ವಿಶ್ವದಲ್ಲಿ ತಲ್ಲಣ ಮೂಡಿಸಿರುವ ಕೊರೊನಾ ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ಎದುರಿಸಲು, ಒಂದು ಭೂಮಿ, ಒಂದು ಆರೋಗ್ಯ ವಿಧಾನವನ್ನು ಅಳವಡಿಸಿಕೊಳ್ಳುವುದರ ಅಗತ್ಯತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.
ಕಾರ್ನ್‌ವಾಲ್‌ನಲ್ಲಿ ಶನಿವಾರ ನಡೆದ ಜಿ-7 ಶೃಂಗಸಭೆಯ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಕೆಲವು ಅತಿಥಿ ರಾಷ್ಟ್ರಗಳ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಜನವರಿ ಮತ್ತು ಮೇ ನಡುವೆ ದೇಶದಲ್ಲಿ ಕೊರೊನಾ ಸೋಂಕಿನಿಂದ 2 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ತೀವ್ರ ಸಂಪನ್ಮೂಲ ಕೊರತೆಯನ್ನು ಎದುರಿಸಿದ್ದ ದೇಶವು, ಯುಎಸ್ ಮತ್ತು ಕೆನಡಾದಂತಹ ಹಲವಾರು ದೇಶಗಳಿಂದ ಆಮ್ಲಜನಕ ಸಿಲಿಂಡರ್‌ಗಳ ನೆರವು ಪಡೆದಿತ್ತು.
ಇದನ್ನೂ ಓದಿ: ಭೀಮಾ ಕೋರೆಗಾಂವ್ ಖೈದಿಗಳ ಬಿಡುಗಡೆ ಮಾಡಿ-ಮೋದಿಗೆ ನೊಬೆಲ್ ಪ್ರಶಸ್ತಿ ವಿಜೇತರು ಮತ್ತು ಯುರೋಪಿಯನ್ ಸಂಸದರ ಪತ್ರ
ಭಾರತದಂತಹ ದೇಶಗಳಲ್ಲಿ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವ ಲಸಿಕೆ ಕಚ್ಚಾ ವಸ್ತುಗಳು ಮತ್ತು ಘಟಕಗಳಿಗೆ ಮುಕ್ತ ಸರಬರಾಜು ನೀಡಲು ಮನವಿ ಮಾಡಿದ ಪ್ರಧಾನಿ ಮೋದಿಯವರ ಮನವಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಸರ್ಕಾರ ಹೇಳಿಕೆ ತಿಳಿಸಿದೆ.
Prime Minister @narendramodi participates in the first Outreach Session of #G7Summit
PM expresses appreciation for the support extended by the #G7 and other guest countries during the recent wave of COVID infections in India
Read: https://t.co/KopHghGfQr
(1/2) pic.twitter.com/bzVELuJSV3
— PIB India (@PIB_India) June 12, 2021
ಕೊರೊನಾ ವಿರುದ್ಧ ದೇಶದ ಇಡೀ ಸಮಾಜ ಒಟ್ಟಾಗಿ ಹೋರಾಡುವ ವಿಧಾನವನ್ನು ಪ್ರಧಾನಿ ಸಭೆಯಲ್ಲಿ ಒತ್ತಿ ಹೇಳಿದ್ದಾರೆ. ಕೊರೊನಾ ವಿರುದ್ಧ ಸರ್ಕಾರ, ಕೈಗಾರಿಕೆ ಮತ್ತು ನಾಗರಿಕ ಸಮಾಜದ ಒಗ್ಗಟ್ಟಿನ ಪ್ರಯತ್ನಗಳನ್ನು ತಿಳಿಸಿದ್ದಾರೆ.
ಕೊರೊನಾ ಜೊತೆಗೆ ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಜಾಗತಿಕ ಏಕತೆ, ನಾಯಕತ್ವ ಮತ್ತು ಐಕ್ಯತೆ ಮುಖ್ಯ ಎಂಬುದನ್ನು ಒತ್ತಿ ಹೇಳಿದ್ದಾರೆ. ಯುಕೆ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಶೃಂಗಸಭೆಗೆ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಕೊರಿಯಾವನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಪ್ರಧಾನಿ ಹೇಡಿಯಂತೆ ವರ್ತಿಸುತ್ತಿದ್ದಾರೆ: ಕೋವಿಡ್ ನಿರ್ವಹಣೆ ಕುರಿತು ಮೋದಿ ವಿರುದ್ಧ ಕಿಡಿಕಾರಿದ ಪ್ರಿಯಾಂಕಾ ಗಾಂಧಿ


