Homeಮುಖಪುಟಸಾರ್ವಜನಿಕ ಜೀವನದಲ್ಲಿ ಕುಗ್ಗುತ್ತಿದೆ ಅಲ್ಪಸಂಖ್ಯಾತರ ಭಾಗವಹಿಸುವಿಕೆ

ಸಾರ್ವಜನಿಕ ಜೀವನದಲ್ಲಿ ಕುಗ್ಗುತ್ತಿದೆ ಅಲ್ಪಸಂಖ್ಯಾತರ ಭಾಗವಹಿಸುವಿಕೆ

- Advertisement -
- Advertisement -

ಮಧ್ಯಪ್ರದೇಶದ ಭರ್ವಾನಿ ಜಿಲ್ಲೆಯ ಸೆಂಧ್ವಾ ನಗರದಲ್ಲಿ ದಸರಾ ಸಮಯದಲ್ಲಿ ಎಂದಿನಂತೆ ಸಾರ್ವಜನಿಕ ಗರ್ಭಾ (ಒಂದು ಸಾಂಪ್ರದಾಯಕ ನೃತ್ಯ) ಕಾರ್ಯಕ್ರಮ ನಡೆಯುತಿತ್ತು. ದಿಢೀರನೆ ಕೆಲ ಹಿಂದೂ ಸ್ಥಳೀಯರು ಅಲ್ಲಿಗೆ ಧಾವಿಸಿ 10 ವರ್ಷದ ಮುಸ್ಲಿಂ ಯುವಕನೊಬ್ಬನು ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾನೆಂದು ಬೊಬ್ಬೆ ಎಬ್ಬಿಸಿ, ಹಿಂಸೆಗೆ ಇಳಿದರು. ಇದು ಭಾರತದಲ್ಲಿ ಬಿತ್ತಿರುವ ವಿಷಬೀಜಗಳ ಒಂದು ಚಿಕ್ಕ ’ಫಲ’ ಅಷ್ಟೇ.

ಗರ್ಭಾ ನೃತ್ಯದಲ್ಲಿ ಮುಸಲ್ಮಾನರು ಭಾಗವಹಿಸಿದರೆ ಏನು ಸಮಸ್ಯೆ ಎಂದು ತಾವು ಯೋಚಿಸುತ್ತಿರಬಹುದು. ವಿಷಯ ಒಂದು ನೃತ್ಯ ಕಾರ್ಯಕ್ರಮದ್ದಲ್ಲ. ಈ ಘಟನೆ, ಇಂದಿನ ಸಂಘ ಪರಿವಾರವು, ಗೋಳ್ವಾಲ್ಕರ್ ಅವರ ಗುರಿಯನ್ನು ಸಾಧಿಸಲು-ಸಾಕಾರಗೊಳಿಸಲು ಇಡುತ್ತಿರುವ ಉದ್ದೇಶಪೂರ್ವಕ ಹೆಜ್ಜೆಗಳಿಗೆ ಉದಾಹರಣೆಯಷ್ಟೇ.

ಗರ್ಭಾ ನೃತ್ಯ

ಗೋಳ್ವಾಲ್ಕರ್ ತಮ್ಮ ಪುಸ್ತಕ “ರಾಷ್ಟ್ರ ಮೀಮಾಂಸ”ದಲ್ಲಿ ಹೇಳಿದ್ದು ನಮಗೆಲ್ಲರಿಗೂ ಗೊತ್ತಿದೆ: ’ಅಲ್ಪಸಂಖ್ಯಾತರು ಭಾರತದಲ್ಲಿರಬೇಕೆಂದರೆ, ಹಿಂದೂಗಳಿಗೆ ಅಧೀನರಾಗಿ ಬದುಕಬೇಕು, ಸಾಮಾನ್ಯ ಪ್ರಜೆಗಳಿಗಿರುವ ಹಕ್ಕುಗಳು ಇರಬಾರದು’ ಎಂಬುದು. ಅವರ ಮಾತುಗಳನ್ನೇ ಆಧರಿಸಿ ಇಂದಿನ ಸಂಘ ಪರಿವಾರದವರು ಮುಸಲ್ಮಾನರು, ಕ್ರೈಸ್ತರು ಹಾಗು ಒಂದು ಮಟ್ಟಕ್ಕೆ ಸಿಖ್ ಸಮುದಾಯ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದವರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಲು ಹೊರಟಿದ್ದಾರೆ. ಇದರ ಭಾಗವಾಗಿ ದೈಹಿಕ ಹಲ್ಲೆಗಳು, ಆಧಾರವಿಲ್ಲದ ಅರೋಪಗಳು, ಸುಳ್ಳು ಪ್ರಕರಣಗಳು, ಸಾರ್ವಜನಿಕ ಕಾರ್ಯಕ್ರಮಗಳಿಂದ ವಿನಾಕಾರಣ ಹೊರದಬ್ಬುವುದು – ಇವೆಲ್ಲವು ಪ್ರತಿ ದಿನದ ನರಕಾನುಭವದ ಭಾಗವಾಗಿಹೋಗಿದೆ. ಅವರ ಮೇಲೆ ನಡೆಯುತ್ತಿರುವ ದಾಳಿಗಳು, ದೈಹಿಕ ಹಲ್ಲೆಗಳು ಇವೆಲ್ಲದರ ಬಗ್ಗೆ ನಮಗೆ ಪ್ರತಿದಿನಿತ್ಯದ ವರದಿಗಳು ತಿಳಿಸುತ್ತಿವೆ. ಆದರೆ, ಸಂಘ ಪರಿವಾರದ ಈ ಯೋಜನೆಯ ಒಂದು ಮುಖ್ಯ ಭಾಗವನ್ನು, ಅವರ ಮುಖ್ಯ ದುರುದ್ದೇಶವೊಂದನ್ನು ನಾವು ಇನ್ನೂ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ – ದಿನನಿತ್ಯ ಸಾರ್ವಜನಿಕ ಜೀವನದಲ್ಲಿ ಕುಗ್ಗುತ್ತಿರುವ ಅಲ್ಪ ಸಂಖ್ಯಾತರ ಭಾಗವಹಿಸುಕೆ. ಅಂದರೆ, ನಾಡಿನ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಹಾಗು ಸಾಮಾಜಿಕ ವಲಯಗಳಲ್ಲಿ ಮುಕ್ತ ಭಾಗವಹಿಸುವಿಕೆಯ ಹಕ್ಕಿಗೆ ಇಂದು ಕೊಡಲಿ ಏಟು ಬಿದ್ದಿದೆ. ಇದನ್ನು ಏಕೆ ಗಂಭೀರವಾಗಿ ಗಮನಿಸಬೇಕು ಮತ್ತು ಇದರ ಅಡ್ಡ ಪರಿಣಾಮಗಳೇನು, ಹಾಗು ಇದಕ್ಕೆ ಸಾರ್ವಜನಿಕರು ಏನು ಮಾಡಬಹುದೆಂದು ಇಲ್ಲಿ ಚರ್ಚಿಸಲಾಗಿದೆ.

ಅಲ್ಪಸಂಖ್ಯಾತರು ಎದುರಿಸುತ್ತಿರುವ ಕೆಲವು ಸವಾಲುಗಳನ್ನು ಗಮನಿಸೋಣ. ಕರ್ನಾಟಕದ ಪ್ರಾಮಾಣಿಕ ಹಾಗು ಬದ್ಧತೆಯ ಪರಿಸರವಾದಿಗಳಲ್ಲಿ ಲಿಯೋ ಸಾಲ್ಡಾನರವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ತಮ್ಮ ಹೋರಾಟಗಳ ಮೂಲಕ, ಪಿ.ಐ.ಎಲ್‌ಗಳ ಮೂಲಕ ಅನೇಕ ಸರ್ಕಾರಗಳಿಗೆ ಚಳಿ ಬಿಡಿಸಿ, ಪರಿಸರದ ಉಳಿವಿಗೆ ಧೀರ ಹೋರಾಟ ನಡೆಸಿದವರವರು. ಆದರೆ ಇತ್ತೀಚೆಗೆ ಅವರು ಬೇಗೂರು ಕೆರೆ ಒತ್ತುವರಿ (ಅಲ್ಲಿ ಬಿಬಿಎಂಪಿ ಕೆರೆಯ ನೀರನ್ನು ಹೊರಚೆಲ್ಲಿ, ಕಾಂಕ್ರೀಟ್ ದ್ವೀಪಕಟ್ಟಿ, ಅದರ ಮೇಲೆ ಒಂದು ಕಾಂಕ್ರೀಟ್ ಶಿವನ ಪ್ರತಿಮೆ ಕೂರಿಸಲು ಹೊರಟಿದ್ದರು. ಕೆರೆಯಲ್ಲಿ ಕಾಂಕ್ರೀಟ್ ದ್ವೀಪ ಕಟ್ಟುವುದು ಕಾನೂನುಬಾಹಿರ.) ಬಗ್ಗೆ ದಾಖಲಿಸಿದ ಪ್ರಕರಣಕ್ಕೆ
ಅಲ್ಲಿನ ಕೆಲವು ಸ್ಥಳೀಯ ಕಿಡಿಗೇಡಿಗಳು ಕೋಮು ಬಣ್ಣ ಕೊಟ್ಟರು. ಲಿಯೋ ಅವರು ಕ್ರೈಸ್ತರು, ಅದಕ್ಕಾಗಿ ಹಿಂದೂಗಳಿಗೆ ಈ ರೀತಿ ತೊಂದರೆ ಕೊಡುತಿದ್ದಾರೆ ಎಂದು ಫೇಸ್‌ಬುಕ್‌ನಲ್ಲಿ ವೀಡಿಯೋಗಳನ್ನು ಪ್ರಕಟಿಸಿದರು, ಬೆದರಿಕೆಗಳನ್ನು ನೀಡಿದರು. ಎರಡು ದಶಕಗಳ ಕಾಲ ಅವರು ಕೆರೆಗಳ ಉಳಿವಿನ ಬಗ್ಗೆ ಹೋರಾಟ ನಡೆಸಿ ಕ್ರಮ ತೆಗೆದುಕೊಂಡಾಗ ಕ್ರೈಸ್ತರಾಗಿರಲಿಲ್ಲ, ಈಗ ಏಕಾಏಕಿ ಕ್ರೈಸ್ತ ಮತಸ್ಥರಾದರು. ಈ ರೀತಿಯ ಘಟನೆಗಳಿಂದ ನಮಗೆ ಪರಿಚಯ ಇರುವ ಹಲವು ಅಲ್ಪಸಂಖ್ಯಾತ ಸಮುದಾಯದ ಹೋರಾಟಗಾರರಿಗೆ, ಯಾವುದೇ ಸಾಮಾಜಿಕ ಸಮಸ್ಯೆಯ ಬಗ್ಗೆ ದೂರುಗಳನ್ನು ನೀಡುವ ಮುನ್ನ ಯೋಚಿಸುವಂತೆ ಮಾಡುತ್ತಿದೆ.

ಸಲ್ಮಾನ್ ಖುರ್ಷಿದ್

ಈ ಲೇಖನ ಬರೆಯುತಿದ್ದಾಗಲೇ, ಮತ್ತೊಂದು ಘಟನೆ ನಡೆಯಿತು. ಸೋಮವಾರ ನವೆಂಬರ್ 15ರಂದು ಮಾಜಿ ಕೇಂದ್ರ ಸಚಿವರಾದ ಸಲ್ಮಾನ್ ಖುರ್ಷಿದ್ ಅವರ ಮನೆಗೆ 15-20 ಪುಢಾರಿಗಳು ಬೆಂಕಿ ಇಟ್ಟು, ಧ್ವಂಸ ಮಾಡಿದರು. ಸಲ್ಮಾನ್ ಖುರ್ಷಿದ್ ಅವರು ಅಯೋಧ್ಯಾ ತೀರ್ಪಿನ ಕುರಿತು, ’ಸನ್ ರೈಸ್ ಓವರ್ ಅಯೋಧ್ಯಾ: ನೇಷನ್‌ಹುಡ್ ಇನ್ ಅವರ ಟೈಮ್ಸ್’ ಎಂಬ ಪುಸ್ತಕದಲ್ಲಿ ಹಿಂದುತ್ವವನ್ನು ಐಸಿಸ್ ಹಾಗು ಬೊಕೋ ಹರಾಮ್‌ಗೆ ಹೋಲಿಸಿದ್ದಾರೆ. ಇದನ್ನು ಸಹಿಸಿಕೊಳ್ಳದ ಪುಢಾರಿಗಳು ಈ ರೀತಿ ಹಿಂಸೆಗೆ ಇಳಿದರು. ಮಾಜಿ ಕೇಂದ್ರ ಸಚಿವರಿಗೆ ಈ ರೀತಿಯಾದರೆ, ಇಷ್ಟು ಸಲೀಸಾಗಿ ಗುರುತಿಸಿ, ಅವರ ಮನೆಯ ಮೇಲೆ ದಾಳಿ ಮಾಡಿದರೆ, ಇನ್ನು ಜನಸಾಮಾನ್ಯರ ಗತಿಯೇನು? ಕಳೆದ ತಿಂಗಳು ಅಸಾದುದ್ದೀನ್ ಓವೈಸಿ ಅವರ ಮನೆಯ ಮೇಲೆ ಸಹ ಈ ರೀತಿಯ ದಾಳಿಯಾಯಿತು. ಅಂದರೆ, ತಾವು ಮುಸಲ್ಮಾನರಾಗಿದ್ದರೆ, ತಾವು ಅಧಿಕಾರದ ಸ್ಥಾನಗಳಲ್ಲಿದ್ದರೂ ಸಹ ಅದು ಅವರನ್ನು ಕಾಪಾಡದೇ ಇರಬಹುದು.

ಹೀಗಿದ್ದಾಗ, ಜನ ಸಾಮಾನ್ಯರು ಭಯವಿಲ್ಲದೆ, ಮುಕ್ತವಾಗಿ ಅವರ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಹೇಗೆ? ಅದನ್ನು ಮಾಡಲು ಅವಕಾಶವಿಲ್ಲವಾದಾಗ, ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡದೆ, ದೇಶದ ನೀತಿನಿಯಮಗಳು ರೂಪುಗೊಳ್ಳುತ್ತವೆ. (ಹೀಗಿದ್ದರೂ, ಈಗಲು ಕೆಲವು ಅಲ್ಪಸಂಖ್ಯಾತ ಮಿತ್ರರು ದೂರುಗಳನ್ನು ದಾಖಲಿಸುತ್ತಿದ್ದಾರೆ, ನಿರ್ಭೀತಿಯಾಗಿ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಧೈರ್ಯದ ಬಗ್ಗೆ ಗೌರವ ಇದ್ದೇಇದೆ.) ಸಂಘಟನೆಗಳಲ್ಲಿರುವ ಹೋರಾಟಗಾರರಿಗೆ ಸಣ್ಣಮಟ್ಟದ ರಕ್ಷಣೆ ಇರುತ್ತದೆ, ಆದರೆ ಜನಸಾಮಾನ್ಯರಿಗೆ ಅದು ಇಲ್ಲದಿರಬಹುದು. ಈ ರೀತಿಯ ಬೆದರಿಕೆಗಳಿಂದ, ಆಧಾರರಹಿತ ಆಪಾದನೆಗಳಿಂದ ಅಲ್ಪಸಂಖ್ಯಾತರನ್ನು ಮಿಕ್ಕವರು ಅನುಮಾನದಿಂದ ನೋಡಿ, ನಾಗರಿಕ ಸಾಮುದಾಯಿಕ ಜೀವನದಲ್ಲಿ ಅವರು ಭಾಗವಹಿಸದೆ ಇರುವ ವಾತಾವರಣ ನಿರ್ಮಾಣಗೊಳ್ಳುತ್ತದೆ.

ಈ ಅಡಚಣೆಗಳು ಕೇವಲ ಹೋರಾಟಗಾರರಿಗೆ ಮಾತ್ರವಲ್ಲ. ಜನಸಾಮಾನ್ಯರಿಗೂ ಇದು ವಿಸ್ತರಣೆಯಾಗಿರುವುದು ದುರಂತ. “ಸುಳ್ಳಿ ಡೀಲ್ಸ್” ಪ್ರಕರಣ ಕೇಳಿರಬಹುದು; ಇದೇ ಸಾಲಿನ ಜುಲೈ ತಿಂಗಳಲ್ಲಿ ಕೆಲ ಹಿಂದುತ್ವವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಮಹಿಳೆಯರ ಡಿ.ಪಿಗಳನ್ನು (ಫೋಟೋ) ಡೌನ್‌ಲೋಡ್ ಮಾಡಿ, ಅದನ್ನು ಉಪಯೋಗಿಸಿ, “ಸುಳ್ಳಿ ಡೀಲ್ಸ್” ಎಂಬ ವೆಬ್‌ಸೈಟ್‌ನಲ್ಲಿ ಮುಸ್ಲಿಂ ಮಹಿಳೆಯರನ್ನು ಆನ್‌ಲೈನ್ ’ಹರಾಜು’ ಮಾಡಿದರು! “ಡೀಲ್ ಆಫ಼್ ದಿ ಡೇ” ಎಂದು ಮಹಿಳೆಯರ ಭಾವಚಿತ್ರ ಹಾಕಿ ಒಂದು ’ರೇಟ್’ ನಿಗದಿಪಡಿಸಿದರು. ಇದು ನಿಜವಾದ ಹರಾಜಾಗಿಲ್ಲದಿದ್ದರೂ, ಇದರಿಂದ ಈ ಮಹಿಳೆಯರಿಗೆ ಎಷ್ಟು ಆತಂಕವಾಗಿರಬಹುದು, ಎಷ್ಟು ಸಿಟ್ಟು-ಹತಾಶೆ ಹುಟ್ಟಿರಬಹುದು ಯೋಚಿಸಿ. ಇದು ಅವರ ಘನತೆಗೆ ತಂದ ಧಕ್ಕೆ.

ಮುನಾವರ್ ಫ಼ರೋಕಿ

ಈ ಪ್ರಕರಣ ಆಗಿ 5 ತಿಂಗಳ ನಂತರವೂ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ಇನ್ನೂ ಬೇಸರದ ಸಂಗತಿಯೆಂದರೆ, ಇದರಿಂದ ಹಲವು ಮುಸ್ಲಿಂ ಮಹಿಳೆಯರು ತಮ್ಮ ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ಗಳಲ್ಲಿ ತಮ್ಮ ಭಾವಚಿತ್ರ ಹಾಕುವುದಕ್ಕೂ ಸಹ ಹಿಂಜರಿಯುತ್ತಿದ್ದಾರೆ. ಅದೇ ರೀತಿ ಮುಸ್ಲಿಂ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ವಿಷಯಗಳ ಬಗ್ಗೆ, ತಮ್ಮ ಸಮುದಾಯಕ್ಕೆ ಆಗುತ್ತಿರುವ ತಾರತಮ್ಯದ ಬಗ್ಗೆ ಪೋಸ್ಟ್ ಮಾಡಿದರೆ, ಹಲವು ದುಷ್ಕರ್ಮಿಗಳು ಅವರ ವಿರುದ್ಧ ಅಸಭ್ಯವಾಗಿ ಪೋಸ್ಟ್ ಮಾಡುತ್ತಾರೆ. ಈ ಕೆಲವು ಕೃತ್ಯಗಳಿಂದ ಸಾಮಾಜಿಕ ಜಾಲತಾಣಗಳಲ್ಲೂ ಸಹ ಅಲ್ಪಸಂಖ್ಯಾತ ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಆಗುತ್ತದೆ. ಸಾಮಾಜದಲ್ಲಿ ಹಲವು ಸಾರ್ವಜನಿಕ ವಿಷಯಗಳ ಬಗ್ಗೆ ರೂಪಗೊಳ್ಳುವ ಜನಾಭಿಪ್ರಾಯದಲ್ಲಿ ಅವರ ಧ್ವನಿ ಇಲ್ಲದಂತಾಗುತ್ತದೆ.

ಮಂಗಳೂರು, ಕರಾವಳಿ ಕರ್ನಾಟಕ ಹಾಗು ಇತರೆ ಭಾಗಗಳಲ್ಲಿ ಆಗುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ಭಜರಂಗ ದಳ, ವಿ.ಎಚ್.ಪಿಯವರ ಮತೀಯ ಗೂಂಡಾಗಿರಿಯಿಂದ ಇಂದು ಅಲ್ಪಸಂಖ್ಯಾತ ಸಮುದಾಯದ ಯುವಜನರು, ಹಿಂದೂ ಯುವಜನರ ಜೊತೆ ಸೇರುವಂತೆ ಸಹ ಇಲ್ಲ. ಜೊತೆಗೆ ಹೋಗಿ ಐಸ್‌ಕ್ರೀಮ್ ತಿನ್ನುವಂತಿಲ್ಲ ಎಂಬ ವಾತಾವರಣ ಸೃಷ್ಟಿಯಾಗಿದೆ.

ಮಂಗಳೂರಿನ ಮುಸ್ಲಿಂ ವೈದ್ಯರೊಬ್ಬರು ಹೇಳಿದ್ದೇನೆಂದರೆ, ಅವರ ತಂಗಿ ಬುರ್ಖಾ ಹಾಕಿಕೊಳ್ಳದಿದ್ದರೆ, ರಸ್ತೆಯಲ್ಲಿ ಅವರೊಂದಿಗೆ ಮಾತನಾಡಲು ಭಯವಾಗುತ್ತದೆ ಎಂದು. (ಬುರ್ಖಾ ಇಲ್ಲದೆ ಅವರ ತಂಗಿಯನ್ನು ಹಿಂದೂ ಎಂದು ಜನ ಭಾವಿಸಿ, ಇವರ ಮೇಲೆ ಹಲ್ಲೆಗೆ ಮುಂದಾಗಬಹುದೆಂಬ ಆತಂಕ ಅದು.) ಇಂತಹ ವಿದ್ಯಮಾನಗಳಿಂದ ಮುಸಲ್ಮಾನರನ್ನು ಮೂಲೆಗುಂಪು ಮಾಡಲು, ಅವರೊಂದಿಗೆ ಇತರೆ ಸಮುದಾಯದವರು ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳಬಾರದೆಂದು ಒತ್ತಾಯಿಸಿದಂತಾಗುತ್ತದೆ. ಸಾಮಾಜಿಕ ಸಂಬಂಧಗಳು ಇಲ್ಲದೆ, ಮುಸಲ್ಮಾನರು ಇನ್ನೂ ಮೂಲೆಗುಂಪಾಗುತ್ತಾರೆ.

ಇನ್ನೊಂದೆಡೆ ನೋಡಿದರೆ, ಹಿಂದೂ ದೇವರುಗಳು ಮೇಲೆ ’ಜೋಕ್’ ಹೇಳಿದನೆಂದು ಮುನಾವರ್ ಫ಼ರೋಕಿ ಅವರನ್ನು ಅಕ್ರಮವಾಗಿ ಬಂಧಿಸಿ, ಯಾವುದೇ ಕಾರಣಗಳಿಲ್ಲದಿದ್ದರೂ ಅವರಿಗೆ ಜಾಮೀನು ಸಿಗದಂತೆ ಮಾಡಿದ್ದು ಗೊತ್ತೇ ಇದೆ. ಈಗ ಅವರು ಯಾವುದೇ ನಗರದಲ್ಲಿ ಕಾಮಿಡಿ ಷೋ ಮಾಡಲು ಹೊರಟರೆ, ಹಿಂದುತ್ವವಾದಿಗಳು ಅಲ್ಲಿ ಹಿಂಸೆಯ ಬೆದರಿಕೆ ಒಡ್ಡಿ, ಷೋಗಳನ್ನು ರದ್ದು ಪಡಿಸುತಿದ್ದಾರೆ. ಕೆಲವು ದಿನಗಳ ಹಿಂದೆ ಗೋವಾದಲ್ಲಿ ಇವರ ಷೋಗೆ ಸಂಪೂರ್ಣ ಬುಕಿಂಗ್ ಆಗಿದ್ದರು, ಹಿಂದೂ ಜಾಗೃತಿ ಸಮಿತಿಯವರ ವಿರೋಧದಿಂದ ಆ ಷೋಅನ್ನು ರದ್ದುಗೊಳಿಸಲಾಯಿತು.

ಈ ರೀತಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗು ರಾಜಕೀಯ ವಲಯಗಳಲ್ಲಿ ಭಾಗವಹಿಸುವುದಕ್ಕೆ ಅಲ್ಪಸಂಖ್ಯಾತರಿಗೆ ಹಲವು ಅಡಚಣೆಗಳನ್ನು ಹೇರಲಾಗಿದೆ. ಇದರ ಪರಿಣಾಮಗಳು ಬಹಳ ಗಂಭೀರವಾದವು. ಪ್ರಜಾಪ್ರಭುತ್ವ ಎಂದರೆ ಕೇವಲ ಮತ ಹಾಕುವುದಷ್ಟೇ ಅಲ್ಲ. ಸರ್ಕಾರದ ನೀತಿಗಳನ್ನು ಟೀಕಿಸಲು, ಅದನ್ನು ಬದಲಾಯಿಸುವಂತೆ ಒತ್ತಾಯಿಸುವ ಅವಕಾಶಗಳು ಎಲ್ಲರಿಗೂ ಇರಬೇಕು. ಸಾರ್ವಜನಿಕ-ಸಾಮುದಾಯಿಕ ಒಳಿತಿಗೆ ಬೇಕಾಗಿರುವಂತೆ ಜೀವನವನ್ನು ರೂಪಿಸುವುದರಲ್ಲಿ, ಎಲ್ಲರ ಅಗತ್ಯಗಳಿಗೆ ಬೇಕಾಗಿರುವಂತೆ ನಮ್ಮ ನಗರಗಳನ್ನು ರೂಪಿಸಿಕೊಳ್ಳುವ ಹಕ್ಕು ಕೂಡ ಉಳಿಸಿಕೊಳ್ಳಬೇಕಿದೆ. ಸಾಮಾಜಿಕ ಭಾಗವಹಿಸುವಿಕೆಗೆ ಅಡ್ಡಿಪಡಿಸಿದರೆ, ಪ್ರಜೆಗಳಾಗಿ ಆ ಹಕ್ಕನ್ನು ಸಹ ಹಲವರು ಕಳೆದುಕೊಳ್ಳುತ್ತಾರೆ.

ಸಾಂಸ್ಕೃತಿಕ ಜೀವನದಲ್ಲಿ ಭಾಗವಹಿಸಲು ಅವಕಾಶಗಳನ್ನು ಕಳಚಿದಾಗ, ಅರ್ಥಪೂರ್ಣವಾದ, ಉತ್ತಮಜೀವನ ನಡೆಸಲು ಕಷ್ಟವಾಗುತ್ತದೆ. ಆಷ್ಟು ಮಾತ್ರವಲ್ಲ, ಸಮಾಜದಲ್ಲಿ ಇತರರೊಂದಿಗೆ ಸಂಬಂಧಗಳು ಸಹ ಬಲಹೀನಗೊಳುತ್ತವೆ, ಅರ್ಥ ಕಳೆದುಕೊಳ್ಳುತ್ತವೆ.

ಈ ರೀತಿ ಬಲಹೀನಗೊಂಡಾಗ, ಅವಕಾಶವಂಚಿತ ಮತ್ತು ದುರ್ಬಲ ಸಮುದಾಯಗಳ ಮೇಲೆ ಹಿಂಸೆ ಎಸಗುವುದು ಇನ್ನಷ್ಟು ಸುಲಭವಾಗುತ್ತದೆ. ಈ ರೀತಿ ಹಲವು ದುಷ್ಪರಿಣಾಮಗಳು ಇರುವುದರಿಂದಲೇ Universal Declaration of Human Rightsನಲ್ಲಿ ಇದನ್ನು ಹಕ್ಕಾಗಿ ನಮೂದಿಸಿದೆ[1], ಹಾಗು Declaration on the Rights of Persons belonging to National or Ethnic, Religious and Linguistic Minorities (Adopted by the UN General Assembly; Resolution 47/135 of 18 December 1992) ರಲ್ಲಿ ಹೀಗೆ ನಮೂದಿಸಿದೆ –

Persons belonging to minorities have the right to participate effectively in cultural, religious, social, economic and public life.

ಇದರಿಂದ ಸಾರ್ವಜನಿಕ ಜೀವನದಲ್ಲಿ ಭಾಗವಹಿಸುವಿಕೆ ಎಷ್ಟು ಮುಖ್ಯವಾದುದೆಂದು ತಿಳಿಯಬಹುದಾಗಿದೆ.

ಇದಲ್ಲದೆ, ಅವರ ಭಾಗವಹಿಸುವಿಕೆಗೆ ಅಡಚಣೆಯುಂಟಾಗಿರುವುದು ನಮ್ಮ ಸಂವಿಧಾನಾತ್ಮಕ ಮೌಲ್ಯಗಳ ಉಲ್ಲಂಘನೆಯೂ ಹೌದು. ಉದಾಹರಣೆಗೆ ಬಾಬಾಸಾಹೇಬ್ ಅಂಬೇಡ್ಕರ್‌ರವರು ಪ್ರಜಾಪ್ರಭುತ್ವದ ಬಗ್ಗೆ ಹೀಗೆ ಹೇಳಿದ್ದರು –

’ಪ್ರಜಾಪ್ರಭುತ್ವವು ಕೇವಲ ಸರಕಾರದ ಒಂದು ರೀತಿಯಲ್ಲ. ಮೂಲತಃ ಅದೊಂದು ಸಹಜೀವನದ ಕ್ರಮ, ಸಂಯೋಜಿತ ಸಂವಹನದ ಅನುಭವ. ಅದು ಅಗತ್ಯವಾಗಿ ಸಹಜೀವಿಗಳ ಬಗೆಗಿನ ಗೌರವದ ಮತ್ತು ಆದರದ ಧೋರಣೆಯಾಗಿದೆ.’

ಅಂಬೇಡ್ಕರ್

ಬಾಬಾಸಾಹೇಬರ ಗ್ರಹಿಕೆಯಲ್ಲಿ, ಪ್ರಜಾಪ್ರಭುತ್ವದ ಒಂದು ಮೂಲ ಅಂಶವೆಂದರೆ-ಜಾತಿ, ಧರ್ಮ ಮೀರಿ, ಎಲ್ಲರನ್ನೂ ಗೌರವಿಸುವುದು; ಜಾತಿ ಧರ್ಮ ಇತ್ಯಾದಿ ಗೋಡೆಗಳನ್ನು ಮೀರಿ, ಒಟ್ಟಿಗೆ ಬದುಕಿ ಆ ಬದುಕಿನಿಂದ ಉಂಟಾಗುವ ಸಮಾನ ಅನುಭವಗಳನ್ನು ಪಡೆಯುವುದು.

ಇಂದಿನ ಮತೀಯ ಗೂಂಡಾಗಿರಿಯಿಂದ, ಅಲ್ಪಸಂಖ್ಯಾತರನ್ನು ಮೂಲೆಗುಂಪು ಮಾಡುತ್ತಿರುವುದದರಿಂದ ಪ್ರಜಾಪ್ರಭುತ್ವದ ಈ ಮೂಲ ಪರಿಕಲ್ಪನೆಗೆ ವಿರುದ್ಧವಾದ ಘಟನೆಗಳು ತಾಂಡವವಾಡುತ್ತಿವೆ. ಸಂವಿಧಾನದ ಇನ್ನೊಂದು ಮೂಲ ಮೌಲ್ಯ – ಬಂಧುತ್ವ/ಸೋದರತ್ವ (ಫ್ರೆಟರ್ನಿಟಿ). ಜಾತಿ-ಮತಗಳಿಂದ ಒಡೆದಿರುವ ಈ ಸಮಾಜದಲ್ಲಿ ಬಂಧುತ್ವ ಎಷ್ಟು ಮುಖ್ಯವೆಂದು ಅಂಬೇಡ್ಕರ್ ಅವರಿಗೆ ತಿಳಿದಿತ್ತು.

ಹಾಗಾಗಿ ಇದನ್ನು ಸಂವಿಧಾನದ ಮೂಲ ಮೌಲ್ಯವನ್ನಾಗಿ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಬಂಧುತ್ವದ ಬಗ್ಗೆ ಮಾತನಾಡುತ್ತಾ ಅವರು ಹೇಳಿದ್ದೇನೆಂದರೆ –

’ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವದ ಈ ತ್ರಿದಳ ಅಂಶಗಳನ್ನು ಪ್ರತ್ಯೇಕಿಸಿ ಬೇರೆಬೇರೆಯಾಗಿ ನೋಡಬಾರದು. ಈ ಮೂರೂ ಅಂಶಗಳು ತ್ರಿದಳದಲ್ಲಿ ಏಕೀಭವಗೊಂಡಿದ್ದು, ಇವುಗಳನ್ನು ಪ್ರತ್ಯೇಕಿಸಿದರೆ ಪ್ರಜಾಪ್ರಭುತ್ವದ ಉದ್ದೇಶವೇ ವಿಫಲಗೊಳ್ಳುತ್ತದೆ. ಸ್ವಾತಂತ್ರ್ಯವನ್ನು ಸಮಾನತೆಯಿಂದ ವಿಚ್ಛೇದಿಸಲಾಗದು, ಹಾಗೆಯೇ ಸಮಾನತೆಯನ್ನು ಸ್ವಾತಂತ್ರ್ಯದಿಂದ ಬೇರ್ಪಡಿಸಲಾಗದು. ಇವೆರಡನ್ನೂ ಬಂಧುತ್ವದಿಂದ ಬೇರೆಮಾಡಲಾಗದು. ಸಮಾನತೆ ಇಲ್ಲದ ಸ್ವಾತಂತ್ರ್ಯವು ಬಹುಸಂಖ್ಯಾತ ಜನರ ಮೇಲೆ ಕೆಲವೇ ಜನರ ಅಧಿಕಾರ ಹೇರಿಕೆಗೆ ಕಾರಣವಾಗುತ್ತದೆ. ಸ್ವಾತಂತ್ರ್ಯವಿಲ್ಲದ ಸಮಾನತೆಯು ವೈಯಕ್ತಿಕತೆಯನ್ನು ನಾಶಮಾಡುತ್ತದೆ. ಬಂಧುತ್ವವಿಲ್ಲದ ಸ್ವಾತಂತ್ರ್ಯ ಮತ್ತು ಸಮಾನತೆಗಳು ಸಹಜ ನಡವಳಿಕೆಯಾಗಿ ರೂಪುಗೊಳ್ಳಲು ಸಾಧ್ಯವಿಲ್ಲ. ಆಗ ಅವುಗಳನ್ನು ಅನುಷ್ಠಾನಗೊಳಿಸಲು ಒಬ್ಬ ಚೌಕೀದಾರನ ಅವಶ್ಯಕತೆ ಬೀಳುತ್ತದೆ.

ಒಂದು ಅಂಶದಲ್ಲಿ ನೋಡುವುದಾದರೆ, ಸಂವಿಧಾನವು ಬಂಧುತ್ವದ ಮೇಲೆ ನಿಂತಿದೆ. ಭಾರತದ ಸಂವಿಧಾನವನ್ನು ಎಂದೂ ಒಪ್ಪಿಕೊಳ್ಳದ ಸಂಘ ಪರಿವಾರ, ಹಿಂದುತ್ವದ ಮೂಲಕ ಬಂಧುತ್ವವನ್ನು ಒಡೆಯಲು ಹೊರಟಿದೆ. ಇದರಿಂದ ಸಮಾಜ ಒಡೆದು ಛಿದ್ರವಾಗುತ್ತಿದೆ.

ಮನುವಾದಿಗಳ ಈ ನಡೆಯಿಂದ ಪ್ರಜಾಪ್ರಭುತ್ವದ ಬೇರಿಗೆ, ಬಂಧುತ್ವಕ್ಕೆ ಒಂದು ಕಡೆ ಹಾನಿಯಾದರೆ, ಸಾಂವಿಧಾನಿಕ ಭರವಸೆಯಾದ ಸಮಾನತೆಯ ಉಲ್ಲಂಘನೆ ಸಹ ಆಗುತ್ತಿದೆ. ಸಂವಿಧಾನ ಪೀಠಿಕೆಯಲ್ಲಿರುವ ಎಲ್ಲರಿಗೂ ಸ್ಥಾನಮಾನ ಹಾಗು ಅವಕಾಶಗಳ ಸಮಾನತೆಯ ಭರವಸೆಯ ಉಲ್ಲಂಘನೆ ಅದು. ಸಾಮಾಜಿಕ ಭಾಗವಹಿಸುವಿಕೆಯ ಅವಕಾಶ ಎಲ್ಲರಿಗೂ ಇರಬೇಕು. ಆದರೆ ಸಾವಿರಾರು ವರ್ಷಗಳಿಂದ ದಲಿತರಿಂದ, ದಮನಿತ ಸಮುದಾಯಗಳಿಂದ ಅವಕಾಶಗಳನ್ನು ಕಿತ್ತುಕೊಂಡ, ಅವರನ್ನು ಸಮಾಜದಿಂದ ದೂರವಿಟ್ಟ ಹಿಂದೂ ಸಮಾಜಕ್ಕೆ, ಧಾರ್ಮಿಕ ಅಲ್ಪಸಂಖ್ಯಾತರಿಗೂ ಈ ಅವಕಾಶಗಳ, ಸ್ಥಾನಮಾನದ ನಿರಾಕರಣೆ ಸಹಜವಾಗಿಯೆ ಬರುತ್ತದೆ.

ಈ ಅಂಶವನ್ನು ನಾವೆಲ್ಲರೂ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಿದೆ. ಹಿಂದುತ್ವವಾದಿಗಳು ಅಲ್ಪಸಂಖ್ಯಾತರ ಭಾಗವಹಿಸಿವಿಕೆಗೆ ಅಡಚಣೆಗಳನ್ನು ಮಾಡಿದಷ್ಟೂ, ನಾವು ಆ ಅಡಚಣೆಗಳನ್ನು ತೊಡೆದುಹಾಕಬೇಕು. ಇದು ಹೇಗೆ ಎಂದು ಮುಂದಿನ ಭಾಗದಲ್ಲಿ ಚರ್ಚಿಸಲಾಗುವುದು.

[1]Article 27 Everyone has the right freely to participate in the cultural life of the community, to enjoy the arts and to share in scientific advancement and its benefits.

ವಿನಯ್ ಕೂರಗಾಯಲ ಶ್ರೀನಿವಾಸ, ಸೈಯ್ಯದಾ ಸಬಾ
ಇಬ್ಬರೂ ಬೆಂಗಳೂರು ಮೂಲದ ವಕೀಲರು


ಇದನ್ನೂ ಓದಿ: ಜಾತಿಕೂಪದ ವಿರಾಟ್‌ರೂಪವನ್ನು ಬಿಚ್ಚಿಟ್ಟ ಹಂಸಲೇಖ ಘಟನೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ ಹಾಡಿದ ಪ್ರಕರಣ : ತನಿಖೆಗೆ ಆದೇಶಿಸಿದ ಸರ್ಕಾರ

ಹೊಸದಾಗಿ ಚಾಲನೆ ನೀಡಲಾದ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ಸಂಚಾರದ ವೇಳೆ ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ (ಗಾನ ಗೀತಂ) ಹಾಡಿದ ಬಗ್ಗೆ ತನಿಖೆಗೆ ಕೇರಳದ ಪ್ರಾಥಮಿಕ ಶಿಕ್ಷಣ ಸಚಿವ...

ಬಿಹಾರ ಚುನಾವಣೆ | ಎಲ್‌ಜೆಪಿ ಸಂಸದೆಯ ಎರಡೂ ಕೈಗಳಲ್ಲಿ ಮತದಾನದ ಶಾಯಿ ಗುರುತು; ಮತಗಳ್ಳತನ ಆರೋಪ

ಬಿಹಾರದಲ್ಲಿ ನವೆಂಬರ್ 6ರಂದು ನಡೆದ ಮೊದಲ ಹಂತದ ಮತದಾನದ ವೇಳೆ ಎನ್‌ಡಿಎ ಭಾಗವಾಗಿರುವ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) ಸಂಸದೆ ಶಾಂಭವಿ ಚೌಧರಿ ಅವರ ಎರಡೂ ಕೈಗಳಲ್ಲಿ ಮತದಾನದ ಗುರುತಿನ ಶಾಯಿ ಕಂಡುಬಂದಿದೆ. ಈ...

ಗೋಲ್ಪಾರದಲ್ಲಿ ತೆರವು ಕಾರ್ಯಾಚರಣೆ ಪುನರಾರಂಭಿಸಿದ ಅಸ್ಸಾಂ ಸರ್ಕಾರ : ನೆಲೆ ಕಳೆದುಕೊಳ್ಳಲಿರುವ 600 ಕುಟುಂಬಗಳು

ದಹಿಕಾಟಾ ಮೀಸಲು ಅರಣ್ಯದೊಳಗಿನ 1,140 ಬಿಘಾ (376 ಎಕರೆಗೂ ಹೆಚ್ಚು) ಅರಣ್ಯ ಭೂಮಿಯ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಲು ಅಸ್ಸಾಂ ಸರ್ಕಾರ ಭಾನುವಾರ (ನ.9) ಗೋಲ್ಪಾರ ಜಿಲ್ಲೆಯಲ್ಲಿ ತನ್ನ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಇದರಿಂದ...

ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಆರೋಪ : ತನಿಖೆಗೆ ಆದೇಶಿಸಿದ ಸರ್ಕಾರ

ತಿರುವನಂತಪುರದ ಕೇರಳ ವಿಶ್ವವಿದ್ಯಾಲಯದಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪದ ಕುರಿತ ತನಿಖೆಗೆ ಉನ್ನತ ಶಿಕ್ಷಣ ಸಚಿವೆ ಆರ್‌.ಬಿಂದು ಶನಿವಾರ (ನ.8) ಆದೇಶಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ...

ಅಂಡಮಾನ್, ನಿಕೋಬಾರ್ ದ್ವೀಪಗಳಲ್ಲಿ ಭೂಕಂಪ : ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲು

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂದು (ನ.9, 2025) ಮಧ್ಯಾಹ್ನ 12:06ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಭೂಮಿಯ 90 ಕಿಲೋ ಮೀಟರ್ ಆಳದಲ್ಲಿ...

ತರಬೇತಿ ನಿರತ ಪೊಲೀಸರಿಗೆ ಭಗವದ್ಗೀತೆ ಪಠಿಸಲು ಆದೇಶ : ಇಲಾಖೆಯ ಕೇಸರೀಕರಣ ಎಂದ ಕಾಂಗ್ರೆಸ್

ಎಂಟು ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಮಧ್ಯಪ್ರದೇಶದ ಸುಮಾರು 4,000 ಹೊಸದಾಗಿ ನೇಮಕಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಿಂದೂ ಮಾಸದ ಮಾರ್ಗಶಿರದಲ್ಲಿ ಪ್ರತಿದಿನ ಸಂಜೆ 'ಭಗವದ್ಗೀತೆ'ಯ ಅಧ್ಯಾಯಗಳನ್ನು ಓದಲು ನಿರ್ದೇಶಿಸಲಾಗಿದೆ. ತರಬೇತಿಯಲ್ಲಿರುವ ಕಾನ್‌ಸ್ಟೆಬಲ್‌ಗಳಿಗೆ ನೀತಿವಂತ ಮತ್ತು ಶಿಸ್ತಿನ...

ಪಶ್ಚಿಮ ಬಂಗಾಳ : ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ

ನಾಲ್ಕು ವರ್ಷ ವಯಸ್ಸಿನ ಹೆಣ್ಣು ಮಗುವನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಶುಕ್ರವಾರ (ನ.7) ರಾತ್ರಿ ಈ ಘಟನೆ ನಡೆದಿದೆ. ಅಪರಿಚಿತರು ದುಷ್ಕೃತ್ಯವೆಸಗಿದ್ದಾರೆ. ಮಗುವಿನ...

ವಂದೇ ಭಾರತ್‌ ರೈಲಿನಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಮಕ್ಕಳು, ವಿಡಿಯೋ ಹಂಚಿಕೊಂಡ ರೈಲ್ವೆ : ತೀವ್ರ ವಿರೋಧ

ಶನಿವಾರ (ನ.8) ಎರ್ನಾಕುಲಂ-ಬೆಂಗಳೂರು ನಡುವಿನ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಆರ್‌ಎಸ್‌ಎಸ್‌ ಗೀತೆ ಹಾಡಿರುವ ವಿಡಿಯೋವನ್ನು ದಕ್ಷಿಣ ರೈಲ್ವೆ ಹಂಚಿಕೊಂಡಿದ್ದು, ಕೇರಳದಲ್ಲಿ ತೀವ್ರ ಆಕ್ಷೇಪ...

ಶಾಲಾ ಮಕ್ಕಳಿಗೆ ನ್ಯೂಸ್ ಪೇಪರ್‌ನಲ್ಲಿ ಬಿಸಿಯೂಟ ಬಡಿಸಿದ ವಿಡಿಯೋ ವೈರಲ್ : ಪ್ರಧಾನಿ, ಸಿಎಂಗೆ ನಾಚಿಕೆಯಾಗ್ಬೇಕು ಎಂದ ರಾಹುಲ್ ಗಾಂಧಿ

ಮಧ್ಯಪ್ರದೇಶದ ಶಾಲೆಯೊಂದರ ಮಕ್ಕಳು ನ್ಯೂಸ್‌ ಪೇಪರ್‌ನಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, "ಇಂತಹ ದಯನೀಯ ಸ್ಥಿತಿಯಲ್ಲಿ ಭಾರತದ ಭವಿಷ್ಯ ಬೆಳಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮೋಹನ್...

ಬಿಹಾರ ಚುನಾವಣೆ : ರಸ್ತೆ ಬದಿ ಪತ್ತೆಯಾದ ವಿವಿಪ್ಯಾಟ್‌ ಸ್ಲಿಪ್‌ಗಳು

ಬಿಹಾರದ ಸಮಸ್ತಿಪುರ ಜಿಲ್ಲೆಯ ಶೀತಲ್‌ಪಟ್ಟಿ ಗ್ರಾಮದ ಎಸ್‌ಆರ್ ಕಾಲೇಜು ಬಳಿ ಭಾರೀ ಸಂಖ್ಯೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್‌) ಸ್ಲಿಪ್‌ಗಳು ಪತ್ತೆಯಾಗಿದ್ದು, ಭಾರತೀಯ ಚುನಾವಣಾ ಆಯೋಗ (ಇಸಿಐ) ಶನಿವಾರ...