ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಮರುಪರಿಶೀಲನಾ ಅರ್ಜಿಯನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಏಳು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿದೆ.
ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಶಬರಿಮಲೆ ದೇವಾಲಯದ ಅರ್ಚಕ ರಾಜೀವರು ಕಂದಾರೌ ಸ್ವಾಗತಿಸಿದ್ದಾರೆ. ’ಲಕ್ಷಾಂತರ ಭಕ್ತರ ಪ್ರಾರ್ಥನೆಯನ್ನು ದೇವರು ಆಲಿಸಿದ್ದಾರೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ತೀರ್ಪು ನೀಡದ ಸುಪ್ರೀಂ: 7 ಜನರ ವಿಸ್ತೃತ ಪೀಠಕ್ಕೆ ಮೇಲ್ಮನವಿ ವರ್ಗಾವಣೆ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠ ಸೆಪ್ಟೆಂಬರ್ 2018 ರಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರು ಅಯ್ಯಪ್ಪ ಸ್ವಾಮಿ ದೇಗುಲವನ್ನು ಪ್ರವೇಶಿಸಬಹುದು ಎಂದು ತೀರ್ಪು ನೀಡಿತ್ತು. ಇದು ಸಾಕಷ್ಟು ವಿರೋಧಕ್ಕೆ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು. ಅಲ್ಲದೇ ಅರ್ಜಿ ಮರು ಪರಿಶೀಲಿಸುವಂತೆ ಕೋರಿ ಸುಮಾರು 65 ಅರ್ಜಿಗಳು ಸಲ್ಲಿಕೆಯಾಗಿದ್ದವು.
ಇದನ್ನೂ ಓದಿ: ನಾಳೆ ಶಬರಿಮಲೆ ಮಹತ್ವದ ತೀರ್ಪು ಪ್ರಕಟಿಸಲಿರುವ ಸುಪ್ರೀಂ: ಕೇರಳದಲ್ಲಿ ಭಾರೀ ಬಿಗಿಭದ್ರತೆ
ಮರುಪರಿಶೀಲನಾ ಅರ್ಜಿ ಪರಿಶೀಲಿಸಿರುವ ನ್ಯಾಯಾಲಯ ಉನ್ನತ ಪೀಠ, ಏಳು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿದೆ. ಇನ್ನು ವಿವಿಧ ಧರ್ಮಗಳಲ್ಲೂ ಕೆಲ ಪದ್ಧತಿಗಳು ಇವೆ. ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿಬಂಧ, ಪಾರ್ಸಿ ಸಮುದಾಯದಲ್ಲಿ ವಿವಾಹಿತ ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನಿರ್ಬಂಧ, ದಾವೂದಿ ಬೊಹ್ರಾ ಸಮುದಾಯದಲ್ಲಿ ಸ್ತ್ರೀಯರನ್ನು ನಗ್ನಗೊಳಿಸುವ ಪದ್ಧತಿ ಇದೆ. ಇದೆಲ್ಲವುಗಳನ್ನೂ ಏಳು ನ್ಯಾಯಮೂರ್ತಿಗಳ ಪೀಠ ಗಮನ ಹರಿಸಬೇಕು ಎಂದು ಹೇಳಿದೆ.
10 ರಿಂದ 50 ವರ್ಷದೊಳಗಿನ ಬಾಲಕಿಯರು ಮತ್ತು ಮಹಿಳೆಯರು ಶಬರಿಮಲೆ ಪ್ರವೇಶ ಮಾಡಬಾರದು ಎಂದು ಹೇರಿದ್ದ ನಿಷೇಧವನ್ನು ಉನ್ನತ ನ್ಯಾಯಾಲಯ ಸೆಪ್ಟೆಂಬರ್ 28, 2018 ರಂದು ತೆರವುಗೊಳಿಸಿತ್ತು. ಇದರಿಂದ ದೇಶದಾದ್ಯಂತ ತೀವ್ರ ಪ್ರತಿಭಟನೆಗಳು ನಡೆದವು. ಹಿಂಸಾಚಾರ, ಘರ್ಷಣೆಗೆ ಕಾರಣವಾಗಿತ್ತು.


