Homeಅಂತರಾಷ್ಟ್ರೀಯಎಲ್ಬಿಜಿಟಿಕ್ಯೂ+ ಸಮುದಾಯದ ‘ಪ್ರೈಡ್ ವಾಕ್’ ಜಾಥಾದಲ್ಲಿ ಭಾಗವಹಿಸಿದ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ಎಲ್ಬಿಜಿಟಿಕ್ಯೂ+ ಸಮುದಾಯದ ‘ಪ್ರೈಡ್ ವಾಕ್’ ಜಾಥಾದಲ್ಲಿ ಭಾಗವಹಿಸಿದ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

- Advertisement -
- Advertisement -

ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಶನಿವಾರದಂದು ‘‘ಎಲ್ಬಿಜಿಟಿಕ್ಯೂ+” ಸಮುದಾಯದ ಮೆರವಣಿಗೆಯಲ್ಲಿ ಪಾಲ್ಗೊಂಡರು. ವಾಷಿಂಗ್ಟನ್ ಡಿಸಿಯಲ್ಲಿ ಜರುಗಿದ ಈ ಜಾಥಾದಲ್ಲಿ ಹೆಜ್ಜೆ ಹಾಕಿದ ಅವರು “ಹ್ಯಾಪಿ ಪ್ರೈಡ್‌” ಎಂಬ ಘೋಷಣೆಯನ್ನು ಕೂಗಿದರು.

ಗುಲಾಬಿ ಕೋಟು ಮತ್ತು “ಲವ್ ಈಸ್ ಲವ್” ಎಂದು ಇಂಗ್ಲಿಷ್‌ನಲ್ಲಿ ಬರೆದಿದ್ದ ಶರ್ಟ್ ಧರಿಸಿದ್ದ ಕಮಲಾ ಅವರು, ಕ್ಯಾಪಿಟಲ್ ಪ್ರೈಡ್ ವಾಕ್ ಮತ್ತು ರ್‍ಯಾಲಿಯಲ್ಲಿ ಭಾಗವಹಿಸಿದರು.

ಇದನ್ನೂ ಓದಿ: ‘ಬಡತನದ ಸ್ಮಾರಕ’ ಎಂದು ಮೋದಿ ಟೀಕಿಸಿದ್ದ ನರೇಗಾ ಯೋಜನೆಯನ್ನು, ‘ಜೀವಸೆಳೆ’ ಎಂದ ಗುಜರಾತ್‌ ಸರ್ಕಾರ!

ಮೆರವಣಿಗೆಯ ನಂತರ, ಕಮಲಾ ಅವರು ಸಮಾನತೆ ಕಾಯ್ದೆಯನ್ನು ಅಂಗೀಕರಿಸಲು ಕರೆ ನೀಡಿದರು ಮತ್ತು ಬಿಡೆನ್ ಆಡಳಿತವು ಎಲ್ಜಿಬಿಟಿಕ್ಯೂ+ ಸಮುದಾಯದ ಹಕ್ಕುಗಳ ಮಹತ್ವವನ್ನು ಅರ್ಥಮಾಡಿಕೊಂಡಿದೆ ಎಂದು ಹೇಳಿದರು.

“ನಮ್ಮ ಟ್ರಾನ್ಸ್‌ಜೆಂಡರ್‌‌ ಸಮುದಾಯವನ್ನು ಮತ್ತು ಯುವಕರನ್ನು ರಕ್ಷಿಸಲಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಉದ್ಯೋಗ ಮತ್ತು ವಸತಿಗಳ ಸುತ್ತ ನಮಗೆ ಇನ್ನೂ ಹೆಚ್ಚಿನ ರಕ್ಷಣೆ ಬೇಕು. ನಮಗೆ ಇನ್ನೂ ಹೆಚ್ಚಿನ ಕೆಲಸಗಳಿವೆ ಮತ್ತು ಅದಕ್ಕೆ ನಾವು ಬದ್ಧರಾಗಿದ್ದೇವೆ” ಎಂದು ಕಮಲಾ ಹ್ಯಾರಿಸ್ ಹೇಳಿದರು.

“ಪ್ರತಿ ಜೂನ್‌ನಲ್ಲಿ, ನಮ್ಮ ರಾಷ್ಟ್ರದ ಭೂತ, ವರ್ತಮಾನ ಮತ್ತು ಭವಿಷ್ಯಕ್ಕೆ ಎಲ್ಜಿಬಿಟಿಕ್ಯೂ+ ಸಮುದಾಯವು ನೀಡಿದ ಕೊಡುಗೆಗಳನ್ನು ನಾವು ನೆನಪಿಸುತ್ತೇವೆ” ಎಂದು ಅವರು ಈ ತಿಂಗಳ ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದರು.

2008 ರಲ್ಲಿ ಸಲಿಂಗ ವಿವಾಹದ ಮೇಲಿನ ಸಾಂವಿಧಾನಿಕ ನಿಷೇಧವನ್ನು ಬೆಂಬಲಿಸದಿರುವ ನಿರ್ಧಾರದಿಂದ, ಮೊದಲ ಸಲಿಂಗ ವಿವಾಹವನ್ನು ಅಧಿಕೃತಗೊಳಿಸುವವರೆಗೆ, ಹ್ಯಾರಿಸ್ ಎಲ್ಜಿಬಿಟಿಕ್ಯು ಹಕ್ಕುಗಳ ಪ್ರತಿಪಾದಕರಾಗಿದ್ದಾರೆ.

ಇದನ್ನೂ ಓದಿ: ಟಿಎಂಸಿ ಮುಖಂಡರ ಭೇಟಿ – ಬಂಗಾಳದ ಬಿಜೆಪಿ ನಾಯಕ ರಾಜೀಬ್‌ ಬ್ಯಾನರ್ಜಿ ಮತ್ತೆ ಟಿಎಂಸಿಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...