Homeಮುಖಪುಟಭಾರತದ ಆರ್ಥಿಕತೆ ಕುಸಿಯುತ್ತಿದ್ದರೂ ಅದಾನಿ ಕಂಪನಿ ಮಾತ್ರ ಬೆಳೆಯುತ್ತಿರುವುದು ಹೇಗೆ?

ಭಾರತದ ಆರ್ಥಿಕತೆ ಕುಸಿಯುತ್ತಿದ್ದರೂ ಅದಾನಿ ಕಂಪನಿ ಮಾತ್ರ ಬೆಳೆಯುತ್ತಿರುವುದು ಹೇಗೆ?

ಕೊರೊನಾ ಸಾಂಕ್ರಾಮಿಕ ಈ ವರ್ಷ ಭಾರತವನ್ನು ಅಭೂತಪೂರ್ವ ಆರ್ಥಿಕ ಹಿಂಜರಿತದಲ್ಲಿ ಮುಳುಗಿಸಿದರೆ, ಅದಾನಿ ಕಂಪೆನಿ ಮಾತ್ರ ಬೆಳೆಯುತ್ತಲೇ ಇದೆ. ಅವರ ಕಂಪೆನಿಯು ಜಾಗತಿಕ ಪಾಲುದಾರರನ್ನು ಹಾಗೂ ಹೂಡಿಕೆಗಳನ್ನು ಪಡೆಯುವುದರೊಂದಿಗೆ ಹೊಸ ಕ್ಷೇತ್ರಗಳಿಗೂ ತನ್ನ ಕೈ ಚಾಚಿದೆ.

- Advertisement -
- Advertisement -

ಗೌತಮ್ ಅದಾನಿ ಬಿಕ್ಕಟ್ಟಿನಿಂದ ಬದುಕುಳಿಯುವ ಜಾಣ್ಮೆ ಹೊಂದಿದ್ದಾರೆ. ಎರಡು ದಶಕಗಳ ಹಿಂದೆ ಅವರನ್ನು ಹಣಕ್ಕಾಗಿ ಅಪಹರಣ ಮಾಡಲಾಗಿತ್ತು ಮತ್ತು 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದ 2008 ರ 26/11 ಎಂದೇ ಕುಖ್ಯಾತಿ ಪಡೆದ ಮುಂಬೈ ದಾಳಿಯಲ್ಲಿ ಮುಂಬೈಯ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌‌ನ ಒತ್ತೆಯಾಳುಗಳಲ್ಲಿ ಅವರೊಬ್ಬರಾಗಿದ್ದರು.

ವ್ಯವಹಾರದಲ್ಲಿ ಕುಶಾಗ್ರಮತಿ ಮತ್ತು ಅಡೆತಡೆಗಳನ್ನು ನಿವಾರಿಸುವ ಅವರ ಸಾಮರ್ಥ್ಯ, ನರೇಂದ್ರ ಮೋದಿಯಂತಹ ರಾಜಕರಾರಣಿಗಳ ಸಖ್ಯ ಅವರನ್ನು ಭಾರತದ ಅತ್ಯಂತ ಶ್ರೀಮಂತರಲ್ಲೊಬ್ಬರನ್ನಾಗಿ ಮಾಡಿದೆ. ಕೊರೊನಾ ಸಾಂಕ್ರಾಮಿಕ ಈ ವರ್ಷ ಭಾರತವನ್ನು ಅಭೂತಪೂರ್ವ ಆರ್ಥಿಕ ಹಿಂಜರಿತದಲ್ಲಿ ಮುಳುಗಿಸಿದರೆ, ಅದಾನಿ ಕಂಪೆನಿ ಮಾತ್ರ ಬೆಳೆಯುತ್ತಲೇ ಇದೆ. ಅವರ ಕಂಪೆನಿಯು ಜಾಗತಿಕ ಪಾಲುದಾರರನ್ನು ಹಾಗೂ ಹೂಡಿಕೆಗಳನ್ನು ಪಡೆಯುವುದರೊಂದಿಗೆ ಹೊಸ ಕ್ಷೇತ್ರಗಳಿಗೂ ತನ್ನ ಕೈ ಚಾಚಿದೆ.

ಇದನ್ನೂ ಓದಿ: ‘ಅದಾನಿ-ಅಂಬಾನಿ ಕೃಷಿ ಕಾನೂನುಗಳನ್ನು’ ಹಿಂತೆಗೆದುಕೊಳ್ಳಿ: ರಾಹುಲ್ ಗಾಂಧಿ

ಗಣಿಗಾರಿಕೆ, ಅನಿಲ ಮತ್ತು ಬಂದರುಗಳು ಸೇರಿದಂತೆ ಅವರ ಉದ್ಯಮ ಘಟಕಗಳ ಹೆಚ್ಚಿನ ಸಂಸ್ಥೆಗಳ ಷೇರುಗಳು ಹೆಚ್ಚಾಗಿದೆ. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಈ ವರ್ಷ ಆರು ಪಟ್ಟು ಹೆಚ್ಚಾಗಿದೆ. ಯಾಕೆಂದರೆ ಇದು 6 ಬಿಲಿಯನ್ ಅಮೇರಿಕನ್ ಡಾಲರ್‌‌ ಸೌರಶಕ್ತಿ ಒಪ್ಪಂದವನ್ನು ಪಡೆದುಕೊಂಡಿದೆ. ಇದು 2025 ರ ವೇಳೆಗೆ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ತಯಾರಕನಾಗುವ ಕಂಪನಿಯ ಗುರಿಯತ್ತ ಮತ್ತೊಂದು ಹೆಜ್ಜೆಯಾಗಿದೆ.

“ಅದಾನಿ ಷೇರುಗಳ ವಿಷಯಕ್ಕೆ ಬಂದಾಗ ಮಾರುಕಟ್ಟೆಯು ’ಫೋಮೋ ಸಿಂಡ್ರೋಮ್(ಕಳೆದು ಹೋಗುವ ಭಯ)’ ಅನ್ನು ಹೊಂದಿದೆ. ಅದಾನಿಯ ವ್ಯವಹಾರಗಳಿಗೆ ಪ್ರಸ್ತುತ ಕೇಂದ್ರ ಸರ್ಕಾರ ಪೂರ್ತಿ ಸಹಕಾರ ನೀಡುತ್ತಿದೆ ಮಾತ್ರವಲ್ಲದೆ, ಅವರಿಬ್ಬರ ನೀತಿಗಳು  ಹೊಂದಿಕೆಯಾಗಿವೆ. ಆದ್ದರಿಂದ ಅದಾನಿಗೆ ಕನಿಷ್ಠ ಐದರಿಂದ ಆರು ವರ್ಷಗಳವರೆಗೆ ಮುಂದಿನ ಹಾದಿ ಸುಗಮವಾಗಿರುತ್ತದೆ” ಎಂದು ಹೂಡಿಕೆ-ನಿರ್ವಹಣಾ ಸಂಸ್ಥೆ ಐಐಎಫ್ಎಲ್ ಸೆಕ್ಯುರಿಟೀಸ್ ಲಿಮಿಟೆಡ್‌ನ ನಿರ್ದೇಶಕ ಸಂಜೀವ್ ಭಾಸಿನ್ ಹೇಳುತ್ತಾರೆ.

32.4 ಶತಕೋಟಿ ಡಾಲರ್‌ ಮೌಲ್ಯದ ಸಂಪತ್ತಿನೊಂದಿಗೆ, ಅದಾನಿಯು ಮುಖೇಶ್ ಅಂಬಾನಿಯ ನಂತರ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕದ ಪ್ರಕಾರ, ಈ ವರ್ಷ ಅದಾನಿ ಸ್ಟಾಕ್‌‌ನ ನಿವ್ವಳ ಮೌಲ್ಯ 21.1 ಬಿಲಿಯನ್ ಡಾಲರ್‌ ಹೆಚ್ಚಾಗುತ್ತದೆ. ಇದು ಅಂಬಾನಿ ಗಳಿಸುವ ಲಾಭಕ್ಕಿಂತಲೂ ಹೆಚ್ಚಾಗುತ್ತದೆ. ಈ ವರದಿಯ ಬಗ್ಗೆ ಅದಾನಿ ಗ್ರೂಪ್ ಪ್ರತಿನಿಧಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಇದನ್ನೂ ಓದಿ:  ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯ: ಮೈದಾನಕ್ಕೆ ನುಗ್ಗಿ ‘ಸ್ಟಾಪ್ ಅದಾನಿ’ ಎಂದ ಪ್ರತಿಭಟನೆಗಾರ!

1980 ರ ದಶಕದ ಆರಂಭದಲ್ಲಿ ಕಾಲೇಜಿನಿಂದ ಹೊರಬಂದ ಅದಾನಿಯು ಮುಂಬೈನ ವಜ್ರ ಉದ್ಯಮದಲ್ಲಿ ತನ್ನ ಅದೃಷ್ಟವನ್ನು ಪ್ರಯತ್ನಿಸಿದರು. 1988 ರಲ್ಲಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ ಸ್ಥಾಪಿಸುವ ಮೊದಲು ತನ್ನ ಸಹೋದರನ ಪ್ಲಾಸ್ಟಿಕ್ ವ್ಯವಹಾರವನ್ನು ನಡೆಸಲು ಸಹಾಯ ಮಾಡಲು ತನ್ನ ಸ್ವಂತ ರಾಜ್ಯವಾದ ಗುಜರಾತ್‌ಗೆ ಹಿಂದಿರುಗಿದರು. ಇದಾಗಿ ಒಂದು ದಶಕದ ನಂತರ, ಅವರು ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಮುಂಡ್ರಾ ಬಂದರನ್ನು ನಿರ್ವಹಿಸಲು ಪ್ರಾರಂಭಿಸಿದರು, ಅಂತಿಮವಾಗಿ ಭಾರತದ ಅತಿದೊಡ್ಡ ಖಾಸಗಿ ವಲಯದ ಬಂದರನ್ನಾಗಿ ಅದನ್ನು ನಿರ್ಮಿಸಿದರು.

ಅಷ್ಟೇ ಅಲ್ಲದೆ ಅದಾನಿಯ ಗ್ರೂಪ್, ರಾಷ್ಟ್ರದ ಅತಿದೊಡ್ಡ ಖಾಸಗಿ ವಿದ್ಯುತ್ ಉತ್ಪಾದಕ ಮತ್ತು ಕಲ್ಲಿದ್ದಲು ಗಣಿಗಾರಿಕೆಯ ಮುಖ್ಯ ಸ್ಥಾನದಲ್ಲಿ ನಿಂತಿತು ಮತ್ತು ಇದನ್ನು ವಿದೇಶದಲ್ಲಿಯು ವಿಸ್ತರಿಸಿದೆ. ಆಸ್ಟ್ರೇಲಿಯಾದಲ್ಲಿ ಅದಾನಿಯು ಕಾರ್ಮೈಕಲ್ ಥರ್ಮಲ್ ಕಲ್ಲಿದ್ದಲು ಗಣಿಗಾರಿಕೆಗೆ ಕಳೆದ ವರ್ಷ ಅನುಮೋದನೆ ಪಡೆದಿದ್ದಾರೆ. ಇದರ ವಿರುದ್ದ ಪರಿಸರ ಹೋರಾಟಗಾರರು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ.

ಇತರ ಉದ್ಯಮಿಗಳಂತೆ, ಅದಾನಿ ಪದೇ ಪದೇ ಹೊಸ ಕೈಗಾರಿಕೆಗಳನ್ನು ಆರಿಸಿಕೊಂಡವರು. ಅದರಲ್ಲೂ ಸರ್ಕಾರವು ಅಭಿವೃದ್ಧಿ ಪಡಿಸಲು ಮುಂದಾಗಿರುವ ಮತ್ತು ಕಡಿಮೆ ಸ್ಪರ್ಧೆ ಇರುವಲ್ಲಿ…, ಈಗಲೂ ಕೂಡಾ ಅದಾನಿಯು “ರಾಷ್ಟ್ರ ನಿರ್ಮಾಣ” ವನ್ನು ತನ್ನ ಕಾರ್ಯತಂತ್ರದ ಪ್ರಮುಖ ವಿಷಯವಾಗಿದೆ ಎಂದು ಉಲ್ಲೇಖಿಸುತ್ತಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ. ಅದಾನಿ ಅಂಬಾನಿಗಾಗಿಯೇ ನರೇಂದ್ರ ಮೋದಿಯವರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಆರೋಪಿಸಿರುವ ರೈತರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣ ಇನ್ನು ಮುಂದೆ ಅದಾನಿ ಏರ್‌ಪೋರ್ಟ್ಸ್!: ನೆಟ್ಟಿಗರ ಕಿಡಿ

ಸ್ವತಃ ಗುಜರಾತಿ ಆಗಿರುವ ಪ್ರಧಾನಿ ಮೋದಿ ಅಧಿಕಾರ ಗಳಿಸಿದಂತೆಯೇ ಅದಾನಿ ಕೂಡಾ ಎತ್ತರಕ್ಕೆ ಏರುತ್ತಲೆ ಹೋದರು. ಅದಾನಿಯು ಮುಂಡ್ರಾ ಬಂದರಿನ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿ, ಮೋದಿ ಮುಖ್ಯಮಂತ್ರಿಯಾಗಿದ್ದಾಗ ಅದರಲ್ಲಿ ಕೈಗಾರಿಕಾ ವಲಯವನ್ನು ನಿರ್ಮಿಸಿದರು. ಅದಾನಿ ಸುಮಾರು ಎರಡು ದಶಕಗಳಿಂದ ರಾಜಕಾರಣಿಗಳ ಪ್ರಮುಖ ಬೆಂಬಲಿಗರಲ್ಲಿ ಒಬ್ಬರಾಗಿದ್ದಾರೆ.

ಅದಾನಿಯ ಕ್ಷಿಪ್ರ ಬೆಳವಣಿಗೆಯು 2015 ರ ಆಸುಪಾಸಿನಲ್ಲಿ ಪ್ರಾರಂಭವಾಯಿತು. ಸ್ಥಳೀಯವಾಗಿ ರಕ್ಷಣಾ ಸಾಧನಗಳ ಉತ್ಪಾದನೆಯನ್ನು ಅಭಿವೃದ್ಧಿಪಡಿಸುವುದಾಗಿ ಮೋದಿ ಪ್ರತಿಜ್ಞೆ ಮಾಡಿದಾಗ, ರಕ್ಷಣಾ ಕ್ಷೇತ್ರದ ಗುತ್ತಿಗೆದಾರರೊಂದಿಗೆ ಸಹಭಾಗಿತ್ವ ಮಾಡಿ ಮಿಲಿಟರಿ ಸಾಧನಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೆಚ್ಚಿಸಿದರು. ಇದಾಗಿ ಮೂರು ವರ್ಷಗಳ ನಂತರ ಖಾಸಗಿ ಅನಿಲ ಪೂರೈಕೆಯಲ್ಲಿ ಭಾರತದ ಅತಿದೊಡ್ಡ ಚಿಲ್ಲರೆ ವ್ಯಾಪಾರಿಗಳನ್ನಾಗಿ ಮಾಡಿತು. 2019 ರಲ್ಲಿ ಅವರು ವಿಮಾನ ನಿಲ್ದಾಣಗಳತ್ತ ಗಮನಹರಿಸಲು ಪ್ರಾರಂಭಿಸಿದರು, ಮತ್ತು ಈಗ ಡೇಟಾ ಸಂಗ್ರಹಣೆ ಮತ್ತು ಹಣಕಾಸು ಸೇವೆಗಳು ಸೇರಿದಂತೆ ಹಲವು ಕ್ಷೇತ್ರಗಳನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ:  ರೈತರ ಪ್ರತಿಭಟನೆಗೆ ಹೋಗುವವರಿಗೆ 100 ಲೀ.ಪೆಟ್ರೋಲ್ ಉಚಿತ- ಹರಿಯಾಣ ಶಾಸಕ

“ಪ್ರಧಾನಿ ಮೋದಿಯ ನೀತಿಗಳು ಅವರ ಗುಜರಾತ್ ದಿನಗಳಿಂದಲೂ ವ್ಯಾಪಾರಿ ಗುಂಪುಗಳಿಗೆ ಸಹಾಯ ಮಾಡಿವೆ ಮತ್ತು ಅದಾನಿ ಗ್ರೂಪ್‌ನಂತಹ ಸಂಘಟನೆಗಳ ತ್ವರಿತ ಬೆಳವಣಿಗೆಗೆ ಇದು ಕಾರಣವಾಗಿದೆ. ಕಾರ್ಪೊರೇಟ್ ಕಾರ್ಯತಂತ್ರಗಳನ್ನು ಸರ್ಕಾರದ ಆದ್ಯತೆಗಳನ್ನಾಗಿ ಮಾಡುವುದು ಭಾರತದಲ್ಲಿ ವ್ಯವಹಾರ ಮಾಡುವ ವಿಧಾನವಾಗಿದೆ” ಎಂದು ಅಹಮದಾಬಾದ್‌ನ ಅಭಿವೃದ್ಧಿ ಪರ್ಯಾಯ ಕೇಂದ್ರದ ನಿರ್ದೇಶಕ ಇಂದಿರಾ ಹಿರ್ವೇ ಹೇಳುತ್ತಾರೆ.

 

ಇತ್ತ ಅದಾನಿ ತನ್ನ ತಾಯ್ನಾಡಿನಲ್ಲಿ ಸರ್ಕಾರದಿಂದ ಅತ್ಯಧಿಕ ಬೆಂಬಲ ಪಡೆಯುತ್ತಿರುವಾಗ, ಅತ್ತ ಆಸ್ಟ್ರೇಲಿಯಾದಲ್ಲಿ ವಿರೋಧ ಮತ್ತು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿ ಚಳುವಳಿ ಹೆಚ್ಚಾಗುತ್ತಿದ್ದಂತೆ ಸಾಲದಾತರು ವಿವಾದಾತ್ಮಕ ಕಾರ್ಮೈಕಲ್ ಕಲ್ಲಿದ್ದಲು ಯೋಜನೆಯಿಂದ ದೂರ ಸರಿದರು. ಈ ಚಳುವಳಿಯು 2019 ರ ಸಂಸತ್ತಿನ ಮತದಾನದಲ್ಲಿ ಚುನಾವಣಾ ವಿಷಯವಾಗಿ ಕೂಡಾ ಮಾರ್ಪಟ್ಟಿತು.

ಅಂತರರಾಷ್ಟ್ರೀಯ ಹೂಡಿಕೆದಾರರು ಮತ್ತು ಜಾಗತಿಕ ಇಂಧನದ ದೊಡ್ಡ ಕಂಪೆನಿಗಳು ತಮ್ಮ ಬಂಡವಾಳವನ್ನು ವಿಸ್ತರಿಸಲು ಮತ್ತು ಲಾಭದಾಯಕ ಭಾರತೀಯ ಮಾರುಕಟ್ಟೆಯ ಒಂದು ಭಾಗವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ, ಇದಕ್ಕಾಗಿ ಅದಾನಿ ಗ್ರೂಪ್ ಅವರಿಗೆ ಆಕರ್ಷಕವಾಗಿ ಕಾಣುತ್ತದೆ. ಫ್ರಾನ್ಸ್‌ನ ಇಂಧನ ದೈತ್ಯ ಟೋಟಲ್ ಎಸ್‌ಎ ಈಗಾಗಲೇ ಅದಾನಿ ಗ್ರೀನ್ ಮತ್ತು ವಿತರಕ ಅದಾನಿ ಗ್ಯಾಸ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡಿದೆ.

ಮಾಹಿತಿ ಕೃಪೆ: ದಿ ಪ್ರಿಂಟ್

ಇದನ್ನೂ ಓದಿ: ಕಲ್ಲಿದ್ದಲು ಪೂರೈಕೆ ಗುತ್ತಿಗೆಗಾಗಿ ಟೆಂಡರ್ ತಿದ್ದಿದ ಆರೋಪ: ಗೌತಮ್ ಅದಾನಿ ಕಂಪನಿ ವಿರುದ್ಧ FIR

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...