Homeಅಂಕಣಗಳುಬಹುಜನ ಭಾರತ; ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆ: ಬಲಿತ ಬಲಪಂಥ

ಬಹುಜನ ಭಾರತ; ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆ: ಬಲಿತ ಬಲಪಂಥ

- Advertisement -
- Advertisement -

ಫ್ರಾನ್ಸ್ ದೇಶದ ಅಧ್ಯಕ್ಷರಾಗಿ ಇಮ್ಯಾನ್ಯುಯಲ್ ಮ್ಯಾಕ್ರಾನ್ ಮತ್ತೆ ಆರಿಸಿ ಬಂದಿದ್ದಾರೆ. ಅವರ ಕಡು ಬಲಪಂಥೀಯ ಎದುರಾಳಿ ಮೆರೀನ್ ಲಿ ಪೆನ್ ಸೋತಿದ್ದಾರೆ. ಐರೋಪ್ಯ ಒಕ್ಕೂಟದ ಬಹುಮುಖ್ಯ ದೇಶವೊಂದರ ಅಧಿಕಾರ ಸೂತ್ರ ಬಲಪಂಥೀಯರ ಕೈ ತಪ್ಪಿದ ಈ ಬೆಳವಣಿಗೆಯಿಂದ ಇಡೀ ಯೂರೋಪ್ ನಿರಾಳ ನಿಟ್ಟುಸಿರು ಚೆಲ್ಲಿದೆ.

ಐರೋಪ್ಯ ಒಕ್ಕೂಟದ (ಯೂರೋಪಿಯನ್ ಯೂನಿಯನ್) ಎರಡನೆಯ ಅತಿದೊಡ್ಡ ಅರ್ಥವ್ಯವಸ್ಥೆಯುಳ್ಳ ದೇಶ ಫ್ರಾನ್ಸ್. ಮೊನ್ನೆ ನಡೆದ ಚುನಾವಣೆ ಇತ್ತೀಚಿನ ದಶಕಗಳಲ್ಲಿ ಅತ್ಯಂತ ಮಹತ್ವದ್ದು.

ತುಸುವೇ ಎಡಕ್ಕಿರುವ ನಡುಪಂಥೀಯ ಮ್ಯಾಕ್ರಾನ್ ಐರೋಪ್ಯ ಒಕ್ಕೂಟದ ಬೆಂಬಲಿಗರು. ಸಮೀಕ್ಷೆಗಳು ಸಾರಿದ್ದಕ್ಕಿಂತ ಹೆಚ್ಚಿನ ಬಹುಮತದ ಅಂತರದಿಂದ ಗೆದ್ದಿದ್ದಾರೆ ಮ್ಯಾಕ್ರಾನ್. ಅವರು ಗಳಿಸಿರುವ ಮತಗಳ ಪ್ರಮಾಣ ಶೇ.58.54. ಮೆರೀನ್ ಲಿ ಪೆನ್ ಅವರದ್ದು ಶೇ.41.45. ಆದರೆ ಕಳೆದ ಚುನಾವಣೆಗೆ ಹೋಲಿಸಿದರೆ ಅವರ ಬೆಂಬಲ ನೆಲೆ ಗಣನೀಯವಾಗಿ, ಅಂದರೆ ಶೇ.66.1ರಿಂದ ಶೇ.58.54ಕ್ಕೆ ಕುಸಿದಿದೆ. ಪ್ರತಿಯಾಗಿ ಲಿ ಪೆನ್ ಅವರ ಮತಗಳಿಕೆ ಪ್ರಮಾಣ ಶೇ.33.10ರಿಂದ ಶೇ.41.45ಕ್ಕೆ ಏರಿದೆ. ತೀವ್ರ ಎಡಪಂಥೀಯ ಅಭ್ಯರ್ಥಿ ಜೀನ್ ಲ್ಯುಕ್ ಮೆಲೆಂಖೊನ್ ಮೂರನೆಯ ಸ್ಥಾನದಲ್ಲಿದ್ದಾರೆ. ಮತದಾನದಿಂದ ದೂರ ಉಳಿದ ಮತದಾರರ ಪ್ರಮಾಣ ಶೇ.22ರಿಂದ ಈ ಸಲ ಶೇ.28ಕ್ಕೆ ಜಿಗಿದಿದೆ. ಮ್ಯಾಕ್ರಾನ್ ಆಡಳಿತ ಮೂಡಿಸಿದ ಭ್ರಮನಿರಸನ ಮತ್ತು ಆರ್ಥಿಕ ಸಂಕಷ್ಟಗಳೇ ಈ ಹೆಚ್ಚಳಕ್ಕೆ ಕಾರಣವೆನ್ನಲಾಗಿದೆ.

ಮೆರೀನ್ ಲಿ ಪೆನ್

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಸಮೀಪವರ್ತಿ ಎಂದು ಗುರುತಿಸಿಕೊಂಡಿರುವ ಮೆರೀನ್ ಅವರು ಮ್ಯಾಕ್ರಾನ್‌ಗೆ ತೀವ್ರ ಪೈಪೋಟಿ ನೀಡಿದ್ದಲ್ಲದೆ ಒಂದು ಹಂತದಲ್ಲಿ ಆತನಿಗೆ ಆತಂಕದ ಕ್ಷಣಗಳನ್ನೂ ಮೂಡಿಸಿದ್ದುಂಟು. ಫ್ರಾನ್ಸ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಮೆರೀನ್ ಎದುರಿಸಿರುವ ಮೂರನೆಯ ಸೋಲಿದು. ಆದರೆ ಈ ಸಲದ ಆಕೆಯ ಸೋಲನ್ನು ಬಲಪಂಥೀಯರು ಗೆಲುವೆಂದೇ ಭಾವಿಸಿದ್ದಾರೆ. ಬಲಂಪಥೀಯ ಬೆಂಬಲ ನೆಲೆಯ ಗಣನೀಯ ಹೆಚ್ಚಳವೇ ಈ ಬೀಗುವಿಕೆಯ ಹಿನ್ನೆಲೆ. ಸೋಲಿನಿಂದ ಧೃತಿಗೆಡದೆ ಸದ್ಯದಲ್ಲೇ ನಡೆಯಲಿರುವ ಫ್ರಾನ್ಸ್‌ನ ’ಲೋಕಸಭಾ’ ಚುನಾವಣೆಗಳನ್ನು ಗೆಲ್ಲಲು ಈಗಾಗಲೆ ತಂತ್ರ ಹೆಣೆಯತೊಡಗಿದ್ದಾರೆ ಲಿ ಪೆನ್.

ಒಂದು ವೇಳೆ ಮ್ಯಾಕ್ರಾನ್ ಸೋತು ಮೆರೀನ್ ಲಿ ಪೆನ್ ಗೆದ್ದಿದ್ದರೆ ಐರೋಪ್ಯ ಒಕ್ಕೂಟದಲ್ಲಿ ಭಾರೀ ರಾಜಕೀಯ ಭೂಕಂಪವೇ ಆಗುತ್ತಿತ್ತು ಎನ್ನುವುದು ರಾಜಕೀಯ ವಿಶ್ಲೇಷಕರ ಅನಿಸಿಕೆ. ಜರ್ಮನಿಯ ಛಾನ್ಸಲರ್ ಓಲಾಫ್ ಶೋಲ್ಜ್ ಸೇರಿದಂತೆ ಐರೋಪ್ಯ ಒಕ್ಕೂಟದ ಎಡಪಂಥೀಯ ಒಲವಿನ ನಾಯಕರು ಲಿ ಪೆನ್ ಗೆಲುವಿನ ಸಂಭವ ಕುರಿತು ಚಿಂತಾಕ್ರಾಂತರಾಗಿದ್ದರು. ಮ್ಯಾಕ್ರಾನ್ ಅವರನ್ನು ಗೆಲ್ಲಿಸುವಂತೆ ಫ್ರೆಂಚ್ ಜನತೆಗೆ ಅವರು ಮಾಡಿಕೊಂಡ ಮನವಿ ಅಪರೂಪದ ವಿದ್ಯಮಾನ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮ್ಯಾಕ್ರಾನ್ ಗೆಲುವಿನ ಅಂತರ ತೆಳುವೇನೂ ಅಲ್ಲ. ಆದರೆ ಈ ದೇಶದ ಚುನಾವಣಾ ಇತಿಹಾಸದಲ್ಲಿ ಬಲಪಂಥೀಯ ಎದುರಾಳಿ ಗೆಲುವಿನ ಸಮೀಪಕ್ಕೆ ಈ ಸಲದಷ್ಟು ಹಿಂದೆಂದೂ ಬಂದಿರಲಿಲ್ಲ. ಫ್ರೆಂಚ್ ರಾಜಕೀಯ ಭೂದೃಶ್ಯ ಮರುಜೋಡಣೆಗೊಳ್ಳುತ್ತಿದೆ ಎಂಬ ಲಿ ಪೆನ್ ಹೇಳಿಕೆಯನ್ನು ಈ ಹಿನ್ನೆಲೆಯಲ್ಲಿಟ್ಟೇ ನೋಡಬೇಕಿದೆ. ಬಲಪಂಥೀಯ ರಾಜಕಾರಣದ ಭವಿಷ್ಯ ಭರವಸೆದಾಯಕ ಎಂಬ ಆಕೆಯ ಆಶಾವಾದ ಬಲಪಂಥೀಯರ ಹೊಸ ಆತ್ಮವಿಶ್ವಾಸದ ಪ್ರತೀಕವೂ ಹೌದು.

ಜೀವನವೆಚ್ಚ ಏರಿಕೆಗೆ ಲಗಾಮು ಹಾಕುವಲ್ಲಿ ಮ್ಯಾಕ್ರಾನ್ ಆಡಳಿತ ವಿಫಲವಾಗಿದೆ ಎಂಬ ಲಿ ಪೆನ್ ಚುನಾವಣಾ ಪ್ರಚಾರ ಸಾಕಷ್ಟು ಜನಮನ ಮುಟ್ಟಿತ್ತು. ಇಂಧನ ತೆರಿಗೆಗಳಲ್ಲಿ ಭಾರೀ ಇಳಿಕೆ, ’ಪಾಸ್ತಾ’ ಮತ್ತು ’ಡಯಪರ್’ನಂತಹ ಜೀವನಾವಶ್ಯಕ ವಸ್ತುಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ, ಉದ್ಯೋಗಾವಕಾಶಗಳು ಮತ್ತು ಜನಕಲ್ಯಾಣ ಕಾರ್ಯಕ್ರಮಗಳಲ್ಲಿ ಫ್ರೆಂಚರಿಗೆ ಮೊದಲ ಆದ್ಯತೆಯ ಲಿ ಪೆನ್ ಭರವಸೆಗಳು ಆಕೆಗೆ ಸಾಕಷ್ಟು ಜನಬೆಂಬಲ ಗಳಿಸಿಕೊಟ್ಟಿವೆ. ಆದರೆ ಫ್ರಾನ್ಸ್‌ನಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುವುದನ್ನು ನಿಷೇಧಿಸುವುದಾಗಿ ಆಕೆ ಮಾಡಿದ ಘೋಷಣೆ ಮತ್ತು ಆಕೆಯ ಜನಾಂಗೀಯಭೇದ ನೀತಿ ಫ್ರೆಂಚರಿಗೆ ಹಿಡಿಸಿಲ್ಲ.

ಮುಂದಿನ ಎರಡೇ ತಿಂಗಳಲ್ಲಿ ನಡೆಯಲಿರುವ ಫ್ರೆಂಚ್ ಸಂಸದೀಯ ಚುನಾವಣೆಗಳು ಮ್ಯಾಕ್ರಾನ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಲಿವೆಯಂತೆ. ತಮ್ಮ ವಿಚಾರಧಾರೆಯನ್ನು ಒಪ್ಪದ ಪಕ್ಷಕ್ಕೆ ಬಹುಮತ ದೊರೆತು, ಆ ಪಕ್ಷದ ಪ್ರಧಾನಿ ಗದ್ದುಗೆಯೇರುವ ಸಂಭವ ಇಲ್ಲದಿಲ್ಲ. ದಾಖಲೆ ಪ್ರಮಾಣದ ಮತದಾರರು ಮತದಾನದಿಂದ ದೂರ ಉಳಿದಿರುವ ಆತಂಕಕಾರಿ ಬೆಳವಣಿಗೆಯನ್ನು ಮ್ಯಾಕ್ರಾನ್ ಮುಂಬರುವ ದಿನಗಳಲ್ಲಿ ಸರಿಪಡಿಸಿಕೊಳ್ಳಬೇಕಿದೆ. ಅರ್ಥಾತ್ ತಮ್ಮ ನೀತಿ ನಿರ್ಧಾರಗಳಿಂದ ನಿರಾಶರಾಗಿ ಮತದಾನದಿಂದ ದೂರ ಉಳಿದಿರುವವರನ್ನು ಮತ್ತು ತಮ್ಮಿಂದ ಲಿ ಪೆನ್ ಕಡೆಗೆ ಸರಿದಿರುವವರನ್ನು ಪುನಃ ಒಲಿಸಿಕೊಳ್ಳಬೇಕಿದೆ.

ಸೋಶಿಯಲ್ ಡೆಮಾಕ್ರಟಿಕ್ ಮತ್ತು ಕನ್ಸರ್ವೇಟಿವ್ ಪಾರ್ಟಿಗಳೇ ಒಂದನ್ನೊಂದು ಸೆಣೆಸುತ್ತ ಬಂದಿದ್ದ ಫ್ರೆಂಚ್ ಚುನಾವಣಾ ರಾಜಕಾರಣ ಈ ಸಲ ಹೆಚ್ಚು ಧ್ರುವೀಕರಣದತ್ತ ಸಾಗಿತ್ತು. ಮೊದಲ ಸುತ್ತಿನ ಚುನಾವಣಾ ಫಲಿತಾಂಶ ಈ ಪ್ರವೃತ್ತಿಯನ್ನು ಎತ್ತಿತೋರಿತ್ತು. ಹಾಲಿ ಅಧ್ಯಕ್ಷ ಮ್ಯಾಕ್ರಾನ್ ಶೇ.27.8ರಷ್ಟು ಮತ ಪಡೆದು ಮೊದಲ ಸ್ಥಾನದಲ್ಲಿದ್ದರೂ, ತೀವ್ರ ಬಲಪಂಥೀಯ ಮತ್ತು ವಲಸೆ ವಿರೋಧಿ ಮೆರೀನ್ ಲಿ ಪೆನ್ ಶೇ.23.1ರಷ್ಟು ಮತಗಳಿಸಿ ಮ್ಯಾಕ್ರಾನ್‌ಗೆ ಆತಂಕ ಮೂಡಿಸುವಷ್ಟು ಸಮೀಪ ಸರಿದಿದ್ದರು. ಮ್ಯಾಕ್ರಾನ್‌ಗೆ ಗೆಲುವು ಸುಲಭವಲ್ಲ ಎಂದಿದ್ದವು ಸಮೀಕ್ಷೆಗಳು. 2017ರಲ್ಲಿ ಲಿ ಪೆನ್ ಅವರನ್ನು ಶೇ.32ರಷ್ಟು ಪಾಯಿಂಟುಗಳ ಭಾರೀ ಅಂತರದಿಂದ ಸೋಲಿಸಿದ್ದ ಮ್ಯಾಕ್ರಾನ್, ಮೊನ್ನೆಮೊನ್ನೆಯ ತನಕ ಕೇವಲ ಎರಡರಿಂದ ಆರು ಪಾಯಿಂಟುಗಳಷ್ಟು ಮುಂದಿದ್ದರು. ಬೆಲೆ ಏರಿಕೆ, ಹಣದುಬ್ಬರ ಕುರಿತು ಮತದಾರರಲ್ಲಿ ಅಸಮಾಧಾನ ಹೆಚ್ಚಿತ್ತು. ಉಗ್ರ ರಾಷ್ಟ್ರೀಯತೆ ಮತ್ತು ವ್ಯವಸ್ಥೆಯ ವಿರೋಧಿ ರಾಜಕಾರಣದ ಮತ್ತೇರಿಸುವ ಮಿಶ್ರಪೇಯವನ್ನು ಲಿ ಪೆನ್ ಮತದಾರರ ಮುಂದೆ ಮಂಡಿಸಿದ್ದರು. ತಮ್ಮ ತೀವ್ರ ಬಲಪಂಥೀಯ ಬೆಂಬಲ ನೆಲೆಯನ್ನು ಭದ್ರವಾಗಿ ಉಳಿಸಿಕೊಂಡು ಮ್ಯಾಕ್ರಾನ್ ಆಡಳಿತದ ಕುರಿತು ಭ್ರಮನಿರಸನ ಹೊಂದಿದ ಮತದಾರರನ್ನೂ ತಮ್ಮತ್ತ ಸೆಳೆಯತೊಡಗಿದ್ದರು.

ಜೀನ್ ಲ್ಯುಕ್ ಮೆಲೆಂಖೊನ್

ಲಿ ಪೆನ್ ಅವರನ್ನು ಫ್ರಾನ್ಸ್‌ನ ಮತದಾರರು ಕಳೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ನಿರ್ಣಾಯಕವಾಗಿ ತಿರಸ್ಕರಿಸಿದ್ದರು. ಫ್ರೆಂಚ್ ಗಣರಾಜ್ಯದ ಮೌಲ್ಯಗಳ ಉಲ್ಲಂಘನೆ ಎಂದು ಆಕೆಯ ರಾಜಕಾರಣವನ್ನು ಬಗೆದಿದ್ದರು. ಮ್ಯಾಕ್ರಾನ್ ಅವರ ರಿಪಬ್ಲಿಕನ್ ಫ್ರಂಟ್‌ನ ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸಿದ್ದರು. 2017ರಲ್ಲಿ ಮ್ಯಾಕ್ರಾನ್ ಉದಾರವಾದಿ ಪ್ರಗತಿಪರ ಮನಸಿನ ತಾಜಾ ಚಹರೆಯಾಗಿ ಮತದಾರರ ಮನ ಗೆದ್ದಿದ್ದರು. ಅಧ್ಯಕ್ಷರಾಗಿ ಅವರು ಅನುಸರಿಸಿದ ವ್ಯಾಪಾರೋದ್ಯಮ ಪರವಾದ ನೀತಿ ನಿರ್ಧಾರಗಳು ಎಡಪಂಥೀಯ ಮತದಾರರನ್ನು ಅವರಿಂದ ದೂರ ಮಾಡಿದ್ದವು. ಮೊದಲ ಸುತ್ತಿನಲ್ಲಿ ಈ ಪಂಥದ ಮತಗಳು ಮ್ಯಾಕ್ರಾನ್‌ಗೆ ಬಿದ್ದಿರಲಿಲ್ಲ. ಕೆಲ ಮಸೀದಿಗಳನ್ನು ಮುಚ್ಚಿಸಿದ ಮತ್ತು ಧಾರ್ಮಿಕ ಸಂಘಟನೆಗಳ ಮೇಲೆ ಕಠಿಣ ಕ್ರಮ ಜರುಗಿಸಿದ ಮ್ಯಾಕ್ರಾನ್ ತೀರ್ಮಾನಗಳು 2017ರಲ್ಲಿ ಅವರನ್ನು ಬೆಂಬಲಿಸಿದ್ದ ಸಾಮಾಜಿಕ ಕೂಟದಲ್ಲಿ ಬಿರುಕು ಮೂಡಿಸಿದ್ದವು.

ಉಕ್ರೇನ್ ವಿರುದ್ಧದ ಯುದ್ಧವನ್ನು ಲಿ ಪೆನ್ ವಿರೋಧಿಸುವ ಜೊತೆಗೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟ, ರಷ್ಯಾದ ವಿರುದ್ಧ ಸಾರಿರುವ ನಿರ್ಬಂಧಗಳನ್ನೂ ಟೀಕಿಸಿದ್ದರು. ಈ ನಿರ್ಬಂತಿಧಗಳು ಅಂತಿಮವಾಗಿ ಫ್ರೆಂಚ್ ಗ್ರಾಹಕರ ಹಿತಗಳನ್ನು ಬಾಧಿಸುತ್ತಿವೆ ಎಂಬುದು ಆಕೆಯ ವಾದವಾಗಿತ್ತು. ಈ ನಿಲುವುಗಳು ಮ್ಯಾಕ್ರಾನ್ ಸರ್ಕಾರದ ನೀತಿಗೆ ವ್ಯತಿರಿಕ್ತವಾಗಿದ್ದವು. ನ್ಯಾಟೋ ಕಮಾಂಡ್‌ನಿಂದ ಫ್ರೆಂಚ್ ಪಡೆಗಳನ್ನು ವಾಪಸು ಕರೆಯಿಸಿಕೊಳ್ಳಬೇಕೆಂಬುದೂ ಆಕೆಯ ವಾದವಾಗಿತ್ತು. ಲಿ ಪೆನ್ ಗೆಲುವು ಫ್ರೆಂಚ್ ರಾಜ್ಯಾಡಳಿತ ಕ್ರಮವನ್ನೇ ಬದಲಿಸಿಬಿಡುವ ಅಪಾಯ ಹೊಂದಿತ್ತು. ಉಕ್ರೇನ್ ಮೇಲೆ ಪುಟಿನ್ ಸಾರಿರುವ ಯುದ್ಧವನ್ನು ವಿರೋಧಿಸಿರುವ ಐರೋಪ್ಯ ಒಕ್ಕೂಟ ಮತ್ತು ನ್ಯಾಟೋ ನಿಲುವಿಗೆ ಸವಾಲು ಎಸೆಯಲಿತ್ತು. ಈ ಕಾರಣಕ್ಕಾಗಿಯೇ ಈ ಚುನಾವಣೆ ಇತ್ತೀಚಿನ ದಶಕಗಳಲ್ಲೇ ಗುರುತರ ಎನಿಸಿಕೊಂಡಿತ್ತು.

ನಡುವಯಸ್ಸು ಸಮೀಪಿಸುತ್ತಿರುವ 44ರ ಹರೆಯದ ಮ್ಯಾಕ್ರಾನ್‌ರಿಗೆ ಎರಡು ತಿಂಗಳಾಚೆಗೆ ಕದ ಬಡಿದಿರುವ ಸಂಸದೀಯ ಚುನಾವಣೆಗಳು ಪ್ರಬಲ ಸವಾಲೆಸೆದಿವೆ.

“ನನ್ನ ವಿಚಾರಧಾರೆಯನ್ನು ಒಪ್ಪದಿರುವ ಗಣನೀಯ ಪ್ರಮಾಣದ ಮತದಾರರು ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ್ದಾರೆ. ತೀವ್ರ ಬಲಪಂಥೀಯ ವಿಚಾರಧಾರೆಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಉದಾತ್ತ ಉದ್ದೇಶ ಅವರದು. ಅವರಿಗೆ ನನ್ನ ಧನ್ಯವಾದಗಳು. ಅವರಿಗೆ ನಾನು ಋಣಿಯಾಗಿದ್ದೇನೆ” ಎಂದು ಭಿನ್ನಾಭಿಪ್ರಾಯಗಳಿಂದ ಒಡೆದಿರುವ ಫ್ರೆಂಚ್ ಜನಮಾನಸಕ್ಕೆ ಸೌಹಾರ್ದದ ಮುಲಾಮು ಲೇಪಿಸುವ ಮಾತಾಡಿದ್ದಾರೆ ಮ್ಯಾಕ್ರಾನ್. “ನಾನೀಗ ಒಂದು ಬಣದ ಉಮೇದುವಾರನಲ್ಲ, ಬದಲಾಗಿ ಎಲ್ಲರೆಲ್ಲರ ಅಧ್ಯಕ್ಷ. ತೀವ್ರ ಬಲಪಂಥೀಯ ವಿಚಾರಧಾರೆಗೆ ಮತ ನೀಡಲು ಕಾರಣವಾಗಿರುವ ಆಕ್ರೋಶ ಮತ್ತು ಭಿನ್ನಮತಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ತಕ್ಷಣದ ಆದ್ಯ ಕರ್ತವ್ಯ” ಎಂದು ಅವರು ತಾವು ಕಳೆದುಕೊಂಡಿರುವುದನ್ನು ಮತ್ತೆ ಗಳಿಸುವತ್ತ ಗಮನ ಹರಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ರಾಜ್ಯಗಳು ವ್ಯಾಟ್‌ ಕಡಿತಗೊಳಿಸಿ ಇಂಧನ ಬೆಲೆ ಏರಿಕೆ ತಗ್ಗಿಸಿ: ಮೋದಿ ಮನವಿಯ ಹಿಂದಿನ ವಾಸ್ತವವೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...