ಕರ್ನಾಟಕದಲ್ಲಿ ದಸರಾ ಶುರುವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಇನ್ನೆನ್ನು ಆರಂಭವಾಗಲಿದೆ. ದುರ್ಗಾಪೂಜೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆ ರಾಜ್ಯದಲ್ಲಿ ದುರ್ಗಾ ಮೂರ್ತಿಗಳು ಸಿದ್ಧವಾಗುತ್ತಿದ್ದು, ವೈದ್ಯೆರೂಪದ ದುರ್ಗೆಯ ಪ್ರತಿಮೆಗೆ ಸಾಮಾಜಿಕ ಜಾಲತಾಣದಲ್ಲಿ ಜನ ಫಿದಾ ಆಗಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ತಯಾರಾಗಿರುವ ಈ ಮೂರ್ತಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವರು ಹಂಚಿಕೊಂಡಿದ್ದಾರೆ. ದುರ್ಗೆಯನ್ನು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯೆಯಾಗಿ ಚಿತ್ರಿಸಲಾಗಿದೆ. ಮೂರ್ತಿಯನ್ನು ನಿರ್ಮಿಸಿದ ಕಲಾವಿದನ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೂರ್ತಿಯಲ್ಲಿ ವೈದ್ಯರ ಕೋಟ್ ಧರಿಸಿ ಮಹಿಷಾಸುರ ಎಂಬ ರಾಕ್ಷಸನೊಂದಿಗೆ ಹೋರಾಡುವ ವೈದ್ಯನಾಗಿ ಚಿತ್ರಿಸಲಾಗಿದೆ. ಕೈಯಲ್ಲಿ ಸಿರಿಂಜ್ ನೀಡಲಾಗಿದ್ದು, ಅದು ಕೊರೊನಾಸುರನನ್ನು ಕೊಲ್ಲಲು ಬಳಸುತ್ತಿದೆ. ಇತ್ತ ಕೊರೊನಾ ವಾರಿಯರ್ಸ್‌ಗಳಿಗೆ ಗೌರವ ಸಲ್ಲಿಸಲಾಗಿದ್ದು, ಗಣೇಶ, ಸುಬ್ರಹ್ಮಣ್ಯ ಅವರನ್ನು ಪೊಲೀಸ್ ಅಧಿಕಾರಿ ಮತ್ತು ನೈರ್ಮಲ್ಯ ಕೆಲಸಗಾರರೆಂದೂ, ಲಕ್ಷ್ಮಿ ಮತ್ತು ಸರಸ್ವತಿಯನ್ನು ನರ್ಸ್ ಮತ್ತು ಆರೋಗ್ಯ ಕಾರ್ಯಕರ್ತೆಯಾಗಿ ಚಿತ್ರಿಸಲಾಗಿದೆ.
ಇದನ್ನೂ ಓದಿ: ನರೇಗಾ: ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ?
What a beautiful way to show respect to Corona Warriors- Doctors,nurses, policemen,cleaners and ambulance workers. Mahishasur is Corona virus! How creative ❤️
Hope Ma Durga helps us overcome this pandemic and everyone remains safe and healthy ?? pic.twitter.com/74EaT9Wuat— Dr sarika verma (@Drsarika005) October 19, 2020
ಈ ಚಿತ್ರವನ್ನು ಹಂಚಿಕೊಂಡಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, ಈ ಮೂರ್ತಿ ಅರ್ಥಪೂರ್ಣವಾಗಿದೆ ಎಂದಿರುವ ಅವರು, ಮೂರ್ತಿಯನ್ನು ರಚಿಸಿದ ಕಲಾವಿದನನ್ನು ಹೊಗಳಿದ್ದಾರೆ.
Brilliantly appropriate #covid19-themed Durga Puja creativity from Kolkata, with the goddess slaying the virus! Salutations to the unknown designer & sculptor #DurgaPuja2020 pic.twitter.com/Q8ZT8EtWfo
— Shashi Tharoor (@ShashiTharoor) October 19, 2020
ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಜನರ ಜೀವಗಳನ್ನು ಉಳಿಸಲು ಸಹಾಯ ಮಾಡಲು ದೇವರು ಮತ್ತು ದೇವತೆಗಳಿಗಿಂತ ಕಡಿಮೆಯಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಇವರನ್ನು ಕೊರೊನಾ ವಾರಿಯರ್ಸ್ ಆಗಿ ಚಿತ್ರಿಸಲಾಗಿದೆ. ಈ ಕಲಾಕೃತಿಯ ಚಿತ್ರವನ್ನು ಹಲವು ಮಂದಿ ತಮ್ಮ ಸಾಮಾಜಿಕ ಖಾತೆಗಳಲ್ಲಿ ಶೇರ್ ಮಾಡಿದ್ದಾರೆ.
A Covid-19 themed sculpture of Maa Durga in Kolkata… really the doctors are god wearing white coat ! ?? pic.twitter.com/auRA5RKhPj
— Pushpam Kumar Singh (@PushpamKumarS15) October 19, 2020
ಕೊರೊನಾ ಸೋಂಕಿನ ಕಾರಣ ದುರ್ಗಾಪೂಜೆಗಾಗಿ ನಿರ್ಮಿಸಲಾದ ಪೆಂಡಾಲ್ಗಳಲ್ಲಿ ನೋಂದಾಯಿತ ವ್ಯಕ್ತಿಗಳಷ್ಟೇ ಹಾಜರಿರಬೇಕು. ಬೇರೆ ಯಾರಿಗೂ ಪೆಂಡಾಲ್ಗಳಲ್ಲಿ ಅವಕಾಶವಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಆದೇಶ ಹೊರಡಿಸಿದೆ.


