ ಗುಜರಾತಿನ ನೆಲದಲ್ಲಿ ಹುಟ್ಟಿ ಬಂದಿರುವ ಪ್ರಧಾನ ಸೇವಕ ನರೇಂದ್ರ ಮೋದಿ. ದೆಹಲಿಯ ಗಡಿಗಳ ಬಟಾಬಯಲುಗಳಲ್ಲಿ ಭಾರೀ ರೈತ ಸಮೂಹಗಳು, ನಾಲ್ಕೈದು ಡಿಗ್ರಿಗೆ ಕುಸಿದ ಎಲುಬು ಕೊರೆಯತೊಡಗಿರುವ ಥಂಡಿಯಲ್ಲಿ ಸತ್ಯಾಗ್ರಹದಲ್ಲಿ ತೊಡಗಿವೆ. ರೈತರನ್ನು ಶೋಷಣೆಯ ಬಾಣಲೆಯಿಂದ ಕಡುಶೋಷಣೆಯ ಉರಿಬೆಂಕಿಗೆ ತಳ್ಳುವ ಕರಾಳ ಕಾನೂನುಗಳನ್ನು ವಾಪಸು ಪಡೆಯಬೇಕೆಂದು ಶಾಂತಿಯುತ ಆಗ್ರಹದಲ್ಲಿ ತೊಡಗಿ ಇನ್ನೇನು ತಿಂಗಳೊಪ್ಪತ್ತು ಉರುಳಲಿದೆ. ಮಣ್ಣನ್ನು ಉತ್ತು ಅನ್ನ ಬೆಳೆದುಕೊಡುವ ರೈತ ಅಕ್ಷರಶಃ ಬೀದಿಪಾಲಾಗಿದ್ದಾನೆ. ಹೀಗಿದ್ದಾಗ ದೇಶವನ್ನು ಆಳುವ ನಾಯಕನಿಗೆ ಎದೆಯಲ್ಲಿ ನೀರಿನ ಪಸೆಯಂತಹದು ಏನಾದರೂ ಉಳಿದಿದ್ದರೆ ಆತ ನಿದ್ದೆ ನೀರಡಿಕೆಗಳನ್ನು ಕಳೆದುಕೊಳ್ಳಬೇಕು. ಆದರೆ ಪ್ರಧಾನಮಂತ್ರಿಯವರು ಸುಖದ ಸುಪ್ಪತ್ತಿಗೆಗೆ, ಆಮೋದ ಪ್ರಮೋದಗಳಿಗೆ ಯಾವ ಭಂಗವೂ ಬಂದಂತಿಲ್ಲ.

ವ್ಯವಸಾಯವೇ ಭಾರತದ ಅರ್ಥವ್ಯವಸ್ಥೆಯ ಬೆನ್ನೆಲುಬು ಎಂದಿದ್ದರು ಮಹಾತ್ಮಾ ಗಾಂಧಿ. ಈ ಮಾತುಗಳನ್ನು ಇಂದು ಕೂಡ ಹೆಚ್ಚು ಬದಲಾಯಿಸಬೇಕಿಲ್ಲ. ಬಹುದೊಡ್ಡ ಪ್ರಮಾಣದ ಜನಸಂಖ್ಯೆ ಉದ್ಯೋಗಕ್ಕಾಗಿ ಇಂದಿಗೂ ಆಧರಿಸಿರುವುದು ಕೃಷಿಯನ್ನೇ.

ಆದರೆ ಬಾಬಾಸಾಹೇಬ ಅಂಬೇಡ್ಕರ್ ಗಾಂಧೀಜಿಗಿಂತ ಭಿನ್ನ ನಿಲುವನ್ನು ಹೊಂದಿದ್ದನ್ನು ಇಲ್ಲಿ ದಾಖಲಿಸಲೇಬೇಕಿದೆ. ಅವರ ಈ ನಿಲುವು ಒಕ್ಕಲುತನದಿಂದ ದೂರವಿಟ್ಟ ಭೂವಂಚಿತ ದಲಿತ ಸಮುದಾಯಗಳನ್ನೂ ದೃಷ್ಟಿಯಲ್ಲಿಟ್ಟುಕೊಂಡಿತ್ತು. ಅವರು ಪ್ರತಿಪಾದಿಸಿದ ಕೃಷಿ ನೀತಿಯಲ್ಲಿ ಜಾತಿವಿನಾಶದ ಬೀಜಗಳಿದ್ದವು. ಸಮಾಜವಾದಿ ಮೂಲದ ನಗರೀಕರಣ ಮತ್ತು ಕೈಗಾರಿಕೀಕರಣವನ್ನು ಕೃಷಿ ನೀತಿ ಒಳಗೊಳ್ಳಬೇಕು ಎಂದಿದ್ದರು. ಭೂಮಾಲೀಕನ ದರ್ಪ ಮತ್ತು ಭೂಮಿಹೀನನ ದೈನ್ಯವನ್ನು ಅಳಿಸಿ ಹಾಕುವ ಅವರ ಕೃಷಿ ನೀತಿ ಅತ್ಯಂತ ಕ್ರಾಂತಿಕಾರಿಯಾಗಿತ್ತು ಎಂದು ನೆನೆಯುತ್ತಾರೆ ಚಿಂತಕ ಶಿವಸುಂದರ್.

ಇದನ್ನೂ ಓದಿ: ‘ಕೃಷಿ ಸುಧಾರಣೆಯಲ್ಲಿ ಜಾತಿ ವಿನಾಶದ ಬೀಜಗಳಿವೆ’ – ಕೃಷಿ ಕುರಿತ ಅಂಬೇಡ್ಕರ್ ಚಿಂತನೆಗಳು

“ಭಾರೀ ಜನಸಂಖ್ಯೆ ಮತ್ತು ಅತ್ಯಲ್ಪ ಸಾಗುವಳಿ ಭೂಮಿಯ ಅರ್ಥವೇನೆಂದರೆ, ಕೃಷಿಯನ್ನು ಆಧರಿಸಿರುವ ಜನಸಂಖ್ಯೆಯ ಬಹುಪಾಲು ಕೆಲಸವಿಲ್ಲದೆ ಕಾಲಹರಣದಲ್ಲಿ ತೊಡಗುವುದು. ನಿರರ್ಥಕವಾಗಿರುವ ಈ ಅಪಾರ ಶ್ರಮವನ್ನು ಸಾರ್ಥಕ ಉತ್ಪಾದನೆಗೆ ತೊಡಗಿಸಿದರೆ ಪರಸ್ಪರರನ್ನು ಸುಲಿದು ತಿನ್ನುವುದು ನಿಲ್ಲುತ್ತದೆ. ಹೆಚ್ಚುವರಿ ಉತ್ಪಾದನೆಯೂ ಸಾಧ್ಯ. ಹೆಚ್ಚು ಉತ್ಪಾದನೆಯ ಅರ್ಥ ಹೆಚ್ಚು ಬಂಡವಾಳದ ಸೃಷ್ಟಿ. ಚುಟುಕಾಗಿ ಹೇಳಬೇಕೆಂದರೆ ಭಾರತದ ಕೈಗಾರಿಕೀಕರಣವೇ ಭಾರತದ ಕೃಷಿ ಸಮಸ್ಯೆಗಳಿಗೆ ಸಮರ್ಥ ಪರಿಹಾರ…” ಎಂದಿದ್ದರು ಬಾಬಾಸಾಹೇಬರು. ಆದರೆ ಬಾಬಾಸಾಹೇಬರ ಕಲ್ಪನೆಯ ಸಮಾಜವಾದಿ ಆಶಯದ ನಗರೀಕರಣ ಮತ್ತು ಕೈಗಾರಿಕೀಕರಣದಿಂದ ಇಂದಿನ ಭಾರತ ಬಹುದೂರ ಸಾಗಿ ಹೋಗಿದೆ.

ಬಂಡವಾಳಶಾಹಿ ಕ್ರೌರ್ಯ ಅದರ ರಕ್ತದ ಕಣಕಣಗಳಲ್ಲಿ ತುಂಬಿ ಹೋಗಿದೆ. ಭಾರತದ ರೈತಾಪಿ ಬದುಕಿನೊಂದಿಗೆ ಗಾಂಧೀಜಿಯ ಮೊದಲ ಮತ್ತು ನೇರ ಮುಖಾಮುಖಿ ಆಗಿದ್ದು ಉತ್ತರಬಿಹಾರದ ಚಂಪಾರಣ್‌ನಲ್ಲಿ. ಸಾಮ್ರಾಜ್ಯಶಾಹಿಯ ವಿರುದ್ಧ ಮುಂಬರುವ ದಶಕಗಳಲ್ಲಿ ಗಾಂಧೀಜಿ ಸಾರುವ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಮುಂತಾದ ಸ್ವಾತಂತ್ರ್ಯ ಹೋರಾಟದ ಹಲವು ಸಮರಗಳಿಗೆ ಪೂರ್ವಸಿದ್ಧತೆಯ ಕಸುವನ್ನು ನೀಡಿದ್ದು ಚಂಪಾರಣ್ ರೈತ ಹೋರಾಟ. ಸತ್ಯಾಗ್ರಹ ಎಂಬ ಗಾಂಧೀ ಹೋರಾಟದ ಪರಿಕಲ್ಪನೆಯ ಪ್ರಯೋಗಶಾಲೆಯಾಗಿದ್ದು ಇದೇ ನೀಲಿ ಸತ್ಯಾಗ್ರಹ. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಭಾರತೀಯರ ಪ್ರತಿರೋಧದ ಪ್ರತೀಕವಾಯಿತು.

PC : The Irish Times

ಬ್ರಿಟನ್‌ನ ತನ್ನ ಜವಳಿ ಗಿರಣಿಗಳಿಗೆ ಕಚ್ಚಾವಸ್ತು ಪೂರೈಕೆಗಾಗಿ ನೀಲಿ ಬೆಳೆಯುವಂತೆ ಚಂಪಾರಣ್ ರೈತರನ್ನು ಬಲವಂತಪಡಿಸುತ್ತದೆ ಬ್ರಿಟಿಷ್ ಸರ್ಕಾರ. ಅದನ್ನು ತೀರಾ ಅಗ್ಗದ ದರಗಳನ್ನು ನೀಡಿ ಖರೀದಿಸುತ್ತದೆ. ತನ್ನ ಈ ಹುಕುಂಅನ್ನು ಉಲ್ಲಂಘಿಸಿದ ರೈತರ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಈ ಸೀಮೆಗೆ ಭೇಟಿ ನೀಡುವ ಗಾಂಧಿ ಐದಾರು ತಿಂಗಳ ಕಾಲ ಅಲ್ಲಿಯೇ ನೆಲೆಸುತ್ತಾರೆ. ಮಣ್ಣಿನ ಮಕ್ಕಳ ವಿಶ್ವಾಸ ಸಂಪಾದಿಸುತ್ತಾರೆ. ಅವರ ಕಷ್ಟ ಕಣ್ಣೀರುಗಳನ್ನು ಅರಿಯುತ್ತಾರೆ. ಆರೇ ವಾರಗಳಲ್ಲಿ ಏಳು ಸಾವಿರ ಮಂದಿಯ ಹೇಳಿಕೆಗಳನ್ನು ಖುದ್ದು ಸಂಗ್ರಹಿಸುತ್ತಾರೆ. ಅವುಗಳನ್ನು ಆಳುವವರ ಮುಂದಿಡುತ್ತಾರೆ. ಬಿಹಾರ ಸರ್ಕಾರ ಚಂಪಾರಣ್ ಕೃಷಿ ವಿಚಾರಣಾ ಸಮಿತಿಯನ್ನು ನೇಮಕ ಮಾಡುತ್ತದೆ. ನಾಲ್ವರು ಐಸಿಎಸ್ ಅಧಿಕಾರಿಗಳು ಮತ್ತು ಗಾಂಧೀಜಿ ಸೇರಿದಂತೆ ಏಳು ಮಂದಿ ಸದಸ್ಯರು. ಕೆಲವೇ ತಿಂಗಳುಗಳಲ್ಲಿ ಈ ಸಮಿತಿ ಸಲ್ಲಿಸುವ ವರದಿ ಬಹುತೇಕ ರೈತ ಹಿತದ ಪರವಾಗಿರುತ್ತದೆ. ರೈತರ ತಲೆಯ ಮೇಲೆ ತೂಗಿದ ನೀಲಿ ಬೆಳೆಯುವ ಕಡ್ಡಾಯದ ಕತ್ತಿಯನ್ನು ನಿವಾರಿಸುತ್ತಾರೆ.

ತಮ್ಮ ಎದುರಾಳಿ ಬ್ರಿಟಿಷ್ ವಸಾಹತುಶಾಹಿಯ ಆಳ ಅಗಲಗಳ ತಿಳಿವಳಿಕೆಯನ್ನು ಗಾಂಧೀಜಿಗೆ ನೀಡಿದ ಆಂದೋಲನವಿದು. ಮುಂಬರುವ ದಶಕಗಳಲ್ಲಿ ಜನಸಮೂಹಗಳ ಮನ ಗೆಲ್ಲುವ ವಿಶ್ವಾಸವನ್ನು ಗಾಂಧೀಜಿಗೆ ನೀಡಿದ್ದು ಇದೇ ಚಂಪಾರಣ್.

ದೆಹಲಿಯ ಗಡಿಗಳಲ್ಲಿ ನಡೆದಿರುವ ರೈತ ಹೋರಾಟ ಸ್ವತಂತ್ರ ಭಾರತದ ಸರ್ವಾಧಿಕಾರಿ ಮತ್ತು ರೈತವಿರೋಧಿ ಆಡಳಿತದ ವಿರುದ್ಧ ಚಂಪಾರಣ್ ಮಾದರಿಯ ತಿಳಿವಳಿಕೆಯನ್ನೂ ಸ್ಫೂರ್ತಿ ಪ್ರೇರಣೆಗಳನ್ನು ನೀಡುತ್ತದೆಯೇ ಕಾದು ನೋಡಬೇಕಿದೆ.

ನೂರು ವರ್ಷಗಳ ಹಿಂದಿನ ಚಂಪಾರಣ್ ರೈತರ ಸ್ಥಿತಿಯೇ ಇಂದಿನ ಭಾರತದ ರೈತರ ಸ್ಥಿತಿಗತಿಯೂ ಆಗಿದೆ ಎನ್ನುತ್ತಾರೆ ಗಾಂಧೀಜಿಯ ಮೊಮ್ಮಗ ತುಷಾರ್ ಗಾಂಧಿ. ಅತಿ ದೀನ ದಲಿತ ರೈತರ ಶೋಷಣೆ ಇಂದಿಗೂ ನಿಂತಿಲ್ಲ. ಬ್ರಿಟಿಷರ ಭಾರತದಲ್ಲಿ ಲಾಭಬಡುಕತನವೇ ರೈತರ ಶೋಷಣೆಯ ಮೂಲವಾಗಿತ್ತು. ಸ್ವತಂತ್ರ ಭಾರತದಲ್ಲಿಯೂ ಈ ಸ್ಥಿತಿ ಬದಲಾಗಿಲ್ಲ. ಕಚ್ಚಾ ಉತ್ಪನ್ನವನ್ನು ಬಿಕರಿಗಿಟ್ಟ ರೈತ ಮತ್ತು ಸಿದ್ಧ ಉತ್ಪನ್ನವನ್ನು ಖರೀದಿಸುವ ಬಳಕೆದಾರ ಇಬ್ಬರ ಕಣ್ಣಿಗೂ ಸುಣ್ಣವೇ. ಬೆಣ್ಣೆ ಉಣ್ಣುವವರು ಅಂದೂ ಪೊಗದಸ್ತಾಗಿದ್ದರು, ಇಂದೂ ಪೊಗದಸ್ತಾಗೇ ಮೆರೆದಿದ್ದಾರೆ.

ನೀಲಿ ಸತ್ಯಾಗ್ರಹ ಇಂದು ಹಿಂದೆಂದಿಗಿತ ಹೆಚ್ಚು ಪ್ರಸ್ತುತ. ತುಳಿತಕ್ಕೆ ಒಳಗಾದವರಿಗೆ ಶಕ್ತಿಯನ್ನು ಕೊಟ್ಟ ಆಂದೋಲನ ಅದು. ’ನೀಲಿ ಸತ್ಯಾಗ್ರಹ’ವನ್ನು ಸ್ವತಂತ್ರ ಭಾರತದಲ್ಲಿ ಕಟ್ಟುವುದು ಬ್ರಿಟಿಷರ ಭಾರತದಲ್ಲಿ ಕಟ್ಟಿದ್ದಕ್ಕಿಂತ ಕಷ್ಟದ ಕೆಲಸ ಎಂಬುದನ್ನು ಮೋದಿ ಸರ್ಕಾರ ಮನವರಿಕೆ ಮಾಡಿಕೊಡತೊಡಗಿದೆ.

ರೈತರನ್ನು ಬಾಧಿಸುವ ಸಂಗತಿಗಳು ಅಂತಿಮವಾಗಿ ಇಡೀ ಸಮಾಜವನ್ನು ಬಾಧಿಸುತ್ತವೆ ಎಂಬ ಆಳದ ತಿಳಿವಳಿಕೆ ಗಾಂಧೀಜಿಗೆ ಇತ್ತು. ಇಂತಹ ಅರಿವಿನ ಬೀಜವನ್ನು ಮೋದಿಯವರ ಕಲ್ಲೆದೆಯಲ್ಲಿ ಬಿತ್ತಿ ಬೆಳೆಯುವ ಅಸಾಧ್ಯ ಸವಾಲನ್ನು ಇಂದಿನ ರೈತ ಆಂದೋಲನ ಎದುರಿಸಿದೆ.

ರೈತರನ್ನು ಶೋಷಿಸುವ ಚಂಪಾರಣ್‌ಗಳು ಸ್ವತಂತ್ರ ಭಾರತದಲ್ಲಿ ಇನ್ನಷ್ಟು ಹುಲುಸಾಗಿ ಬೆಳೆದಿವೆ. ಕೊಬ್ಬಿ ಹಬ್ಬಿವೆ. ನೂರಾರು ಚಂಪಾರಣ್‌ಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳತೊಡಗಿರುವ ಸಾವಿರಾರು ರೈತ ಕುಟುಂಬಗಳ ಕಷ್ಟ ಕಣ್ಣೀರುಗಳ ಕಥನಗಳನ್ನು ಆಲಿಸಲು, ಅವುಗಳನ್ನು ಕಂದು ತೊಗಲಿನ ಸಾಹೇಬರುಗಳ ಸರ್ಕಾರದ ಮುಂದಿರಿಸಿ ನ್ಯಾಯ ಕೇಳುವ ಗಾಂಧಿ ಈಗ ಇಲ್ಲ. ಇದ್ದಿದ್ದರೆ ಅವರು ಆಜೀವ ಪಯಂತ ಜೈಲಿನಲ್ಲಿ ಕೊಳೆಯುತ್ತಿದ್ದರು.


ಇದನ್ನೂ ಓದಿ: ಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...